MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ 'ಲವ್ ಮಾಕ್ಟೇಲ್' ನಟಿ ಖುಷಿ ಆಚಾರ್

ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ 'ಲವ್ ಮಾಕ್ಟೇಲ್' ನಟಿ ಖುಷಿ ಆಚಾರ್

ಲವ್ ಮಾಕ್ಟೇಲ್ 1 ಮತ್ತು 2 ಸಿನಿಮಾಗಳಲ್ಲಿ ನಟಿಸಿ, ಗಮನ ಸೆಳೆದ ನಟಿ ಖುಷಿ ಆಚಾರ್, ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡು ಕಾಯುತ್ತಿದ್ದೇವೆ ಎಂದಿದ್ದಾರೆ. 

1 Min read
Author : Pavna Das
Published : Mar 17 2026, 01:23 PM IST
Share this Photo Gallery
  • FB
  • TW
  • Linkdin
  • Whatsapp
16
ಖುಷಿ ಆಚಾರ್
Image Credit : Instagram

ಖುಷಿ ಆಚಾರ್

ಲವ್ ಮಾಕ್ಟೇಲ್ ಸಿನಿಮಾದ ಮುರನೇ ಭಾಗ ಇದೀಗ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಲವ್ ಮಾಕ್ಟೇಲ್ ಚಿತ್ರದ ಮೊದಲನೇ ಹಾಗೂ ಎರಡನೇ ಭಾಗದಲ್ಲಿ ನಟಿಸಿದ್ದ ನಟಿ ಖುಷಿ ಆಚಾರ್ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ.

26
ಲವ್ ಮಾಕ್ಟೇಲ್ ನಟಿ
Image Credit : Instagram

ಲವ್ ಮಾಕ್ಟೇಲ್ ನಟಿ

ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ ಅಭಿನಯದ ಸೂಪರ್ ಹಿಟ್ ಸಿನಿಮಾ ಲವ್ ಮಾಕ್ಟೇಲ್ ನಲ್ಲಿ ಕೃಷ್ಣ ಬೆಸ್ಟ್ ಫ್ರೆಂಡ್ ಆಗಿ ಖುಷಿ ಆಚಾರ್ ನಟಿಸಿದ್ದರು. ಈ ಸಿನಿಮಾದಲ್ಲಿ ಸುಷ್ಮಾ ಮತ್ತು ವಿಜಯ್ ಜೋಡಿ ಸಖತ್ ಆಗಿದ್ದು, ಈ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.

Related Articles

Related image1
Love Mocktail 3: ನಮ್ಮ ಚಿತ್ರ ಚೆನ್ನಾಗಿದೆ, ದೊಡ್ಡ ಚಿತ್ರದ ಭಯ ನಮಗಿಲ್ಲ: ಡಾರ್ಲಿಂಗ್‌ ಕೃಷ್ಣ
Related image2
ಸಖತ್‌ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್‌ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?
36
ಆದಿಗೆ ಪ್ರೀತಿ ಹುಡುಕಿಕೊಟ್ಟ ಜೋಡಿ
Image Credit : Instagram

ಆದಿಗೆ ಪ್ರೀತಿ ಹುಡುಕಿಕೊಟ್ಟ ಜೋಡಿ

ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿಯ ಬೆಸ್ಟ್ ಫ್ರೆಂಡ್ ವಿಜಯ್, ವಿಜಯ್ ಸ್ಕೂಲ್ ಟೈಮ್ ಗರ್ಲ್ ಫ್ರೆಂಡ್, ಹೆಂಡತಿ ಸುಷ್ಮಾ ಪಾತ್ರದಲ್ಲಿ ನಟಿಸಿದ್ದು ಖುಷಿ ಆಚಾರ್. ವಿಜಯ್ ಮತ್ತು ಸುಷ್ಮಾ ಆದಿಯ ಜೀವನದಲ್ಲಿ ಎಲ್ಲಾ ಹಂತದಲ್ಲೂ ಜೊತೆಯಾಗಿ ನಿಲ್ಲುವ ಜೋಡಿ ಇವರು. ಬ್ರೇಕಪ್ ನೋವಲ್ಲಿದ್ದ ಆದಿಗೆ ಮದುವೆ ಮಾಡಿಸಿದ್ದೇ ಇವರು. ಹಾಗಾಗಿ ಈ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.

