ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಬಳಿಕ ಶಿವರಾಜ್‌ಕುಮಾರ್ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಕುಟುಂಬ, ಅಭಿಮಾನಿಗಳ ಬೆಂಬಲದಿಂದ ಚೇತರಿಸಿಕೊಂಡಿದ್ದಾರೆ. ಆರಂಭಿಕ ಭಯದ ನಡುವೆಯೂ ಧೈರ್ಯದಿಂದ ಶಸ್ತ್ರಚಿಕಿತ್ಸೆ ಎದುರಿಸಿದರು. ಈಗ ಚೇತರಿಸಿಕೊಂಡಿದ್ದು, ಮಾರ್ಚ್ ನಂತರ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿಕಿತ್ಸಾ ಅನುಭವದ ದಾಖಲೀಕರಣ ಯೋಜನೆಯನ್ನೂ ಗೀತಾ ಹಂಚಿಕೊಂಡಿದ್ದಾರೆ.
ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಬಳಿಕ ಇಂದು, ಅಂದರೆ 26 ಜನವರಿ 2025ರಂದು ನಟ ಶಿವರಾಜ್‌ಕುಮಾರ್ (Shivarajkumar) ಬೆಂಗಳೂರಿಗೆ ಮರಳಿದ್ದಾರೆ. ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ನಟ ಶಿವಣ್ಣ 'ಹೋಗಬೇಕಾದ್ರೆ ಎಮೋಷನಲ್ ಆಗಿದ್ದೆ. ಏನೇ ಆದ್ರೂ ಜೀವನದಲ್ಲಿ ಫೇಸ್ ಮಾಡಬೇಕು. ಮಾಡೋಣ ನೋಡೋಣ ಅಂತ ಆಗಲ್ಲ, ಮನೆಯಲ್ಲಿ ಎಲ್ಲರ ಸಪೋರ್ಟ್ ಇತ್ತು, ಮುಂಚೆ ನಂಗೆ ಭಯವಿತ್ತು, ನಾನು Blessed ಅನಿಸ್ತಿದೆ..' ಎಂದಿದ್ದಾರೆ.
ಜೊತೆಗೆ, 'ಫ್ಲೈಟ್ ಟ್ರಾವೆಲ್ ನಲ್ಲೆ ಭಯ ಇತ್ತು. ಅಲ್ಲಿ ಹೋದ ಮೇಲೆ ಕಾನ್ಫಿಡೆನ್ಸ್ ಬಂತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು. ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ ಎಲ್ಲರ ಸಪೋರ್ಟ್ ಇದೆ. 1 ತಿಂಗಳು ಪ್ರತಿಯೊಬ್ಬರೂ ನನ್ ಜೊತೆ ಇದ್ರು. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ.' ಎಂದಿದ್ದಾರೆ.
ರಜನಿಕಾಂತ್ ಜೊತೆ ನಟಿಸಲಿರುವ ಕನ್ನಡದ 'ನರಸಿಂಹ' ಅಮೆರಿಕಾದಿಂದ ಬರೋದು ಯಾವಾಗ?
'38 ವರ್ಷಗಳಿಂದ ನನ್ನನ್ನ ಬೆಳೆಸಿದ್ದಾರೆ. King is Back.. ಹೊರಡಬೇಕಾದ್ರೆ ತುಂಬಾ ಭಯ ಆಗಿತ್ತು.. ತುಂಬಾ ರಿಸ್ಕಿ ಆಪರೇಷನ್. ಆದ್ರೆ ಏನೇ ಇದ್ರೂ ಧೈರ್ಯ ವಾಗಿ ಎದುರಿಸಲೇಬೇಕು. ಫ್ಯಾಮಿಲಿ ಯಲ್ಲಿ ಎಲ್ಲರ ಸಪೋರ್ಟ್ನಿಂದ ಹಾಗೂ ಅಭಿಮಾನಿಗಳ ಆಶೀರ್ವಾದದಿಂದ ನಾನು ಹುಷಾರಾಗಿ ಬಂದಿದ್ದೇನೆ. ಆಪರೇಷನ್ ಆಗೋವರೆಗೂ ಏನು ಮಾಡಬೇಕು ಅದೆಲ್ಲ ಮಾಡಿದ್ದೇನೆ.
ಹೋಗಬೇಕಾದರೆ 21ಗಂಟೆ ನಾನು ಜರ್ನಿಮಾಡ್ದೆ... ಅಮೆರಿಕಾದಲ್ಲಿ ನಾನು ಹಾಸ್ಪೆಟಲ್ ನೋಡಿದ ಮೇಲೆ ನನಗೆ ಧೈರ್ಯ ಬಂತು. ಇಡೀ ಅಪರೇಷನ್ ದಿನ ಒಂದು ಸರ್ಕಸ್ ತರ ಆಯ್ತು.. ಎಲ್ಲರ ಆರೈಕೆ ಅಭಿಮಾನಿಗಳ ಆರೈಕೆ.. ಇಂಡಸ್ಟ್ರಿಯ ಆರೈಕೆಯಿಂದ ನಾನು ವಾಪಸ್ ಬಂದಿದ್ದೇನೆ. ನಾನು ಗೀತಾ ಬಗ್ಗೆ ಎನ್ ಹೇಳಲಿ... ನನಗೆ ತಾಯಿಗಿಂತ ಹೆಚ್ಚು ಗೀತಾ... ಈ ಬಾರಿ ಮಗಳು ಸಹ ಸೇರಿಕೊಂಡಿದ್ದಾಳೆ..
'ಅದು ಕೊಡ್ತೀಯಾ' ಎಂದು ಕೇಳುವವರ ಮಧ್ಯೆ ಹುಚ್ಚ ವೆಂಕಟ್ ಒಳ್ಳೆಯ ವ್ಯಕ್ತಿ: ಸೌಮ್ಯಾ ರಾವ್!
ಅಮೆರಿಕಾದಲ್ಲಿ ನನಗೆ ಎಲ್ಲರೂ ಸಪೋರ್ಟ್ ಮಾಡಿದ್ರು... ಅವರ ಧೈರ್ಯ ನೋಡಿ ನಾನು ಕೆಲಸ ಮಾಡಬಹುದು.. ಆದ್ರೆ ಸಂಪೂರ್ಣವಾಗಿ ಆ್ಯಕ್ಷನ್ ಸೀನ್ ಗಳಲ್ಲಿ ನಾನು ಕಾಣಿಸಿಕೊಳ್ಳುಂತಿಲ್ಲ.. ಮಾರ್ಚ್ ನಂತ್ರ ನಾನು ಆ್ಯಕ್ಷನ್ ಸೀನ್ ಮಾಡಬಹುದು. ಧೈರ್ಯ ಕೊಡೋರು ಜೊತೆಲಿ ಇದ್ರೆ ಯಾವ ಸಮಸ್ಯೆಯನ್ನೂ ಕೂಡ ಗೆದ್ದು ಬರಬಹುದು. ನಿಮ್ಮ ಧೈರ್ಯಕ್ಕೆ ನಾನು ಮೆಚ್ಚಿದ್ದೇನೆ ಅಂತ ಡಾಕ್ಟರ್ ಹೇಳಿದ್ರು..' ಎಂದಿದ್ದಾರೆ.
ಆದ್ರೆ ಎಲ್ಲರಿಗೂ ಭಯ ಇದ್ದೇ ಇರುತ್ತೆ... ಆರು ಸರ್ಜರಿಯನ್ನ ಒಂದೆ ಬಾರಿ ಮಾಡಿದ್ದು... ಹೊಲಿಗೆಗಳ ಬಗ್ಗೆ ನನಗೆ ಗೊತ್ತಿಲ್ಲ...ಗೀತಾ ಡಾಕ್ಟರ್ ಜೊತೆ ಮಾತನ್ನಾಡಿದ ಮೇಲೆ ನನಗೆ ತಂಬಾ ನಂಬಿಕೆ ಬಂತು.. ನಮ್ಮ ಕನ್ನಡದ ಡಾಕ್ಟರ್ ಕೊಟ್ಟ ಭರವಸೆ, ಅಭಿಮಾನಿಗಳ ಪ್ರಾರ್ಥನೆಯಿಂದ ಇಂದು ಹುಷಾರಾಗಿ ಬಂದಿದ್ದೇನೆ.'' ಎಂದಿದ್ದಾರೆ ಕರುನಾಡು ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್.
ಸೈಫ್ ಮೇಲಿನ ದಾಳಿಗೆ 'ಕಿಸ್' ನಟಿ ಶ್ರೀಲೀಲಾಗೆ ಸಮಸ್ಯೆ, ಒಗಟು ಬಿಡಿಸ್ತೀರಾ ನೋಡಿ!
ಇನ್ನು ಗೀತಾ ಶಿವರಾಜ್‌ಕುಮಾರ್ ಅವರು 'ಆಪರೇಷನ್ ಆದ ನಂತ್ರ ಎರಡೇ ದಿನಕ್ಕೆ ವಾಕ್ ಮಾಡಿದ್ರು ಶಿವಣ್ಣ. ಟ್ರೀಟ್ ಮೆಂಟ್ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡೋಣ' ಅಂತ ಹೇಳಿದ್ರು' ಇನ್ನು ಶಿವರಾಜ್‌ಕುಮಾರ್ ಅವರು 'ಆಪರೇಷನ್ ವೇಳೆ ನಾಲ್ಕು ದಿನ ಲಿಕ್ವಿಡ್ ಊಟವೇ ಮಾಡ್ತಾಯಿದ್ದೆ.. ಸಪ್ಪೆ ಊಟ ಮಾಡ್ತಾಯಿದ್ದೆ.. ಆದಾದ ನಂತ್ರ ರಸಂ ಹಾಗೂ ಅನ್ನ ತಿಂತಾಯಿದ್ದೆ.
ನಾನು ಹುಷಾರಾಗಲು ಪೋರ್ಸ ಮಾಡಲು ಹೋಗಲಿಲ್ಲ..ಜೀವನವೇ ಒಂದು ಪಾಟ ಅಷ್ಟೇ .. ಅದರಿಂದ ನಾನು ಗೆದ್ದು ಬಂದೆ... ಕ್ಯಾನ್ಸರ್ ಇದೆ ಅಂತ ನಾನು ಕುಗ್ಗಲ್ಲ...ಅಪರೇಷನ್ ಹಾಗೋ ಮುಂಚೆ ನಾನು ತುಂಬಾ ಆ್ಯಕ್ಟಿವ್ ಅಗಿದ್ದೆ...ತಕ್ಷಣಕ್ಕೆ ನಾನು 141ನೇ ಸಿನಿಮಾ ಮಾಡ್ತಿದ್ದೇನೆ. ಅದಾದ ನಂತ್ರ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡ್ತಿನಿ..
ದೀಪಿಕಾ ಕಿವಿಯಲ್ಲಿ ರಣವೀರ್ ಯಾಕೆ ಪದೇಪದೇ ಪಿಸುಗುಡ್ತಾರೆ? ಸಿಕ್ಬಿಡ್ತು ಉತ್ತರ...!
ಮಾರ್ನಿಂಗ್ ವಾಕಿಂಗ್, ಕಾಫಿ, ಗೀತಾ ಜೊತೆ ಚರ್ಚೆ.. ನಂತ್ರ ಅಡುಗೆ... ಪ್ರತೀ ದಿನ ಒಂದೋಂದು ತರ ಅಡುಗೆ ಎಲ್ಲವೂ ಅದ್ಭುತ..24ಕ್ಕೆ ನನ್ನ ಡಿಸ್ಚಾರ್ಜ್ ಮಾಡಿದ್ರು.. ಅ ನಂತ್ರ ಒಂದೊಂದೇ ಟ್ಯೂಬ್ ಕ್ಲಿಯರ್ ಮಾಡಿದ್ರು...ನಾನು ಯಾವಾಗಲು ಎಲ್ಲರನ್ನು ಗೌರವ ಕೊಟ್ಟೇ ಕೊಡ್ತೇನೆ.. ಬೇಜಾರಾದ್ರೂ ನಾನು ವೈದ್ಯರ ಮಾತು ಕೇಳಿದ್ದೇನೆ...ಅಭಿಮಾನಿಗಳ ಪ್ರಾರ್ಥನೆ ಬಗ್ಗೆ ನಾನು ಏನು ಹೇಳಲಿ..? ಎಂದಿದ್ದಾರೆ ಅಮೆರಿಕಾದಿಂದ ಬಂದ ನಂತ್ರ ಶಿವಣ್ಣ.
