ಜೈಲರ್ ಚಿತ್ರದ ಯಶಸ್ಸಿನ ಬೆನ್ನಲ್ಲೇ, ರಜನಿಕಾಂತ್ 'ಜೈಲರ್ ೨' ಚಿತ್ರದಲ್ಲಿ ಮತ್ತೆ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ ಜೊತೆಗೂಡಿ ಮತ್ತೊಂದು ಬ್ಲಾಕ್‌ಬಸ್ಟರ್ ಸೃಷ್ಟಿಸುವ ಸೂಚನೆ ನೀಡಿದೆ. ಶಿವಣ್ಣ ಮತ್ತು ಮೋಹನ್‌ಲಾಲ್ ಚಿತ್ರದ ಭಾಗವಾಗುವ ಸಾಧ್ಯತೆಗಳಿವೆ. 74ರ ಹರೆಯದಲ್ಲೂ ರಜನಿ ಅದೇ ಖದರ್‌ನಲ್ಲಿ ಮಿಂಚುತ್ತಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಜೈಲರ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಬಿರುಗಾಳಿ ಸೃಷ್ಟಿಸಿತ್ತು. 2023ರಲ್ಲಿ ಬಂದ ಜೈಲರ್ ವಿಶ್ವದಾದ್ಯಂತ 650 ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ತಲೈವಾ ಮತ್ತೆ ಜೈಲರ್ ಕಾ ಹುಕುಂ ಎಂದಿದ್ದಾರೆ. ಜೈಲರ್2 ಅನೌನ್ಸ್ಮೆಂಟ್ ಟೀಸರ್ ಬಂದ ಬಳಿಕ ಈಗ ಜೈಲರ್2 ಮೇಕಿಂಗ್ ರಿವೀಲ್ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತೊಮ್ಮೆ ಸುನಾಮಿ ಎಬ್ಬಿಸಿದ್ದಾರೆ..
ಜೈಲರ್.. ಕಾಲಿವುಡ್ನ ಕಟೌಟ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಸಿನಿಮಾ. 2023ರಲ್ಲಿ ಬಂದಿದ್ದ ಜೈಲರ್ ರಜನಿ ಫ್ಯಾನ್ಸ್ಗೆ ಭರ್ಜರಿ ಕಿಕ್ ಕೊಟ್ಟಿತ್ತು. ಸಿನಿಮಾ ನೋಡಿದವರೆಲ್ಲಾ ಟೈಗರ್ ಕಾ ಹುಕುಂ ಅಂತ ಝೈಕಾರ ಹಾಕಿದ್ರು. ಈಗ ಜೈಲರ್2 ಅನೌನ್ಸ್ ಆಗಿದೆ. ಮತ್ತೆ ಸೂಪರ್ ಸ್ಟಾರ್ ಫ್ಯಾನ್ಸ್ ಟೈಗರ್ ಕಾ ಹುಕುಂ ಎನ್ನುತ್ತಿದ್ದಾರೆ.
ರಜನಿಕಾಂತ್ 'ಜೈಲರ್ 2'ನಲ್ಲಿ ಶಿವತಾಂಡವ ಇದ್ಯಾ? ಹೊಸದೇನೋ ಇದ್ಯಂತೆ!
ಯೆಸ್, ಸಂಕ್ರಾಂತಿ ಹಬ್ಬಕ್ಕೆ ಬಂದಿದ್ದ ಜೈಲರ್2 ಟೀಸರ್ ಸಿಕ್ಕಾಪಟ್ಟೆ ಕಿಕ್ ಕೊಟ್ಟಿತ್ತು. ಈಗ ಜೈಲರ್ ಮೇಕಿಂಗ್ ಹೊರ ಬಂದಿದೆ. ರಜನಿಕಾಂತ್ ಅವರನ್ನು ಮತ್ತೆ ಆ್ಯಕ್ಷನ್ ಅವತಾರದಲ್ಲಿ ನೀವು ಇಲ್ಲಿ ಕಾಣಬಹುದಾಗಿದೆ. ಸನ್ ಪಿಕ್ಚರ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ಜೈಲರ್2 ಟೀಸರ್ ಮೇಕಿಂಗ್ನಲ್ಲಿರೋ ಎಲಿಮೆಂಟ್ಸ್ ಸಿನಿಮಾ ಡಬಲ್ ಎಂಟರ್ಟೈನ್ ಆಗಿರುತ್ತೆ ಅನ್ನೋ ಸೂಚನೆ ಕೊಡುತ್ತಿದೆ. ನಿರ್ದೇಶಕ ನೆಲ್ಸನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ ಈ ಮೇಕಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಲೈವಾ ರಜನಿಕಾಂತ್ ಶಕ್ತಿವಂತನಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್ ಜೈ ಹೋ ತಲೈವಾ ಎನ್ನುತ್ತಿದ್ದಾರೆ.
ಜೈಲರ್ನಲ್ಲಿ ರಿಟೈರ್ಡ್ ಜೈಲರ್ ಆಫೀಸರ್ ಆಗಿದ್ದ ರಜನಿಕಾಂತ್ ಕಮಾಲ್ ಮಾಡಿದ್ರು. ಒಂದು ಕಡೆ ಫ್ಯಾಮಿಲಿ ಕಥೆ ಮತ್ತೊಂದು ಕಡೆ ಹೈ ವೋಲ್ಟೇಜ್ ಆ್ಯಕ್ಷನ್ ಆಡಿಯೆನ್ಸ್ನ ನಿಬ್ಬೆರಗಾಗಿಸಿತ್ತು. ನಮ್ಮ ಶಿವಣ್ಣ ಜೈಲರ್ನಲ್ಲಿ ನರಸಿಂಹನ ಅವತಾರ ಎತ್ತಿ ಥ್ರಿಲ್ ಕೊಟ್ಟಿದ್ರು. ಇದೀಗ ಜೈಲರ್2 ಮೇಕಿಂಗ್ ಬಂದಿದೆ. ಆದ್ರೆ ಶಿವಣ್ಣ ಕಾಣಿಸಿಕೊಂಡಿಲ್ಲ. ಬಟ್ ಜೈಲರ್2ನಲ್ಲಿ ಶಿವಣ್ಣ (Shivarajkumar) ಹಾಗು ಮೋಹನ್ ಲಾಲ್ ಇದ್ದೇ ಇರ್ತಾರೆ ಅಂತ ಹೇಳಲಾಗ್ತಿದೆ. ರಜನಿಕಾಂತ್ ವಯಸ್ಸು 74 ಆದ್ರೂ ಅದೇ ಖದರ್ ಅದೇ ಪವರ್ ಕಾಣಿಸ್ತಾ ಇದೆ.
ಸೈಫ್ ಮೇಲಿನ ದಾಳಿಗೆ 'ಕಿಸ್' ನಟಿ ಶ್ರೀಲೀಲಾಗೆ ಸಮಸ್ಯೆ, ಒಗಟು ಬಿಡಿಸ್ತೀರಾ ನೋಡಿ!
ಜೈಲರ್2 ಮೇಕಿಂಗ್ ಹಾಗು ಮ್ಯೂಸಿಕ್ ನೋಡುತ್ತಿದ್ರೆ ನಿರ್ದೇಶನ ಲೆಲ್ಸನ್ ಹಾಗು ಸಂಗೀತ ನಿರ್ದೇಶಖ ಅನಿರುದ್ಧ್ ಮತ್ತೊಮ್ಮೆ ಬಾಕ್ಸಾಫೀಸ್ನಲ್ಲಿ ಮಸ್ತಿ ಮಾಡೋದು ಗ್ಯಾರಂಟಿ. ಸಧ್ಯ ರಜನಿಕಾಂತ್ ಕೂಲಿ ಶೂಟಿಂಗ್ನಲ್ಲಿ ಬ್ಯಾಂಕಾಕ್ನಲ್ಲಿದ್ದಾರೆ. ಇದರ ಜೊತೆಗೆ ಜೈಲರ್2 ಬೇರೆ ಅನೌನ್ಸ್ ಅಗಿದ್ದು, ಈ ವರ್ಷದ ಕೊನೆಯಲ್ಲಿ ಅಥವ ಮುಂದಿನ ವರ್ಷ ಜೈಲರ್2 ತೆರೆ ಮೇಲೆ ಬರಲಿದೆ.
