Asianet Suvarna News Asianet Suvarna News

ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ, ಜೈಲ್‌ನಿಂದಲೇ ಫ್ಯಾನ್ಸ್‌ಗೆ ನಟ ದರ್ಶನ್ ಮನವಿ!

ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು ಸೌಮ್ಯ. ಆದರೆ ಅವರಿಗೆ ಭೇಟಿ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಅನ್ನ ಆಹಾರ ಸೇವಿಸದೇ ಹಠ ಮಾಡಿ ದರ್ಶನ್ ಭೇಟಿಗೆ ಆಗಮಿಸಿದ್ದರು ಸೌಮ್ಯ. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ..

sandalwood star actor darshan sent message for his fans through jail officers srb
Author
First Published Jun 28, 2024, 12:36 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ಅವರು ಆರೋಪಿಯಾಗಿ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಇದೀಗ ನಟ ದರ್ಶನ್ ಜೈಲಿನಿಂದಲೇ ತಮ್ಮ ಅಸಂಖ್ಯಾತ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಅಭಿಮಾನಿಗಳಿಗೆ ನಟ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜೈಲಿನಿಂದಲೇ ನಟ ದರ್ಶನ್, ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳಿಸಿ ಮನವಿ ಮಾಡಿಕೊಂಡಿದ್ದಾರೆ. 

ಅಭಿಮಾನಿಗಳು ಯಾರೂ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಇವೆಲ್ಲ ಆಗುವುದು ಬೇಡ. ಆದ್ರಲ್ಲು ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದ ಬಗ್ಗೆ, ಭೇಟಿಯಾದಲು ಅಸಾಧ್ಯವಾದ ಬಗ್ಗೆ  ಬೇಸರವಾಗಿದೆ' ಎಂದಿದ್ದಾರೆ ನಟ ದರ್ಶನ್. 

ಲೇಟ್‌ ಆಗಿ ಗುಟ್ಟು ರಟ್ಟಾಗಿದೆ, ಯಾರೂ ಮಾಡದ ದಾಖಲೆ ನಟ ವಿಷ್ಣುವರ್ಧನ್ ಹೆಸರಲ್ಲಿದೆ..!

ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು ಸೌಮ್ಯ. ಆದರೆ ಅವರಿಗೆ ಭೇಟಿ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಅನ್ನ ಆಹಾರ ಸೇವಿಸದೇ ಹಠ ಮಾಡಿ ದರ್ಶನ್ ಭೇಟಿಗೆ ಆಗಮಿಸಿದ್ದರು ಸೌಮ್ಯ. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಆಗಮಿಸಿದ್ದರು ಸೌಮ್ಯ. ಆಕೆ ಜೈಲಿನ ಬಳಿ ಆಗಮಿಸಿದ್ದ ವಿಚಾರ ತಿಳಿದು ಬೇಸರಗೊಂಡ ದರ್ಶನ್. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದ. ದೂರದ ಗುಲ್ಬರ್ಗಾದಿಂದ ತ್ರಿ ವೀಲರ್ ಬೈಕ್ ನಲ್ಲಿ ಆಗಮಿಸಿದ್ದ. 

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಇದೀಗ ತುಂಬಾ ಬೇಸರ ಗೊಂಡಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಏಳನೇ ದಿನದ ಸೆರೆವಾಸಕ್ಕೆ ಕಾಲಿಟ್ಟಿದ್ದಾರೆ ನಟ ದರ್ಶನ್. ರಾತ್ರಿ ಮುದ್ದೆ, ಅನ್ನ,  ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಸೇವಿಸಿ ತಡವಾಗಿ ನಿದ್ರೆಗೆ ಜಾರಿದರು ಎನ್ನಲಾಗಿದೆ. ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡ ದರ್ಶನ್ ಎಂದಿನಂತೆ ಬಿಸಿನೀರು ಸೇವಿಸಿದ್ದಾರೆ,  ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್ ಮಾಡಿದ್ದಾರೆ ಎನ್ನಲಾಗಿದೆ. 

ಖಳನಟ ರವಿಶಂಕರ್ ಜೊತೆಗಿದ್ರೂ ನಟ ದರ್ಶನ್ ಗುಟ್ಟು ರಟ್ಟು ಮಾಡಿದ ಸಾಧು ಕೋಕಿಲ! 

Latest Videos
Follow Us:
Download App:
  • android
  • ios