46
ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಖುಷಿ
Image Credit : Instagram

ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಖುಷಿ

ಖುಷಿ ಕಳೆದ ವರ್ಷ ಹರ್ಷ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಖುಷಿ ತಾಯಿಯಾಗುತ್ತಿದ್ದು, ಈ ಖುಷಿಯನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಮೆಟರ್ನಿಟಿ ಫೋಟೊ ಶೂಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

56
ಹೊಸ ಕುಟುಂಬ ರಚನೆ
Image Credit : Instagram

ಹೊಸ ಕುಟುಂಬ ರಚನೆ

ನಟಿ ಮತ್ತು ಬರಹಗಾರ್ತಿಯಾಗಿರುವ ಖುಷಿ ಆಚಾರ್, ಪ್ರೆಗ್ನೆನ್ಸಿ ಫೋಟೊ ಶೂಟ್ ಹಂಚಿಕೊಂಡು, ಶಾಶ್ವತವಾಗಿ ಉಳಿಯುವ ನೆನಪು. ನಮ್ಮದೇ ಆದ ಕುಟುಂಬವನ್ನು ರಚಿಸುವುದು ವಿಭಿನ್ನ ಭಾವನೆ ಎಂದು ಬರೆದುಕೊಂಡಿದ್ದಾರೆ. ಗಂಡನ ಜೊತೆಗಿನ ಮುದ್ದಾದ ಫೋಟೊಗಳನ್ನು ಸಹ ನಟಿ ಶೇರ್ ಮಾಡಿದ್ದಾರೆ.

66
ನಟಿಸಿದ ಸಿನಿಮಾಗಳು
Image Credit : Instagram

ನಟಿಸಿದ ಸಿನಿಮಾಗಳು

ಖುಷಿ ಆಚಾರ್ ಕೇವಲ್' ಲವ್ ಮಾಕ್ಟೇಲ್' 1 ಮತ್ತು 2ರಲ್ಲಿ ಮಾತ್ರ ನಟಿಸಿದ್ದಾರೆ. ಬೇರೆ ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಇತ್ತೀಚೆಗೆ ಲವ್ ಮಾಕ್ಟೇಲ್ 2 ಸಿನಿಮಾ ನಟಿ ಸುಷ್ಮಿತಾ ತಾಯಿಯಾಗಿದ್ದರು. ಇದೀಗ ಎರಡು ಸಿನಿಮಾಗಳಲ್ಲಿ ಮಿಂಚಿರುವ ಖುಷಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಪ್ರೀತಿ
ಸ್ಯಾಂಡಲ್‌ವುಡ್
ಸ್ಯಾಂಡಲ್ವುಡ್ ಫಿಲ್ಮ್
ಮನರಂಜನಾ ಸುದ್ದಿ
Latest Videos
Recommended Stories
Recommended image1
Appu Birthday : ಪಾರ್ವತಮ್ಮ ಬೇಡ ಅಂದ್ರೂ 6 ತಿಂಗಳ ಶಿಶುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್- ರೋಚಕ ಸ್ಟೋರಿ
Recommended image2
ಕಾಮಸೂತ್ರದ ಹಾಡಾಯ್ತು 'ಕೆಡಿ'ಯ ಸರ್ಸೆ ಸಾಂಗ್; ಪ್ರೇಮ್‌ಗೆ ಉಗಿದು ಉಪ್ಪಿನಕಾಯಿ ಹಾಕ್ತಿರೋ ನೆಟ್ಟಿಗರು
Recommended image3
ತ್ರಿವಳಿ ವಿಶ್ವ ದಾಖಲೆ ನಿರ್ಮಿಸಿ ಭಾರೀ ಗಮನಸೆಳೆದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೊಮ್ಮಗ ಶಿವತೇಜ!
Related Stories
Recommended image1
Love Mocktail 3: ನಮ್ಮ ಚಿತ್ರ ಚೆನ್ನಾಗಿದೆ, ದೊಡ್ಡ ಚಿತ್ರದ ಭಯ ನಮಗಿಲ್ಲ: ಡಾರ್ಲಿಂಗ್‌ ಕೃಷ್ಣ
Recommended image2
ಸಖತ್‌ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್‌ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved