Asianet Suvarna News Asianet Suvarna News

ಕಾಂತಾರವೂ ನಮ್ಮದೇ ಚಿತ್ರ: ಕಡೆಗೂ ರಿಷಬ್ ಚಿತ್ರದ ಬಗ್ಗೆ ಮೌನ ಮುರಿದ ಯಶ್

ಸ್ಯಾಂಡಲ್‌ವುಡ್ ನಟ ಯಶ್ ಅಭಿನಯನದ ಕೆಜಿಎಫ್‌ನಿಂದ ಭಾರತದ ಉದ್ದಗಲಕ್ಕೂ ಪಸರಿಸಲು ಆರಂಭವಾದ ಕನ್ನಡ ಚಿತ್ರರಂಗದ ಕಂಪು, ಇದೀಗ ಕಾಂತಾರ ಮೂಲಕ ಮತ್ತಷ್ಟು ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಕನ್ನಡ ಚಿತ್ರರಂಗ ಹಾಗೂ ಕಾಂತಾರಾ ಬಗ್ಗೆ ಯಶ್ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಹೀಗೆ. 

Sandalwood actor yash speaks about Rishab Shetty movie Kantara in India today conclave
Author
First Published Nov 6, 2022, 4:35 PM IST

ಬೆಂಗಳೂರು (ನ.06): ರಿಷಭ್ ಶೆಟ್ಟಿ ನಿರ್ದೇಶನ ಚಿತ್ರಕಥೆ ಹಾಗೂ ಅಭಿನಯನದ 'ಕಾಂತಾರ' ಕನ್ನಡ ಚಿತ್ರೋದ್ಯಮದಲ್ಲಿ ಮಾತ್ರವಲ್ಲ, ಇಡೀ ಭಾರತೀಯ ಸಿನಿ ಪ್ರೇಮಿಗಳಿಗೆ ಮೈ ರೋಮಾಂಚನ ಎನ್ನುವಂತೆ ಮೂಡಿರುವ ಚಿತ್ರ. ಕೆಜಿಎಫ್ ನಂತರ ಮತ್ತೊಮ್ಮೆ ಕನ್ನಡ ಚಿತ್ರರಂಗದ ಬಗ್ಗೆ ಬಾಲಿವುಡ್ ಸೇರಿ ಭಾರತೀಯ ಚಿತ್ರರಂಗದ ಬಗ್ಗೆ ಹುಬ್ಬೇರಿಸುವಂತೆ  ಮಾಡಿದ ಸಿನಿಮಾ. ಎಲ್ಲಿ ನೋಡಿದರೂ ಕಾಂತಾರದ್ದೇ ಹವಾ. ಬಿಡುಗಡೆಯಾಗಿ ತಿಂಗಳಾದರೂ ಶ್ರೀ ಸಾಮಾನ್ಯನ ಬಾಯಿಯಲ್ಲಿ ಇನ್ನು ಈ ಚಿತ್ರದ ಬಗ್ಗೆ ಮಾತನಾಡುವುದು ಸ್ಟಾಪ್ ಆಗಿಲ್ಲ. 

ಆದರೆ, ಇಂಥದ್ದೊಂದು ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಇನ್ನೂ ಏನೂ ಮಾತನಾಡಿಲ್ಲವಲ್ಲ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಇದಕ್ಕೆ ಅಪವಾದ ಎಂಬಂತೆ ಇಂಡಿಯಾ ಟುಡೇ ಕಾಂಕ್ಲೇವ್ 2022 ರಲ್ಲಿ ಪಾಲ್ಗೊಂಡು ರಾಕಿಂಗ್ ಸ್ಟಾರ್ ಯಶ್, ಚಿತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಇದು ನಮ್ಮ ಚಿತ್ರ, ನಮ್ಮ ಕನ್ನಡದ ಚಿತ್ರವೆಂದು ಎದೆಯುಬ್ಬಿಸಿ ಹೇಳಿ ಕೊಂಡಿದ್ದಾರೆ. 

