ಛೆ.. ಮೈ ಮುಟ್ಟಿ ರೊಮಾನ್ಸ್ ಮಾಡಲಾರೆ, ನಟಿ ಅಮೂಲ್ಯಾಳನ್ನು ನಾನು ಎತ್ತಿ ಆಡಿಸಿದ್ದೇನೆ : ನಟ ದರ್ಶನ್!
ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್ ಹಾಗೂ ನಟಿ ಅಮೂಲ್ಯ ಅವರಿಬ್ಬರ ಜೋಡಿಯ..
ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಯಾಗಿದ್ದಾರೆ. ಕೇಸ್ ವಿಚಾರಣೆ ಮುಗಿದು ಯಾರು ಅಪರಾಧಿ- ಯಾರು ನಿರಪರಾಧಿ ಎಂಬುದು ಘೋಷಣೆ ಆಗುವವರೆಗೂ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಯಾವುದೇ ಸ್ಪಷ್ಟ ಉತ್ತರ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಅವರ ಬಗ್ಗೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ದರ್ಶನ್ ಹಾಗೂ ನಟಿ ಅಮೂಲ್ಯ ಅವರಿಬ್ಬರ ಜೋಡಿಯ ಸಿನಿಮಾವೊಂದು ತೆರೆಗೆ ಬರಬೇಕಿತ್ತು, ಆದರೆ ಯಾಕೆ ಬರಲಿಲ್ಲ ಎಂಬ ರಹಸ್ಯವನ್ನು ಅನಾವರಣ ಮಾಡಿದ್ದಾರೆ. ಅಗ್ನಿ ಶ್ರೀಧರ್ 'ನನ್ನ ಸಿನಿಮಾವೊಂದಕ್ಕೆ ದರ್ಶನ್ ಕಾಲ್‌ಶೀಟ್ ಪಡೆದುಕೊಂಡಿದ್ದೆ. ಆಗ ನಾಯಕಿಯಾಗಿ ನಟಿ ಅಮೂಲ್ಯ ಅವರನ್ನು ದರ್ಶನ್‌ಗೆ ಜೋಡಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದೆ. ಅದನ್ನು ನಟ ದರ್ಶನ್ ಅವರಿಗೆ ಹೇಳಿದೆ.
ಮೆಜೆಸ್ಟಿಕ್‌ನಲ್ಲಿ ನಟ ದರ್ಶನ್ ಏನ್ ಮಾಡಿದ್ರು ಅನ್ನೋ ಗುಟ್ಟು ಬಿಚ್ಚಿಟ್ಟ ಸಾಧು ಕೋಕಿಲ..!
ನನ್ನ ಮಾತನ್ನು ಕೇಳಿ ನಟ ದರ್ಶನ್ ಅತ್ಯಂತ ವಿನಯದಿಂದ 'ಗುರುಗಳೇ ಅಮೂಲ್ಯ ಬೇಡ. ನಾನು ಅವಳನ್ನು ಚಿಕ್ಕ ಮುಗುವಿನಿಂದಲೂ ನೋಡಿದ್ದೇನೆ. ನನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎತ್ತಿ ಆಡಿಸಿದ್ದೇನೆ. ಅಂಥ ಮಗುವನ್ನು ನನ್ನ ಸಿನಿಮಾಗೆ ನಾಯಕಿಯಾಗಿ ನೋಡಲು ನನ್ನಿಂದ ಆಗದು. ಆಕೆಯನ್ನು ನಾಯಕಿ ಜಾಗದಲ್ಲಿ ನೋಡುವುದರು ಹಾಗಿರಲಿ, ರೊಮ್ಯಾಂಟಿಕ್ ಸೀನ್ ಇದ್ದಾಗ ಆಕೆಯ ಕೈಯನ್ನು ಆ ಮೂಡ್‌ನಲ್ಲಿ ಟಚ್ ಮಾಡಲು ಕೂಡ ನಾನು ಬಯಸುವುದಿಲ್ಲ. ದಯವಿಟ್ಟು ನನ್ನ ಎದುರು ಅಮೂಲ್ಯ ಹೀರೋಯಿನ್ ಆಗಿ ಬೇಡ' ಎಂದು ಅತ್ಯಂತ ವಿನಯದಿಂದ ಹೇಳಿದ್ದರು' ಎಂದಿದ್ದಾರೆ.
ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ
'ನಟ ದರ್ಶನ್ ಸಹವಾಸ ದೋಷ ಹಾಗೂ ಕುಡಿತ ಬಿಟ್ಟರೆ ಮುಂದೆ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ' ಎಂದು ಕೂಡ ಅಗ್ನಿ ಶ್ರೀಧರ್ ಹೇಳಿದ್ದಾರೆ. ಮುಂದುವರೆದ ಅವರು, 'ನನ್ನ ಅನಿಸಿಕೆ ಏನೆಂದರೆ, ಈ ವಿಷ್ಯದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ, ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಅಚಾತುರ್ಯದಿಂದ ಆಗಿದ್ದು ಎಂಬುದನ್ನು ನಾನು ಖಂಡಿತ ಹೇಳಬಯಸುತ್ತೇನೆ' ಎಂದಿದ್ದಾರೆ. ಜತೆಗೆ, 'ಜೈಲು ಸೇರಿರುವ ನಟ ದರ್ಶನ್ ಸ್ವಲ್ಪ ಕಾಲದಲ್ಲೇ ನಿರಪರಾಧಿ ಎನಿಸಿ ಹೊರಗೆ ಬರುತ್ತಾನೆ. ಆದರೆ, ಮುಂದೆ ಆತ ಹೊಸ ಮನುಷ್ಯನಾಗುವತ್ತ ಗಮನ ಹರಿಸಬೇಕು' ಎಂದಿದ್ದಾರೆ.
ವಿಷ್ಣುವರ್ಧನ್‌ರನ್ನು 'ಅಪ್ಪಾಜಿ' ಅಂತಿದ್ದ ನಟ ದರ್ಶನ್ 'ಈ ಬಂಧನ' ಬಳಿಕ ಏನು ಹೇಳಿದ್ರು?