ಜನಪ್ರಿಯ ಗಾಯಕ ಸೋನು ನಿಗಂ, 'ನಾನು ಮತ್ತು ಗುಂಡ' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ 'ವರ್ಣವೇದಂ'‌ ಚಿತ್ರಕ್ಕಾಗಿ 'ಓ ವೇದ ಓ ವೇದ' ಎಂಬ ಸುಂದರ ರೊಮ್ಯಾಂಟಿಕ್ ಹಾಡು..

ತಮ್ಮ ಅಮೋಘ ಕಂಠಸಿರಿಯಿಂದ ವಿಶ್ವದಾದ್ಯಂತ ಹೆಸರು ಮಾಡಿರುವ ಜನಪ್ರಿಯ ಗಾಯಕ ಸೋನು ನಿಗಂ, ನಾನು ಮತ್ತು ಗುಂಡ' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ 'ವರ್ಣವೇದಂ' ಚಿತ್ರಕ್ಕಾಗಿ 'ಓ ವೇದ ಓ ವೇದ' ಎಂಬ ಸುಂದರ ರೊಮ್ಯಾಂಟಿಕ್ ಹಾಡು ಹಾಡಿದ್ದಾರೆ. ಗಗನ್ ಭಡೇರಿಯಾ ಸಂಗೀತ ನೀಡಿರುವ ಈ ಹಾಡನ್ನು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಅವರೆ ಬರೆದಿದ್ದಾರೆ. ಇತ್ತೀಚಿಗೆ ಈ ಹಾಡಿನ ಧ್ವನಿಮುದ್ರಣ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣವಾಗಲಿದೆ. ಭೂಷಣ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀನಿವಾಸ್ ತಿಮ್ಮಯ್ಯ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭೀಮೇಶ್, ಚಂದ್ರಶೇಖರ್, ವಿಶ್ವನಾಥ್, ಶೈಜು ಹಾಗೂ ರಾಜೇಶ್ ಗೋಸ್ವಾಮಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಲರ್ ಮಾಫಿಯಾ ಕುರಿತಾದ ಕಥಾಹಂದರ ಹೊಂದಿರುವ ಕಾರಣ ಈ ಚಿತ್ರಕ್ಕೆ 'ವರ್ಣವೇದಂ' ಎಂದು ಶೀರ್ಷಿಕೆ ಇಡಲಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಚಿತ್ರದಲ್ಲಿ ನಾಯಕಿಯ ಹೆಸರು ವರ್ಣ ಹಾಗೂ ನಾಯಕನ ಹೆಸರು ವೇದ ಎಂದು ಹೇಳಿದ್ದಾರೆ‌. ನೈಋತ್ಯ ಹಾಗೂ ಪ್ರತೀಕ್ಷ ಈ ಚಿತ್ರದ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೆಸರಾಂತ ಕಲಾವಿದರ ತಾರಾಬಳಗವಿರುವ "ವರ್ಣವೇದಂ" ಚಿತ್ರಕ್ಕೆ ಚಿದಾನಂದ್ ಅವರ ಛಾಯಾಗ್ರಹಣವಿದೆ.

ಅಪ್ಪಾಜಿ ಜೊತೆ ಮನೆಯವ್ರೆಲ್ಲಾ ಒಂದೇ ರೂಮಿನಲ್ಲಿ ಮಲಗ್ತಿದ್ವಿ: ರಾಘವೇಂದ್ರ ರಾಜ್‌ಕುಮಾರ್

ಗಗನ್ ಭಡೇರಿಯಾ ಸಂಗೀತ ಸಂಯೋನೆಯಲ್ಲಿ ಆರು ಸುಮಧುರ ಹಾಡುಗಳು ಚಿತ್ರದಲ್ಲಿದ್ದು, ಸೋನು ನಿಗಂ ಸೇರಿದಂತೆ ಜನಪ್ರಿಯ ಗಾಯಕರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ.ಈ ಚಿತ್ರದ ಬಗ್ಗೆ ಕನ್ನಡ ಚಿತ್ರರಸಿಕರು ಹಾಗೂ ಉದ್ಯಮದಲ್ಲಿ ಬಹಳಷ್ಟು ನಿರೀಕ್ಷೆ ಮೂಡಿದೆ. ಈಗ ಈ ಚಿತ್ರಕ್ಕೆ ಸೋನು ನಿಗಂ ಅವರು ಹಾಡಿರೋದ್ರಿಂದ ಸಹಜವಾಗಿಯೇ ಅವರ ಫ್ಯಾನ್ಸ್ ಕೂಡ ಈ ಚಿತ್ರವನ್ನು ನೋಡಲು ಉತ್ಸುಕರಾಗಿದ್ದಾರೆ. ಜೊತೆಗೆ, ಇನ್ನೂ ಹಲವು ಪ್ರಸಿದ್ಧ ಗಾಯಕರು ಈ ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದಾರೆ. 

ಅಂದಹಾಗೆ, ಇತ್ತೀಚೆಗೆ ಗಾಯಕ ಸೋನು ನಿಗಂ ಅವರಿಗೆ ಕನ್ನಡ ಚಿತ್ರಗಳಿಗೇ ಹಾಡಲು ಹೆಚ್ಚು ಅವಕಾಶಗಳು ಸಿಗುತ್ತಿವೆ ಎನ್ನಬಹುದು. ಕನ್ನಡ ಹಾಗೂ ಹಿಂದಿ ಬಿಟ್ಟು ಬೇರೆ ಭಾಷೆಗಳಲ್ಲಿ ಇತ್ತೀಚೆಗೆ ಸೋನು ನಿಗಮ್ ಅವರು ಹಾಡೋದು ಬಹಳಷ್ಟು ಕಡಿಮೆ ಆಗಿದೆ. ಅದನ್ನು ಸ್ವತಃ ಸೋನು ನಿಗಮ್ ಕೂಡ ಹಲವಾರು ವೇದಿಕೆಗಳಲ್ಲಿ ಹೇಳಿದ್ದಾರೆ. 'ಕನ್ನಡಿಗರು ನನ್ನ ಧ್ವನಿಯನ್ನು ಹೆಚ್ಚು ಇಷ್ಟಪಡುತ್ತಾರೆ, ಕನ್ನಡಿಗರೇ ನನ್ನನ್ನು ಹೆಚ್ಚು ಪಪ್ಯುಲರ್ ಮಾಡಿದ್ದಾರೆ. ಬಹುಶಃ ಕನ್ನಡದೊಂದಿಗೆ ನನಗೆ ಯಾವುದೋ ಜನ್ಮದ ಅನುಭಂಧ ಇದೆ' ಎಂದಿದ್ದಾರೆ ಸೋನು ನಿಗಂ.

ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!