Asianet Suvarna News Asianet Suvarna News

ಖತರ್ನಾಕ್ ನಟ ಜೊತೆಗಿದ್ರೂ ಹೆದರದೇ ಸ್ಟಾರ್ ದರ್ಶನ್ ಸೀಕ್ರೆಟ್ ಹೇಳಿಯೇ ಬಿಟ್ರಲ್ಲಾ ಸಾಧು ಕೋಕಿಲ!

ಸ್ಯಾಂಡಲ್‌ವುಡ್ ಖ್ಯಾತ ಕಾಮಿಡಿಯನ್ ಸಾಧು ಕೋಕಿಲ ಅವರು ನಟ ದರ್ಶನ್ ಬಗ್ಗೆ ಮಾತನಾಡಿರುವ ಹಳೆಯ ವೀಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ..

sandalwood actor sadhu kokila talks about star actor darshan on an interview srb
Author
First Published Jun 27, 2024, 2:18 PM IST

ಸ್ಯಾಂಡಲ್‌ವುಡ್ ಖ್ಯಾತ ಕಾಮಿಡಿಯನ್ ಸಾಧು ಕೋಕಿಲ ಅವರು ನಟ ದರ್ಶನ್ ಬಗ್ಗೆ ಮಾತನಾಡಿರುವ ಹಳೆಯ ವೀಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಒಡೆಯ ಶೂಟಿಂಗ್ ಮುಗಿದು ಬಿಡುಗಡೆ ವೇಳೆ ನಡೆದ ಸಂದರ್ಶನದಲ್ಲಿ ಖಳನಟ ರವಿಶಂಕರ್ ಜತೆಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಟ ಸಾಧು ಕೋಕಿಲ ಭಾಗಿಯಾಗಿದ್ದರು. ಈ ವೇಳೆ ರವಿಶಂಕರ್ ಅವರು ನನಗೆ ಮಾಸ್ ಹೀರೋಗಳು ಅಂದರೆ ಇಷ್ಟ, ಆಕ್ಷನ್ ಸಿನಿಮಾಗಳನ್ನು ನಾನು ಹೆಚ್ಚು ಇಷ್ಟಪಟ್ಟುಮಾಡುತ್ತೇನೆ' ಎಂದಿದ್ದಾರೆ. 

ಹಾಸ್ಯ ನಟ ಸಾಧು ಕೋಕಿಲ ಮಾತನಾಡುತ್ತ 'ನಾನು ಹಾಗೂ ದರ್ಶನ್ ಬಹಳಷ್ಟು ಸಿನಿಮಾಗಳಲ್ಲಿಒಟ್ಟಿಗೇ ನಟಿಸಿದ್ದೇವೆ. ಮೊದಲ ಸಿನಿಮಾ 'ಮೆಜೆಸ್ಟಿಕ್‌'ನಲ್ಲಿ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ಸಹನಟರನ್ನು ಪ್ರೀತಿಸುತ್ತಾರೆ, ಜೊತಗೆ ಊಟಕ್ಕೆ ಕರೆದುಕೊಂಡು ಹೋಗುತ್ತಾರೆ, ಹೊಟ್ಟೆ ತುಂಬಾ ತಿನ್ನಿಸುತ್ತಾರೆ. ದರ್ಶನ್ ಅವರಲ್ಲಿ ಒಳ್ಳೆಯ ಗುಣವಿದ್ದು, ಅವರು ತಾವೂ ಹೊಟ್ಟೆತುಂಬಾ ಉಂಡು ಜತೆಗಿರುವವರಿಗೂ ತಿನ್ನಿಸಿ ಎಲ್ಲರೂ ಖುಷಿಯಾಗಿರಲಿ ಎಂದು ಭಯಸುತ್ತಾರೆ' ಎಂದಿದ್ದಾರೆ. 

ಹದಿ ವಯಸ್ಸಿನ ಮಗಳೊಂದಿಗೆ ಹೇಗಿರಬೇಕು ಒಡನಾಟ, ಸಂಬಂಧದ ಪಾಠ ಹೇಳಿದ ಶ್ರುತಿ!

ಮೆಜೆಸ್ಟಿಕ್ ಚಿತ್ರದಲ್ಲಿ ನಾನೂ ಕೂಡ ಅವರ ಜೊತೆ ನಟಿಸಿದ್ದೇನೆ. ನಿರ್ಮಾಪಕರು ಪ್ರತಿಯೊಂದನ್ನು ನಾಯಕ ನಟ ದರ್ಶನ್ ಅವರನ್ನೇ ಕೇಳಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. 'ಮುದ್ದು ಮನಸೇ..' ಎಂಬ ಹಾಡು ಸ್ಲೋ ಎನ್ನುವ ಕಾರಣಕ್ಕೆ ನಿರ್ಮಾಪಕರಿಗೆ ಇಷ್ಟವಿರಲಿಲ್ಲ. ದರ್ಶನ್ ಆಗ ಹೊಸ ನಟ ಬೇರೆ, ಹೀಗಾಗಿ ಅವರು ದರ್ಶನ್ ಅವರನ್ನೇ ಕೇಳಿದರು ಆ ಹಾಡು ಇರ್ಬೇಕಾ ಅಂತ. ಅದಕ್ಕೆ ದರ್ಶನ್ , ಹೌದು ಬೇಕು ಆ ಹಾಡು ಎಂದಿದ್ದ. ಬಳಿಕ ನೋಡಿದರೆ ಆ ಹಾಡು ಸೂಪರ್ ಹಿಟ್ ಆಯ್ತು' ಎಂದಿದ್ದಾರೆ ನಟ ಸಾಧು ಕೋಕಿಲಾ. 

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ

ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಹದಿನೇಳು ಜನರು ಆರೋಪಿಯಾಗಿದ್ದಾರೆ. ಕೇಸ್ ವಿಚಾರಣೆ ಮುಗಿದು ಅಪರಾಧಿ-ನಿರಪರಾಧಿ ಘೋಷಣೆ ಆಗುವವರೆಗೂ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಯಾವುದೇ ಉತ್ತರ ಸಿಗುವುದು ಕಷ್ಟ ಎನ್ನಲಾಗುತ್ತಿದೆ. 

ವಿಷ್ಣುವರ್ಧನ್‌ರನ್ನು 'ಅಪ್ಪಾಜಿ' ಅಂತಿದ್ದ ನಟ ದರ್ಶನ್ 'ಈ ಬಂಧನ' ಬಳಿಕ ಏನು ಹೇಳಿದ್ರು? 

Latest Videos
Follow Us:
Download App:
  • android
  • ios