ಬಿಜೆಪಿ ಸದಸ್ಯ ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ರಾಜ್ಯಸಭಾ ಭಾಷಣದಲ್ಲಿ, 31 ವರ್ಷಗಳ ಹಿಂದೆ ಸಿಪಿಐಎಂ ಕಾರ್ಯಕರ್ತರು ತಮ್ಮ ಕಾಲುಗಳನ್ನು ಕತ್ತರಿಸಿದ್ದಾರೆಂದು ಆರೋಪಿಸಿ ಕೃತಕ ಕಾಲುಗಳನ್ನು ಪ್ರದರ್ಶಿಸಿದರು. ಈ ಘಟನೆಯು ಸದನದಲ್ಲಿ ಕೋಲಾಹಲ ಸೃಷ್ಟಿಸಿತು.

ನವದೆಹಲಿ: ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯ ಸಿ ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ಭಾಷಣದ ಸಮಯದಲ್ಲಿ ತಮ್ಮ ಕೃತಕ ಕಾಲುಗಳನ್ನು ಮೇಜಿನ ಮೇಲೆ ಇಟ್ಟು ಪ್ರದರ್ಶಿಸುತ್ತಾ ತಾನು ಹೇಗೆ ಕಾಲುಗಳನ್ನು ಕಳೆದುಕೊಂಡೆ ಎಂಬುದನ್ನು ವಿವಿರಿಸಿದರು. ಈ ವಿವರಣೆ ರಾಜ್ಯಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯ್ತು. ಊರಿಗೆಲ್ಲಾ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಹಿಷ್ಣುತೆಯ ಬಗ್ಗೆ ಮಾತನಾಡುವ ಎಡಪಂಥೀಯ ರಾಜಕೀಯ ಪಕ್ಷಗಳು ತಮ್ಮ ಸೈದಾಂತಿಕ ವಿರೋಧಿಗಳಿಗೆ ಯಾವ ರೀತಿ ಹಿಂಸೆ ನೀಡಿದರು ಎಂಬುದನ್ನು ಸಿ. ಸದಾನಂದ ಮಾಸ್ಟರ್ ಅವರು ರಾಜ್ಯಸಭೆಯ ಮುಂದಿಟ್ಟಾಗ ಅದಕ್ಕೆ ಸಿಪಿಐಎಂ ನಾಯಕ ಜಾನ್ ಬ್ರಿಟ್ಟಾಸ್ ತೀವ್ರ ವಿರೋಧ ವ್ಯಕ್ತಪಡಿಸಿದರು.

ರಾಜ್ಯಸಭೆಯಲ್ಲಿ ಸದಾನಂದ ಮಾಸ್ಟರ್ ಹೇಳಿದ್ದೇನು?

ರಾಷ್ಟ್ರಪತಿಗಳ ಭಾಷಣ ಮತ್ತು ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಿದ ಮಾಸ್ಟರ್, ರಾಷ್ಟ್ರ ಮತ್ತು ಜನರ ಮುಂದೆ ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ತೋರಿಸಲು ಬಯಸುತ್ತೇನೆ. 31 ವರ್ಷಗಳ ಹಿಂದೆ ಕೇರಳದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಘರ್ಜಿಸುತ್ತಿದ್ದವರು ನನ್ನ ಮೇಲೆ ದಾಳಿ ನಡೆಸಿದರು. ನಾನು ಮನೆಗೆ ಹಿಂತಿರುಗುತ್ತಿದ್ದಾಗ ಸಂಘಟಿತ ಅಪರಾಧಿಗಳು ನನ್ನನ್ನು ಹಿಂದಿನಿಂದ ಹಿಡಿದು, ರಸ್ತೆಗೆ ಇಳಿಸಿ, ನನ್ನ ಕಾಲುಗಳನ್ನು ಕತ್ತರಿಸಿ, ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗಿದರು ಎಂದು ಹೇಳಿದರು. ಸಿಪಿಐಎಂ ಕಾರ್ಯಕರ್ತರು ನಡೆಸಿದ ದಾಳಿಯಿಂದ ಉಂಟಾದ ಅಂಗವೈಖಲ್ಯದಿಂದಾಗಿ ತಾನು ರಾಜ್ಯಸಭೆಯ ಮೊದಲ ಭಾಷಣವನ್ನು ಕುಳಿತುಕೊಂಡ ಮಾಡಬೇಕಾದ ಸ್ಥಿತಿ ಬಂದ ಬಗ್ಗೆಯೂ ಅವರು ಹೇಳಿದರು. ಜೊತೆಗೆ ತಮ್ಮ ಕೃತಕ ಕಾಲುಗಳನ್ನು ಅವರು ಪ್ರದರ್ಶಿಸಿದರು. ಇದು ರಾಜ್ಯಸಭೆಯಲ್ಲಿ ಸಿಪಿಐಎಂ ನಾಯಕರ ಜೊತೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯ್ತು.

ಅವರು ಮೇಜಿನ ಮೇಲೆ ಕೃತಕ ಕಾಲುಗಳನ್ನು ಪ್ರದರ್ಶಿಸಿದ ಕೂಡಲೇ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪಗಳು ವ್ಯಕ್ತವಾದವು. ಸಿಪಿಐಎಂ ನಾಯಕ ಜಾನ್ ಬ್ರಿಟ್ಟಾಸ್ ಅವರು ಕೆಲವು ವಸ್ತುಗಳನ್ನು ತರುವುದನ್ನು ನಿಷೇಧಿಸುವ ಸದನದ ನಿಯಮಗಳನ್ನು ಉಲ್ಲೇಖಿಸಿ, ಸದಾನಂದ ಮಾಸ್ಟರ್ ಅವರು ಕೃತಕ ಕಾಲುಗಳನ್ನು ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹೆಂಡ್ತಿ ಡಿವೋರ್ಸ್ ಕೇಳಿದ್ದಕ್ಕೆ ಮಗಳ ಕೊಂದ ಅಪ್ಪ: ತಡೆಯಲು ಬಂದ ದೊಡ್ಡಪ್ಪನ ಮೇಲೂ ಹಲ್ಲೆ

ಇದಕ್ಕೆ ಪ್ರತಿಕ್ರಿಯಿಸಿದ ಸದಾನಂದ ಮಾಸ್ಟರ್, ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ನಾನು ರಾಷ್ಟ್ರ ಮತ್ತು ಜನರ ಮುಂದೆ ತೋರಿಸಲು ಬಯಸುತ್ತೇನೆ. ನೀವು ಯಾವಾಗಲೂ ಪ್ರಜಾಪ್ರಭುತ್ವ, ಸಹಿಷ್ಣುತೆ ಮತ್ತು ಮಾನವೀಯತೆಯ ಬಗ್ಗೆ ಮಾತನಾಡುತ್ತೀರಿ. ಆದರೆ ನಿಮ್ಮ ಬದ್ಧತೆಯು ರಾಜಕೀಯ ಹಿಂಸಾಚಾರವನ್ನು ಆಧರಿಸಿದೆ, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಬ್ರಿಟಾಸ್ ಅಸಹನೆ ತೋರಬಾರದು ಎಂದು ಹೇಳಿದರು. ನಂತರ

ಬ್ರಿಟ್ಟಾಸ್ ಅವರ ಆದೇಶದ ಮೇರೆಗೆ(point of order)ಕೃತಕ ಅಂಗಗಳನ್ನು ಮೇಜಿನಿಂದ ತೆಗೆಯಲಾಯ್ತು.

ನೀವು (ಅಧ್ಯಕ್ಷರು) ವಸ್ತುಗಳ ಪ್ರದರ್ಶನವನ್ನು ನಿಷೇಧಿಸಿದ್ದೀರಿ. ಅವರು (ಸದಾನಂದ ಮಾಸ್ಟರ್) ಹಲವು ದಿನಗಳಿಂದ ಕೃತಕ ಅಂಗಗಳೊಂದಿಗೆ ನಡೆಯುತ್ತಾ ಸದನಕ್ಕೆ ಬರುತ್ತಿದ್ದಾರೆ. ದುರದೃಷ್ಟವಶಾತ್, ಅವರು ಅವುಗಳನ್ನು ಕಳೆದುಕೊಂಡರು. ಅವರ ಪಕ್ಕದಲ್ಲಿ ಕುಳಿತಿರುವ ಯಾರೋ ಒಬ್ಬರು ವಕೀಲರು ಅದನ್ನು ಮೇಜಿನ ಮೇಲೆ ಪ್ರದರ್ಶಿಸುತ್ತಾರೆ ಎಂದು ಬ್ರಿಟ್ಟಾಸ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಸಭಾ ಅಧ್ಯಕ್ಷ ಸಿಪಿ ರಾಧಾಕೃಷ್ಣನ್ ಅವರು ನೀವು ನಿಮ್ಮ ಪಕ್ಷದ ಸಂಸದರು ಫಲಕಗಳನ್ನು ಪ್ರದರ್ಶಿಸುವಾಗಲೂ ಇದೇ ರೀತಿಯ ಕಟ್ಟುನಿಟ್ಟನ್ನು ಅನ್ವಯಿಸಬೇಕು ಎಂದು ಸಿಪಿಐಎಂ ನಾಯಕರಿಗೆ ತಿಳಿಸಿದರು.

