ಟೀಸರ್ ನೋಡ್ತಾ ಇದ್ರೆ ಯಶ್ ವರ್ಸಸ್ ನಾಯಕಿಯರು ಎನ್ನುವಂತಹ ಕಥಾಹಂದರ ಏನಾದ್ರೂ ಇದೆಯಾ ಅನ್ನೋ ಪ್ರಶ್ನೆ ಮೂಡುವಂತಿದೆ. ಟಾಕ್ಸಿಕ್‌ನ ಈ ಲೇಡೀಸ್ ಅಂಡ್ ಲೇಡೀಸ್ ಟೀಸರ್ ಅಕ್ಷರಶಃ ಕಿಚ್ಚು ಹಚ್ಚಿದೆ..! 5 ನಾಯಕಿಯರನ್ನ ಪರಿಚಯಿಸೋ ಈ ಟೀಸರ್ ಟಾಕ್ಸಿಕ್ ಬಗ್ಗೆ ಸಿನಿಮಾ ಇದ್ದ ನಿರೀಕ್ಷೆಯನ್ನ 5 ಪಟ್ಟು ಹೆಚ್ಚು ಮಾಡಿದೆ..

ರಾಕಿಂಗ್ ಸ್ಟಾರ್ ಟಾಕ್ಸಿಕ್; ಲೇಡಿಸ್ & ಲೇಡಿಸ್ ಸ್ಪೆಷಲ್!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಯಾಂಡಲ್‌ವುಡ್‌ ನಿಂದ ಹಿಡಿದು ಬಾಲಿವುಡ್, ಹಾಲಿವುಡ್‌ವರೆಗೆ ಇಡೀ ಜಗತ್ತೇ ಕಾತರದಿಂದ ಕಾಯ್ತಿರೋ ಸಿನಿಮಾ ಅಂದ್ರೆ ಅದುವೇ ರಾಕಿಂಗ್ ಸ್ಟಾರ್ ಯಶ್ ನಟನೆಯ, 'ಟಾಕ್ಸಿಕ್'. ಈ ಸಿನಿಮಾದ ಒಂದೊಂದು ಅಪ್‌ಡೇಟ್ ಕೂಡ ಹಿಸ್ಟರಿ ಕ್ರಿಯೇಟ್ ಮಾಡ್ತಿದೆ. ಅದರಲ್ಲೂ ಸದ್ಯ ರಿಲೀಸ್​ ಆಗಿರೋ ಲೇಡೀಸ್ ಸ್ಪೆಷಲ್ ಟೀಸರ್ ಅಂತೂ ಇಡೀ ಸೆನ್ಸೇಷನ್ ಸೃಷ್ಟಿಸಿದೆ. ರಾಯನ ಸಾಮ್ರಾಜ್ಯಕ್ಕೆ ಬರೋಬ್ಬರಿ ಐದು ಜನ ಪವರ್‌ಫುಲ್ ನಾಯಕಿಯರು ಎಂಟ್ರಿ ಕೊಟ್ಟಿದ್ದಾರೆ.

ಮಕ್ಕಳು ನೋಡಲೇಬೇಡಿ.. ರಾಕಿಂಗ್ ಸ್ಟಾರ್ ವಾರ್ನಿಂಗ್..!

ರಾಯನ ಸಾಮ್ರಾಜ್ಯದಲ್ಲಿ ಗ್ಯಾಂಗ್ ಆಫ್ ಗರ್ಲ್ಸ್ ಮಿಂಚಿಂಗ್

ಸಿನಿಮಾ ಹೊಸ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಆರಂಭವಾಗೋದೇ ಒಂದು ಖಡಕ್ ವಾರ್ನಿಂಗ್‌ನೊಂದಿಗೆ. 'ಮಕ್ಕಳಿಗೆ ಈ ಟೀಸರ್ ತೋರಿಸಬೇಡಿ, ವಯಸ್ಸಾದವರು 'ನಿಮ್ಮ ರಿಸ್ಕ್'ನಲ್ಲಿ ನೋಡಿ' ಅಂತ ಚಿತ್ರತಂಡ ಮೊದಲೇ ಎಚ್ಚರಿಕೆ ಕೊಟ್ಟಿದೆ ಅಂದ್ರೆ, ಈ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ರಕ್ತಪಾತ, ವೈಲೆನ್ಸ್ ಮತ್ತು ಬ್ರೂಟಲ್ ಆ್ಯಕ್ಷನ್ ಇರಬಹುದು ಅನ್ನೋದನ್ನ ನೀವೇ ಊಹೆ ಮಾಡಿಕೊಳ್ಳಿ.

