ಯಶ್‌ ನಟನೆಯ ಕೆಜಿಎಫ್‌ 2 ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಏ.14) ರಂದು ಚಿತ್ರ ವಿಶ್ವಾದ್ಯಂತ ತೆರೆಕಾಣಲಿದ್ದು, ಭರ್ಜರಿ ನಿರೀಕ್ಷೆ ಹುಟ್ಟು ಹಾಕಿದೆ. 

ಬೆಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನೆಲ್ಲೆಡೆ ಚಿತ್ರದ ಟಿಕೇಟ್‌ಗಳು ಸೋಲ್ಡ್‌ಔಟ್‌ ಆಗಿವೆ. ರಾಷ್ಟ್ರಮಟ್ಟದಲ್ಲೂ ಚಿತ್ರ ಸದ್ದು ಮಾಡುತ್ತಿದ್ದು, ಜನ ರಾಕಿ ಬಾಯ್‌ ಬರುವಿಕೆಯನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಅಮೆರಿಕಾ, ಆಸ್ಪ್ರೇಲಿಯಾ, ನ್ಯೂಜಿಲ್ಯಾಂಡ್‌ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೆಜಿಎಫ್‌ 2 ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ರಜೆಯ ವರದಾನ

ನಾಳೆ ಅಂಬೇಡ್ಕರ್‌ ಜಯಂತಿ, ನಾಡಿದ್ದು ಗುಡ್‌ಫ್ರೈ ಡೇ, ಶನಿವಾರ ಭಾನುವಾರ ವೀಕೆಂಡ್‌ ರಜೆಗಳು ಚಿತ್ರಕ್ಕೆ ವರದಾನವಾಗಲಿದೆ. ಇದರಿಂದ ಅತ್ಯುತ್ತಮ ಕಲೆಕ್ಷನ್‌ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ. ಉತ್ತರ ಭಾರತದಲ್ಲಿ ಏ.14ರಂದು ಬೈಸಾಕಿ ಹಬ್ಬದ ಆಚರಣೆ ನಡೆಯಲಿದೆ. ಹೀಗಾಗಿ ಅಲ್ಲೂ ಆರಂಭದ ದಿನವೇ ಅತ್ಯುತ್ತಮ ಕಲೆಕ್ಷನ್‌ನ ನಿರೀಕ್ಷೆ ಇದೆ.

ತೆಲಂಗಾಣದಲ್ಲಿ ದರ ಹೆಚ್ಚಿಸಲು ಅವಕಾಶ

ಕೆಲವು ಷರತ್ತುಗಳೊಂದಿಗೆ ತೆಲಂಗಾಣದಲ್ಲಿ ಕೆಜಿಎಫ್‌ 2 ಟಿಕೇಟ್‌ ದರ ಏರಿಕೆಗೆ ಸರ್ಕಾರ ಅನುಮತಿ ನೀಡಿದೆ. ಈ ಪ್ರಕಾರ ಆರಂಭದ ನಾಲ್ಕು ದಿನಗಳ ಕಾಲ ಮಲ್ಟಿಪ್ಲೆಕ್ಸ್‌ಗಳಲ್ಲಿ 50 ರು. ಹಾಗೂ ಸಿಂಗಲ್‌ ಸ್ಕ್ರೀನ್‌ಗಳಲ್ಲಿ 30 ರು. ಟಿಕೆಟ್‌ ದರ ಹೆಚ್ಚಿಸಬಹುದು. ಆಂಧ್ರದಲ್ಲಿ ಟಿಕೆಟ್‌ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಸರ್ಕಾರದ ನೀತಿಯ ಕಾರಣ ದರದಲ್ಲಿ ಏರಿಕೆ ಸಾಧ್ಯವಾಗಿಲ್ಲ.

ಹಿಂದೆ ಸರಿದ ಜೆರ್ಸಿ

ಶಾಹಿದ್‌ ಕಪೂರ್‌ ನಟನೆಯ ‘ಜೆರ್ಸಿ’ ಚಿತ್ರ ಕೊನೆಯ ಹಂತದಲ್ಲಿ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ನಾಳೆಯ(ಏ.14) ಬದಲಾಗಿ ಏ.22 ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೆ ನೀಡಿದೆ. ಜೊತೆಗೆ ಟೀಮ್‌ ಕೆಜಿಎಫ್‌ 2ಗೆ ಶುಭ ಹಾರೈಸಿದೆ. ಇದರಿಂದ ಕೆಜಿಎಫ್‌ 2ಗೆ ಇನ್ನಷ್ಟುಥಿಯೇಟರ್‌ಗಳು ಸಿಕ್ಕಿದ್ದು, ಬಲ ಹೆಚ್ಚಿದಂತಾಗಿದೆ.