ಇದನ್ನೂ ಓದಿ: ಎಸ್‌ಬಿಐ ಎಟಿಎಂ ಮುಂದೆಯೇ ಉದ್ಯಮಿಯ ಕಾಲಿಗೆ ಗುಂಡಿಕ್ಕಿ 6 ಲಕ್ಷ ದರೋಡೆ

ಸಿಪಿಐಎಂನ ಚಿತ್ರಹಿಂಸೆಯಿಂದಾಗಿ ನನ್ನ ಚೊಚ್ಚಲ ಭಾಷಣವನ್ನು ನಾನು ನಿಂತು ಮಾಡಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನನಗೆ ವಿಷಾದಿವಿದೆ ಎಂಬ ತೀಕ್ಷ್ಣವಾದ ಹೇಳಿಕೆಯೊಂದಿಗೆ ಸದಾನಂದ ಮಾಸ್ಟರ್ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು. ನಂತರ ಸಭಾ ನಾಯಕ ಜೆ.ಪಿ. ನಡ್ಡಾ ಅವರು, ಬ್ರಿಟ್ಟಾಸ್ ಅವರು ಬಳಸಿದ ಅನಪೇಕ್ಷಿತ ಪದಗಳನ್ನು ತೆಗೆದುಹಾಕುವಂತೆ ಸಭಾಪತಿಯನ್ನು ಒತ್ತಾಯಿಸಿದರು.

ಇದಕ್ಕೂ ಮೊದಲು ಸದಾನಂದ ಮಾಸ್ಟರ್, ಎಡಪಂಥೀಯ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ವಿರೋಧಿಗಳಿಗೆ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ ಮತ್ತು ಸಹಿಷ್ಣುತೆಯ ಬಗ್ಗೆ ಧರ್ಮೋಪದೇಶ ನೀಡುವುದರಲ್ಲಿ ಸಂತೋಷಪಡುತ್ತವೆ. ಆದರೆ ಅವರು ಹೆಚ್ಚಾಗಿ ತಾವು ಬೋಧಿಸುವುದನ್ನು ಪಾಲಿಸುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಹಿಷ್ಣುತೆಯ ಕಹಳೆಯನ್ನು ಊದುವ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮೂರು ದಶಕಗಳ ಹಿಂದೆ ತನ್ನ ರಾಜಕೀಯ ಸಿದ್ಧಾಂತಕ್ಕಾಗಿ ತನ್ನ ಕಾಲುಗಳನ್ನು ಕತ್ತರಿಸುವ ಪ್ರಯತ್ನವನ್ನು ಹೇಗೆ ಮಾಡಿತು ಎಂಬುದನ್ನು ವಿವರಿಸಿದರು.

ಸಂಸತ್ತಿನ ಮುಂದೆ ತಮ್ಮ ಕೃತಕ ಕಾಲುಗಳನ್ನು ಪ್ರದರ್ಶಿಸಿದ ಸಂಸದ ಸದಾನಂದನ್ ಮಾಸ್ಟರ್ , ಇದು ನನ್ನ ಎರಡು ಕಾಲುಗಳು. ನಾನು ಬಲವಾದ ಎರಡು ಕಾಲುಗಳನ್ನು ಹೊಂದಿದ್ದೆ, ಇತ್ತೀಚಿನ ದಿನಗಳಲ್ಲಿ, ನಾನು ಕೃತಕ ಅಂಗಗಳನ್ನು ಬಳಸುತ್ತಿದ್ದೇನೆ. ಏಕೆ? ಏಕೆಂದರೆ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದ ಬಗ್ಗೆ ಘರ್ಜಿಸುತ್ತಿರುವವರು, 31 ವರ್ಷಗಳ ಹಿಂದೆ ನನ್ನ ಮೇಲೆ ದಾಳಿ ಮಾಡಿದರು ಎಂದು ಹೇಳಿದರು.

