‘ಸಂಗೀತ ಬಾರ್ & ರೆಸ್ಟೋರೆಂಟ’ಲ್ಲಿ ಅನುಷಾ ರೈ ಜೊತೆ ಮೇಘನಾ ರಾಜ್… ಏನ್ ಕಥೆ ಇದು?
ಬಿಗ್ ಬಾಸ್ ಸೀಸನ್ 11 ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಬೆಡಗಿ ಅನುಷಾ ರೈ, ‘ಸಂಗೀತ ಬಾರ್ & ರೆಷ್ಟೋರೆಂಟ್’ ಮುಂದೆ ನಿಂತು ಗ್ಲಾಸ್ ಹಿಡಿದು ಪೋಸ್ ನೀಡಿದ್ದಾರೆ. ಇವರ ಜೊತೆ ನಟಿ ಮೇಘನಾ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ.

ಸಂಗೀತ ಬಾರ್ & ರೆಸ್ಟೋರೆಂಟ್
ಕನ್ನಡ ಸಿನಿಮಾಗಳಲ್ಲಿ ನಟಿಸಿ, ಬಿಗ್ ಬಾಸ್ ಕನ್ನಡದ ಮೂಲಕ ಕನ್ನಡಿಗರಿಗೆ ಮತ್ತಷ್ಟು ಪರಿಚಿತರಾದ ಸುಂದರಿ ಅನುಷಾ ರೈ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬೆಡಗಿ ಇದೀಗ ಸಂಗೀತ ಬಾರ್ & ರೆಸ್ಟೋರೆಂಟ್ ನಲ್ಲಿ ನಟಿ ಮೇಘನಾ ರಾಜ್ ಜೊತೆ ಪೋಸ್ ಕೊಟ್ಟಿದ್ದಾರೆ.
ಅನುಷಾ ರೈ ಕೈಯಲ್ಲಿ ಗ್ಲಾಸ್
ಅನುಷಾ ರೈ ಶೇರ್ ಮಾಡಿರುವ ಫೋಟೊಗಳಲ್ಲಿ ಒಂದರಲ್ಲಿ ನಟಿ ಗೌನ್ ಧರಿಸಿದ್ದು, ಸಂಗೀತ ಬಾರ್ & ರೆಸ್ಟೋರೆಂಟ್ ಮುಂದೆ ನಿಂತು ಕೈಯಲ್ಲಿ ಕಾಫಿ ಮಗ್ ಹಿಡಿದು ಪೋಸ್ಟ್ ಮಾಡಿದ್ದು, ಸದ್ಯ ಈ ಪೋಸ್ಟ್ ಏನಾಪ್ಪಾ, ನಟಿ ಯಾಕೆ ಬಾರ್ & ರೆಸ್ಟೋರೆಂಟ್ ಗೆ ಹೋಗಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ.
ಸಿನಿಮಾ ಚಿತ್ರೀಕರಣದ ನಟಿ
ಅಂದ ಹಾಗೇ ಸಂಗೀತ ಬಾರ್ & ರೆಸ್ಟೋರೆಂಟ್ ಎನ್ನುವುದು ಒಂದು ಹೊಸ ಕನ್ನಡ ಸಿನಿಮಾ ಆಗಿದ್ದು. ಈ ಚಿತ್ರದಲ್ಲಿ ಅನುಷಾ ರೈ ಮೇಘನಾ ರಾಜ್ ಜೊತೆ ನಟಿಸುತ್ತಿದ್ದಾರೆ. ಹಾಗಾಗಿ ಈ ಜೋಡಿ ಜೊತೆಯಾಗಿ ಪೋಸ್ ಕೊಟ್ಟಿದ್ದಾರೆ.
ಏನು ಹೇಳಿದ್ರು ನಟಿ
ಸಂಗೀತ ಬಾರ್ & ರೆಸ್ಟೋರೆಂಟ್. ಕುಂದಾಪುರದ ಬಿಸಿಲಿನಲ್ಲಿ 30 ದಿನಗಳ ನಿರಂತರ ಚಿತ್ರೀಕರಣ!! ಉತ್ಸಾಹ, ತಾಳ್ಮೆ ಮತ್ತು ಸಿನಿಮಾದ ಮೇಲಿನ ಶುದ್ಧ ಪ್ರೀತಿ, ತುಂಬಾ ಕಠಿಣ ಪರಿಶ್ರಮ, ತುಂಬಾ ಮೋಜು, ಸುಂದರವಾದ ಸೆಟ್, ಮತ್ತು ಅತ್ಯಂತ ಗೌರವಾನ್ವಿತ, ಪ್ರೀತಿಯ ಪಾತ್ರವರ್ಗ ಮತ್ತು ಸಿಬ್ಬಂದಿ. ಈ ಜರ್ನಿ ಮತ್ತು ಈ ಪ್ರಾಜೆಕ್ಟ್ ನಿಜವಾಗಿಯೂ ಇಷ್ಟವಾಯಿತು ಎಂದು ಅನುಷಾ ರೈ ಬರೆದುಕೊಂಡಿದ್ದಾರೆ.
ಕೋಮಲ್ ನಟನೆಯ ಸಿನಿಮಾ
ಯುವ ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಂಗೀತ ಬಾರ್ & ರೆಸ್ಟೋರೆಂಟ್ ಸಿನಿಮಾದಲ್ಲಿ ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಇದೊಂದು ಕಾಮಿಡಿ ಎಂಟರ್ ಟೇನ್ಮೆಂಟ್ ಆಗಿದ್ದು, ಕೋಮಲ್ ಡಬಲ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಕಾಮಿಡಿ ಥ್ರಿಲ್ಲರ್
ಸಿನಿಮಾದ ಮೊದಲಾರ್ಧ ಪೂರ್ತಿಯಾಗಿ ಕಾಮಿಡಿ ಇದ್ದರೆ, ದ್ವಿತೀಯಾರ್ಧ ಸಸ್ಪೆನ್ಸ್-ಥ್ರಿಲ್ಲರ್ ಕಥೆಯನ್ನು ಹೊಂದಿದೆಯಂತೆ. ಹಿಸ್ಟಾರಿಕಲ್ ಕಾಮಿಡಿ ಜಾನರ್ ನ ಈ ಚಿತ್ರವನ್ನು ಕುಂದಾಪುರ, ಕಾಸರಗೋಡು, ಕೇರಳ, ರಾಜಸ್ಥಾನ, ಹಂಪಿ ಮೊದಲಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

