- Home
- Entertainment
- Rashmika Mandanna ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಸ್ನೇಹಿತ ರಕ್ಷಿತ್ ಶೆಟ್ಟಿ ಕುತೂಹಲದ ಪೋಸ್ಟ್ ವೈರಲ್!
Rashmika Mandanna ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಸ್ನೇಹಿತ ರಕ್ಷಿತ್ ಶೆಟ್ಟಿ ಕುತೂಹಲದ ಪೋಸ್ಟ್ ವೈರಲ್!
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ವದಂತಿಗಳ ನಡುವೆ, ನಟ ರಕ್ಷಿತ್ ಶೆಟ್ಟಿ ಅವರೊಂದಿಗಿನ ರಶ್ಮಿಕಾಳ ಹಿಂದಿನ ನಿಶ್ಚಿತಾರ್ಥದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ರಕ್ಷಿತ್ ಮಾಡಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ಇದೀಗ ಮತ್ತೆ ವೈರಲ್ ಆಗುತ್ತಿದ್ದು, ಆಗಿನ ಘಟನೆಗಳನ್ನು ನೆನಪಿಸುತ್ತಿದೆ.

ರಶ್ಮಿಕಾ- ವಿಜಯ್ ಮದುವೆ
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ಬಹುಕಾಲದ ಗೆಳೆಯ ವಿಜಯ ದೇವರಕೊಂಡ ಮದುವೆ (Rashmika Mandanna and Vijaya Devarakonda marriage) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಿನಲ್ಲಿಯೇ ಸ್ಯಾಂಡಲ್ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ವಿಷಯವೂ ಸಾಕಷ್ಟು ಚರ್ಚೆಗೆ ಬರುತ್ತಿದೆ. ಇದಕ್ಕೆ ಕಾರಣ, ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಎಂಗೇಜ್ಮೆಂಟ್ ಆಗಿತ್ತು. ಆದರೆ ಅವರು ಮದುವೆಯಾಗಿರಲಿಲ್ಲ. ಆದ್ದರಿಂದ ರಕ್ಷಿತ್ ಶೆಟ್ಟಿ ಹೆಸರು ಮತ್ತೆ ಕೇಳಿಬರುತ್ತಿದೆ.
ಸೋಷಿಯಲ್ ಮೀಡಿಯಾದಿಂದ ದೂರ
2018ರಲ್ಲಿ ಇವರಿಬ್ಬರೂ ಬೇರೆಯಾಗಿದ್ದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ (Rakshit Shetty) ಸೋಷಿಯಲ್ ಮೀಡಿಯಾದಿಂದ ಭಾರಿ ದೂರ ಉಳಿದಿದ್ದರು. ಅಷ್ಟಕ್ಕೂ ಈಗಲೂ ಅದೇಸ್ಥಿತಿ ಇದೆ. ಇದೇ ಕಾರಣಕ್ಕೆ ಈ ವಿಷಯ ಮತ್ತೆ ಮುನ್ನೆಲೆಗೆ ಬರುತ್ತಿದೆ. 2018ರಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದಾಗ ರಕ್ಷಿತ್ ಅವರು ಮಾಡಿರುವ ಪೋಸ್ಟ್ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
ರಕ್ಷಿತ್ ಶೆಟ್ಟಿ ಏನ್ ಹೇಳಿದ್ರು?
ಇದರಲ್ಲಿ, ರಕ್ಷಿತ್ ಶೆಟ್ಟಿ ಅವರು, ನಾನು ನನ್ನ ಕೆಲಸದ ಮೇಲೆ ಕೇಂದ್ರೀಕರಿಸಲು ಬಯಸಿದ್ದರಿಂದ ಸಾಮಾಜಿಕ ಮಾಧ್ಯಮದಿಂದ ದೂರವಿದ್ದೇನೆ. ಇದಕ್ಕೂ, ರಶ್ಮಿಕಾ ಮಂದಣ್ಣ ಸಂಬಂಧಕ್ಕೆ ಯಾವುದೇ ಲಿಂಕ್ ಇಲ್ಲ. ದಯವಿಟ್ಟು ಎರಡನ್ನೂ ಒಟ್ಟಿಗೇ ಸೇರಿಸಬೇಡಿ. ನೀವೇ ಏನೋ ಒಂದನ್ನು ನಿರ್ಣಯಿಸಬೇಡಿ ಎಂದಿದ್ದರು.
ರಶ್ಮಿಕಾ ವಿಷಯ ತರಬೇಡಿ...
ಗೌರವಾನ್ವಿತ ಜನರೇ, ನಾನು ಇತರ ವಿಷಯಗಳ ಮೇಲೆ ಗಮನಹರಿಸಲು ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುತ್ತೇನೆ ಎಂದು ಘೋಷಿಸಿದ್ದೆ. ಆದರೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ನಾನು ಹಿಂತಿರುಗಬೇಕಾಯಿತು ಎನ್ನುವ ಮೂಲಕ ಈ ಸ್ಪಷ್ಟನೆ ಕೊಟ್ಟಿದ್ದರು. ಇದೇ ವೇಳೆ, ಅವರು ಇದೇ ಪೋಸ್ಟ್ನಲ್ಲಿ ನನ್ನನ್ನು ಶಾಂತಿಯಿಂದ ಬದುಕಲು ಬಿಟ್ಟುಬಿಡಿ. ಏನನ್ನೂ ಪ್ರಶ್ನಿಸಬೇಡಿ ಎನ್ನುವ ಮೂಲಕ, ತಾವು ನೋವಿನಲ್ಲಿ ಇರುವ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದರು.
ರಶ್ಮಿಕಾ ಕೊಟ್ಟಿದ್ದರು ಈ ಕಾರಣ
ಅದಕ್ಕೂ ಮುನ್ನ, ರಕ್ಷಿತ್ ಶೆಟ್ಟಿ ಅವರ ಎಂಗೇಜ್ಮೆಂಟ್ ಮುರಿದು ಬಿದ್ದಾಗ, ಇವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ರಶ್ಮಿಕಾ ತಮ್ಮ ಪೋಷಕರೊಂದಿಗೆ ಸಮಾಲೋಚಿಸಿ ತಮ್ಮ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕಾರಣ ಕೊನೆಗೂ ಬಹಿರಂಗಗೊಳ್ಳಲಿಲ್ಲ.
ನ್ಯಾಷನಲ್ ಕ್ರಷ್ ಬಗ್ಗೆ ಗಂಭೀರ ಆರೋಪ
ಆದರೆ, ರಶ್ಮಿಕಾ ಅವರು ಸ್ಯಾಂಡಲ್ವುಡ್ನಲ್ಲಿ ಎಂಟ್ರಿ ಪಡೆಯುವುದಕ್ಕಾಗಿ ರಕ್ಷಿತ್ ಅವರನ್ನು ದಾಳವಾಗಿ ಬಳಸಿಕೊಂಡರು ಎನ್ನುವ ಮಾತು ಬಹಳ ಕೇಳಿಬರತೊಡಗಿತ್ತು. ರಕ್ಷಿತ್ ಮತ್ತು ರಶ್ಮಿಕಾ ಜುಲೈ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೂಪರ್‌ಹಿಟ್ ಚಿತ್ರ ಕಿರಿಕ್ ಪಾರ್ಟಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ರಶ್ಮಿಕಾ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಿತ್ತು. ಆದರೆ, ಕೊನೆಗೆ ಸಂಬಂಧ ಮುರಿದು ಹೋಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

