ಬ್ರೇಕಪ್‌ ಆದ್ಮೇಲೆ ನನಗೆ ಗೊತ್ತಾಯ್ತು, ನನಗೆ ಪ್ರೀತಿನ ಕೊಡೋಕೆ ಬರ್ಲಿಲ್ಲ ಅಂತ.. ಬ್ರೇಕಪ್ ಆದ್ಮೇಲೆ ನಾನು ಪ್ರೀತಿ ವಿಷ್ಯದಲ್ಲಿ ಸಾಕಷ್ಟು ಬೆಳೆದೆ.. ಕಾರಣ, ಅವ್ಳು ತೋರಿಸಿದ್ಳು, ನಾನು ಪ್ರೀತಿ ಮಾಡೋದಕ್ಕೆ ಯೋಗ್ಯ ವ್ಯಕ್ತಿ ಅಲ್ಲ ಅಂತ.. ಸೋ, ನಾನು ಅವ್ಳಿಗೆ ಈಗ್ಲೂ ತುಂಬಾ ಗೌರವ ಕೊಡ್ತೀನಿ..

ರಾಜ್ ಬಿ ಶೆಟ್ಟಿ ಹಳೆಯ ವಿಡಿಯೋ ವೈರಲ್

ಕನ್ನಡದ ನಟ-ನಿರ್ದೇಶಕ, 'ಒಂದು ಮೊಟ್ಟೆಯ ಕಥೆ' ಹಾಗೂ 'ಸು ಫ್ರಂ ಸೋ' ಖ್ಯಾತಿಯ ರಾಜ್ ಬಿ ಶೆಟ್ಟಿಯವರು (Raj B Shetty) ಮಾತನ್ನಾಡಿದ ಹಳೆಯ ವಿಡಿಯೋವೊಂದು ಇದೀಗ ಮತ್ತೆ ವೈರಲ್ ಆಗಿದೆ. ಅದರಲ್ಲಿ ಅವರು ಲವ್, ಲಿವ್ ಇನ್, ಮ್ಯಾರೆಜ್ ಹಾಗೂ ಡಿವೋರ್ಸ್ ಸೇರಿದಂತೆ ಸಾಕಷ್ಟು ವೈಯಕ್ತಿಕ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರಿಗೆ ಪ್ರಶ್ನೆ ಕೇಳಿದ್ದು ನಟಿ ರಚಿತಾ ರಾಮ್.

ಕಿರುತೆರೆ ಶೋ ಒಂದರಲ್ಲಿ ನಟ-ನಿರ್ದೇಶಕ ರಾಜ್‌ ಬಿ ಶೆಟ್ಟಿ ಭಾಗಿಯಾಗಿದ್ದು, ಅದರಲ್ಲಿ ಅವರು 'ಡಿಗ್ರಿನಲ್ಲಿ ಒಂದು ರಿಲೇಶನ್ ಇತ್ತು, ಅದು 6 ವರ್ಷ ನಡಿತು. ಒಮ್ಮೆ ನಾನು ಅದ್ಯಾಕೆ ಹಾಗೆ ಹೇಳಿದ್ನೋ ಗೊತ್ತಿಲ್ಲ, 'ನೀನ್ ಬಿಟ್ಟು ಹೋಗ್ತೀಯ ಅಂದ್ರೆ ಕಾರಣ ಕೇಳಲ್ಲ' ಅಂತ ಹೇಳಿದ್ದೆ, ಅದು ಹಾಗೇ ಆಯ್ತು.. ಆದ್ರೆ ಒಂದ್ ವಿಷ್ಯ ಮಾತ್ರ ನಂಗೆ ಆರ್ಥ ಆಯ್ತು, ಅವ್ಳು ನನ್ ಬಿಟ್ಟು ಹೋಗಿಲ್ಲ ಅಂದ್ರೆ ನಾನು ಇನ್ನೂ ಕೆಟ್ಟ ಮನುಷ್ಯ ಆಗೇ ಇರ್ತಿದ್ದೆ.. ಈಗ ಒಳ್ಳೆಯ ಮನುಷ್ಯ ಅಂತಲ್ಲ, ಆದ್ರೆ ಈಗ ಅಟ್‌ಲೀಸ್ಟ್ ನನಗೆ ಗೊತ್ತು, ನಾನು ಅಷ್ಟೊಂದು ಒಳ್ಳೆಯವನಲ್ಲ ಅಂತ..

