ಇತ್ತೀಚೆಗೆ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯಾಗಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ, ಈಗಾಗಲೇ ಪ್ರತಿಭಾನ್ವಿತೆ ಎಂಬುದನ್ನು ಸಾಬೀತು ಪಡಿಸಿರುವ ನಟಿ. ಇಂತಪ್ಪ ಸಾಯಿ ಪಲ್ಲವಿಗೆ ಆಗೊಮ್ಮೆ ಒಂದು ದಿನದ ರಜೆಗಾಗಿ ಕಣ್ಣೀರು ಹಾಕುವ ಸಂದರ್ಭ ಎದುರಾಗಿತ್ತು. ಹಾಗಿದ್ರೆ ಅದೇನು ಸುದ್ದಿ ಅಂತ ನೋಡಿ..

ರಜೆಗಾಗಿ ಸಾಯಿ ಪಲ್ಲವಿ ಕಣ್ಣೀರ ಕಹಾನಿ!

Add Asianetnews Kannada as a Preferred SourcegooglePreferred

ನಟಿ ಸಾಯಿ ಪಲ್ಲವಿ ಇಂದು ಭಾರತದ ಸ್ಟಾರ್ ನಟಿ. ಸಾಯಿ ಪಲ್ಲವಿಯವರು (Sai Pallavi) ಸೌತ್ ಸಿನಿಮಾ ಉದ್ಯಮದಲ್ಲಿ ಸ್ಟಾರ್ ನಟಿಯಾಗಿ ಬಹಳ ಕಾಲವಾಯ್ತು. ಆದರೆ, ಇತ್ತೀಚೆಗೆ ಅವರು ಬಾಲಿವುಡ್ ಸಿನಿದುನಿಯಾದಲ್ಲಿ ಕೂಡ ಸಖತ್ ಮಿಂಚತೊಡಗಿದ್ದಾರೆ. ಇತ್ತೀಚೆಗೆ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ 'ರಾಮಾಯಣ'ದಲ್ಲಿ ಸೀತೆಯಾಗಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ, ಈಗಾಗಲೇ ಪ್ರತಿಭಾನ್ವಿತೆ ಎಂಬುದನ್ನು ಸಾಬೀತು ಪಡಿಸಿರುವ ನಟಿ. ಇಂತಪ್ಪ ಸಾಯಿ ಪಲ್ಲವಿಗೆ ಆಗೊಮ್ಮೆ ಒಂದು ದಿನದ ರಜೆಗಾಗಿ ಕಣ್ಣೀರು ಹಾಕುವ ಸಂದರ್ಭ ಎದುರಾಗಿತ್ತು. ಹಾಗಿದ್ರೆ ಅದೇನು ಸುದ್ದಿ ಅಂತ ಮುಂದೆ ನೋಡಿ..

ಒಂದು ದಿನ ರಜೆ ಇಲ್ಲ ಎಂದು ಅಳಲು

ಹೌದು, ನಟಿ ಸಾಯಿ ಪಲ್ಲವಿಯವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ, 'ಯಾವತ್ತೂ ನನ್ನ ಕೈನಲ್ಲಿ ಒಂದು ಸಮಯದಲ್ಲಿ ಒಂದೇ ಸಿನಿಮಾ ಇರೋದು. ಆದ್ರೆ, ಕೋವಿಡ್ ಮುಗಿದ ತಕ್ಷಣ ನಾನು 3 ಸಿನಿಮಾಗಳಲ್ಲಿ ಒಟ್ಟಿಗೇ ನಟಿಸಬೇಕಾಗಿ ಬಂತು. ಆ ಮೂರು ಸಿನಿಮಾಗಳ ಮಧ್ಯೆ ನನಗೆ ರಜೆ ತೆಗೆದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಕಂಟಿನ್ಯೂ ಕೆಲಸ ಮಾಡುವ ಅಭ್ಯಾಸ ಇಲ್ಲದ ನನಗೆ ಅದರಿಂದ ತುಂಬಾ ಸಮಸ್ಯೆ ಆಯ್ತು. ಒಂದು ದಿನ ರಜೆ ಇಲ್ಲ ಎಂದು ಅಳಲು ಶುರುಮಾಡಿದೆ, ಆದ್ರೆ ನನ್ನ 3 ಸಿನಿಮಾದ ಯಾವುದೇ ನಿರ್ಮಾಪಕರು ಅಥವಾ ನಿರ್ದೇಶಕರಿಗೆ ನಾನು ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಏಕೆಂದರೆ ನನ್ನಿಂದ ಯಾವುದೇ ಸಿನಿಮಾಗೆ ತೊಂದರೆ ಆಗುವುದು ನನಗೆ ಇಷ್ಟವಿರಲಿಲ್ಲ.

ಒಟ್ಟಿಗೇ 10 ದಿನದ ರಜೆ ಸಿಕ್ಕಿತು

ಆದರೆ, ನಾನು ಅಳುತ್ತಿರುವುದನ್ನು ತಿಳಿದಿದ್ದ ನನ್ನ ತಂಗಿ ಈ ಸಂಗತಿಯನ್ನು ನನ್ನ ಸಿನಿಮಾದ ನಿರ್ಮಾಪಕರಿಗೆ ತಿಳಿಸಿದ್ದಳು. ಇದರಿಂದ ನನಗೆ ಒಟ್ಟಿಗೇ 10 ದಿನದ ರಜೆ ಸಿಕ್ಕಿತು. ಒಂದು ದಿನ ಬೇಕೆಂದು ಅಳುತ್ತಿದ್ದ ನನಗೆ ಒಟ್ಟಿಗೇ ಹತ್ತು ದಿನದ ರಜೆಗಳು ಸಿಕ್ಕಾಗ ಆಗಿರುವ ಸಂತೋಷ ಅಷ್ಟಿಷ್ಟಲ್ಲ. ಅದೊಂದೇ ಸಾರಿ ನನಗೆ ಹಾಗೆ ಆಗಿದ್ದು. ಏಕೆಂದರೆ, ನಾನು ಯಾವತ್ತೂ ಕೂಡ ಒಂದು ಸಮಯದಲ್ಲಿ ಒಂದು ಸಿನಿಮಾಗೆ ಮಾತ್ರ ಕಾಲ್‌ಶೀಟ್ ಕೋಡೋದು. ಆದರೆ ಅದು ಕೋವಿಡ್ ಕಾರಣಕ್ಕೆ ಆಕಸ್ಮಿಕವಾಗಿ ನಡೆದಿದ್ದು' ಎಂದಿದ್ದಾರೆ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ. ಈ ಹಳೆಯ ಇಂಟರ್‌ವ್ಯೂ ಈಗ ಸಖತ್ ವೈರಲ್ ಆಗುತ್ತಿದೆ.