ತೂಫಾನ್..ಬಳಿಕ ಸುಲ್ತಾನ್..; KGF 2 ಚಿತ್ರದಿಂದ ಬರ್ತಿದೆ ಮತ್ತೊಂದು ಸಾಂಗ್

ಕೆಜಿಎಫ್‌ 2: ತೂಫಾನ್‌ ಆಯ್ತು, ಈಗ ಸುಲ್ತಾನ್‌ ಸಾಂಗ್‌!

ಕೆಜಿಎಫ್‌ 2 ಚಿತ್ರದ ‘ಸುಲ್ತಾನ್‌’ ಲಿರಿಕಲ್‌ ಸಾಂಗ್‌ ಇಂದು ಬಿಡುಗಡೆಯಾಗಲಿದೆ. ಬೆಳಗ್ಗೆ 11.07ಕ್ಕೆ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ. ಈ ಬಗ್ಗೆ ಹೊಂಬಾಳೆ ಫಿಲಂ ಮಾಹಿತಿ ನೀಡಿದೆ. ಈ ಹಿಂದೆ ಚಿತ್ರತಂಡ ತೂಫಾನ್‌ ಹಾಡು ರಿಲೀಸ್‌ ಮಾಡಿದ್ದು ಜನ ಮೆಚ್ಚುಗೆ ಗಳಿಸಿತ್ತು. ಇದೀಗ ಸುಲ್ತಾನ್‌ ಹಾಡಿನ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ.

ರಾಕಿಬಾಯ್‌ ಚಿತ್ರ ಬರೆದ ಅಭಿಮಾನಿಗಳು

ಈ ಹಿಂದೆ ಹೊಂಬಾಳೆ ಫಿಲಂಸ್‌ ತಂಡ ರಾಕಿಬಾಯ್‌ ಚಿತ್ರ ಬರೆದು ಕಳುಹಿಸಲು ಅಭಿಮಾನಿಗಳಲ್ಲಿ ಕೋರಿತ್ತು. ಅದನ್ನು ಪ್ರಚಾರಕ್ಕೆ ಬಳಸುವುದಾಗಿ ತಿಳಿಸಿತ್ತು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವು ಮಂದಿ ಕೆಜಿಎಫ್‌ 2 ಚಿತ್ರದ ಹೀರೋ ರಾಕಿಯ ಚಿತ್ರ ಬರೆದು ಕಳಿಸಿದ್ದರು. ಕೊಟ್ಟಮಾತಿನಂತೆ ಹೊಂಬಾಳೆ ಫಿಲಂಸ್‌ ಅದನ್ನು ತನ್ನ ಪೇಜ್‌ನಲ್ಲಿ ಶೇರ್‌ ಮಾಡಿದೆ.

ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ; ಅಲ್ಲು ಅರ್ಜುನ್ ಗಾಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡ್ರಾ?

ಕಾಂತಾರ, ರಾಘವೇಂದ್ರ ಸ್ಟೋ​ರ್‍ಸ್ ಟೀಸರ್‌ ಲಾಂಚ್‌

‘ಕೆಜಿಎಫ್‌ 2’ ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ್‌ ನಿರ್ಮಾಣದ ಮತ್ತೆರಡು ಚಿತ್ರಗಳು ರಿಷಬ್‌ ಶೆಟ್ಟಿನಿರ್ದೇಶನ, ನಟನೆಯ ‘ಕಾಂತಾರ’, ಜಗ್ಗೇಶ್‌ ನಟನೆಯ ‘ರಾಘವೇಂದ್ರ ಸ್ಟೋ​ರ್‍ಸ್’ ಇವುಗಳ ಥಿಯೇಟರಿಕಲ್‌ ಟೀಸರ್‌ ‘ಕೆಜಿಎಫ್‌ 2’ ಸಿನಿಮಾದೊಂದಿಗೆ ಪ್ರದರ್ಶನಗೊಳ್ಳಲಿವೆ. ಕಾಂತಾರ ಚಿತ್ರದ ಮೊದಲ ಟೀಸರ್‌ ಇಂದು ರಾತ್ರಿ 10.44ಕ್ಕೆ ಹಾಗೂ ರಾಘವೇಂದ್ರ ಸ್ಟೋರ್ಸ್‌ ಚಿತ್ರದ ಟೀಸರ್‌ ಇಂದು ರಾತ್ರಿ 10.45ಕ್ಕೆ ಹೊಂಬಾಳೆ ಫಿಲಂಸ್‌ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ.

"