MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Appu Birthday : ಪಾರ್ವತಮ್ಮ ಬೇಡ ಅಂದ್ರೂ 6 ತಿಂಗಳ ಶಿಶುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್- ರೋಚಕ ಸ್ಟೋರಿ

Appu Birthday : ಪಾರ್ವತಮ್ಮ ಬೇಡ ಅಂದ್ರೂ 6 ತಿಂಗಳ ಶಿಶುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್- ರೋಚಕ ಸ್ಟೋರಿ

ಪುನೀತ್ ರಾಜ್‌ಕುಮಾರ್ ಅವರು ಆರು ತಿಂಗಳ ಶಿಶುವಾಗಿದ್ದಾಗ 'ಪ್ರೇಮದ ಕಾಣಿಕೆ' ಚಿತ್ರದ ಮೂಲಕ ಬಾಲನಟರಾಗಿ ಪಾದಾರ್ಪಣೆ ಮಾಡಿದರು. ಡಾ. ರಾಜ್‌ಕುಮಾರ್ ಅವರೇ ತಮ್ಮ ಮಗನನ್ನು ಚಿತ್ರೀಕರಣಕ್ಕೆ ಕರೆತಂದಿದ್ದರು.  ಸಮಾಜಮುಖಿ ಕಾರ್ಯಗಳ ಮೂಲಕ ಕರುನಾಡಿನ ಮನೆಮಾತಾದ ಅಪ್ಪು, ಇಂದಿಗೂ ಜನಮಾನಸದಲ್ಲಿ ಅಜರಾಮರ.

2 Min read
Author : Suchethana D
Published : Mar 17 2026, 12:36 PM IST
Share this Photo Gallery
  • FB
  • TW
  • Linkdin
  • Whatsapp
16
ಕರುನಾಡಿನ ಕಣ್ಮಣಿ
Image Credit : Instagram

ಕರುನಾಡಿನ ಕಣ್ಮಣಿ

ಕರುನಾಡಿನ ಕಣ್ಮಣಿಯಾಗಿ, ನಿಧನರಾದ ಮೇಲೂ ಕೆಲವರ ಜೀವನಕ್ಕೆ ಬೆಳಕಾಗಿ ಹೋದವರು ಎಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್​ಕುಮಾರ್​ Puneet Raj kumar. 17ರ ಮಾರ್ಚ್​ 1975ರಲ್ಲಿ ಹುಟ್ಟಿದ್ದ ಪುನೀತ್​ ಅವರು ಇಂದು ಬದುಕಿದ್ದರೆ ಎಲ್ಲರ ಜೊತೆ 51ನೇ ಹುಟ್ಟಿದ ದಿನವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಅಪ್ಪು ಹುಟ್ಟುಹಬ್ಬಕ್ಕೆ ಇಂದು ಸಾಕ್ಷಿಯಾಗುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ನಟನ ಬರ್ತ್​ಡೇ ಸೆಲಬ್ರೇಟ್​ ಮಾಡುತ್ತಿದ್ದಾರೆ.

26
ಆರು ತಿಂಗಳ ಶಿಶುವಾಗಿದ್ದಾಗ...
Image Credit : AFP

ಆರು ತಿಂಗಳ ಶಿಶುವಾಗಿದ್ದಾಗ...

ಅಷ್ಟಕ್ಕೂ ಅಪ್ಪು ಬಾಲನಟನಾಗಿ ಪ್ರವೇಶಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಆರು ತಿಂಗಳ ಶಿಶುವಾಗಿದ್ದಾಗ, ಡಾ. ರಾಜ್​ಕುಮಾರ್​ ಅವರು ತಮ್ಮ ಪುತ್ರನನ್ನೇ ಅಖಾಡಕ್ಕಿಳಿಸಿದ್ದ ರೋಚಕ ಸ್ಟೋರಿ ಕೆಲವೇ ಜನರಿಗೆ ಗೊತ್ತಿರಲಿಕ್ಕೆ ಸಾಕು. ಪುನೀತ್​ ಆಗ ಲೋಹಿತ್​ ಆಗಿದ್ದರು.

Related Articles

Related image1
ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್​
Related image2
ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ: ಆದ್ರೆ ಕ್ಲೈಮ್ಯಾಕ್ಸ್​ ಮಾತ್ರ ಸಕತ್​ ಇಂಟರೆಸ್ಟಿಂಗ್​!
36
ಮಗುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್​
Image Credit : AFP

ಮಗುವನ್ನು ಅಖಾಡಕ್ಕಿಳಿಸಿದ್ದ ಡಾ.ರಾಜ್​

ಅಪ್ಪು ಅವರಿಗೆ ಕೇವಲ ಆರು ತಿಂಗಳು ಇದ್ದಾಗ, ‘ಪ್ರೇಮದ ಕಾಣಿಕೆ’ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ, ಒಂದು ಮಗುವಿನ ಅವಶ್ಯಕತೆ ಇತ್ತು. ಆದರೆ ಅಷ್ಟು ಚಿಕ್ಕ ಶಿಶುವನ್ನು, ಅಂಥ ಕ್ಯಾಮೆರಾ ಎದುರು ಅಪ್ಪ-ಅಮ್ಮ ಬಿಡಲು ಹೆದರಿದ್ದರು. ಈಗ ಬೇಕಿದ್ದರೆ ಹುಟ್ಟಿದ ತಕ್ಷಣ ಹಲವರು ತಮ್ಮ ಮಕ್ಕಳನ್ನು ಕೊಡುವವರು ಇದ್ದಾರೆ. ಆದರೆ 50 ವರ್ಷಗಳ ಹಿಂದೆ ಹಾಗಿರಲಿಲ್ಲವಲ್ಲ!

46
ಪ್ರೇಮದ ಕಾಣಿಕೆ
Image Credit : Asianet News

ಪ್ರೇಮದ ಕಾಣಿಕೆ

ಆ ಸಂದರ್ಭದಲ್ಲಿ ಆರು ತಿಂಗಳ ತಮ್ಮ ಕಂದನನ್ನೇ ಅಖಾಡಕ್ಕಿಳಿಸಿ ಈ ಚಿತ್ರದ ಶೂಟಿಂಗ್​ಗೆ ಕರೆದುಕೊಂಡು ಹೋಗಿದ್ದರು ಡಾ. ರಾಜ್​ಕುಮಾರ್​. ಈ ಮೂಲಕ ಪ್ರೇಮದ ಕಾಣಿಕೆ ಪುನೀತ್​ ರಾಜ್​ ಅವರ ಮೊದಲ ಚಿತ್ರವಾಯಿತು. ಅದು ಆರು ತಿಂಗಳ ಮಗುವಾಗಿದ್ದಾಗ! ತಮ್ಮ ಮಗುವನ್ನು ಚಿತ್ರೀಕರಣಕ್ಕೆ ಕರೆದುಕೊಂಡು ಹೋದರೆ ಯಾವ ಅಮ್ಮಂಗಾದರೂ ಭಯ ಆಗುವುದು ಸಹಜವೇ. ಅದೇ ರೀತಿ ಪಾರ್ವತಮ್ಮನವರು ಕೂಡ ಪ್ರತಿದಿನವೂ ತಮ್ಮ ಕಂದನನ್ನು ಶೂಟಿಂಗ್​ಗೆ ಕರೆದುಕೊಂಡು ಹೋಗುತ್ತಿದ್ದು, ಅಲ್ಲಿಯೇ ಅವರು ಇರುತ್ತಿದ್ದರು.

56
ಸಿನಿಮಾದಲ್ಲಿ ಮಿಂಚು
Image Credit : instagram

ಸಿನಿಮಾದಲ್ಲಿ ಮಿಂಚು

ಅದಾದ ಬಳಿಕ ಕೆಲವು ಸಿನಿಮಾಗಳಲ್ಲಿ ಲೋಹಿತ್​ ಅರ್ಥಾತ್​ ಪುನೀತ್​ ಅವರು ಕಾಣಿಸಿಕೊಂಡರು. ಪ್ರಶಸ್ತಿಗಳನ್ನು ಬಾಚಿಕೊಂಡರು. ಕೊನೆಗೆ ಬಣ್ಣದ ಲೋಕದಿಂದ ದೂರ ಸರಿದು ಬಿಜಿನೆಸ್​ ಮಾಡಿದರೂ, ಕೊನೆಗೆ ಅವರನ್ನು ಎಳೆ ತಂದದ್ದು ಚಿತ್ರರಂಗವೇ.

66
ಸಮಾಜಮುಖಿ ಕಾರ್ಯ
Image Credit : Instagram

ಸಮಾಜಮುಖಿ ಕಾರ್ಯ

2002 ರಲ್ಲಿ ಅಪ್ಪು ಆಗಿ ಅಪ್ಪು ಚಿತ್ರದ ಮೂಲಕ ನಾಡಿನ ಮನೆಮಾತಾದ ಪುನೀತ್​ ರಾಜ್​, ಅಲ್ಲಿಂದ ಚಿತ್ರರಂಗದಲ್ಲಿ ಏರುತ್ತಲೇ ಸಾಗಿದರು. ಅದರ ಜೊತೆಗೆ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅದೆಷ್ಟೋ ಅವರ ಕಾರ್ಯಗಳು ಅವರ ನಿಧನದ ಬಳಿಕ ಬೆಳಕಿಗೆ ಬಂದದ್ದು ಇದೆ. ಇನ್ನೂ ಎಷ್ಟೋ ಯಾರಿಗೂ ಗೊತ್ತಿಲ್ಲದ ಕಾರ್ಯಗಳೂ ಇವೆ. 2021 ರಲ್ಲಿ 46 ನೇ ವಯಸ್ಸಿನಲ್ಲಿ ಹಠಾತ್ ಹೃದಯಾಘಾತದಿಂದ ಎಲ್ಲರನ್ನೂ ಅಗಲಿದ ಅಪ್ಪು, ಜನಮಾನಸಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪುನೀತ್ ರಾಜ್‌ಕುಮಾರ್
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ಡಾ. ರಾಜ್‌ಕುಮಾರ್
ಮನರಂಜನಾ ಸುದ್ದಿ
Latest Videos
Recommended Stories
Recommended image1
ಕಾಮಸೂತ್ರದ ಹಾಡಾಯ್ತು 'ಕೆಡಿ'ಯ ಸರ್ಸೆ ಸಾಂಗ್; ಪ್ರೇಮ್‌ಗೆ ಉಗಿದು ಉಪ್ಪಿನಕಾಯಿ ಹಾಕ್ತಿರೋ ನೆಟ್ಟಿಗರು
Recommended image2
ತ್ರಿವಳಿ ವಿಶ್ವ ದಾಖಲೆ ನಿರ್ಮಿಸಿ ಭಾರೀ ಗಮನಸೆಳೆದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೊಮ್ಮಗ ಶಿವತೇಜ!
Recommended image3
ತನುಷ್ ಶಿವಣ್ಣ ಅಭಿನಯ, ಲವ ನಿರ್ದೇಶನದ 'ಬಾಸ್'​ ಸಿನಿಮಾ ವಿರುದ್ಧ ನೋಟಿಸ್ ಜಾರಿ; ಎಷ್ಟು ಪುಟಗಳ ನೋಟಿಸ್ ಗೊತ್ತಾ?
Related Stories
Recommended image1
ಮನೆಯಲ್ಲಿ ಏನೇ ಕಳುವಾದ್ರೂ ನಾನೇ ಅಂತಿದ್ರು: ನನ್ನ ಕುದುರೆ ಅಂತ ಕರೀತಿದ್ರು- ಬಾಲ್ಯಕ್ಕೆ ಜಾರಿದ ಅಶ್ವಿನಿ ಪುನೀತ್​
Recommended image2
ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ: ಆದ್ರೆ ಕ್ಲೈಮ್ಯಾಕ್ಸ್​ ಮಾತ್ರ ಸಕತ್​ ಇಂಟರೆಸ್ಟಿಂಗ್​!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved