ಜಯಂತ್ ಸರ್ ನನ್ನ ಕನಸಿನ ಸ್ಕ್ರಿಪ್ಟ್ ಒಂದನ್ನು ನಖಶಿಖಾಂತ ಓದಿ, ಆನಂದಿಸಿ, ಬೆನ್ನು ತಟ್ಟಿದ್ದು ನನ್ನ ಪಾಲಿಗೆ ಈ ದಶಕದ ಖುಷಿ ಸಮಾಚಾರ .. ಬರಹಗಾರ ಮಾತ್ರ ಬರಹಗಾರನನ್ನು ಅರ್ಥ ಮಾಡಿಕೊಳ್ಳಬಲ್ಲ.. ಬಡವ ಮಾತ್ರ ಬಡವನನ್ನು ಅರ್ಥ ಮಾಡಿಕೊಳ್ಳಬಲ್ಲ.. ಕಲೆಗಾರ ಮಾತ್ರ ಕಲೆ ತೊಳೆಯಬಲ್ಲ..

ಯೋಗರಾಜ್ ಭಟ್ ವೈರಲ್ ಪೋಸ್ಟ್‌ನಲ್ಲಿ ಏನಿದೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಮುಂಗಾರು ಮಳೆ' ಖ್ಯಾತಿಯ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, 'ವಿಕಟ ಕವಿ' ಬಿರುದಾಂಕಿತ ಯೋಗರಾಜ್ ಭಟ್ (Yogaraj Bhat) ಅವರು ತಮ್ಮ ಸೋಷಿಯಲ್ ಮೀಡಿಯಾ 'ಇನ್‌ಸ್ಟಾಗ್ರಾಂನಲ್ಲಿ ಹೊಸದೊಂದು ಪೋಸ್ಟ್ ಹಾಕಿದ್ದಾರೆ. ಅದೀಗ ಸಾಕಷ್ಟು ವೈರಲ್ ಆಗುತ್ತಿದೆ. ಜೊತೆಗೆ, ಅದಕ್ಕೆ ಬಹಳಷ್ಟು ವಿಭಿನ್ನ ಕಾಮೆಂಟ್‌ಗಳು ಹರಿದುಬರುತ್ತಿವೆ.

ಹಾಗಿದ್ದರೆ ಭಟ್ಟರ 'ವೈರಲ್ ಪೋಸ್ಟ್'ನಲ್ಲಿ ಏನಿದೆ? ಅದಕ್ಕೆ ಎಂತೆಂತಹ ತರಹೇವಾರಿ ಕಾಮೆಂಟ್‌ಗಳು ಬರುತ್ತಿವೆ? ಇಲ್ಲಿದೆ ನೋಡಿ 'ಭಟ್ಟರ ನಳಪಾಕ'ದ ಝಲಕ್...

ಇದು ಯೋಗರಾಜ್ ಭಟ್ ಅವರು ಮಾಡಿರುವ ಪೋಸ್ಟ್: 

ನಮಸ್ತೆ,

ಜಯಂತ್ ಸರ್ ನನ್ನ ಕನಸಿನ ಸ್ಕ್ರಿಪ್ಟ್ ಒಂದನ್ನು ನಖಶಿಖಾಂತ ಓದಿ, ಆನಂದಿಸಿ, ಬೆನ್ನು ತಟ್ಟಿದ್ದು ನನ್ನ ಪಾಲಿಗೆ ಈ ದಶಕದ ಖುಷಿ ಸಮಾಚಾರ .. ಬರಹಗಾರ ಮಾತ್ರ ಬರಹಗಾರನನ್ನು ಅರ್ಥ ಮಾಡಿಕೊಳ್ಳಬಲ್ಲ.. ಬಡವ ಮಾತ್ರ ಬಡವನನ್ನು ಅರ್ಥ ಮಾಡಿಕೊಳ್ಳಬಲ್ಲ.. ಕಲೆಗಾರ ಮಾತ್ರ ಕಲೆ ತೊಳೆಯಬಲ್ಲ..

ಓದುವಿಕೆ ನಶಿಸಿ ಹೋಗುತ್ತಿರುವ ಈ ಮೊಬೈಲ್ ಯುಗದಲ್ಲಿ ಜಯಂತ್ ಸರ್ ಬರೆಯೋದಕ್ಕೆ , ಓದುವುದಕ್ಕೆ ಮಾದರಿ ವ್ಯಕ್ತಿ ಆಗಿಬಿಟ್ಟರು..

ವಿನಂತಿ-

ಎಲ್ಲರೂ ಸ್ವಲ್ಪ ಸಾಹಿತ್ಯ ಪಾಹಿತ್ಯ

ಓದಿಕೊಳ್ರಪ್ಪ/ಮ್ಮ.. ಬಾಳಲ್ಲಿ ನಿಜಕ್ಕೂ ಯೂಸ್ ಆಯ್ತದೆ..

ಈ ಪತ್ರ ಇಲ್ಲಿವರೆಗೆ ಓದಿದ ಹಾಗೂ ಓದದ ಎಲ್ಲರಿಗೂ ಅನಂತ

ಧನ್ಯವಾದ..