ಬ್ರೇಕಪ್‌ ಆದ್ಮೇಲೆ ನನಗೆ ಗೊತ್ತಾಯ್ತು

ಬ್ರೇಕಪ್‌ ಆದ್ಮೇಲೆ ನನಗೆ ಗೊತ್ತಾಯ್ತು, ನನಗೆ ಪ್ರೀತಿನ ಕೊಡೋಕೆ ಬರ್ಲಿಲ್ಲ ಅಂತ.. ಬ್ರೇಕಪ್ ಆದ್ಮೇಲೆ ನಾನು ಪ್ರೀತಿ ವಿಷ್ಯದಲ್ಲಿ ಸಾಕಷ್ಟು ಬೆಳೆದೆ.. ಕಾರಣ, ಅವ್ಳು ತೋರಿಸಿದ್ಳು, ನಾನು ಪ್ರೀತಿ ಮಾಡೋದಕ್ಕೆ ಯೋಗ್ಯ ವ್ಯಕ್ತಿ ಅಲ್ಲ ಅಂತ.. ಸೋ, ನಾನು ಅವ್ಳಿಗೆ ಈಗ್ಲೂ ತುಂಬಾ ಗೌರವ ಕೊಡ್ತೀನಿ.. ಅದಾದ್ಮೇಲೆ ಕೂಡ ಒಂದ್ ರಿಲೀಶನ್ ಇತ್ತು, ಆದ್ರೆ ಅದು ಫಟ್ ಅಂತ ಹೋಯ್ತು..

ಈಗ ಒಂದು ರಿಲೇಶನ್ ಇದೆ.. ಇಬ್ರೂ ಸರ್ಚಿಂಗ್ ಫಾರ್ ಲೈಫ್.. ಅವ್ಳಿಗೂ ಲೈಫಲ್ಲಿ ಹುಡುಕಾಟ ಇದೆ, ನನಗೂ ಇದೆ.. ನಂದೇನೂ ರೂಲ್ಸ್ ಇಲ್ಲ, ಅವ್ಳದ್ದೇನೂ ರೂಲ್ಸ್ ಇಲ್ಲ.. ನಾವಿಬ್ರೂ ಖುಷಿಯಾಗಿ ಇರೋಕೆ ಇಷ್ಟಪಡ್ತೀವಿ ಅಷ್ಟೇ.. ನೀನೂ ಬದುಕು ಕಲಿ, ನಾನೂ ಕಲಿತೀನಿ.. ಅಷ್ಟೇ..' ಎಂದಿದ್ದಾರೆ ರಾಜ್ ಬಿ ಶೆಟ್ಟಿ.

ಮತ್ತೊಂದು ಪ್ರಶ್ನೆ 'ಲಿವ್ ಇನ್ ರಿಲೇಶನ್‌ಶಿಪ್‌ ಓಕೆನಾ? ಅಥವಾ ಮ್ಯಾರೇಜ್ ಅಂದ್ರೆ ಕಂಪ್ಲೀಟ್ ಕಮಿಟ್‌ಮೆಂಟ್ ಓಕೆನಾ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ ಬಿ ಶೆಟ್ಟಿಯವರು 'ಲಿವ್ ಇನ್ ರಿಲೇಶನ್‌ಶಿಪ್‌ಗಿಂತ ಕಂಪ್ಲೀಟ್ ಕಮಿಟ್ಮೆಂಟ್ ಓಕೆ ಅಂತ ನನಗೆ ಅನ್ಸುತ್ತೆ.. ಲಿವ್ ಇನ್ ಆದ್ರೆ ನಮ್ಗೆ ಅದಕ್ಕೆ ಎಫರ್ಟ್‌ ಹಾಕೋದಕ್ಕೆ ಸ್ವಲ್ಪ ಕಷ್ಟ ಆಗುತ್ತೆ, ಆದ್ರೆ ಮ್ಯಾರೇಜ್ ಅಂದ್ರೆ ಅದಕ್ಕಿಂತ ಓಕೆ.. ಅಂದ್ರೆ, ಮ್ಯಾರೇಜ್‌ ಅಂದ್ರೆ ನಮ್ಗೆ ಕರೆಕ್ಟಾಗಿ ಗೊತ್ತಿರ್ಬೇಕು ನಾನು ಆ ವ್ಯಕ್ತಿ ಜೊತೆ ಎಲ್ಲಾನೂ ಕಳೆದುಕೊಳ್ಳೋದಕ್ಕೆ ರೆಡಿ ಅಂತ.. ಇಬ್ಬರೂ ವ್ಯಕ್ತಿಗಳೂ ಕಳೆದುಕೊಳ್ಳೋದಕ್ಕೆ ರೆಡಿಯಾಗಿದ್ರೆ ಮ್ಯಾರೇಜ್ ಓಕೆ, ಪಡೆದುಕೊಳ್ಳೋದಕ್ಕೆ ಅಲ್ಲ..