ಕನ್ನಡ ಚಿತ್ರೋದ್ಯಮ (Kannada Movie Indsustry) ಹಾಗೂ ಭಾರತೀಯ ಚಿತ್ರರಂಗದಲ್ಲಿ 'ಕೆಜಿಎಫ್' ನಂತರ 'ಕಾಂತಾರ'ದಂಥ ಅತ್ಯಂತ ಕಡಿಮೆ ಬಜೆಟ್‌ನ (Low Budget Movie) ಸಿನಿಮಾವೊಂದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಬಗ್ಗೆ ನಿರೂಪಕರು ಪ್ರಶ್ನಿಸುತ್ತಿದ್ದರು. 'ರಜನೀಕಾಂತ್ ಅವರ ತಮಿಳು ಚಿತ್ರಗಳು ಸೇರಿ ತೆಲಗು, ಮಲಯಾಳಂ ಸಿನಿಮಾಗಳು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಹೆಗ್ಗುರುತು ಮೂಡಿಸುವಲ್ಲಿ ಯಶಸ್ವಿಯಾಗಿವೆ. ನಿಮ್ಮ ಸಿನಿಮಾ ಕಾಂತಾರ, ನಿಮ್ಮ ಸಿನಿಮಾವೆಂದರೆ ನೀವು ನಟಿಸದೇ ಇರಬಹುದು. ಕನ್ನಡ ಸಿನಿಮಾವೊಂದು ಭಾರತೀಯ ಚಿತ್ರರಂಗದಲ್ಲಿ ಇಷ್ಟು ಯಶ ಕಾಣಲು ಸಾಧ್ಯವಾಗಿದೆ. ಈ ವರ್ಷ ಕನ್ನಡ ಚಿತ್ರಗಳ ವರ್ಷ. ನಮ್ಮ ಬೆಂಗಳೂರು ಬಜ್ ವರ್ಡ್ ಆಗಿದ್ದು ಹೇಗೆ? ' ಎಂಬಂತೆ ಪ್ರಶ್ನಿಸಿದ್ದರು. ತಕ್ಷಣವೇ ಉತ್ತರಿಸಿದ ಯಶ್, ನಾನು ನಟಿಸದೇ ಹೋದರೇನು, ಇದೂ ನಮ್ಮ ಸಿನಿಮಾವೇ. ನಮ್ಮ ಕನ್ನಡ ಚಿತ್ರರಂಗದ ಸಿನಿಮಾ ಇಷ್ಟೊಂದು ಹೆಸರು ಮಾಡುತ್ತಿರುವುದಕ್ಕೆ, ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. 

ಮಗನ ಹುಟ್ಟುಹಬ್ಬಕ್ಕೆ ಯಶ್ ಹೊಸ ಹೇರ್ ‌ಸ್ಟೈಲ್; ಮುಂದಿನ ಚಿತ್ರದಲ್ಲಿ ಹೀಗಿರಲಿದೆ ರಾಕಿಭಾಯ್ ಲುಕ್?

