Asianet Suvarna News Asianet Suvarna News

ಎಕ್ಸ್‌ಕ್ಯೂಸ್‌ ಮೀ ನಟನ ಮನೇಲಿ ಖ್ಯಾತ ಆ್ಯಂಕರ್ ಓಡಾಟ; ಅಲ್ಯಾಕೆ ಹೋಗಿ ನಗು ಚೆಲ್ಲಿದ್ರು ಅನುಶ್ರೀ..?

ಹೊಸ ಮನೆ ನೋಡಿ ಅನುಶ್ರೀ ಏನು ಹೇಳಿರಬಹುದು ಎಂಬ ಕುತೂಹಲ ನಿಮಗಿದ್ರೆ ಮುಂದಿನ ಸಾರಿ ಅವರು ಸಿಕ್ಕಾಗ ಕೇಳಿ ತಿಳಿದುಕೊಳ್ಳಿ. ಆದರೆ, ಅನುಶ್ರೀ ಅವರನ್ನು ಕೇಳದೆಯೂ..

Anchor anushree presence in excuse me fame actor ajay rao home inoguration srb
Author
First Published Jun 27, 2024, 5:58 PM IST

ಆ್ಯಂಕರ್​ ಹಾಗೂ ನಟಿ ಅನುಶ್ರೀ ಕುಳಿತರೂ ನಿಂತರೂ ಸುದ್ದಿಯೇ ಆಗುತ್ತದೆ. ಚಿನಕುರುಳಿಯಂತೆ ಚಟಪಟ ಮಾತನಾಡುವ ಆ್ಯಂಕರ್​ ಅನುಶ್ರೀ (Anchor Anushree) ಗಂಧದ ಗುಡಿಯ ಮಾತಿನ ಮಲ್ಲಿ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ವೀಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಅನುಶ್ರೀ ಯಾರದೋ ಮನೆಯಲ್ಲಿ ಓಡಾಡುತ್ತಿದ್ದಾರೆ. ಯಾರೋ ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದು, ಅದೀಗ ಭಾರೀ ವೈರಲ್ ಆಗುತ್ತಿದೆ. ಹಾಗಿದ್ದರೆ ಆ್ಯಂಕರ್​ ಅನುಶ್ರೀ ಹೋಗಿದ್ದೆಲ್ಲಿಗೆ? ಓಡಾಡಿದ್ದು ಎಲ್ಲಿ? .

ಈ ಬಗ್ಗೆ ಮಾಹಿತಿ ಇಲ್ಲಿ ಹೊರಬಿದ್ದಿದೆ ನೋಡಿ.. ಹೌದು ನಟಿ ಹಾಗೂ ನಿರೂಪಕಿ ಅನುಶ್ರೀ ಸ್ಯಾಂಡಲ್‌ವುಡ್ ನಟ 'ಎಕ್ಸ್‌ಕ್ಯೂಸ್‌ ಮೀ' ಖ್ಯಾತಿಯ ಅಜಯ್ ರಾವ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಹೊಸ ಮನೆ ಗೃಹಪ್ರವೇಶ ನಡೆಯುತ್ತಿದ್ದು, ಅಜಯ್ ರಾವ್ ಅವರ ಪತ್ನಿ ಅನುಶ್ರೀ ಅವರಿಗೆ ಸಾಥ್ ಕೊಟ್ಟು ಎಲ್ಲಾ ಕಡೆ ಓಡಾಡಿಸಿ ತಮ್ಮ ಮನೆ ತೋರಿಸಿದ್ದಾರೆ. ಮನೆ ನೋಡಿ ಖುಷಿಗೊಂಡು ಅನುಶ್ರೀ ಸಮ್ಮನೇ ಬರಲು ಸಾಧ್ಯವೇ? ಅರಳು ಹುರಿದಂತೆ ಮಾತನಾಡುವ ಅನುಶ್ರೀ ಏನಾದ್ರೂ ಹೇಳಿಯೇ ಬಂದಿರುತ್ತಾರೆ ಬಿಡಿ!

