ನಾವು ಎಷ್ಟು ಅನ್ಯೋನ್ಯವಾಗಿ ಇದ್ವಿ ಅಂದ್ರೆ, ಸತ್ತು ಸ್ವರ್ಗ ನೋಡ್ಬೇಕಾಗಿಲ್ಲ, ಬದುಕಿದ್ದಾಗ್ಲೇ ನೋಡ್ಬಹುದು ಅಂತ ನಮ್ಮ ಅಪ್ಪಾಜಿ ತೋರಿಸಿಕೊಟ್ಟು ಹೋಗಿದಾರೆ. ಅಷ್ಟೇ ಅಲ್ಲ, ಕುಟುಂಬದ ಜೊತೆ ಬಾಂಧವ್ಯ ಹೇಗೆ ಇರ್ಬೇಕು ಅನ್ನೋದನ್ನ..
ಡಾ ರಾಜ್‌ಕುಮಾರ್ ಸಿನಿಮಾ ಜೀವನ ಹೇಗಿತ್ತು ಅಂತ ಎಲ್ಲರಿಗೂ ಗೊತ್ತು.. ಆದರೆ, ರಿಯಲ್ ಲೈಫ್‌ನಲ್ಲಿ ಡಾ ರಾಜ್‌ಕುಮಾರ್ ಹೇಗಿದ್ರು ಅನ್ನೋದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿಲ್ಲ. ಈ ವಿಷಯವನ್ನು ಮಾಧ್ಯಮದ ಎದುರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಡಾ ರಾಜ್‌ಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್. ಹಾಗಿದ್ದರೆ ಅವರೇನು ಹೇಳಿದ್ದಾರೆ ಗೊತ್ತಾ? ನೋಡಿ ಮುಂದೆ..
ನಮಗೆ ಮಕ್ಕಳಿಗೆ ಮದುವೆ ಆದ್ಮೇಲೆ ಕೂಡ ನಾವೆಲ್ಲಾ ಅಂದ್ರೆ, ನಮ್ಮ ತಂದೆ, ನಮ್ಮ ತಾಯಿ, ತಮ್ಮ, ನಾನು-ನನ್ ಹೆಂಡ್ತಿ, ನನ್ ದೊಡ್ಡ ಮಗ ಎಲ್ಲರೂ ಒಂದೇ ರೂಮಲ್ಲಿ ಮಲಗ್ತಿದ್ವಿ.. ಕಾರಣ, ಕುಟುಂಬ ಅಂದ್ಮೇಲೆ ನಮ್ಮ ಮನೆಯವ್ರು ಎಲ್ರೂ ಮಲಗಿದಾಗ ಕೂಡ ಕೂಗಳತೆ ದೂರದಲ್ಲಿ ಇರ್ಬೇಕು ಅಂತ.. ಅಷ್ಟೇ ಅಲ್ಲ, ಕರೆಂಟ್ ಖರ್ಚು ಕಡಿಮೆ ಆಗುತ್ತೆ ಅಂತ.. ಅಲ್ಲೇ ಇರೋದ್ರಿಂದ ಯಾರೇ ಕರೆದ್ರೂ ಸಿಗ್ತಾರೆ ಅನ್ನೋದ್ರಿಂದ ನಮ್ಮಲ್ಲಿ ಬಾಂಡಿಂಗ್ ಕೂಡ ತುಂಬಾ ಜಾಸ್ತಿನೇ ಇತ್ತು.
ಕಾಮನ ಬಿಲ್ಲು ಚಿತ್ರದಲ್ಲಿ ಅಣ್ಣಾವ್ರು-ಎಸ್‌ಪಿಬಿ ಒಟ್ಟಿಗೇ ಹಾಡಿದ ಹಾಡು ಮಾಯವಾಗಿದ್ದು ಯಾಕೆ?
ನಾವು ಎಷ್ಟು ಅನ್ಯೋನ್ಯವಾಗಿ ಇದ್ವಿ ಅಂದ್ರೆ, ಸತ್ತು ಸ್ವರ್ಗ ನೋಡ್ಬೇಕಾಗಿಲ್ಲ, ಬದುಕಿದ್ದಾಗ್ಲೇ ನೋಡ್ಬಹುದು ಅಂತ ನಮ್ಮ ಅಪ್ಪಾಜಿ ತೋರಿಸಿಕೊಟ್ಟು ಹೋಗಿದಾರೆ. ಅಷ್ಟೇ ಅಲ್ಲ, ಕುಟುಂಬದ ಜೊತೆ ಬಾಂಧವ್ಯ ಹೇಗೆ ಇರ್ಬೇಕು ಅನ್ನೋದನ್ನ ಕೂಡ ನಾವು ನಮ್ಮ ಅಪ್ಪಾಜಿನ ನೋಡಿನೇ ಕಲಿತ್ಕೊಂಡಿದ್ದು.. ಬೆಳಿಗ್ಗೆ 3 ಗಂಟೆಗೇ ಎದ್ದೇಳ್ತಾ ಇದ್ರು. ಲೈಟ್ ಹಾಕದೇನೇ ಮೆಲ್ಲಗೆ ಎದ್ದು ಹೋಗಿ, ಸ್ನಾನ ಮಾಡಿ, ಪೂಜೆ ಮಾಡಿ ಆಮೇಲೆ ಯೋಗ ಮಾಡೋಕೆ ಕುಳಿತುಕೊಳ್ತಾ ಇದ್ರು.. ಯೋಗ ಮುಗಿದ್ಮೇಲೆ ಬಟ್ಟೆಯಿಂದ ಮೈನೆಲ್ಲಾ ವರಸ್ಕೊಂಡು, ಬಳಿಕ ಕಾರಿನ ಹತ್ರ ಬರ್ತಾ ಇದ್ರು, ಶೂಟಿಂಗ್ ಹೋಗೋದಕ್ಕೆ..
ಕಾರಿನ ಹತ್ರ ಬಂದ್ಮೇಲೆ 'ಪಾರ್ವತಿ ಟೈಮ್ ಎಷ್ಟು ಆಗಿದೆ' ಅಂತ ಅಪ್ಪಾಜಿ ಕೇಳ್ತಾ ಇದ್ರು. ಅಗ ಅಮ್ಮ 'ಕರೆಕ್ಟಾಗಿ 7.45 ಆಗಿದೆ ರೀ' ಅಂತಾ ಇದ್ರು. ಆದ್ರೆ, ಅಪ್ಪ ಬೆಳಿಗ್ಗೆ ಏಳೋದಕ್ಕಾಗ್ಲೀ ಅಥವಾ ಸ್ನಾನ, ಪೂಜೆ ಹಾಗೂ ಯೋಗ ಮಾಡೋದಕ್ಕಾಗ್ಲೀ ಯಾವತ್ತೂ ಟೈಮ್ ನೋಡ್ತಾ ಇರ್ಲಿಲ್ಲ. ಆದ್ರೂ ಕೂಡ, ಬೆಳಿಗ್ಗೆ ಕರೆಕ್ಟಾಗಿ 3 ಕ್ಕೆ ಏಳ್ತಾ ಇದ್ರು, 7.45 ಕ್ಕೆ ಅವರು ಸರಿಯಾಗಿ ತಮ್ಮ ದೈನಂದಿನ ಕೆಲಸ ಮಾಡಿ ಮುಗಿಸ್ತಾ ಇದ್ರು. ಅಷ್ಟು ಸರಿಯಾಗಿ ಅಪ್ಪಾಜಿ ದಿನಾಲೂ ತಮ್ಮ ಟೈಂ ಅನ್ನು ಮ್ಯಾನೇಜ್ ಮಾಡ್ತಾ ಇದ್ದರು ಅನ್ನೋದು ಅಚ್ಚರಿ ಎನ್ನಿಸಿದರೂ ಸತ್ಯ.
ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!
ಮನೆಯಿಂದ ಹೊರಗೆ ಹೋಗುವಾಗ, ಮನೆಯಲ್ಲಿ ಇರೋ ಎಲ್ಲಾ ದೇವರುಗಳಿಗೆ ನಮಸ್ಕಾರ ಮಾಡಿ, ಮನೆ ಬಳಿ ಇರೋ ಗಿಡಗಳನ್ನು, ನಾಯಿ, ಹಸುವನ್ನು ಮಾತನಾಡಿಸಿಕೊಂಡು, ಬಳಿಕ ಶೂಟಿಂಗ್‌ಗೆ ಹೋಗ್ತಾ ಇದ್ರು. ಹಾಗೇ, ಸಾಯಂಕಾಲ 6 ಗಂಟೆಗೆ ಮನೆಗೆ ಬಂದವ್ರು ಅಷ್ಟೇ, ಹಸು, ನಾಯಿನ, ಗಿಡಗಳನ್ನು ಮಾತನ್ನಾಡಿಸಿಕೊಂಡು, ದೇವರ ಮನೆಗೆ ಹೋಗ್ಬಿಟ್ಟು ಮೆಡಿಟೇಶನ್ ಮಾಡಿ ಮನೆಯ ಒಳಕ್ಕೆ ಬರ್ತಾ ಇದ್ರು. ಅದಾದ್ಮೇಲೆ ಊಟ ಮಾಡ್ಕೊಂಡು ಸರಿಯಾಗಿ 8 ಗಂಟೆಗೆ ನಿದ್ದೆ ಮಾಡ್ತಾ ಇದ್ರು. ಅಪ್ಪಾಜಿ ಈ ಅಭ್ಯಾಸವನ್ನು ಯಾವತ್ತೂ ತಪ್ಪಿಸಿಲ್ಲ. ನಾನು 35 ವರ್ಷ ಅದನ್ನು ಕಣ್ಣಾರೆ ನೋಡಿದೀನಿ.
ಅಪ್ಪಾಜಿ ಸಮ್ನೆ ರಾಜ್‌ಕುಮಾರ್ ಆಗಿಲ್ಲ. ಅದರ ಹಿಂದೆ ಅಷ್ಟೇ ದೊಡ್ಡ ತ್ಯಾಗ ಇತ್ತು, ಡೆಡಿಕೇಶನ್ ಇತ್ತು. ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ಅಷ್ಟೊಂದು ಸಂಯಮ ಹಾಗೂ ಶಿಸ್ತು ಪಾಲಿಸ್ತಾ ಇದ್ರು.. ಹುಶಾರು ತಪ್ಪಿದ್ರೂ ಕೂಡ ಅವ್ರು ಒಂದು ದಿನ ಕೂಡ ಈ ಅಭ್ಯಾಸ ತಪ್ಸಿಲ್ಲ ಅಪ್ಪಾಜಿ. ಅವ್ರು ಕೇವಲ ಸಿನಿಮಾ ಮಾಡಿದ್ದು ಮಾತ್ರ ಅಲ್ಲ, ಅದಕ್ಕಾಗಿಯೇ ಅವ್ರ ಜೀವನವನ್ನ ಮುಡಿಪಾಗಿ ಇಟ್ಬಿಟ್ರು..' ಅಂದಿದ್ದಾರೆ ರಾಘವೇಂದ್ರ ರಾಜ್‌ಕುಮಾರ್.
ಮೋಹನ್‌ಲಾಲ್-ಪೃಥ್ವಿರಾಜ್ ಕಮಾಲ್.. ಮಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'L2: ಎಂಪುರಾನ್'