ಡಿವೋರ್ಸ್ ಅನ್ನೋ ಪದ ಕೆಟ್ಟದ್ದು ಅಂತ ಅನ್ಸೋದಿಲ್ಲ

ಅದೇ ಕಾರಣಕ್ಕೆ ನಂಗೆ 'ಡಿವೋರ್ಸ್ ಅನ್ನೋ ಪದ ಕೆಟ್ಟದ್ದು ಅಂತ ಅನ್ಸೋದಿಲ್ಲ.. ಇಬ್ರಿಗೂ ಮ್ಯಾರೇಕ್ ವರ್ಕ್ ಆಗಿಲ್ಲ ಅಂದ್ರೆ ದೂರ ಆಗೋದ್ರಲ್ಲಿ ತಪ್ಪೇನಿದೆ? ದೂರ ಆಗೋದು ಯಾಕೆ ತಪ್ಪು ಅಂತ ನನಗೆ ಇವತ್ತೀಗೂ ಅರ್ಥ ಆಗಿಲ್ಲ. ಡಿವೋರ್ಸ್ ಅಂದ ತಕ್ಷಣ ಅದ್ಯಾಕೆ ಅವ್ಳು ಗಂಡನ ಬಿಟ್ಳು ಅಂತ ಅಥವಾ ಅವ್ನು ಹೆಂಡ್ತಿ ಬಿಟ್ಟವ್ನು ಅಂತ ಮಾತಾಡ್ತಾರೆ ಅಂತ..

ಯಾವುದೇ ಮನುಷ್ಯ ಖುಷಿಯಾಗಿ ಇರ್ಬೇಕು ಅಂತ ಇಷ್ಟ ಪಡೋದು ನನ್ ಪ್ರಕಾರ ತಪ್ಪೇ ಅಲ್ಲ.. ಅದು ಲವ್‌ನಲ್ಲಾದ್ರೆ ಲವ್‌ನಲ್ಲಿ, ಮ್ಯಾರೇಜ್‌ನಲ್ಲಿ ಆದ್ರೆ ಮ್ಯಾರೇಜ್‌ನಲ್ಲಿ, ಅಥವಾ ಲಿವ್‌ ಇನ್‌ನಲ್ಲಾದ್ರೆ ಅದ್ರಲ್ಲಿ.. ಅಷ್ಟೇ ಅಲ್ಲ, ಡಿವೋರ್ಸ್‌ ಆಗಿ ನಾನು ಖುಷಿಯಾಗಿ ಇರ್ತೀನಿ ಅಂದ್ರೆ ಅದೂ ಓಕೆ.. ಒಟ್ಟನಲ್ಲಿ ನನ್ ಪ್ರಕಾರ ಖುಷಿಯಾಗಿ ಇರೋದು ಇಂಪಾರ್ಟೆಂಟು' ಎಂದಿದ್ದಾರೆ ನಟ-ನಿರ್ದೇಶಕ ರಾಜ್‌ ಬಿ ಶೆಟ್ಟಿ.