ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆದಿದ್ದು, ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಕೋರನನ್ನು ಬಂಧಿಸಲಾಗಿದ್ದು, ಆತನಿಗೆ ಆಧಾರ್ ಕಾರ್ಡ್ ಇಲ್ಲ ಎನ್ನಲಾಗಿದೆ. ಸೈಫ್ ಪುತ್ರ ಇಬ್ರಾಹಿಂ ನಟಿಸುತ್ತಿರುವ, ಶ್ರೀಲೀಲಾ ನಾಯಕಿಯಾಗಿರುವ 'ಡೈಲರ್' ಚಿತ್ರೀಕರಣ ಸೈಫ್ ಅವರ ಆರೋಗ್ಯ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಇಬ್ರಾಹಿಂ ತಂದೆಯ ಆರೈಕೆಯಲ್ಲಿ ನಿರತರಾಗಿದ್ದಾರೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್‌ (Saif Ali Khan) ಮೇಲೆ ಜನವರಿ 16ರ ರಾತ್ರಿ ಅಟ್ಯಾಕ್ ಆಗಿ ಅವರೀಗ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಗೊತ್ತೇ ಇದೆ. ಈ ನಡುವೆ ಸೈಫ್ ಅವರಿಗೆ ಮನೆಗೇ ಬಂದು ದಾಳಿ ನಡೆಸಿರುವ ವ್ಯಕ್ತಿಯನ್ನು ಸಿಸಿ ಟಿವಿ ಸಾಕ್ಷಿ ಆಧರಿಸಿ ಬಂಧಿಸಲಾಗಿದ್ದು, ಅದೀಗ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ (Ibrahim Ali Khan)ನಟನೆಯ 'ಡೈಲರ್' (Diler) ಚಿತ್ರದ ಶೂಟಿಂಗ್‌ ನಿಲ್ಲಿಸಲಾಗಿದೆ. ಈ ಚಿತ್ರದಲ್ಲಿ ಇಬ್ರಾಹಿಂಗೆ ಜೋಡಿಯಾಗಿ ಕನ್ನಡದ ;ಕಿಸ್' ಬೆಡಗಿ ನಟಿ ಶ್ರೀಲೀಲಾ (Sreeleela) ನಟಸುತ್ತಿದ್ದಾರೆ. 

ಸದ್ಯ ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ದಾಳಿಯಲ್ಲಿ ಸಾಕಷ್ಟು ಏಟು ಬಿದ್ದುದ್ದು ಅವರು ರಕವರಿ ಆಗಲು ಕೆಲಸಮಯಗಳ ಅಗತ್ಯವಿದೆ ಎನ್ನಲಾಗುತ್ತಿದೆ. ಈ ಮಧ್ಯೆ, ಆರೋಪಿ ವ್ಯಕ್ತಿಯ ವಿಚಾರಣೆಯಲ್ಲಿ ಶಾಕಿಂಗ್ ಸಂಗತಿ ಬಯಲಾಗಿದ್ದು, ಆತನಿಗೆ ಭಾರತದ ಆಧಾರ್ ಕಾರ್ಡ್ ಇಲ್ಲ ಎನ್ನಲಾಗಿದೆ. ಅಂದರೆ, ಸೈಫ್‌ ಮೇಲೆ ದಾಳಿ ಮಾಡಿದ್ದು ಭಾರತದ ನಾಗರಿಕ ಅಲ್ಲ, ಅಥವಾ ಅವನು ಉದ್ಧೇಶ ಪೂರ್ವಕವಾಗಿಯೇ ಭಾರತದ ಪ್ರಜೆಯಾಗಿಲ್ಲ. 

ಸೈಫ್ ಮೇಲಿನ ದಾಳಿಗೆ ಕವಿ ಕುಮಾರ್ ವಿಶ್ವಾಸ್ ಬಂಧಿಸಿ ಎಂಬ ಕೂಗು ಎದ್ದಿರುವುದೇಕೆ?

ಇದು ಒಂದು ಭಾಗವಾದರೆ, ಇನ್ನೊಂದು ಭಾಗದ್ದು ಮತ್ತೊಂಥರಾ ಕಥೆ! ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್‌ ನಟನೆಯ ಡೈಲರ್ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ಪುಷ್ಪಾ 2' ಸಿನಿಮಾ ಮೂಲಕ ಜಗತ್ತಿನ ತುಂಬಾ ಮಿಂಚು ಹರಿಸಿರುವ ನಟಿ ಶ್ರೀಲೀಲಾ, ಸದ್ಯ ಬಾಲಿವುಡ್‌ ಚಿತ್ರರಂಗಕ್ಕೆ ಪ್ರವೇಶ ಪಡೆದು ಅಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ, ಸೈಫ್ ಅಲಿ ಕಾನ್‌ ಮೇಲಿನ ದಾಳಿಯ ಕಾರಣಕ್ಕೆ ಆ ಚಿತ್ರದ ಶೂಟಿಂಗ್ ನಿಂತಿದ್ದು, 'ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎಂದಹಾಗೆ ನಟಿ ಶ್ರೀಲೀಲಾಗೆ ಸಮಸ್ಯೆ ಆಗಿದೆ. 

ಕಾರಣ, ಸೈಫ್ ಮಗ ಇಬ್ರಾಹಿಂ ಅವರಿಗೆ ಅಪಾಯವಿದೆ ಎಂದಲ್ಲ. ಬದಲಿಗೆ, ಅಪ್ಪ ಆಸ್ಪತ್ರೆಯಲ್ಲಿ ಇರುವಾಗ ಮಗ ಅದು ಹೇಗೆ ನೆಮ್ಮದಿಯಿಂದ ಶೂಟಿಂಗ್ ಮಾಡಲು ಸಾಧ್ಯ? ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅಪ್ಪ ಸೈಫ್ ಪಕ್ಕ ಮಗ ಇಬ್ರಾಹಿಂ ಇದ್ದಾರೆ. ಸದ್ಯಕ್ಕೆ ತಮ್ಮ ಡೈಲರ್ ಚಿತ್ರದ ಶೂಟಿಂಗ್ ಸ್ಟಾಪ್ ಮಾಡಿಸಿಕೊಂಡು ಅಪ್ಪನ ಪಕ್ಕ ನಿಂತು ನೋಡಿಕೊಳ್ಳುತ್ತಿದ್ದಾರೆ ಇಬ್ರಾಹಿಂ. ಈ ಕಾರಣಕ್ಕೆ ಆ ಚಿತ್ರದ ಶೂಟಿಂಗ್‌ ನಿಂತು ನಟಿ ಶ್ರೀಲೀಲಾ ಸಮಸ್ಯೆ ಎದುರಿಸುವಂತಾಗಿದೆ. ಇವೆಲ್ಲಾ ಕೆಲವೊಮ್ಮೆ ಆಗುತ್ತೆ, ಏನ್ ಮಾಡೋಕಾಗುತ್ತೆ?

ಗಂಡನ ಬಿಟ್ಟು ಬರಲಾರೆ ಎಂದಿದ್ದ ಪ್ರಿಯಾಂಕಾ ಚೋಪ್ರಾ ಭಾರತದಲ್ಲೇ ಇದ್ದಾರೆ ಏಕೆ?