Asianet Suvarna News Asianet Suvarna News

ತೂಫಾನ್..ಬಳಿಕ ಸುಲ್ತಾನ್..; KGF 2 ಚಿತ್ರದಿಂದ ಬರ್ತಿದೆ ಮತ್ತೊಂದು ಸಾಂಗ್

ಕೆಜಿಎಫ್2 ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಈ ನಡುವೆ ಚಿತ್ರತಂಡ ಮತ್ತೊಂದು ಹಾಡು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಸಿನಿಮಾದಿಂದ ಬಂದಿರುವ ಎರಡು ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಇದೀಗ ಸುಲ್ತಾನ್ ಹಾಡು ಬಿಡುಗಡೆಯಾಗುತ್ತಿದೆ. 

Yash starrer kgf 2 movie Sulthan song will release on April 13th
Author
Bengaluru, First Published Apr 12, 2022, 5:59 PM IST

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್2(KGF2) ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಕೆಜಿಎಫ್-2 ಏಪ್ರಿಲ್ 14ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಯಶ್ ಮತ್ತು ತಂಡ ದೇಶದಾದ್ಯಂತ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದು ಭಾರತದ ಬಹುತೇಕ ಭಾಗಗಳಿಗೆ ಭೇಟಿ ನೀಡಿದ್ದಾರೆ. ಕೆಜಿಎಫ್ ಮೊದಲ ಭಾಗ ನೋಡಿದ ಎಲ್ಲರೂ ಚಾಪ್ಟರ್ 2 ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಸಿನಿಮಾತಂಡ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ನೀಡಿದೆ. ಸಿನಿಮಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಈ ನಡುವೆ ಚಿತ್ರತಂಡ ಮತ್ತೊಂದು ಹಾಡು ಬಿಡುಗಡೆ ಮಾಡುತ್ತಿದೆ.

ಈಗಾಗಲೇ ಸಿನಿಮಾದಿಂದ ಬಂದಿರುವ ಎರಡು ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಕೆಜಿಎಫ್2 ಸಿನಿಮಾದಿಂದ ಬಂದ ಮೊದಲ ಹಾಡು ತೂಫಾನ್ ಭರ್ಜರಿ ಸದ್ದು ಮಾಡುತ್ತಿದೆ. ಆ ನಂತರ ಸಿನಿಮಾತಂಡ ತಾಯಿ-ಮುಗುವಿನ ಸೆಂಟಿಮೆಂಟ್ ಹಾಡನ್ನು ಬಿಡುಗಡೆ ಮಾಡಿ ಎಲ್ಲ ಅಮ್ಮಂದಿರ ಧ್ವನಿ ಎಂದು ಬಣ್ಣಿಸಿದ್ದರು. ಇದೀಗ ಸಿನಿಮಾದಿಂದ ಸುಲ್ತಾನ್ ಎನ್ನುವ ಹಾಡು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಏಪ್ರಿಲ್ 13ರಂದು ಬೆಳಗ್ಗೆ 11.07ಕ್ಕೆ ಹೊಸ ಹಾಡು ಸುಲ್ತಾನ್ ಬಿಡುಗಡೆ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ.

ರವಿ ಬಸ್ರೂರು ಸಂಗೀತ ಸಾರಥ್ಯದಲ್ಲಿ ಬಂದಿರುವ ಈ ಹಾಡು ಹೇಗಿರಲಿದೆ ಎಂದು ಕೇಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಂದಹಾಗೆ ಸಿನಿಮಾದಿಂದ ಬರ್ತಿರುವ ಮೂರನೇ ಹಾಡು ಇದಾಗಿದೆ. ಪ್ರಶಾಂತ್ ನೀಲ್ ನಿರ್ದೇಶನ ರಾಕಿ ಭಾಯ್ ಮತ್ತು ಅಧೀರನ ಕಾಳಗ ನೋಡಲು ಅಭಿಮಾನಿಗಳು ಉಸಿರುಬಿಗಿಹಿಡಿದು ಕಾಯುತ್ತಿದ್ದಾರೆ.

KGF 2: ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ RRR ದಾಖಲೆ ಮುರಿದ ಯಶ್ ಸಿನಿಮಾ

ಈಗಾಗಲೇ ಸಿನಿಮಾದ ಮೊದಲ ವಿಮರ್ಶೆ ಹೊರಬಿದ್ದಿದೆ. ಓವರ್ ಸೀಸ್ ಸೆನ್ಸಾರ್ ಸದಸ್ಯ ಉಮೈರ್ ಸಂಧು ಸಿನಿಮಾ ನೋಡಿ ವಿಮರ್ಶೆ ಮಾಡಿದ್ದಾರೆ. ಕೆಜಿಎಫ್-2 ಸಿನಿಮಾವನ್ನು ಭಾರತೀಯ ಸಿನಿಮಾರಂಗದ ಕಿರೀಟ ಎಂದು ಬಣ್ಣಿಸಿದ್ದಾರೆ. ಅಷ್ಟೆಯಲ್ಲ ಯಶ್ ಮತ್ತು ಸಂಜಯ್ ದತ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನವನ್ನು ಹಾಡಿಹೊಗಳಿದ್ದಾರೆ. ಉಮೈರ್ ಸಂಧು ಹೇಳಿದ ಬಳಿಕ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ವಿಚಾರದಲ್ಲಿ ದಾಕಲೆ ನಿರ್ಮಿಸಿದೆ. ಹಿಂದಿ ವಿಭಾಗದಲ್ಲಿ ದಾಖಲೆಯ ಟಕೆಟ್ ಮಾರಾಟವಾಗಿದೆ. ಹಾಗಾಗಿ ಬಿಡುಗಡೆಗೂ ಮೊದಲೇ ಅನೇಕ ದಾಕಳೆ ಮಾಡಿರುವ ಕೆಜಿಎಫ್2 ಇನ್ನು ಬಿಡುಗಡೆ ನಂತರ ಯಾವೆಲ್ಲ ದಾಖಲೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.


ಯಶ್ ವಿರುದ್ಧ ತೆಲುಗು ಮಾಧ್ಯಮ ಗರಂ; ಅಲ್ಲು ಅರ್ಜುನ್ ಗಾಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡ್ರಾ?

 

ಏಪ್ರಿಲ್ 14ರಂದು ತೆರೆಗೆ ಬರುತ್ತಿರುವ ಕೆಜಿಎಫ್ 2 ಅನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಎಲ್ಲಾ ಕುತೂಹಲಗಳಿಗೆ ಏಪ್ರಿಲ್ 14ರಂದು ತೆರೆ ಬೀಳಲಿದೆ.

Latest Videos
Follow Us:
Download App:
  • android
  • ios