ಡಾಲಿ ಧನಂಜಯ (daali dhananjaya) ನಾನ್‌ವೆಜ್‌ ಪ್ರಕರಣ ಕೊಂಚ ತಣ್ಣಗಾಗಿದೆ. ಅವರ ಮನೆಗೆ ಹೊಸ ಅತಿಥಿ ಬರೋ ಟೈಮ್‌ ಹತ್ತಿರವಾಗ್ತಿದೆ. ಡಾಲಿ ಪತ್ನಿಗೆ ಡೆಲಿವರಿ ಡೇಟ್‌ ಯಾವಾಗ ಗೊತ್ತಾ?

ಡಾಲಿ ಧನಂಜಯ ಅವರು ಸ್ನೇಹಿತನ ನಾನ್‌ವೆಜ್‌ ಹೊಟೇಲ್‌ ಉದ್ಘಾಟನೆಗೆ ಹೋಗಿದ್ದವರು ಅಲ್ಲಿ ಗೆಳೆಯ ಕೊಟ್ಟ ಊಟ ಮಾಡಿದ್ದಾರೆ. ನಾನ್‌ವೆಜ್‌ ರೆಸ್ಟೊರೆಂಟ್‌ ಅಂದ್ಮೇಲೆ ಸ್ಪೆಷಲ್‌ ಊಟ ನಾನ್‌ವೆಜ್‌ ಇರಬೇಕಲ್ವಾ.. ಹಾಗೆ ಡಾಲಿ ನಾನ್‌ವೆಜ್‌ ತಿಂದಿದ್ದಾರೆ. ಮೊದ ಮೊದಲಿಗೆ ಈ ವೀಡಿಯೋ ನಟನೊಬ್ಬ ಊಟ ಮಾಡುವ ಸಾಮಾನ್ಯ ವೀಡಿಯೋವಾಗಿ ಸೋಷಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡಿತು. ಆದರೆ ಯಾವಾಗ ಇದಕ್ಕೆ ಜಾತಿ, ಧರ್ಮದ ವಿಷಯ ಸೇರಿಕೊಳ್ತೋ ಆವಾಗ ದಿಕ್ಕೇ ತಪ್ಪಿ ಬಿಟ್ಟಿತು. ಲಿಂಗಾಯತ ಸಮುದಾಯದ ಡಾಲಿ ಧನಂಜಯ ಮಾಂಸಾಹಾರ ಮಾಡೋದು ಎಷ್ಟು ಸರಿ ಅನ್ನೋ ಬಗ್ಗೆ ಚರ್ಚೆ ಮೇಲೆ ಚರ್ಚೆ ಶುರುವಾಯ್ತು. ಶುರುವಲ್ಲಿ ಈ ಬಗ್ಗೆ ಸುಮ್ಮನಿದ್ದ ಡಾಲಿ ಆಮೇಲೆ ಪತ್ರಕರ್ತರೊಂದಿಗಿನ ಭೇಟಿ ವೇಳೆ ಚೆನ್ನಾಗಿ ಕ್ಲಾಸ್‌ ತಗೊಂಡ್ರು. 'ನನ್ನೂಟ ನನ್ನಿಷ್ಟ ಸ್ವಾಮೀ' ಅನ್ನುವ ಮೂಲಕ ಪರೋಕ್ಷವಾಗಿ 'ನಿಮ್ಮ ತಟ್ಟೆಯಲ್ಲಿರೋದನ್ನು ನೀವು ಊಟ ಮಾಡಿ. ಇನ್ನೊಬ್ಬರ ತಟ್ಟೆಗೆ ಕಣ್ಣು ಹಾಕಬೇಡಿ' ಅನ್ನುವ ಸಂದೇಶ ರವಾನಿಸಿದರು.

Add Asianetnews Kannada as a Preferred SourcegooglePreferred

'ಸ್ನೇಹಿತನ ಹೋಟೆಲ್‌ಗೆ ಊಟಕ್ಕೆ ಹೋಗಿದ್ದನ್ನು ಜಾತಿ, ಸಮುದಾಯದೊಂದಿಗೆ ತಳುಕು ಹಾಕಿರುವುದು ಬೇಸರ ತಂದಿದೆ. ಚಿತ್ರರಂಗಕ್ಕಾಗಿ ಮಾಡುತ್ತಿರುವ ಕೆಲಸದ ಬಗ್ಗೆ ಚರ್ಚೆಯಾಗಬೇಕು.‌ ನಮ್ಮ‌ ವೈಯಕ್ತಿಕ ವಿಚಾರವಲ್ಲ. ಆಹಾರ ಎನ್ನೋದು ಅವರವರ ಆಯ್ಕೆ. ನನ್ನ ಬಳಿ ಬಂದು ಏನು ತಿಂತೀರಿ ಎಂದು ಕೇಳಿದರೆ ನಾನು ಖುಷಿಯಿಂದ ಅದನ್ನು ವಿವರಿಸುತ್ತೇನೆ. ಧನಂಜಯ್ ನಾನ್​​ವೆಜ್ ತಿಂತಾರಾ ಎಂದು ಕೇಳೋದು ತಪ್ಪಲ್ಲ. ಆದರೆ, ಲಿಂಗಾಯುತರು, ಬ್ರಾಹ್ಮಣರೆಲ್ಲ ಮಾಂಸ ತಿಂತಾರಾ ಎಂದು ಕೇಳೋದು ತಪ್ಪು. ಇದನ್ನು ಮೊದಲು ಶುರು ಮಾಡಿದವರ ಉದ್ದೇಶ ಸಮುದಾಯದವರನ್ನ ಎತ್ತಿಕಟ್ಟುವುದಾ ಅಂತ ನನಗೆ ಗೊತ್ತಿಲ್ಲ. ಮೊದಲಾಗಿದ್ರೆ ಈ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿದ್ದೆ. ಈಗ ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಊಟ, ಅಭ್ಯಾಸಗಳು ನನ್ನ ವೈಯುಕ್ತಿಕ. ನಾನೇನು ಮಾಡ್ತೀನಿ ಅದು ನನಗೆ ಬಿಟ್ಟಿದ್ದು, ನನ್ನ ಪ್ರಕಾರ ಬೇರೆ ಯಾರಿಗೂ ತೊಂದರೆ ಕೊಡದ ಚಟಗಳು ತಪ್ಪಲ್ಲ ಎನ್ನುವುದು ನನ್ನ ಭಾವನೆ. ನಾನು ಮಾಡುವ ಕೆಲಸದಿಂದ ಮತ್ತೊಬ್ಬರಿಗೆ ತೊಂದರೆಯಾದರೆ ಅದು ತಪ್ಪು' ಎಂದರು.

ಮನೆಗೆ ಬರಲಿರುವ ಹೊಸ ಅತಿಥಿ

ಇಷ್ಟೆಲ್ಲ ಆದಮೇಲೆ ಅವರ ಮನೆಗೆ ಹೊಸ ಅತಿಥಿ ಬರುವ ವಿಚಾರವೂ ಬಂತು. ಧನಂಜಯ ಬೇಗ ಬೇಗ ಸಿನಿಮಾ ಕೆಲಸಗಳನ್ನೆಲ್ಲ ಮುಗಿಸಿಕೊಳ್ತಿದ್ದಾರಂತೆ. ಆಮೇಲೆ ಮಗುವಿಗೆ ಫುಲ್ ಟೈಮ್ ಕೊಡಬೇಕು ಅಂತ ಧನಂಜಯ ಮತ್ತು ಧನ್ಯತಾ ದಂಪತಿ ಪ್ಲಾನ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಗೊತ್ತಾದ ಮೇಲೆ ಹಲವರಿಗೆ ಕುತೂಹಲ ಡಾ.ಧನ್ಯತಾ ಅವರ ಡೆಲಿವರಿ ಡೇಟ್ ಯಾವಾಗ, ಡಾಲಿ ಮನೆಗೆ ಹೊಸ ಅತಿಥಿ ಯಾವಾಗ ಬರುತ್ತೆ ಅನ್ನೋದು. ಇದಕ್ಕೆ ಉತ್ತರವೂ ಸಿಕ್ಕಿದೆ. ಮೇ ತಿಂಗಳ ಮೊದಲ ವಾರ ಡಾಲಿ ಪತ್ನಿಗೆ ಡೆಲಿವರಿ ಡೇಟ್‌ ಸಿಕ್ಕಿದೆ. ಸ್ವತಃ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿರುವ ಡಾ.ಧನ್ಯತಾ ಈವರೆಗೆ ನೂರಾರು ಮಂದಿಗೆ ಡೆಲಿವರಿ ಮಾಡಿಸಿದ್ದಾರೆ. ಇದೀಗ ಮಗುವಿಗೆ ಜನ್ಮ ನೀಡುವ ಹೊಸ ಅನುಭವಕ್ಕಾಗಿ, ತನ್ನದೇ ಕಂದನನ್ನು ಸ್ವಾಗತಿಸುವುದಕ್ಕಾಗಿ ಅವರು ಎದುರು ನೋಡುತ್ತಿದ್ದಾರೆ. ಮದುವೆಯಾಗಿ ಒಂದು ವರ್ಷದಲ್ಲೇ ಮಗು ಮಾಡಲು ಹೊರಟಿರುವ ಅವರ ನಿರ್ಧಾರದಿಂದಲೇ ತಿಳಿಯುತ್ತದೆ ಅವರು ಮಗು ಬಗ್ಗೆ ಎಷ್ಟು ಎಗ್ಸೈಟೆಡ್‌ ಆಗಿದ್ದಾರೆ. ಮಗಳೋ, ಮಗನೋ ಈ ದಂಪತಿ ಮಡಿಲು ತುಂಬೋದನ್ನು ಕಣ್ತುಂಬಿಸಿಕೊಳ್ಳಲು ಡಾಲಿ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಮೇ ಮೊದಲ ವಾರ ಹೊಸ ಅತಿಥಿ ಆಗಮನಕ್ಕೆ ಒಂದಿಷ್ಟು ಮಂದಿ ಕಾತರಿಸುತ್ತಿದ್ದಾರೆ.