ರಾಜ್ ಬಿ ಶೆಟ್ಟಿ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಸಿನಿಮಾ ನೋಡುವ ಅವಕಾಶ ಫ್ಯಾನ್ಸ್ ಗೆ ಸಿಗ್ತಿದೆ. ಎಲ್ಲಿ ಮತ್ತೆ ಹೇಗೆ ಎಂಬ ಮಾಹಿತಿ ಇಲ್ಲಿದೆ.
ಸ್ಯಾಂಡಲ್ವುಡ್ ಬಹುನಿರೀಕ್ಷಿತ ಚಿತ್ರಗಳಲ್ಲಿ ರಕ್ಕಸಪುರದೋಳ್ ಒಂದು. ರಾಜ್ ಬಿ ಶೆಟ್ಟಿ ನಟನೆಯ ಈ ಸಿನಿಮಾ ಇದೇ ಫೆಬ್ರವರಿ 6 ರಂದು ತೆರೆಗಪ್ಪಳಿಸಲಿದೆ. ಆದ್ರೆ ರಾಜ್ ಬಿ ಶೆಟ್ಟಿ, ಫ್ಯಾನ್ಸ್ ಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದ ಅವರು, ವಿಶ್ವ ನೋಡುವ ಮುನ್ನವೇ ಮೈಸೂರು ಜನತೆಗೆ ಸಿನಿಮಾ ನೋಡುವ ಅವಕಾಶ ಮಾಡಿಕೊಡ್ತಿದ್ದಾರೆ.
ರಕ್ಕಸಪುರದೋಳ್ (rakkasapuradol) ಪ್ರೀಮಿಯರ್ ಶೋ
ರಕ್ಕಸಪುರದೋಳ್ ಸಿನಿಮಾದ ಪ್ರೀಮಿಯರ್ ಶೋ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ಡಿಆರ್ ಸಿಯಲ್ಲಿ ಪ್ರೀಮಿಯರ್ ಶೋ ನಡೆಯಲಿದೆ ಎಂದು ರಾಜ್ ಬಿ ಶೆಟ್ಟಿ ಮಾಹಿತಿ ನೀಡಿದ್ದಾರೆ. ಪ್ರೀಮಿಯರ್ ಶೋ ಸ್ವಲ್ಪ ಡಿಫರೆಂಟ್ ಆಗಿರಲಿದೆ. ಸೆಲೆಬ್ರಿಟಿ ಶೋ ಇದಲ್ಲ. ಇಲ್ಲಿ ಉಚಿತವಾಗಿ ಪ್ರೀಮಿಯರ್ ಶೋ ಪ್ರದರ್ಶನಗೊಳ್ತಿಲ್ಲ. ಬುಕ್ ಮೈ ಶೋನಲ್ಲಿ ಅಭಿಮಾನಿಗಳು ಟಿಕೆಟ್ ಬುಕ್ ಮಾಡಬಹುದು. ಆಸಕ್ತರು ಟಿಕೆಟ್ ಬುಕ್ ಮಾಡಿ, ಸಿನಿಮಾ ನೋಡ್ಬಹುದು. ರಾಜ್ ಬಿ. ಶೆಟ್ಟಿ ಕೂಡ ಅದೇ ದಿನ ಮೈಸೂರಿಗೆ ಬರಲಿದ್ದಾರೆ. ಅಭಿಮಾನಿಗಳ ಪ್ರತಿಕ್ರಿಯೆ, ಸಿನಿಮಾ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಅಪ್ಪನ ಪ್ರೀತಿ ಕೊಟ್ಟ ಅಜ್ಜ ಸುಂದರ್‌ರಾಜ್‌ಗೆ 75ನೇ ವಸಂತದ 'ರಾಯಲ್
ಬೆಂಗಳೂರು, ಮಂಗಳೂರಿನಲ್ಲಿ ಪ್ರೀಮಿಯರ್ ಶೋ ಯಾಕಿಲ್ಲ?
