ಕರಣ್ ಜೋಹರ್, ದೀಪಿಕಾ ಪಡುಕೋಣೆಗೆ ಪತ್ರಕರ್ತರ ಮುಂದೆ ರಣವೀರ್ ಸಿಂಗ್ ಆಕೆಯ ಕಿವಿಯಲ್ಲಿ ಪಿಸುಗುಟ್ಟುವುದರ ಬಗ್ಗೆ ಪ್ರಶ್ನಿಸಿದರು. ದೀಪಿಕಾ ಉತ್ತರಿಸುವ ಮುನ್ನವೇ, ರಣವೀರ್ ದೀಪಿಕಾ ಯಾವಾಗಲೂ ನಗುತ್ತಿರಬೇಕೆಂದು ಮತ್ತು ಕ್ಯಾಮೆರಾಗಳ ಮುಂದೆ ಗಂಭೀರವಾಗುವುದನ್ನು ತಪ್ಪಿಸಲು ಪಿಸುಗುಟ್ಟುವುದಾಗಿ ಉತ್ತರಿಸಿದರು.

ಬಾಲಿವುಡ್ ಆಂಕರ್ ಹಾಗೂ 'ಕಾಫೀ ವಿತ್ ಕರಣ್' ಖ್ಯಾತಿಯ ಕರಣ್ ಜೋಹರ್ (Karan Johar) ಅವರು ದೀಪಿಕಾ ಪಡುಕೋಣೆಗೆ (Deepika Padukone) ಒಂದು ಪ್ರಶ್ನೆ ಕೇಳಿದ್ದಾರೆ. ಆಗ ಪಕ್ಕದಲ್ಲೇ ದೀಪಿಕಾ ಪತಿ ರಣವೀರ್ ಸಿಂಗ್ (Ranveer Singh) ಕೂಡ ಇದ್ದಾರೆ. ಕರಣ್ ಜೋಹರ್ ಪ್ರಶ್ನೆ ಕೇಳುತ್ತಿದ್ದಂತೆ ಫುಲ್ ಅಲರ್ಟ್ ಆದ ದೀಪಿಕಾ ಕಣ್ಣರಳಿಸಿಕೊಂಡು ಪ್ರಶ್ನೆಯನ್ನು ಕೇಳಿಸಿಕೊಂಡಿದ್ದಾರೆ. ಆದರೆ, ದೀಪಿಕಾ ಉತ್ತರ ಕೊಡವ ಮೊದಲೇ ಅದಕ್ಕೆ ರಣವೀರ್ ಉತ್ತರ ಕೊಟ್ಟಿದ್ದಾರೆ. 

ಯಾಕೆ ರಣವೀರ್ ಹಾಗೆ ಮಾಡಿದ್ದಾರೆ. ಪ್ರಶ್ನೆ ಕೇಳಿದ್ದು ದೀಪಿಕಾಗೆ ಆದರೂ ಉತ್ತರ ಯಾಕೆ ರಣವೀರ್ ಕೊಟ್ಟಿದ್ದು ಎಂದರೆ ಅದಕ್ಕೆ ಬಲವಾದ ಕಾರಣವಿದೆ. ಕರಣ್ ಜೋಹರ್ ಅವರು ರಣವೀರ್ ಸಿಂಗ್ ಬಹಳಷ್ಟು ಸಮಯ ಮಾಡುವ ಒಂದು ಕೆಲಸದ ಬಗ್ಗೆಯೇ ದೀಪಿಕಾಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೇ ರಣವೀರ್ ಉತ್ತರಿಸಿದ್ದಾರೆ. ಹಾಗಿದ್ದರೆ ಆ ಪ್ರಶ್ನೆ ಏನಿರಬಹುದು ಎಂಬ ಕುತೂಹಲ ಖಂಡಿತ ನಿಮಗೆ ಬಂದಿರುತ್ತೆ.. ಹೌದು, ಅದು ಹೀಗಿದೆ ನೋಡಿ.. 

ದೇಶದ ಟಾಪ್-10ನಲ್ಲಿ ನಟಿಯರಲ್ಲಿ ಮೊದಲ ಸ್ಥಾನ ಪಡೆದ ಸಮಂತಾ; ರಶ್ಮಿಕಾ, ದೀಪಿಕಾಗೆ ಎಷ್ಟನೇ ಸ್ಥಾನ?

ಕರಣ್ ಜೋಹರ್ 'ಡಿಪಿ, ಬಹಳಷ್ಟು ಬಾರಿ ನಾನು ನೋಡಿರುವಂತೆ.. ಯಾವಾಗ ಕ್ಯಾಮೆರಾದವರು, ಅಂದರೆ ಮೀಡಿಯಾದವರು ನಿಮ್ಮನ್ನು ಸುತ್ತುವರಿಯುತ್ತಾರೋ ಆಗೆಲ್ಲಾ ರಣವೀರ್ ಅವರು ನಿಮ್ಮ ಕಿವಿಯಲ್ಲಿ ಅದೇನೋ ಪಿಸುಗುಡತ್ತಾರಲ್ಲ, ಏನದು?' ಎಂದು ಕೇಳಿದ್ದಾರೆ. ಆಗ ದೀಪಿಕಾ ಏನೋ ಹೇಳಬೇಕೆಂದು ಯೋಚಿಸುತ್ತಿರುವಾಗಲೇ ನಟ ಹಾಗೂ ದೀಪಿಕಾ ಪತಿ ರಣವೀರ್ ಅದಕ್ಕೆ ಏನೋ ಒಂದು ಉತ್ತರ ಹೇಳಿ ಕರಣ್ ಬಾಯಿ ಮುಚ್ಚಿಸಿದ್ದಾರೆ. 

ದೀಪಿಕಾಗೆ ಕೇಳಿದ ಪ್ರಶ್ನೆಗೆ ರಣವೀರ್ 'ನಾನು ಯಾವಾಗಲೂ ನನ್ನ ದೀಪಿಕಾ ಸ್ಮೈಲ್ ಮಾಡುತ್ತಿರುವುದನ್ನು ನೋಡಲು ಬಯಸುತ್ತೇನೆ. ಅದಕ್ಕಾಗಿಯೆ ನಾನು ಏನೇನೋ ಮಾಡಲು ಪ್ರಯತ್ನಿಸುತ್ತೇನೆ. ಅದರಲ್ಲಿ ಇದೂ ಒಂದು. ಅವಳು ಯಾವಾಗಲೂ ನಗುತ್ತಾ ಇರುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ಕ್ಯಾಮೆರಾದವರು ಅವಳನ್ನು ಸುತ್ತುವರಿದಾಗ ಅವಳು ಗಂಭೀರ ಆಗುವುದನ್ನು ತಪ್ಪಿಸಿ, ತಕ್ಷಣ ಆಕೆಯ ಮುಖದಲ್ಲಿ ಮುಗುಳ್ನಗು ಮೂಡಲಿ ಎಂದೇ ನಾನು ಕಿವಿಯಲ್ಲಿ ಪಿಸುಗುಟ್ಟುತ್ತೇನೆ' ಎಂದಿದ್ದಾರೆ. 

ಡಿವೋರ್ಸ್ ಪಡೆದ ಮಹಿಳೆ ಬಗ್ಗೆ ಹೇಳಲೇಬಾರದ್ದನ್ನೂ ಹೇಳಿದ ಸಮಂತಾ!