-Yogaraj Bhat

ಎಂದು ಯೋಗರಾಜ್ ಭಟ್ಟರು ಬರೆದುಕೊಂಡಿದ್ದಾರೆ. ಸಾಹಿತಿ, ಬರಹಗಾರ ಜಯಂತ್ ಕಾಯ್ಕಿಣಿ ಅವರೊಂದಿಗೆ ಕುಳಿತಿರುವ ಫೋಟೋವನ್ನು ಕೂಡ ಈ ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಯೋಗರಾಜ್ ಭಟ್ಟರ 'ಕನಸಿನ ಸ್ಕ್ರಿಪ್ಟ್‌'ಗೆ ಸ್ನೇಹಿತ, ಜೊತೆಗಾರ ಜಯಂತ್ ಕಾಯ್ಕಿಣಿ ಅವರು ಬೆನ್ನುತಟ್ಟಿ ಆಗಿದೆ. ಅದೇ ಖುಷಿಗೆ ಭಟ್ಟರು ಪೋಸ್ಟ್ ಹಂಚಿಕೊಂಡಿದ್ದಾರೆ. ಈಗ ಭಟ್ಟರ ಅಭಿಮಾನಿಗಳ ಕಡೆಯಿಂದ ಪ್ರಶ್ನೆಗಳ ಸುನಾಮಿ ಹರಿದುಬರುತ್ತಿದೆ- 'ಭಟ್ಟರೇ, ಎಲ್ಲಿ ಹೊಸ ಸಿನಿಮಾ? ಯಾವಾಗ ಬರುತ್ತೆ?' ಅನ್ನೋ ಇದೇ ಧಾಟಿಯ ಪ್ರಶ್ನೆಗಳು..

ಭಟ್ಟರ ಈ ಪೋಸ್ಟ್‌ಗೆ ಬಂದಿರುವ ಕಾಮೆಂಟ್ಸ್‌ಗಳಲ್ಲಿ ಕೆಲವು ಇಲ್ಲಿವೆ ನೋಡಿ.. 

ಕಾಯುತ್ತಿವೆ ಅದೆಷ್ಟೋ ಕಾದಿರೋ ಮನಸೆಂಬ ಸೌದೆ ಒಲೆಯ ಅಂಚುಗಳು ಆ ಭಾವನೆಗಳ ದೋಸೆ ಆಸ್ವಾದಿಸಲು ಬರಲಿ ಭಟ್ಟರ ಬತ್ತಳಿಕೆ ಇಂದ mysore masala ದೋಸೆ 🙌❤️

ಯೋಗ ಇದ್ದಲ್ಲಿ ಜಯ ಇದ್ದೆ ಇರುತ್ತೆ ಸರ್

ಯೋಗರಾಜ್ ಭಟ್ ಸರ್, ನೀವು ಬಣ್ಣದ ಕಲ್ಲಾದರೆ, ಜಯಂತ್ ಕಾಯ್ಕಿಣಿ ಅವರು ಮೃದುವಾದ ನೀರು. ನೀವು ಇಬ್ಬರೂ ಒಂದಾದಾಗ ಮೂಡುವ ವಿನ್ಯಾಸವೇ ನಮಗೆ ಅತ್ಯದ್ಭುತ ಸಾಹಿತ್ಯ. ಅದು ಕೇವಲ ಪದಗಳ ಸಂಗಮವಲ್ಲ, ಭಾವನೆ ಮತ್ತು ಕಲ್ಪನೆಯ ಅಪೂರ್ವ ಮಿಲನ. ಅದು ಕೇವಲ ಪದಗಳ ಸಂಗಮವಲ್ಲ, ಭಾವನೆ ಮತ್ತು ಕಲ್ಪನೆಯ ಅಪೂರ್ವ ಮಿಲನ.❤️

ಪೋಸು ಕೊಡಬೇಡಿ ಸರ್. ಹಾಡು ಕೊಡಿ. ಎಲ್ಲಿ ಮನಸಾರೆ? ಎಲ್ಲಿ ಪಂಚರಂಗಿ? ಎಲ್ಲಿ ಪರಮಾತ್ಮ? ಹಾಡಿಗಾಗಿ ಕಾಯುವ ಕಾಲ ಸತ್ತುಹೋಯಿತೆ? ಏನೇನೊ ಮಾಡಬೇಕೆಂಬ ನಮ್ಮ ಕನಸಿಗೆ ನೂರಾ ಎಂಟು ಬ್ಯಾರಿಕೇಡ್! ಬೇಗ ಏನಾದರೂ ಕೇಳಿಸಿ ಸರ್. ನಿಮ್ಮಿಬ್ಬರಿಂದ ಅರ್ಧ ನನ್ನ ಜೀವನ ಹಾಳಾಗಿದೆ.

ಇನ್ನೂ ಸಾಕಷ್ಟಿವೆ, ಭಟ್ಟರ ಅಕೌಂಟ್‌ಗೆ ಹೋಗಿ ನೋಡಿ, ಎಂಜಾಯ್ ಮಾಡಿ..