MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಅಪ್ಪನ ಪ್ರೀತಿ ಕೊಟ್ಟ ಅಜ್ಜ ಸುಂದರ್‌ರಾಜ್‌ಗೆ 75ನೇ ವಸಂತದ 'ರಾಯಲ್ ಮೆಮೋರಿ' ಕೊಟ್ಟ ರಾಯನ್ ರಾಜ್ ಸರ್ಜಾ!

ಅಪ್ಪನ ಪ್ರೀತಿ ಕೊಟ್ಟ ಅಜ್ಜ ಸುಂದರ್‌ರಾಜ್‌ಗೆ 75ನೇ ವಸಂತದ 'ರಾಯಲ್ ಮೆಮೋರಿ' ಕೊಟ್ಟ ರಾಯನ್ ರಾಜ್ ಸರ್ಜಾ!

ಹಿರಿಯ ನಟ ಸುಂದರ್ ರಾಜ್ ಅವರು ತಮ್ಮ 75ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ, ಮೊಮ್ಮಗ ರಾಯನ್ ರಾಜ್ ಸರ್ಜಾ ಹಾಡಿನ ಮೂಲಕ ಶುಭ ಕೋರಿದ್ದು, ಮಗಳು ಮೇಘನಾ ರಾಜ್ ಅವರು ತಮ್ಮ ತಂದೆಯ ಹೊಸ ಜವಾಬ್ದಾರಿಯನ್ನು ನೆನೆದು ಹೆಮ್ಮೆಯಿಂದ ಶುಭಾಶಯ ತಿಳಿಸಿದ್ದಾರೆ.

2 Min read
Author : Sathish Kumar KH
Published : Feb 02 2026, 06:21 PM IST
Share this Photo Gallery
  • FB
  • TW
  • Linkdin
  • Whatsapp
17
ಸುಂದರ್ ರಾಜ್ @ 75
Image Credit : Instagram

ಸುಂದರ್ ರಾಜ್ @ 75

ಕನ್ನಡ ಚಿತ್ರರಂಗ ಮತ್ತು ರಂಗಭೂಮಿಯ ಹಿರಿಯ ನಟ, ಸದಾ ಲವಲವಿಕೆಯಿಂದಿರುವ ಸುಂದರ್ ರಾಜ್ ಇಂದು (ಫೆಬ್ರವರಿ 02) ತಮ್ಮ 75ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಏಳು ದಶಕಗಳ ಬದುಕಿನ ಹಾದಿಯಲ್ಲಿ ಸಾವಿರಾರು ನಾಟಕಗಳು ಮತ್ತು ನೂರಾರು ಸಿನಿಮಾಗಳ ಮೂಲಕ ಕನ್ನಡಿಗರನ್ನು ರಂಜಿಸಿರುವ ಈ ಹಿರಿಯ ಚೇತನಕ್ಕೆ ಅವರ ಕುಟುಂಬವು ಅತ್ಯಂತ ಅರ್ಥಪೂರ್ಣವಾಗಿ ಶುಭಾಶಯ ಕೋರಿದೆ. ವಿಶೇಷವಾಗಿ ಮಗಳು ಮೇಘನಾ ರಾಜ್ ಮತ್ತು ಮೊಮ್ಮಗ ರಾಯನ್ ರಾಜ್ ಸರ್ಜಾ ಅಜ್ಜನ ಹುಟ್ಟುಹಬ್ಬಕ್ಕೆ ವಿಶೇಷ ಮೆರುಗು ನೀಡಿದ್ದಾರೆ.

27
ಮೊಮ್ಮಗ ಉತ್ಸಾಹದ ಬರ್ತಡೇ
Image Credit : Instagram

ಮೊಮ್ಮಗ ಉತ್ಸಾಹದ ಬರ್ತಡೇ

ನಟಿ ಮೇಘನಾ ರಾಜ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮುದ್ದಿನ ಮೊಮ್ಮಗ ರಾಯನ್ ರಾಜ್ ಸರ್ಜಾ ತನ್ನ ಅಜ್ಜ ಸುಂದರ್ ರಾಜ್ ಅವರಿಗೆ ಹುಟ್ಟುಹಬ್ಬದ ಹಾಡನ್ನು ಅತ್ಯಂತ ಉತ್ಸಾಹದಿಂದ ಹಾಡುವ ಮೂಲಕ ಶುಭಾಶಯ ತಿಳಿಸಿದ್ದಾನೆ. ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ರಾಯನ್‌ಗೆ ಅಪ್ಪನ ಸ್ಥಾನದಲ್ಲಿ ನಿಂತು ಪ್ರೀತಿ ತೋರುತ್ತಿರುವ ಅಜ್ಜ ಸುಂದರ್ ರಾಜ್, ಮೊಮ್ಮಗನ ಈ 'ರಾಯಲ್' ವಿಶ್ ಕಂಡು ಭಾವುಕರಾಗಿ ನಕ್ಕಿದ್ದಾರೆ.

Related Articles

Related image1
Meghana Raj ಮದುವೆ ಆಗೋನು ರಾಯನ್‌ನ ಮಗ ಅಂತ ನೋಡ್ತಾನಾ? 2ನೇ ಮದುವೆ ಬಗ್ಗೆ‌ ತಂದೆ ಸುಂದರ್‌ ರಾಜ್ ಏನಂದ್ರು?
Related image2
2016ರ ಮಧುರ ನೆನಪುಗಳನ್ನು ಬಿಚ್ಚಿಟ್ಟ ಮೇಘನಾ ರಾಜ್… Miss You Chiru ಅಂದ್ರು ಫ್ಯಾನ್ಸ್
37
ಮಗಳಿಂದ ಪ್ರೀತಿ ಶುಭಾಶಯ
Image Credit : Instagram

ಮಗಳಿಂದ ಪ್ರೀತಿ ಶುಭಾಶಯ

ತನ್ನ ಪ್ರೀತಿಯ ಅಪ್ಪನಿಗೆ ಶುಭಾಶಯ ಕೋರಿರುವ ಮೇಘನಾ ರಾಜ್, 'ನಮ್ಮ ಕುಟುಂಬದ ಕಿರಿಯ ಮಗನಿಗೆ (Youngest) ಹುಟ್ಟುಹಬ್ಬದ ಶುಭಾಶಯಗಳು! ನೀವು ಪ್ರತಿದಿನ ನನ್ನನ್ನು ಮತ್ತಷ್ಟು ಬಲಶಾಲಿಯಾಗಿ ಮತ್ತು ಶಾಂತವಾಗಿ ಇರುವಂತೆ ಮಾಡುತ್ತೀರಿ. 75ನೇ ವರ್ಷದ ಶುಭಾಶಯಗಳು ಅಪ್ಪಾ.. ಅಥವಾ ನಾನು ಈಗ ನಿಮ್ಮನ್ನು ಉಪಾಧ್ಯಕ್ಷರೇ (Vice President) ಎಂದು ಕರೆಯಬೇಕೆ?' ಎಂದು ತಮಾಷೆಯಾಗಿ ಹಾಗೂ ಪ್ರೀತಿಯಿಂದ ಬರೆದುಕೊಂಡಿದ್ದಾರೆ.

47
ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ
Image Credit : Instagram

ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ

ಅಂದಹಾಗೆ, ಮೇಘನಾ ರಾಜ್ ಅವರು ಅಪ್ಪನನ್ನು 'ಉಪಾಧ್ಯಕ್ಷ' ಎಂದು ಕರೆದಿದ್ದರ ಹಿಂದೆ ಒಂದು ವಿಶೇಷ ಕಾರಣವಿದೆ. ಸುಂದರ್ ರಾಜ್ ಅವರು ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಗಳು ಮೇಘನಾ ಹೆಮ್ಮೆಯಿಂದ ಈ ಪದವನ್ನು ಬಳಸಿದ್ದಾರೆ.