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

ಹೊಸ ಮನೆ ನೋಡಿ ಅನುಶ್ರೀ ಏನು ಹೇಳಿರಬಹುದು ಎಂಬ ಕುತೂಹಲ ನಿಮಗಿದ್ರೆ ಮುಂದಿನ ಸಾರಿ ಅವರು ಸಿಕ್ಕಾಗ ಕೇಳಿ ತಿಳಿದುಕೊಳ್ಳಿ. ಆದರೆ, ಅನುಶ್ರೀ ಅವರನ್ನು ಕೇಳದೆಯೂ ಖಂಡಿತವಾಗಿಯೂ ಹೇಳಬಹುದು, ಅವರು 'ಚೆನ್ನಾಗಿದೆ ಮನೆ, ಒಳ್ಳೆಯದಾಗಲಿ' ಎಂದಿರುವುದಂತೂ ಪಕ್ಕಾ. ಗ್ಲಾಮರ್‌ ಲುಕ್‌ನ ಅನುಶ್ರೀ ಸಿಂಪಲ್ ಡ್ರೆಸ್‌ನಲ್ಲಿ ಅಲ್ಲಿ ಮಿಂಚು ಹರಿಸಿ ಬಂದಿದ್ದರೆ. ಎಂದಿನಂತೆ ನಗುಮೊಗದಲ್ಲಿ ಪಟಪಟನೇ ಮನೆಯನ್ನೆಲ್ಲಾ ಓಡಾಡಿ ಅಲ್ಲಿ ಸೇರಿದ್ದವರಿಗೆ ಮೋಡಿ ಮಾಡಿ ಬಂದಿದ್ದಾರೆ. 

ಮೆಜೆಸ್ಟಿಕ್‌ನಲ್ಲಿ ನಟ ದರ್ಶನ್ ಏನ್ ಮಾಡಿದ್ರು ಅನ್ನೋ ಗುಟ್ಟು ಬಿಚ್ಚಿಟ್ಟ ಸಾಧು ಕೋಕಿಲ..!

ಆ್ಯಂಕರ್​ ಅನುಶ್ರೀ ಎಂದರೆ ಅವರೊಂದು 'ಬೊಂಬಾಟ್ ಮಾತಿನ ಬೊಂಬೆ' ಇದ್ದಂತೆ ಎಂಬುದು ಬಹಳಷ್ಟು ಜನರು ಹೇಳುವ ಮಾತು. ಸ್ಯಾಮಡಲ್‌ವುಡ್ ಹಾಗು ಕಿರುತೆರೆಯ ಹಲವಾರು ಕಲಾವಿದರನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅನುಶ್ರೀ ಸಂದರ್ಶನ ಮಾಡುತ್ತಾ ಇರುತ್ತಾರೆ. ಅಲ್ಲಿ ಹಲವರನ್ನು ಕಾಲೆಳೆದು ನಕ್ಕುನಗಿಸಿ, ಅವರಿಕೆ ಪ್ರಶ್ನೆ ಕೇಳಿ ಉತ್ತರ ಪಡೆದು ಅದನ್ನೆಲ್ಲ ಜಗತ್ತಿನ ತುಂಬಾ ಹರಿದಾಡಲು ಬಿಟ್ಟು ಎಂಜಾಯ್ ಮಾಡುವುದು ಅನುಶ್ರೀ ಕೆಲಸವೋ ಹವ್ಯಾಸವೋ ಗೊತ್ತಿಲ್ಲ. 

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ

ಒಟ್ಟಿನಲ್ಲಿ, ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಕುಳಿತರೆ ನಿಂತರೆ ಸುದ್ದಿಯಾಗುತ್ತಾರೆ ಎನ್ನುತ್ತಿರುವವರಿಗೆ ಇನ್ನೊಂದು ಸುದ್ದಿ ಇಲ್ಲಿದೆ. ಅದೇನೆಂದರೆ, ಇಲ್ಲ, ಓಡಾಡಿದರೂ ಸುದ್ದಿಯಾಗುತ್ತಾರೆ. ಏಕೆಂದರೆ, ಅಜಯ್ ರಾವ್ ಮನೆಯ ಅನುಶ್ರೀ ಓಡಾಡಿದ ವೀಡಿಯೋ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡಿ ಅದೆಷ್ಟು ಸುದ್ದಿಯಾಗಿದೆ ಗೊತ್ತಾ ನಿಮ್ಗೆ? ಇನ್ಮುಂದೆ ನೀವು ಅನುಶ್ರೀ ಬಗ್ಗೆ ಮಾತನಾಡುವಾಗ, 'ಕುಳಿತರೂ ನಿಂತರೂ ಹಾಗೂ ಓಡಾಡಿದರೂ ಸುದ್ದಿಯಾಗುತ್ತದೆ ಎಂದು ಕರೆಕ್ಷನ್ ಮಾಡಿಕೊಂಡು ಹೇಳಿ ಎಂದರೆ ತಪ್ಪಿಲ್ಲ ತಾನೇ?

ವಿಷ್ಣುವರ್ಧನ್‌ರನ್ನು 'ಅಪ್ಪಾಜಿ' ಅಂತಿದ್ದ ನಟ ದರ್ಶನ್ 'ಈ ಬಂಧನ' ಬಳಿಕ ಏನು ಹೇಳಿದ್ರು? 

Latest Videos
Follow Us:
Download App:
  • android
  • ios