MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Darshan: 'ಬರ್ತಾ ಇದೀನಿ ಚಿನ್ನ..' ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!

Darshan: 'ಬರ್ತಾ ಇದೀನಿ ಚಿನ್ನ..' ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟ ದರ್ಶನ್!

Kannada Movie OTT Release: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಸಂತಸದ ಸುದ್ದಿ ಸಿಕ್ಕಿದೆ.

2 Min read
Author : Govindaraj S
Published : Jun 20 2026, 05:53 PM IST
Share this Photo Gallery
  • FB
  • TW
  • Linkdin
  • Whatsapp
15
ಸಂತಸದ ಸುದ್ದಿ
Image Credit : AI

ಸಂತಸದ ಸುದ್ದಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಇದೀಗ ಒಂದು ಸಂತಸದ ಸುದ್ದಿ ಸಿಕ್ಕಿದೆ. ಸದ್ಯ ಜೈಲಿನಲ್ಲಿರುವ ದರ್ಶನ್ ಅವರ ಬಹುನಿರೀಕ್ಷಿತ ‘ಡೆವಿಲ್’ ಸಿನಿಮಾ ಶೀಘ್ರದಲ್ಲೇ ಒಟಿಟಿ ಹಾಗೂ ಕಿರುತೆರೆಗೆ ಕಾಲಿಡಲು ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಿರೀಕ್ಷೆಗೆ ತೆರೆ
Image Credit : instagram

ನಿರೀಕ್ಷೆಗೆ ತೆರೆ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಡೆವಿಲ್’ ಸಿನಿಮಾ, ದರ್ಶನ್ ಜೈಲಿನಲ್ಲಿದ್ದ ಸಂದರ್ಭದಲ್ಲೇ ಪ್ರೇಕ್ಷಕರ ಮುಂದೆ ಬಂದಿತ್ತು. ಹಲವು ಕಾರಣಗಳಿಂದ ಚಿತ್ರದ ಮೇಲೆ ಭಾರೀ ನಿರೀಕ್ಷೆ ಇದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸಾಧಾರಣ ಯಶಸ್ಸು ದಾಖಲಿಸಿತ್ತು. ಬಿಡುಗಡೆಯಾಗಿ ಆರು ತಿಂಗಳು ಕಳೆದರೂ ಯಾವುದೇ ಒಟಿಟಿ ವೇದಿಕೆ ಅಥವಾ ಟಿವಿ ಚಾನೆಲ್‌ನಲ್ಲಿ ಸಿನಿಮಾ ಪ್ರಸಾರವಾಗಿರಲಿಲ್ಲ. ಇದೀಗ ಆ ನಿರೀಕ್ಷೆಗೆ ತೆರೆಬಿದ್ದಿದೆ.

Related Articles

Related image1
Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!
Related image2
Darshan Coming: ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿರುವ ದರ್ಶನ್; ಸಕಲ ಸಿದ್ಧತೆ ಆಗಿದೆ, ಬರೋದಷ್ಟೇ ಬಾಕಿ!
35
ವಿಶೇಷ ಪೋಸ್ಟ್
Image Credit : Youtube

ವಿಶೇಷ ಪೋಸ್ಟ್

ಪ್ರಮುಖ ಡಿಜಿಟಲ್ ವೇದಿಕೆ ಜೀ5 ‘ಡೆವಿಲ್’ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿದ್ದು, ಸಿನಿಮಾವನ್ನು ಒಟಿಟಿ ಹಾಗೂ ಕಿರುತೆರೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತು ಜೀ5 ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ಅದರಲ್ಲಿ ದರ್ಶನ್ ಅವರ ಜನಪ್ರಿಯ ಡೈಲಾಗ್‌ಗಳಲ್ಲೊಂದಾದ, 'ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ... ಬರ್ತಾ ಇದೀನಿ ಚಿನ್ನ' ಎಂಬ ಸಾಲನ್ನು ಬಳಸುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

45
ಮತ್ತೆ ಜೈಲು
Image Credit : Youtube

ಮತ್ತೆ ಜೈಲು

‘ಡೆವಿಲ್’ ಸಿನಿಮಾ ನಿರ್ಮಾಣದ ಹಂತದಲ್ಲೇ ಹಲವು ಅಡೆತಡೆಗಳನ್ನು ಎದುರಿಸಿತ್ತು. 2024ರಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ದರ್ಶನ್ ಬಂಧನವಾಗಿದ್ದರು. ಪರಿಣಾಮ ಚಿತ್ರದ ಕೆಲಸಗಳು ವಿಳಂಬಗೊಂಡಿದ್ದವು. ಬಳಿಕ ಕರ್ನಾಟಕ ಹೈಕೋರ್ಟ್‌ನಿಂದ ಜಾಮೀನು ಪಡೆದ ದರ್ಶನ್, ಉಳಿದ ಚಿತ್ರೀಕರಣ ಹಾಗೂ ಡಬ್ಬಿಂಗ್ ಪೂರ್ಣಗೊಳಿಸಿದ್ದರು. ಆದರೆ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಅವರು ಮತ್ತೆ ಜೈಲು ಸೇರಿದ್ದರು.

55
ಪ್ರೇಕ್ಷಕರ ಮುಂದೆ ಬರಲು ಸಜ್ಜು
Image Credit : Youtube

ಪ್ರೇಕ್ಷಕರ ಮುಂದೆ ಬರಲು ಸಜ್ಜು

ದರ್ಶನ್ ಜೈಲಿನಲ್ಲಿದ್ದಾಗಲೇ ಬಿಡುಗಡೆಯಾದ ‘ಡೆವಿಲ್’ ಚಿತ್ರದ ಪ್ರಚಾರದ ಹೊಣೆಗಾರಿಕೆಯನ್ನು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತರು ಹೊತ್ತುಕೊಂಡಿದ್ದರು. ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಿದ್ದು, ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯಲು ಪ್ರಯತ್ನಿಸಿತ್ತು. ಈಗ ಒಟಿಟಿ ಹಾಗೂ ಟಿವಿ ಬಿಡುಗಡೆಯ ಮೂಲಕ ‘ಡೆವಿಲ್’ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು, ದರ್ಶನ್ ಅಭಿಮಾನಿಗಳು ಚಿತ್ರದ ಡಿಜಿಟಲ್ ರಿಲೀಸ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ದರ್ಶನ್ ತೂಗುದೀಪ
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಓಟಿಟಿ

Latest Videos
Recommended Stories
Recommended image1
‘Rolex’ಗೆ ಮರಿ ಟೈಗರ್ ಎಂಟ್ರಿ: ಮೊದಲ ಬಾರಿಗೆ ಒಂದಾದ ಕೋಮಲ್-ವಿನೋದ್ ಪ್ರಭಾಕರ್
Recommended image2
Now Playing
22 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
Recommended image3
Su From So ದಿನವೇ ರಿಲೀಸ್ ಆಗುತ್ತಿರುವ ‘ಕರಾವಳಿ’: ಇದ್ರ ಹಿಂದೆ ಇರುವ ಸೀಕ್ರೆಟ್ ಏನು?
Related Stories
Recommended image1
Darshan ಕೇಸ್‌ನಲ್ಲಿ ಕೋರ್ಟ್ ನೀಡಿದ ಹೊಸ ಸೂಚನೆ ಏನು? ಅಭಿಮಾನಿಗಳಲ್ಲಿ ಆತಂಕ!
Recommended image2
Darshan Coming: ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿರುವ ದರ್ಶನ್; ಸಕಲ ಸಿದ್ಧತೆ ಆಗಿದೆ, ಬರೋದಷ್ಟೇ ಬಾಕಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved