MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Celebrity Interviews
  • ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತೆ, ಪ್ರಿಯಾ ಪಾತ್ರ ಮಾಡ್ಬೇಡಿ ಅಂದ್ರು: Nanda Gokula Serial ಅರ್ಪಿತಾ ಗೌಡ

ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತೆ, ಪ್ರಿಯಾ ಪಾತ್ರ ಮಾಡ್ಬೇಡಿ ಅಂದ್ರು: Nanda Gokula Serial ಅರ್ಪಿತಾ ಗೌಡ

ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್‌ 3 ಮಕ್ಕಳಿಗೂ ಮದುವೆ ಆಗಿದೆ. ಇಬ್ಬರು ಗಂಡು ಮಕ್ಕಳು ನಂದಕುಮಾರ್‌ ವಿರುದ್ಧವಾಗಿ ಮದುವೆಯಾದ್ರೆ, ಮಾಧವ ಮಾತ್ರ ತಂದೆ ಹೇಳಿದಂತೆ ಮದುವೆಯಾದ. ಆದರೆ ನಂದ ಆಯ್ಕೆ ಮಾಡಿದ ಸೊಸೆ ಪ್ರಿಯಾಳಿಂದಲೇ ಇಡೀ ಮನೆಯ ನೆಮ್ಮದಿ ಹಾಳಾಗ್ತಿದೆ. ಪ್ರಿಯಾ ಪಾತ್ರಧಾರಿ ಈ ಬಗ್ಗೆ ಏನಂತಾರೆ?

2 Min read
Author : Padmashree Bhat
Published : Feb 23 2026, 03:52 PM IST
Share this Photo Gallery
  • FB
  • TW
  • Linkdin
  • Whatsapp
17
ನಂದಗೋಕುಲ ಧಾರಾವಾಹಿ ಪ್ರಿಯಾ ಪಾತ್ರಧಾರಿ ಅರ್ಪಿತಾ ಗೌಡ ಯಾರು?
Image Credit : Jiohotstar

ನಂದಗೋಕುಲ ಧಾರಾವಾಹಿ ಪ್ರಿಯಾ ಪಾತ್ರಧಾರಿ ಅರ್ಪಿತಾ ಗೌಡ ಯಾರು?

ನಟಿ ಅರ್ಪಿತಾ ಗೌಡ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ಸೀರಿಯಲ್‌ ಲೋಕದ ಜೊತೆಗೆ ವೈಯಕ್ತಿಕವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

ಎಲ್ಲಿಯವರು?

ನಾನು ಶಿವಮೊಗ್ಗದವಳು, ತಂದೆ-ತಾಯಿಗೆ ಒಬ್ಬಳೇ ಮಗಳು, ತಂದೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ, ತಾಯಿ ಫ್ಯಾಷನ್‌ ಡಿಸೈನರ್‌.

ಶಿಕ್ಷಣದ ಬಗ್ಗೆ ಹೇಳಿ

ಬಿಕಾಂ ಓದಿದ್ದೇನೆ

27
ಹೇಗೆ ನಟನೆ ಶುರುವಾಯ್ತು?
Image Credit : arpitha gowda instagam

ಹೇಗೆ ನಟನೆ ಶುರುವಾಯ್ತು?

ರಮ್ಯಾ ಅವರ ನಾಗರಹಾವು ಸಿನಿಮಾದಲ್ಲಿ ನಾಗದೇವತೆ ಪಾತ್ರಕ್ಕೆಂದು ಹುಡುಕಾಟ ಮಾಡುತ್ತಿದ್ದರು. ಆಗ ಒಬ್ಬರು ನಟನೆಯಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದರು. ನನಗೆ ನಟನೆ ಗೊತ್ತಿರಲಿಲ್ಲ, ಆಸಕ್ತಿ ಇರಲಿಲ್ಲ, ಅವಕಾಶ ಸಿಕ್ಕಿತು ಎಂದು ಸಿನಿಮಾ ಮಾಡಿದೆ. ಆಮೇಲೆ ಆಕ್ಟಿಂಗ್‌ ಕೋರ್ಸ್‌ ಮಾಡಿದೆ. ಐದಾರು ಸಿನಿಮಾ ಮಾಡಿದ್ದು, ಸತ್ಯ, ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಬಂದು ಹದಿನಾಲ್ಕು ವರ್ಷಗಳು ಕಳೆದಿವೆ.

Related Articles

Related image1
ನಂದಗೋಕುಲ: ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್
Related image2
ನಂದಗೋಕುಲ ಪ್ರಿಯಾ ಹೊಸ ಲುಕ್; ಓಪನ್‌ ಹೇರ್‌ ಬಿಟ್ಟು, ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿ ಏರಿಯಾದಲ್ಲಿ ತಿರುಗ್ಬೇಡಿ; ಲವ್‌ ಆಗ್ತದೆ!
37
ನಂದಗೋಕುಲ ಧಾರಾವಾಹಿ ಪ್ರಿಯಾ ಪಾತ್ರಕ್ಕೆ ನೆಗೆಟಿವ್‌ ಪ್ರತಿಕ್ರಿಯೆ ಹೆಚ್ಚಾಗಿದೆ.
Image Credit : arpitha gowda instagam

ನಂದಗೋಕುಲ ಧಾರಾವಾಹಿ ಪ್ರಿಯಾ ಪಾತ್ರಕ್ಕೆ ನೆಗೆಟಿವ್‌ ಪ್ರತಿಕ್ರಿಯೆ ಹೆಚ್ಚಾಗಿದೆ.

ಆರಂಭದಲ್ಲಿ ನನ್ನ ತುಂಬ ದ್ವೇಷ ಮಾಡಿದ್ರು, ಈಗಲೂ ಮಾಡುತ್ತಿದ್ದಾರೆ. ಇದು ಕ್ಯಾರೆಕ್ಟರ್‌, ಪಾತ್ರ ಹಾಗೆ ಇರೋದಿಕ್ಕೆ ಅವರನ್ನು ನೋಡಿದ್ರೆ ನಮಗೆ ಸಿಟ್ಟು ಬರುತ್ತಿದೆ ಎಂದು ಕೆಲವರಿಗೆ ಅರ್ಥ ಆಗಿದೆ. ಆದರೂ ಕೂಡ ಪ್ರಿಯಾ ಪಾತ್ರ ಇಷ್ಟ ಇಲ್ಲ, ನೀವು ಈ ಪಾತ್ರ ಮಾಡ್ಬೇಡಿ ಎಂದು ಹೇಳಿದ್ದುಂಟು.

47
ನಂದಗೋಕುಲ ಧಾರಾವಾಹಿಯಲ್ಲಿ ಮತ್ತೊಂದು ವಿಲನ್‌ ಅಗತ್ಯ ಇತ್ತಾ ಎಂಬ ಪ್ರಶ್ನೆ ಎದ್ದಿದೆ.
Image Credit : arpitha gowda instagam

ನಂದಗೋಕುಲ ಧಾರಾವಾಹಿಯಲ್ಲಿ ಮತ್ತೊಂದು ವಿಲನ್‌ ಅಗತ್ಯ ಇತ್ತಾ ಎಂಬ ಪ್ರಶ್ನೆ ಎದ್ದಿದೆ.

ಪ್ರಿಯಾ ತುಂಬ ಮುಗ್ಧೆ, ಅವಳಿಗೆ ಅತ್ತೆ-ಮಾವ ಎಲ್ಲರನ್ನು ನಾನೇ ಚೆನ್ನಾಗಿ ನೋಡಿಕೊಳ್ಳಬೇಕು, ನನ್ನನ್ನು ಎಲ್ಲರೂ ಇಷ್ಟಪಡಬೇಕು ಎಂಬ ಗುಣ ಇದೆ. ಮುಂದಿನ ದಿನಗಳಲ್ಲಿ ಪ್ರಿಯಾ ಒಳ್ಳೆಯವಳು ಎನ್ನೋದು ಗೊತ್ತಾಗುವುದು.

57
ಪ್ರಿಯಾ ತಾನು ಒಳ್ಳೆಯವಳ ಥರ ಕಾಣಲು, ಬೇರೆಯವರನ್ನು ವಿಲನ್‌ ಮಾಡ್ತಿದ್ದಾಳೆ.
Image Credit : arpitha gowda instagam

ಪ್ರಿಯಾ ತಾನು ಒಳ್ಳೆಯವಳ ಥರ ಕಾಣಲು, ಬೇರೆಯವರನ್ನು ವಿಲನ್‌ ಮಾಡ್ತಿದ್ದಾಳೆ.

ಒಳ್ಳೆಯದನ್ನು ತೋರಿಸಲು, ಕೆಲವು ಕೆಟ್ಟದಾಗಿ ಕಾಣುತ್ತದೆ, ಹಾಗೆ ತೋರಿಸಿದರೆ ಚೆನ್ನಾಗಿ ಕಾಣುವುದು. ಈ ಪಾತ್ರ ಮಾಡಬೇಡಿ ಎಂದು ಅನೇಕರು ಹೇಳುತ್ತಿದ್ದಾರೆ, ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತದೆ ಎಂದು ಕೆಲವರು ಹೇಳಿದ್ದುಂಟು. ಹೊರಗಡೆ ಹೋದಾಗ ನನಗೆ ಹೊಡೆಯುತ್ತಾರೆ ಎಂದು ಡೈರೆಕ್ಟರ್‌ಗೆ ತಮಾಷೆ ಮಾಡುತ್ತಿದ್ದೆ. ಅಕ್ಕ-ಪಕ್ಕದವರು ಕೂಡ ಇದು ನಿಜ ಎಂದು ಅಂದುಕೊಂಡಿದ್ದುಂಟು. ಎಲ್ಲರಿಗೂ ನಾನು ವಿವರಣೆ ಮಾಡಿ ಹೇಳೋಕೆ ಆಗೋದಿಲ್ಲ.

67
ಈಗ ನಿಮ್ಮ ಪಾತ್ರಕ್ಕೆ ನೆಗೆಟಿವ್‌ ಪ್ರತಿಕ್ರಿಯೆ ಸಿಗ್ತಿದೆ.
Image Credit : arpitha gowda instagam

ಈಗ ನಿಮ್ಮ ಪಾತ್ರಕ್ಕೆ ನೆಗೆಟಿವ್‌ ಪ್ರತಿಕ್ರಿಯೆ ಸಿಗ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಬರುವ ಕಾಮೆಂಟ್‌ಗಳನ್ನು ನೋಡಿದರೆ ನಿಮಗೆ ಬೈತಿದ್ದಾರಾ? ಅಥವಾ ಪ್ರಿಯಾಗೆ ಬೈತಿದ್ದಾರಾ ಎಂಬ ಗೊಂದಲ ಆಗಿತ್ತಾ?

ಆರಂಭದ ಮೂರು ದಿನ ನಾನು ಬೇಸರ ಮಾಡಿಕೊಂಡಿದ್ದೆ, ಈ ಥರದ ಡೌಟ್‌ ಕೂಡ ಬಂದಿತ್ತು. ನಾನು ಇಷ್ಟು ವರ್ಷಗಳಲ್ಲಿ ನೆಗೆಟಿವ್‌ ಶೇಡ್‌ ಪಾತ್ರಗಳಲ್ಲಿ ನಟಿಸಿಲ್ಲ, ಇದು ನನಗೆ ಹೊಸತು. ಆಮೇಲೆ ನನ್ನ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಎಂದು ಅರ್ಥಮಾಡಿಕೊಂಡೆ. ಕುಟುಂಬ, ಸೀರಿಯಲ್‌ ಟೀಂ ಎಲ್ಲವೂ ನನಗೆ ಬೆಂಬಲ ಕೊಟ್ಟಿದ್ದರಿಂದ, ನಾನು ಖುಷಿಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ.

77
ಈಗ ಎಷ್ಟು ಖುಷಿಯಿದೆ?
Image Credit : arpitha gowda instagam

ಈಗ ಎಷ್ಟು ಖುಷಿಯಿದೆ?

ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಒಳ್ಳೆಯ ಪಾತ್ರ ಸಿಕ್ಕಿದೆ, ಜನರು ಸ್ವೀಕಾರ ಮಾಡಿದ್ದಾರೆ ಎಂಬ ಖುಷಿಯಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳನ್ನು ನಿರ್ವಹಿಸುವ ಆಸೆ ಕೂಡ ಇದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ನಂದಗೋಕುಲ
ಕನ್ನಡ ಧಾರಾವಾಹಿ
ಕಲರ್ಸ್ ಕನ್ನಡ

Latest Videos
Recommended Stories
Recommended image1
ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview
Recommended image2
ಹೆರಿಗೆಯಾದ್ಮೇಲೆ ಅದೊಂದು ಟಿಪ್ಸ್‌ ಫಾಲೋ ಮಾಡಿ ಸಣ್ಣಗಾದ ಮನೆದೇವ್ರು ಸೀರಿಯಲ್‌ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!
Recommended image3
Bhagyalakshmi Serial ಭಾಗ್ಯ ಈಗ 2ನೇ ಮದುವೆ ಆಗುತ್ತಾಳಾ? ಸುದರ್ಶನ್‌ ರಂಗಪ್ರಸಾದ್‌ ಏನಂದ್ರು?
Related Stories
Recommended image1
ನಂದಗೋಕುಲ: ಮಾಧವ-ಪ್ರಿಯಾ ಫಸ್ಟ್‌ನೈಟ್ ರೂಮ್‌ನಲ್ಲಿ ವಲ್ಲಭ-ಅಮ್ಮು ತುಂಟಾಟದ ರೊಮ್ಯಾನ್ಸ್
Recommended image2
ನಂದಗೋಕುಲ ಪ್ರಿಯಾ ಹೊಸ ಲುಕ್; ಓಪನ್‌ ಹೇರ್‌ ಬಿಟ್ಟು, ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿ ಏರಿಯಾದಲ್ಲಿ ತಿರುಗ್ಬೇಡಿ; ಲವ್‌ ಆಗ್ತದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved