Asianet Suvarna News Asianet Suvarna News

ನಟ ದರ್ಶನ್ ಖೈದಿ ನಂಬರ್ 6106 ಈಗ ಭಾರೀ ಟ್ರೆಂಡ್, ಬೈಕ್ ಕಾರು ಆಟೋ ಮೇಲೆ ಸ್ಟಿಕ್ಕರ್!

ನಟ ದರ್ಶನ್ ಜೈಲು ವಾಸದ ಖೈದಿ ನಂಬರ್ 6106 ಈಗ ಬೈಕ್,ಆಟೋ ಹಾಗೂ ಕಾರುಗಳ ಹಿಂದೆ ಹಾಗು ಮುಂದೆಯೂ ಕಂಡುಬರುತ್ತಿದ್ದು ಭಾರೀ ಟ್ರೆಂಡಿಂಗ್ ಸೃಷ್ಟಿಯಾಗಿದೆ. ಖೈದಿ ನಂಬರ್ 6106  ಸೋಶಿಯಲ್ ಮೀಡಿಯಾಗಳಲ್ಲಿ..

sandalwood star actor darshan jail khaidi no 6106 stickers becomes trending srb
Author
First Published Jun 28, 2024, 1:34 PM IST

ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಅವರು ಆರೋಪಿಯಾಗಿ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ನಟ ದರ್ಶನ್‌ ಅವರ ಖೈದಿ ನಂಬರ್‌ 6106 ಆಗಿದೆ. ಇದೀಗ, 6106 ಸ್ಟಿಕ್ಕರ್‌ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್, ಈ ಮೂಲಕ ತಮ್ಮ ಮೆಚ್ಚಿನ 'ಡಿ ಬಾಸ್‌;ಗೆ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ. 

ನಟ ದರ್ಶನ್ ಜೈಲು ವಾಸದ ಖೈದಿ ನಂಬರ್ 6106 ಈಗ ಬೈಕ್,ಆಟೋ ಹಾಗೂ ಕಾರುಗಳ ಹಿಂದೆ ಹಾಗು ಮುಂದೆಯೂ ಕಂಡುಬರುತ್ತಿದ್ದು ಭಾರೀ ಟ್ರೆಂಡಿಂಗ್ ಸೃಷ್ಟಿಯಾಗಿದೆ. ಖೈದಿ ನಂಬರ್ 6106  ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಭಾರೀ ಟ್ರೆಂಡಿಂಗ್ ಆಗಿದೆ. ಬಹಳಷ್ಟು ಬೈಕ್,ಆಟೋಗಳ ಹಿಂದೆ ಕೂಡ ಇದೇ ಖೈದಿ ನಂಬರ್ ಸ್ಟಿಕ್ಕರ್ ಕಾಣಸಿಗುತ್ತಿದ್ದು, ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ಹಾಕಿಸಿ ಟ್ರೆಂಡಿಂಗ್ ಮಾಡಲಾಗುತ್ತಿದೆ. ಖೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಬೇಡಿಕೆ ಬಂದಿದ್ದು, ಮೊಬೈಲ್ ಅಂಗಡಿಯವರು ಮೈ ಕೆರೆದುಕೊಳ್ಳಲೂ ಕೂಡ ಆಗದೇ ಫುಲ್ ಬ್ಯುಸಿ ಆಗಿದ್ದಾರೆ. 

ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ, ಜೈಲ್‌ನಿಂದಲೇ ಫ್ಯಾನ್ಸ್‌ಗೆ ನಟ ದರ್ಶನ್ ಮನವಿ!

ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್ ಹಾಕಿಸಿರುವ ನೂರಾರು ಫ್ಯಾನ್ಸ್, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿನ ರಸ್ತೆಯಲ್ಲಿ ಕಂಡು ಬರುತ್ತಿವೆ. ಇದೇ ವೇಳೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿರುವ ಸಂದೇಶ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ. 

ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..!

ಸ್ಯಾಂಡಲ್‌ವುಡ್ ನಟ ದರ್ಶನ್ ಇದೀಗ ಜೈಲಿನಿಂದಲೇ ತಮ್ಮ ಅಸಂಖ್ಯಾತ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಅಭಿಮಾನಿಗಳಿಗೆ ನಟ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜೈಲಿನಿಂದಲೇ ನಟ ದರ್ಶನ್, ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳಿಸಿ ಮನವಿ ಮಾಡಿಕೊಂಡಿದ್ದಾರೆ. 

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಇವೆಲ್ಲ ಆಗುವುದು ಬೇಡ. ಆದ್ರಲ್ಲು ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದ ಬಗ್ಗೆ, ಭೇಟಿಯಾದಲು ಅಸಾಧ್ಯವಾದ ಬಗ್ಗೆ  ಬೇಸರವಾಗಿದೆ' ಎಂದಿದ್ದಾರೆ ನಟ ದರ್ಶನ್. 

ಖಳನಟ ರವಿಶಂಕರ್ ಜೊತೆಗಿದ್ರೂ ನಟ ದರ್ಶನ್ ಗುಟ್ಟು ರಟ್ಟು ಮಾಡಿದ ಸಾಧು ಕೋಕಿಲ! 

ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಸೌಮ್ಯ ಹಠ ಮಾಡಿದ್ದರು. ಆದರೆ ಅವರಿಗೆ ನಟ ದರ್ಶನ್ ಭೇಟಿ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಅನ್ನ ಆಹಾರ ಸೇವಿಸದೇ ಹಠ ಮಾಡಿ ದರ್ಶನ್ ಭೇಟಿಗೆ ಆಗಮಿಸಿದ್ದರು ಸೌಮ್ಯ. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಆಗಮಿಸಿದ್ದರು ಸೌಮ್ಯ. ಆಕೆ ಜೈಲಿನ ಬಳಿ ಆಗಮಿಸಿದ್ದ ವಿಚಾರ ತಿಳಿದು ಬೇಸರಗೊಂಡ ದರ್ಶನ್. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದ. ದೂರದ ಗುಲ್ಬರ್ಗಾದಿಂದ ತ್ರಿ-ವೀಲರ್ ಬೈಕ್ ನಲ್ಲಿ ಆಗಮಿಸಿದ್ದ ಎನ್ನಲಾಗಿದೆ. 

ನನ್ ಲೈಫ್ ಒಂದು ಜರ್ನಿ, ನಿಲ್ದಾಣ ಅಲ್ಲ, KGF ಸ್ಟಾರ್ ಯಶ್ ಮಾತಿಗೆ ಸ್ಟನ್ ಆಯ್ತು ಜಗತ್ತು!

ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಇದೀಗ ತುಂಬಾ ಬೇಸರ ಗೊಂಡಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಏಳನೇ ದಿನದ ಸೆರೆವಾಸಕ್ಕೆ ಕಾಲಿಟ್ಟಿದ್ದಾರೆ ನಟ ದರ್ಶನ್. ರಾತ್ರಿ ಮುದ್ದೆ, ಅನ್ನ,  ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಸೇವಿಸಿ ತಡವಾಗಿ ನಿದ್ರೆಗೆ ಜಾರಿದರು ಎನ್ನಲಾಗಿದೆ.

ಎಕ್ಸ್‌ಕ್ಯೂಸ್‌ ಮೀ ನಟನ ಮನೇಲಿ ಖ್ಯಾತ ಆ್ಯಂಕರ್ ಓಡಾಟ; ಅಲ್ಯಾಕೆ ಹೋಗಿ ನಗು ಚೆಲ್ಲಿದ್ರು ಅನುಶ್ರೀ..?

ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡ ದರ್ಶನ್ ಎಂದಿನಂತೆ ಬಿಸಿನೀರು ಸೇವಿಸಿದ್ದಾರೆ,  ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ನಟ ದರ್ಶನ್ ಜೈಲಿನಲ್ಲಿ ಹೈರಾಣು ಆಗಿದ್ದಾರೆ ಎನ್ನಲಾಗುತ್ತಿದೆ. ತುಂಬಾ ಡಲ್ಆಗಿರುವ ನಟ ದರ್ಶನ್ ಹೆಚ್ಚು ಹೊತ್ತು ಮೌನಕ್ಕೆ ಶರಣಾಗಿದ್ದು ಕಂಡುಬಂದಿದೆಯಂತೆ.

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ

Latest Videos
Follow Us:
Download App:
  • android
  • ios