ರಕ್ಕಸಪುರದೋಳ್ ಸಿನಿಮಾ ಪ್ರೀಮಿಯರ್ ಮೈಸೂರಿನಲ್ಲಿ ಅನ್ನೋದು ಗೊತ್ತಾಗ್ತಿದ್ದಂತೆ ಅನೇಕರು ಬೆಂಗಳೂರು, ಮಂಗಳೂರಿನಲ್ಲಿ ಏಕಿಲ್ಲ ಎನ್ನುವ ಪ್ರಶ್ನೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಪ್ರಕಾರ, ರಕ್ಕಸಪುರದೋಳ್ ಸಿನಿಮಾ ಚಾಮರಾಜನಗರ ಭಾಷೆಯಲ್ಲಿ ಮೂಡಿ ಬಂದಿದೆ. ಇದು ಮೈಸೂರಿಗೆ ಹತ್ತಿರದ ಭಾಷೆ. ಹಾಗಾಗಿ ಮೊದಲ ಪ್ರದರ್ಶನ ಮೈಸೂರಿನಲ್ಲಿ ನಡೆಯಲಿದೆ. ಮೈಸೂರು ಅಭಿಮಾನಿಗಳ ರೆಸ್ಪಾನ್ಸ್ ನಂತ್ರ ಮುಂದಿನ ಪ್ರೀಮಿಯರ್ ಡಿಸೈಡ್ ಆಗಲಿದೆ. ಫೆಬ್ರವರಿ 5 ರಂದು ಬೇರೆ ಕಡೆ ಪ್ರೀಮಿಯರ್ ಶೋ ನಡೆಸಲು ತಂಡ ನಿರ್ಧರಿಸಿದೆ.
ಟ್ರೇಲರ್ ಗೆ ಉತ್ತಮ ರೆಸ್ಪಾನ್ಸ್
ರಕ್ಕಸಪುರದೋಳ್ ಸಿನಿಮಾ ಟ್ರೇಲರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ರಾಜ್ ಬಿ ಶೆಟ್ಟಿ ಲುಕ್ ಅಭಿಮಾನಿಗಳನ್ನು ಸೆಳೆದಿದೆ. ಕ್ರೈ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಮಿಂಚಲಿದ್ದಾರೆ. ಅವರನ್ನು ಈ ಸ್ಟೈಲ್ ನಲ್ಲಿ ಫ್ಯಾನ್ಸ್ ನೋಡ್ತಿರೋದು ಇದೇ ಮೊದಲು. ಹಾಸ್ಯ ನಟನೆ ಮಾತ್ರವಲ್ಲ ವಿಲನ್ ಪಾತ್ರದಲ್ಲೂ ಅಬ್ಬರಿಸಬಲ್ಲೆ ಎಂಬುದನ್ನು ರಾಜ್ ಬಿ ಶೆಟ್ಟಿ ಈಗಾಗಲೇ ತೋರಿಸಿದ್ದಾರೆ. ಆದ್ರೆ ರಕ್ಕಸಪುರದೋಳ್ ಸಿನಿಮಾದಲ್ಲಿ ಅವರನ್ನು ಮತ್ತಷ್ಟು ಮಾಸ್ ಸ್ಟೈಲ್ ನಲ್ಲಿ ನೋಡ್ಬಹುದು.
ಡಾಲಿ ಧನಂಜಯ ಪತ್ನಿಗೆ ಡೆಲಿವರಿ ಡೇಟ್ ಯಾವಾಗ ಗೊತ್ತಾ!
ರಕ್ಕಸಪುರದೋಳ್ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಕೆ. ರವಿವರ್ಮ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿದೆ. ರಾಜ್ ಬಿ ಶೆಟ್ಟಿಗೆ ನಾಯಕಿಯಾಗಿ ಸ್ವಾಧಿಷ್ಠ ಕೃಷ್ಣ ನಟಿಸಿದ್ದಾರೆ. ಇದು ಅವರ ಎರಡನೇ ಸಿನಿಮಾ. ರಾಜ್ ಬಿ ಶೆಟ್ಟಿ ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕರು ಹೇಳಿದ ಕಥೆ ಸ್ಟೈಲ್ ಕಾರಣವಂತೆ. ಕಿಚ್ಚ ಸುದೀಪ್ ಟ್ರೈಲರ್ ಬಿಡುಗಡೆ ಮಾಡಿ, ಟ್ರೈಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜ್ ಬಿ ಶೆಟ್ಟಿ ಸಿನಿಮಾ ಹೆಸರುಗಳು ಭಿನ್ನವಾಗಿರುತ್ವೆ ಆದ್ರೆ ಸಿನಿಮಾ ಗೆಲ್ಲುತ್ತೆ ಅಂತ ರಾಜ್ ಬಿ ಶೆಟ್ಟಿಯನ್ನು ಹೊಗಳಿದ್ದರು. 2025ರಲ್ಲಿ ಸು ಫ್ರಮ್ ಸೋ ಮೂಲಕ ಮತ್ತಷ್ಟು ಪ್ರಸಿದ್ಧಿಗೆ ಬಂದಿದ್ದ ರಾಜ್ ಬಿ ಶೆಟ್ಟಿ ಈ ವರ್ಷ ಮೂರು ಸಿನಿಮಾ ತೆರೆಗೆ ತರುವ ತಯಾರಿಯಲ್ಲಿದ್ದಾರೆ.