ಕಮ್ಯುನಿಸ್ಟ್ ಸಿದ್ಧಾಂತದಿಂದ ಆರೆಸ್ಸೆಸ್ ಸಿದ್ಧಾಂತಕ್ಕೆ ಪರಿವರ್ತನೆಯಾಗಿ ಭಾರಿ ಬೆಲೆ ತೆತ್ತ ಸದಾನಂದ ಮಾಸ್ಟರ್

ಸಿ ಸದಾನಂದನ್ ಮಾಸ್ಟರ್ ಮಟ್ಟನೂರು ಪುರಸಭೆಯ ಪೆರಿಂಚೇರಿಯಲ್ಲಿರುವ ಸರ್ಕಾರಿ ಅನುದಾನಿತ ಕುಳಿಕ್ಕಲ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಮಾಶ್ ಎಂದೇ ಜನಪ್ರಿಯರಾಗಿದ್ದ ಅವರ ಕುಟುಂಬಕ್ಕೂ ಕಮ್ಯುನಿಸ್ಟ್ ಹಿನ್ನೆಲೆ ಇದೆ. ಸದಾನಂದನ್ ಮಾಸ್ಟರ್ ಅವರ ತಂದೆ ಸಿಪಿಎಂನ ಸಕ್ರಿಯ ಸದಸ್ಯರಾಗಿದ್ದರು ಮತ್ತು ಅವರ ಹಿರಿಯ ಸಹೋದರ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿ ವಿಭಾಗದ ಉಸ್ತುವಾರಿ ವಹಿಸಿದ್ದರು. ಸದಾನಂದನ್ ಅವರು 1984 ರವರೆಗೆ ಭಾರತೀಯ ವಿದ್ಯಾರ್ಥಿ ಒಕ್ಕೂಟದ (SFI)ಸಕ್ರಿಯ ಸದಸ್ಯರಾಗಿದ್ದರು. ಆದರೆ ಕ್ರಮೇಣ ಆರ್‌ಎಸ್‌ಎಸ್ ಚಿಂತನೆಗಳತ್ತ ವಾಲಿದರು. ಮಲಯಾಳಂ ಕವಿ ಅಕ್ಕಿತಂ ಅವರ 'ಭಾರತ ದರ್ಶನಂಗಲ್' ಲೇಖನವು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಅವರ ಸಂಪೂರ್ಣ ಬದಲಾವಣೆಗೆ ಕಾರಣವಾಯಿತು. 1984 ರಲ್ಲಿ, ಸದಾನಂದನ್ ಮಾಸ್ಟರ್ ಆರ್‌ಎಸ್‌ಎಸ್ ಸೇರಿದರು.

ಆದರೆ, ಸದಾನಂದನ್ ಮಾಸ್ಟರ್ ಕಮ್ಯುನಿಸ್ಟ್ ಸಿದ್ಧಾಂತದಿಂದ ಸಂಘದ ಸಿದ್ಧಾಂತಕ್ಕೆ ಬದಲಾಗಿದ್ದು ಎಡಪಂಥೀಯರಿಗೆ ಇಷ್ಟವಾಗಲಿಲ್ಲ, ಆರಂಭದಲ್ಲಿ, ಸಿಪಿಐಎಂ ಕಾರ್ಯಕರ್ತರು ಸದಾನಂದನ್ ಮಾಸ್ಟರ್ ಅವರನ್ನು ಸಂಘದೊಂದಿಗಿನ ಸಂಬಂಧವನ್ನು ಕಡಿದುಕೊಂಡು ಕಮ್ಯುನಿಸ್ಟ್ ಪಕ್ಷಕ್ಕೆ ಮರಳುವಂತೆ ಮನವೊಲಿಸಲು ಪ್ರಯತ್ನಿಸಿದರು ಆದರೆ ಅವರು ಹಾಗೆ ಮಾಡಲು ನಿರಾಕರಿಸಿದಾಗ, ಸಿಪಿಐಎಂ ಕಾರ್ಯಕರ್ತರು ಹಿಂಸೆಗಿಳಿದು ಅವರ ಮೇಲೆ ದಾಳಿ ಮಾಡಿದ್ದರು.

Scroll to load tweet…