ಸೌಮ್ಯಾ ರಾವ್ ಹುಚ್ಚ ವೆಂಕಟ್‌ರನ್ನು ಶ್ಲಾಘಿಸಿದ್ದಾರೆ. ನಿಗದಿತ ಸಂಭಾವನೆ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆ ಮಾಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರರಂಗದ "ಸಂಕುಚಿತ ಮನಸ್ಥಿತಿ"ಯನ್ನು ಟೀಕಿಸಿದ್ದಾಗಿ, ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದಾರೆ.
'ಕನ್ನಡ ಚಿತ್ರರಂಗ ಚಿಕ್ಕ ಇಂಡಸ್ಟ್ರಿಯಾಗಿಯೇ ಉಳಿಯುತ್ತದೆ, ನೋಡ್ತಾ ಇರಿ.. ಅಲ್ಲಿ ಒಳ್ಳೆಯ ಪ್ರತಿಭೆಗಳನ್ನು ಬೆಳೆಯಲು ಬಿಡುವುದಿಲ್ಲ' ಎಂದು ಹೇಳಿದ್ದರು ನಟಿ ಸೌಮ್ಯಾ ರಾವ್. ಇದೀಗ ಸೌಮ್ಯಾ ರಾವ್ (Sowmya Rao) ಹುಚ್ಚ ವೆಂಕಟ್ ಬಗ್ಗೆ ಮಾತನ್ನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ನಟಿ ಸೌಮ್ಯಾ ರಾವ್ ಹುಚ್ಚ ವೆಂಕಟ್ ಅವರ 'ಪೊರ್ಕಿ ಹಚ್ಚ ವೆಂಕಟ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
ನನ್ ಜೊತೆ ಬರ್ತೀಯಾ, ಅದು ಕೊಡ್ತೀಯಾ ಇದು ಕೊಡ್ತೀಯಾ, ಇಲ್ಲ ಅಂದ್ರೆ ಬಕೆಟ್ ಹಿಡಿ ಎಂದು ಹೇಳುವ ಅದೆಷ್ಟೋ ದರಿದ್ರ ನನ್ಮಕ್ಕಳಿಗಿಂತ ಹುಚ್ಚ ವೆಂಕಟ್ (Huchcha Venkat) ಅದೆಷ್ಟೋ ಪಾಲು ವಾಸಿ, ಉತ್ತಮ ವ್ಯಕ್ತಿ. ನಾವು ಮಾಡಿದ ಕೆಲಸಕ್ಕೆ ಸಂಭಾವನೆ ಕೊಡಲು ಹಿಂದೆಮುಂದೆ ನೋಡುವ ಅದೆಷ್ಟೋ ಮಂದಿಯ ನಡುವೆ, ಪಾಪ ಹುಚ್ಚ ವೆಂಕಟ್ ಮರುಮಾತನಾಡದೇ ಕೊಟ್ಟಮಾತಿನಂತೆ ಹೇಳಿದಷ್ಟು ಹಣ ನೀಡಿದ್ದಾರೆ' ಎಂದಿದ್ದಾರೆ ಸೌಮ್ಯಾ ರಾವ್.
ನನ್ನ ಕನ್ನಡ ಪ್ರೇಮದ ಬಗ್ಗೆ ಗೊತ್ತಿಲ್ಲದೆ ಕಾಮೆಂಟ್ ಮಾಡೋರು ಕಾಲು ಎಕ್ಕಡಕ್ಕೂ ಸಮವಲ್ಲ: ನಿರೂಪಕಿ ಸೌಮ್ಯಾ ರಾವ್
ಕರ್ನಾಟಕ ಮೂಲದ ನಟಿ, ನಿರೂಪಕಿ ಸೌಮ್ಯಾ ರಾವ್ ತೆಲುಗಿನ ಒಂದು ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಕೆಲವರು ಈ ಮಾತನ್ನು ಒಪ್ಪಿದರೆ, ಇನ್ನೂ ಹಲವರು ತೀವ್ರ ಆಕ್ರೋಶ ಹೊರಹಾಕಿದ್ದರು. ಈಗ ಈ ವಿಚಾರವಾಗಿ ಮತ್ತೆ ಸೌಮ್ಯಾ ರಾವ್ ಅವರು ರಾಜೇಶ್ ಗೌಡ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.
'ನನ್ನನ್ನು ಕನ್ನಡ ಚಿತ್ರರಂಗ ಚೆನ್ನಾಗಿ ನೋಡಿಕೊಂಡಿಲ್ಲ, ಹೀಗಾಗಿ ನನಗೆ ಕನ್ನಡ ಚಿತ್ರರಂಗದ ಬಗ್ಗೆ ಅಭಿಮಾನ ಇಲ್ಲ. ಕಾಂತಾರ ಹಾಗೂ ಕೆಜಿಎಫ್ ಸಿನಿಮಾ ಆದ್ಮೇಲೆ ಅಲ್ಲಿ ಯಾವುದೇ ಒಳ್ಳೆಯ ಸಿನಿಮಾಗಳು ಬಂದಿಲ್ಲ. ಅಲ್ಲಿ ಪ್ರತಿಭೆಗಳನ್ನು ಬೆಳೆಸೋದಿಲ್ಲ. ಮುಂದೆ ಚಿತ್ರರಂಗ ಇನ್ನಷ್ಟು ಸಣ್ಣದಾಗುತ್ತದೆ,' ಎಂದು ಸೌಮ್ಯಾ ರಾವ್ ಹೇಳಿದ್ದರು.
'ನಾನು ಆ ಸಂದರ್ಶನ ಕೊಟ್ಟು ಎರಡು ತಿಂಗಳ ಮೇಲಾಯ್ತು. ಸಂದರ್ಶನ ಆಗಿ ಹದಿನೈದು ದಿನ ಆದ್ಮೇಲೆ ಎಡಿಟ್ ಆಗಿ ಅಪ್‌ಲೋಡ್ ಆಗಿತ್ತು. ಆ ಟೈಮ್‌ನಲ್ಲಿ ಮ್ಯಾಕ್ಸ್, ಯುಐ ಸಿನಿಮಾ ಇನ್ನೂ ರಿಲೀಸ್ ಆಗಿರಲಿಲ್ಲ. ನಾನು ಡಾ ರಾಜ್‌ಕುಮಾರ್ ಸಿನಿಮಾಗಳನ್ನು ನೋಡಿ ಬೆಳೆದವಳು. ನನಗೆ ಕನ್ನಡ ಅಂದ್ರೆ ತುಂಬ ಇಷ್ಟ. ನಾನು ಕನ್ನಡದ ಬಗ್ಗೆ ಮಾತಾಡಲಿಲ್ಲ, ಕನ್ನಡ ಚಿತ್ರರಂಗದ ಅಷ್ಟೇ ಬಗ್ಗೆ ಮಾತಾಡಿದ್ದೆ.
ದೀಪಿಕಾ ಕಿವಿಯಲ್ಲಿ ರಣವೀರ್ ಯಾಕೆ ಪದೇಪದೇ ಪಿಸುಗುಡ್ತಾರೆ? ಸಿಕ್ಬಿಡ್ತು ಉತ್ತರ...!
ಅಷ್ಟಕ್ಕೂ ನಾನು ಈ ಹಿಂದಿನ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿರಲಿಲ್ಲ, ಪ್ರಸ್ತುತ ಚಿತ್ರರಂಗದ ಬಗ್ಗೆ ಮಾತನಾಡಿದ್ದೆ, ನನ್ನ ಬೇಸರ ಹೊರಹಾಕಿದ್ದೆ ಅಷ್ಟೇ… ನನಗೆ ತೆಲುಗಿನಲ್ಲಿ ಎಲ್ಲ ಪದಗಳು ಗೊತ್ತಿಲ್ಲ. ಕನ್ನಡ ಚಿತ್ರರಂಗ ಸಣ್ಣದು ಅಂತ ನಾನು ಹೇಳಿಲ್ಲ, ಸಂಕುಚಿತ ಮನಸ್ಸು ಇದೆ ಎಂಬರ್ಥದಲ್ಲಿ ನಾನು ಹೇಳಿದ್ದೆ. ಸಂಕುಚಿತ ಪದಕ್ಕೆ ತೆಲುಗಿನಲ್ಲಿ ಏನು ಹೇಳ್ತಾರೆ ಅಂತ ಗೊತ್ತಿಲ್ಲ' ಎಂದು ಸೌಮ್ಯಾ ರಾವ್ ಈಗ ಹೇಳಿದ್ದಾರೆ.