57
ಅಪ್ಪನ ಪ್ರೀತಿ ಕೊರಗು ನೀಗಿಸಿದ ಅಜ್ಜ
Image Credit : Instagram

ಅಪ್ಪನ ಪ್ರೀತಿ ಕೊರಗು ನೀಗಿಸಿದ ಅಜ್ಜ

ಮೇಘನಾ ರಾಜ್ ಅವರು ಪ್ರೀತಿಸಿ, ಕುಟುಂಬದ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣಕ್ಕೀಡಾದರು. ಪ್ರತೀಬಾರಿ ಅಪ್ಪನ ಸಮಾಧಿ ಮುಂದೆ ಹೋಗಿ ರಾಯನ್ ರಾಜ್ ಸರ್ಜಾ ಕೈಮುಗಿದು ದೇವರ ಹತ್ತಿರ ಅಪ್ಪ ಹೋಗಿದ್ದಾನೆ ಎಂದು ತನಗೆ ತಿಳಿದಷ್ಟು ಮಾತನಾಡುವುದು ಮಾತ್ರ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಅಪ್ಪ-ಅಮ್ಮನ ಪ್ರೀತಿ ಎರಡನ್ನೂ ಮೇಘನಾ ರಾಜ್ ಕೊಟ್ಟಿದ್ದಾರೆ. ಅಪ್ಪನಿಲ್ಲದ ಕೊರಗನ್ನು ಅಜ್ಜ ಸುಂದರ್ ರಾಜ್ ಅವರೇ ತುಂಬಿದ್ದಾರೆ. ಹೀಗಾಗಿ, ಅಪ್ಪನ ಪ್ರೀತಿ ಕೊಟ್ಟ ಅಜ್ಜನಿಗೆ ರಾಯನ್ ರಾಜ್ ಸರ್ಜಾ ಜೀವಮಾನದಲ್ಲಿಯೇ ನೆನಪುಳಿಯುವಂತೆ ಶುಭ ಕೋರಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

67
ಗಣ್ಯರ ಹಾರೈಕೆ
Image Credit : Instagram

ಗಣ್ಯರ ಹಾರೈಕೆ

ಮೇಘನಾ ಅವರ ಈ ಪೋಸ್ಟ್‌ಗೆ ಚಿತ್ರರಂಗದ ಹಲವು ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟಿ ಮಾಳವಿಕಾ ಅವಿನಾಶ್ ಅವರು ಕಾಮೆಂಟ್ ಮಾಡಿ, 'ಪ್ರಿಯ ಸುಂದರ್ ಅಂಕಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾದ ನಿಮಗೆ ಅಭಿನಂದನೆಗಳು. ಈ ಮೈಲಿಗಲ್ಲಿನ ಹುಟ್ಟುಹಬ್ಬದಂದು ನಿಮಗೆ ಪ್ರೀತಿ ಮತ್ತು ಅಪ್ಪುಗೆಗಳು' ಎಂದು ಹಾರೈಸಿದ್ದಾರೆ.

77
ದಂಪತಿ ಕಲಾ ಸೇವೆ
Image Credit : Instagram

ದಂಪತಿ ಕಲಾ ಸೇವೆ

ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ದಂಪತಿಗಳ ಕುಟುಂಬವು ಸದಾ ಕಲಾ ಸೇವೆಯಲ್ಲಿ ತೊಡಗಿದ್ದು, ಈಗ 75ನೇ ವರ್ಷಕ್ಕೆ ಕಾಲಿಟ್ಟಿರುವ ಸುಂದರ್ ರಾಜ್ ಅವರಿಗೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಮಿತ್ರರು ದೀರ್ಘಾಯುಷ್ಯ ಮತ್ತು ಸುಖ-ಶಾಂತಿ ಸಿಗಲಿ ಎಂದು ಹಾರೈಸುತ್ತಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Meghana Raj Sarja (@megsraj)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ನಟಿ
ಮೇಘನಾ ರಾಜ್
ಸ್ಯಾಂಡಲ್‌ವುಡ್

Latest Videos
Recommended Stories
Recommended image1
ಇಷ್ಟೊಂದು ಸುಂದರಿಯಾಗಿ ಕಂಡ್ರೆ ಹುಡುಗರ ಕಣ್ಣು ಬೀಳತ್ತೆ ನೋಡಪ್ಪಾ! ಮೋಡಿ ಮಾಡಿದ ನಟ ರಾಘವೇಂದ್ರ
Recommended image2
ನನ್ನನ್ನು Dim ಮಾಡೋಕೆ ಪ್ರಯತ್ನಿಸಿದ್ರು, ನಾನೇ Highlight ಆದೆ... Kavya Gowda ತಿರುಗೇಟು ಕೊಟ್ಟಿದ್ಯಾರಿಗೆ?
Recommended image3
Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?
Related Stories
Recommended image1
Meghana Raj ಮದುವೆ ಆಗೋನು ರಾಯನ್‌ನ ಮಗ ಅಂತ ನೋಡ್ತಾನಾ? 2ನೇ ಮದುವೆ ಬಗ್ಗೆ‌ ತಂದೆ ಸುಂದರ್‌ ರಾಜ್ ಏನಂದ್ರು?
Recommended image2
2016ರ ಮಧುರ ನೆನಪುಗಳನ್ನು ಬಿಚ್ಚಿಟ್ಟ ಮೇಘನಾ ರಾಜ್… Miss You Chiru ಅಂದ್ರು ಫ್ಯಾನ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved