ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ವೇಳೆ  ಕೆರೆಗೆ ಹಾರಿದ್ದ ಇಬ್ಬರು ಕಣ್ಮರೆಯಾಗಿ ಆತಂಕ ಹುಟ್ಟಿಸಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್​ನಿಂದ  ಕಲಾವಿದರು ಹಾರಿದ್ದರು ಎನ್ನಲಾಗಿದೆ. 

ಬೆಂಗಳೂರು(ನ.07): ಈಜಲು ಬಾರದಿದ್ದರು ನಮ್ಮ ಗುರು ದುನಿಯಾ ವಿಜಯ್ ಇದ್ದಾರೆ ಎಂದು 100 ಅಡಿ ಎತ್ತರದಿಂದ ಕೆರೆಗೆ ಹೆಲಿಕಾಪ್ಟರ್​ನಿಂದ ಹಾರಿದ್ದ ಇಬ್ಬರು ಕಲಾವಿದರು ಇಂದು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. 

ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್​ ಶೂಟಿಂಗ್ ವೇಳೆ ಕೆರೆಗೆ ಹಾರಿದ್ದ ಇಬ್ಬರು ಜೀವ ಬಿಟ್ಟಿದ್ದು, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್​ನಿಂದ ಕಲಾವಿದರು ಹಾರಿದ್ದರು ಎನ್ನಲಾಗಿದೆ. 

ಈ ವೇಳೆ ದುನಿಯಾ ವಿಜಯ್ ಜೊತೆ ಕೆರೆಗೆ ಹಾರಿದ್ದ ಉದಯ್​, ಅನಿಲ್ ಸಾವನ್ನಪ್ಪಿದ್ದರೆ, ನಟ ದುನಿಯಾ ವಿಜಯ್​ ಈಜಿ ದಡ ಸೇರಿದ್ದಾರೆ. ಆದರೆ ಇವರಿಬ್ಬರು ದಡ ಸೇರಿಲ್ಲ. ಸದ್ಯ ಇಬ್ಬರು ಕಲಾವಿದರ ದೇಹಕ್ಕೆ ಕೆರೆಯಲ್ಲಿ ತೀವ್ರ ಶೋಧ ಕಾರ್ಯ ನಡೀತಿದೆ. 

ಕೆಲವು ಷರತ್ತುಗಳನ್ನು ವಿರೋಧಿಸಿ ಚಿತ್ರೀಕರಣ ನಡೆಯುತ್ತಿತ್ತು ಎನ್ನಲಾಗಿದ್ದು, ಜಲಮಂಡಳಿ ಅನುಮತಿಯನ್ನು ಮೀರಿ ನಟರು ಯಾವುದೇ ಸುರಕ್ಷೆ ಇಲ್ಲದೇ ನೀರಿಗೆ ಬಿದ್ದಿದೆ ಸಾವಿಗೆ ಪ್ರಮುಖ ಕಾರಣ ಎನ್ನಲಾಗಿದೆ.