ಕೆಲವು ವರ್ಷಗಳ ಹಿಂದೆ ಡಬ್ಬಿಂಗ್‌ಗೆ (Dubbing) ಕನ್ನಡ ಸಿನಿಮಾರಂಗದಲ್ಲಿ ವಿರೋಧವಿತ್ತು. ಆದರೆ, ಇದೀಗ ಆ ಡಬ್ಬಿಂಗ್‌ಗೆ ಅವಕಾಶ ಸಿಕ್ಕಿರುವುದರಿಂದಲೇ ಕನ್ನಡ ಚಿತ್ರಗಳು ಭಾರತೀಯ ಬೇರೆ ಬೇರೆ ಭಾಷೆಗಳಲ್ಲಿಯೂ ತೆರೆ ಕಂಡಿದೆ. ಕನ್ನಡ ಕಲಾವಿದರ ಪ್ರತಿಭೆ (Talent) ಹಾಗೂ ಕನ್ನಡ ಚಿತ್ರರಂಗದ ಯಶಸ್ಸು ಎಲ್ಲೆಡೆ ಪಸರಿಸುವಂತಾಗಿದೆ. ಸ್ಯಾಂಡಲ್‌ವುಡ್ (Sandalwood) ಚಿತ್ರಗಳು ಬಗ್ಗೆ ಭಾರತೀಯರಿಗೆ ಇರುವ ಕಲ್ಪನೆಯೇ ಬದಲಾಗಿದೆ. ಇಂಥ ಬದಲಾವಣೆಗಳಿಂದಲೇ ಕನ್ನಡ ಚಿತ್ರರಂಗದ ಮೇಲಿದ್ದ ಅಭಿಪ್ರಾಯವೂ ಎಲ್ಲರಲ್ಲಿಯೂ ಬದಲಾಗಿದೆ. ಇದು ನಮಗೆ ಹೆಚ್ಚು ಹೆಚ್ಚು ಆತ್ಮ ವಿಶ್ವಾಸ (Confidence) ತಂದು ಕೊಟ್ಟಿದೆ. ಇದರಿಂದ ಸಣ್ಣ ಸಿನಿ ಉದ್ಯಮವಾದ ಕನ್ನಡ ಚಿತ್ರರಂಗ ಬೇರೆ ಉದ್ಯಮದೊಂದಿಗೆ ಸ್ಪರ್ಧಿಸುವುದು ಕಷ್ಟ. ಬಿಗ್ ಬಜೆಟ್ ಚಿತ್ರಗಳನ್ನು ಮಾಡುವುದು ಕಷ್ಟವೆಂದೇ ಭಾವಿಸಿದ್ದ ಕಾಲವೊಂದಿತ್ತು. ಆದರೆ, ಇದೀಗ ರಾಷ್ಟ್ರ ಮಟ್ಟದಲ್ಲಿ ನಮ್ಮ ಅಂದರೆ ಕನ್ನಡಿಗರ ಪ್ರತಿಭೆ ತೋರಿಸಲು ಸಾಧ್ಯವಾಗಿದೆ. ನಾವೂ ಏನು ಬೇಕಾದರೂ ಮಾಡಬಹುದು ಎಂಬ ಅಭಿಪ್ರಾಯ ಎಲ್ಲರಲ್ಲಿಯೂ ಮೂಡುತ್ತಿದೆ. ಕೆಜಿಎಫ್‌ನಂಥ ಕನ್ನಡ ಚಿತ್ರವೊಂದು ಪ್ಯಾನ್ ಇಂಡಿಯಾ ಚಿತ್ರ (Pan India Movie) ಮಾಡಲು ಹೊರಟಾಗ ಆ ವಿಶ್ವಾಸವೇ ಇರಲಿಲ್ಲ. ಆದರೆ, ರಿಸ್ಕ್ ತೆಗೆದುಕೊಂಡು ಮುಂದುವರಿದಿರಂದಲೇ ಕನ್ನಡ ಸಿನಿಮಾ ಸಾಮರ್ಥ್ಯ ಏನೆಂಬುವುದು ಜಗತ್ತಿಗೆ ಅರ್ಥವಾಯಿತು, ಎಂದು ಯಶ್ ಹೇಳಿದ್ದಾರೆ. 

ಯಶ್‌ಗೆ ಬಾಲಿವುಡ್‌ನ ನಿರ್ಮಾಪಕರಿಂದ 2 ಮೆಗಾ ಬಜೆಟ್ ಚಿತ್ರಗಳ ಆಫರ್

ನಾನು ಕನ್ನಡಿಗ. ಕರ್ನಾಟಕದಲ್ಲಿ ವೈವಿಧ್ಯಮಯ ಸಂಸ್ಕೃತಿಗಳಿವೆ. ಎಲ್ಲವುಕ್ಕಿಂತಲೂ ಹೆಚ್ಚಾಗಿ ಭಾರತೀಯ ನಾನು. ವೈವಿಧ್ಯತೆಯಲ್ಲಿ (Diversity) ಏಕತೆ ಸಾರುವ ದೇಶ ನಮ್ಮದು. ಈ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇರಬೇಕು. ಇದೀಗ ಕನ್ನಡ ಸಿನಿಮಾ ಅಥವಾ ಅನ್ಯ ಭಾಷೆಯ ಸಿನಿಮಾ ಅಂತ ಭೇದ ಮಾಡುವ ಕಾಲ ಹೋಗಿದೆ. ನಾವೆಲ್ಲರೂ ಭಾರತೀಯ ಚಿತ್ರರಂಗದವರು ಎಂದು ಹೇಳುವ ಕಾಲ ಬಂದಿದೆ, ಎಂದು ಯಶ್ ಹೇಳಿದ್ದು ಎಲ್ಲರ ಚಪ್ಪಾಳೆ ಗಳಿಸಿದೆ. 

Follow Us:
Download App:
  • android
  • ios