ಆದ್ರೆ ಈ ಬಾರಿ ಯಶ್ ಜೊತೆ ಫೈಟ್ ಮಾಡೋಕೆ, ಯಶ್ ಸಾಮ್ರಾಜ್ಯಕ್ಕೆ ಸವಾಲು ಹಾಕೋಕೆ ಬಂದಿರೋದು ಲೇಡೀಸ್ ಗ್ಯಾಂಗ್! ಟೀಸರ್‌ನಲ್ಲಿ ನಾಯಕಿಯರ ಸೌಂದರ್ಯದ ಜೊತೆಗೆ ಅವರೊಳಗಿರೋ ಕ್ರೌರ್ಯ ಮತ್ತು ಸಾಹಸದ ಝಲಕ್ ಪ್ರೇಕ್ಷಕರ ಮೈ ರೋಮಾಂಚನಗೊಳಿಸುವಂತಿದೆ.

ಗಂಗಾ, ನಾಡಿಯಾ, ರೆಬೆಕಾ, ಎಲಿಜಬೆತ್, ಮೆಲಿಸಾ..!

ಪಂಚ ಚೆಲುವೆಯರ ಜೊತೆ ರಾಯನ ಲವ್ & ವಾರ್

ಟಾಕ್ಸಿಕ್' ಸಿನಿಮಾದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಇದರಲ್ಲಿ ನಟಿಸ್ತಿರೋ ಬರೋಬ್ಬರಿ ಐದು ಜನ ಸ್ಟಾರ್ ನಾಯಕಿಯರು. ಈ ಹಿಂದೆಯ ಇವರ ಪೋಸ್ಟರ್ ರಿಲೀಸ್ ಮಾಡಿ ಕ್ಯಾರೆಕ್ಟರ್ ಹೆಸರು ರಿವೀಲ್ ಮಾಡಿದ್ದ ಟಾಕ್ಸಿಕ್ ಟೀಂ ಈಗ ಕಿಲ್ಲಿಂಗ್ ಲುಕ್​ನ ಟೀಸರ್​ನಲ್ಲಿ ಪ್ರದರ್ಶನ ಮಾಡಿದೆ.

ಮೊದಲಿಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಇಲ್ಲಿ 'ಗಂಗಾ' ಅನ್ನೋ ಪವರ್‌ಫುಲ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅವರ ಆ್ಯಕ್ಷನ್ ಮತ್ತು ಖಡಕ್ ಲುಕ್ ಬೆಂಕಿ ಹಚ್ಚುವಂತಿದೆ.ಇನ್ನು ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ 'ನಾಡಿಯಾ' ಹೆಸರಿನಲ್ಲಿ ಅಲ್ಟ್ರಾ ಗ್ಲಾಮರಸ್ ಹಾಗೂ ಅಷ್ಟೇ ಮಿಸ್ಟೀರಿಯಸ್ ಆಗಿ ಕಾಣಿಸಿಕೊಂಡಿದ್ದಾರೆ.

ನಮ್ಮ ಹೆಮ್ಮೆಯ ಸ್ಯಾಂಡಲ್‌ವುಡ್ ಕಣ್ಮಣಿ ರುಕ್ಮಿಣಿ ವಸಂತ್ ಇಲ್ಲಿ ಸಾಫ್ಟ್ ಆಗಿ ಕಾಣಿಸಿಲ್ಲ, ಬದಲಿಗೆ 'ಮೆಲಿಸಾ' ಅನ್ನೋ ರೆಬೆಲ್ ಲೇಡಿ ರೋಲ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಇವರ ಜೊತೆಗೆ ಹುಮಾ ಖುರೇಷಿ 'ಎಲಿಜಬೆತ್' ಅನ್ನೋ ತಂತ್ರಗಾರ್ತಿಯಾಗಿ ಮತ್ತು ತಾರಾ ಸುತಾರಿಯಾ 'ರೆಬೆಕಾ' ಅನ್ನೋ ಬಿಂದಾಸ್ ಹಾಗೂ ಡೇಂಜರಸ್ ಲೇಡಿಯಾಗಿ ಕಾಣಿಸಿಕೊಂಡು ಟೀಸರ್‌ನ ತೂಕ ಹೆಚ್ಚಿಸಿದ್ದಾರೆ. ಇವರಷ್ಟೇ ಅಲ್ಲದೇ ಇಂಟರ್ನ್ಯಾಷನಲ್ ಲೆವೆಲ್‌ನ ಕೆಲವು ವಿದೇಶಿ ನಟಿಯರು ಕೂಡ ಈ ಕಥೆಯ ಭಾಗವಾಗಿದ್ದಾರೆ.

ಟೀಸರ್​ನ ಕೆಲವು ದೃಶ್ಯಗಳಲ್ಲಿ ಯಶ್ ಈ ನಾಯಕಿಯರ ಜೊತೆ ಮಜವಾಗಿ ಚೆಲ್ಲಾಟ ಆಡ್ತಾ ಇದ್ರೆ, ಇನ್ನು ಕೆಲವು ದೃಶ್ಯಗಳಲ್ಲಿ ಅದೇ ನಾಯಕಿಯರು ಯಶ್ ಪ್ರಾಣ ತೆಗೆಯಲು ಹೊಂಚು ಹಾಕ್ತಾ ಇದ್ದಾರೆ.

ಟೀಸರ್‌ನ ಕ್ಲೈಮ್ಯಾಕ್ಸ್ ಝಲಕ್ ಅಂತೂ ಅಲ್ಟಿಮೇಟ್ ಆಗಿದೆ. ನೂರಾರು ಮಹಿಳೆಯರು ಒಂದೇ ತರಹದ ಉಡುಪು ಧರಿಸಿ ಯಶ್ ವಿರುದ್ಧ ಯುದ್ಧ ಸಾರಿದ್ದಾರೆ. ಅಲ್ಲಿ ಯಾವುದೇ ಕರುಣೆ ಇಲ್ಲ, ದಯೆ ಇಲ್ಲ. ಯಶ್ ನಿರ್ದಯವಾಗಿ ಒಬ್ಬ ಮಹಿಳೆಯ ಬಾಯಿಗೆ ಗನ್ ಇಟ್ಟು ಶೂಟ್ ಮಾಡೋ ದೃಶ್ಯ , ನೋಡುಗರಿಗೆ ಶಾಕ್​ ಕೊಡ್ತಾ ಇದೆ.

ಟೀಸರ್ ನೋಡ್ತಾ ಇದ್ರೆ ಯಶ್ ವರ್ಸಸ್ ನಾಯಕಿಯರು ಎನ್ನುವಂತಹ ಕಥಾಹಂದರ ಏನಾದ್ರೂ ಇದೆಯಾ ಅನ್ನೋ ಪ್ರಶ್ನೆ ಮೂಡುವಂತಿದೆ. ಟಾಕ್ಸಿಕ್‌ನ ಈ ಲೇಡೀಸ್ ಅಂಡ್ ಲೇಡೀಸ್ ಟೀಸರ್ ಅಕ್ಷರಶಃ ಕಿಚ್ಚು ಹಚ್ಚಿದೆ..! 5 ನಾಯಕಿಯರನ್ನ ಪರಿಚಯಿಸೋ ಈ ಟೀಸರ್ ಟಾಕ್ಸಿಕ್ ಬಗ್ಗೆ ಸಿನಿಮಾ ಇದ್ದ ನಿರೀಕ್ಷೆಯನ್ನ 5 ಪಟ್ಟು ಹೆಚ್ಚು ಮಾಡಿದೆ..! ಮುಂದಿನ ಅಪ್ಡೇಟ್‌ಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತೆ ಮಾಡಿದೆ.