ಸಿನಿಮಾ ಹುಡ್ಗೀರಿಗೆ ವಯಸ್ಸಾಗೋದೇ ಇಲ್ಲ. ಅಥವಾ ಒಂದು ಏಜ್ಗೇ ನಿಂತು ಹೋಗಿರುತ್ತದೆ. ಆದ್ರೂ ಮದ್ವೆ ಅನ್ನೋದೊಂದು ಆಗ್ಬೇಕಲ್ವಾ ಅಂತ ಅನುಷ್ಕಾ, ಪ್ರಿಯಾಂಕಾ ಮೊದಲಾದವರು ಸಪ್ತಪದಿ ತುಳಿದರು. ಇನ್ನುಳಿದ ಮೋಸ್ಟ್ ಎಲಿಜಬಲ್ ಬ್ಯಾಚ್ಯುಲರ್ ಲೇಡೀಸ್ ಮದ್ವೆ ಬಗ್ಗೆ ಕಮಕ್ ಕಿಮಕ್ ಅಂತಿಲ್ವಲ್ಲಾ ಅಂತ ಹಲವು ಬ್ಯಾಚ್ಯುಲರ್ಸ್ ತಲೆ ಕೆರೆದುಕೊಂಡದ್ದೇ ಬಂತು, ಈ ಹುಡುಗೀರು ಮದ್ವೆ ಯಾವಾಗ ಆಯ್ತೀಯವ್ವಾ ಅಂದ್ರೆ, ಲೆಟ್ ಅಸ್ ಸೀ ಅಂತ ಚೂಪು ನೋಟ ಬೀರುತ್ತಾರೆ. ಇದು ಹುಡುಗರ ತಳಮಳ ಹೆಚ್ಚಿಸಿದೆ. ಅಂಥಾ ದಕ್ಷಿಣ ಭಾರತೀಯ ತಾರೆಯರು ಇವರು.

ಅನುಷ್ಕಾ ಶೆಟ್ಟಿ
ವಯಸ್ಸು ಭರ್ತಿ 38 ವರ್ಷ. 2005ರಿಂದ ಸಿನಿಮಾ ಫೀಲ್ಡ್‌ನಲ್ಲಿದ್ದಾರೆ. ಅರುಂಧತಿ ಅನ್ನಿ, ದೇವಸೇನಾ ಅನ್ನಿ ಅಥವಾ ಇನ್ಯಾವುದೇ ಪಾಪ್ಯುಲರ್ ಪಾತ್ರಗಳ ಮೂಲಕ ಗುರುತಿಸಿ, ಈ ಹುಡುಗಿ ಹಿರಿಮೆ ಹೆಚ್ಚುತ್ತಲೇ ಹೋಗುತ್ತೆ. ಕನ್ನಡದಲ್ಲಿ ಅಮ್ಮನಿಗೆ ಭಾವನಾತ್ಮಕ ಲೆಟರ್ ಬರೆಯೋ ಈ ಮುದ್ದು ಚೆಲುವೆ ಮದ್ವೆಯಂಥಾ ವಿಚಾರವನ್ನು ಯಾಕಷ್ಟು ಸೀರಿಯಸ್ ಆಗಿ ತಗೊಂಡಿಲ್ವೋ ದೇವರೇ ಬಲ್ಲ. ಪ್ರಭಾಸ್ ಜೊತೆಗೆ ಈಕೆಯ ಹೆಸರು ಕೇಳಿ ಬರುತ್ತಿತ್ತು. ಮತ್ಯಾರೋ ಬ್ಯುಸಿನೆಸ್ ಮೆನ್ ನ ಮದುವೆ ಆಗ್ತಾಳೆ ಅನ್ನೋ ಸುದ್ದಿ ಹಾರಾಡ್ತು, ನಿರ್ಮಾಪಕರೊಬ್ಬರಿಗೆ ಮಾರು ಹೋಗಿದ್ದಾಳೆ ಅಂದ್ರು, ಇದ್ಯಾವುದಕ್ಕೂ ಅನುಷ್ಕಾ ಏನೂ ಹೇಳಲಿಲ್ಲ. ಮೋಸ್ಟ್ ಎಲಿಜೆಬಲ್ ಬ್ಯಾಚ್ಯುಲರ್ ಹುಡುಗಿಯಾಗಿಯೇ ಉಳಿದಳು.

ಸಂಜನಾ - ರಾಗಿಣಿ ನಡುವೆ ಜಗಳ ಶುರುವಾಗುವುದಕ್ಕೆ ಇಲ್ಲಿದೆ 10 ಕಾರಣಗಳು! 
ರಮ್ಯಾ
ಬಹುಶಃ ಈಕೆಯ ಹೆಸರೇ ಮೊದಲಿಗೆ ಬರಬೇಕಿತ್ತೋ ಏನೋ. ಸ್ಯಾಂಡಲ್ ವುಡ್ ನ ಸಖತ್ ಡೇರಿಂಗ್ ಗರ್ಲ್ ಯಾರಿಗೂ ಕ್ಯಾರೇ ಅಂದವಳಲ್ಲ. ಖಡಕ್ ಹುಡ್ಗಿ, ಕೊಬ್ಬು ಜಾಸ್ತಿ ಹೇಳಿದ್ರೂ ರಮ್ಯಾನ ಬಿಟ್ಟು ಹಾಕಲಿಕ್ಕೆ ಬರಲಿಲ್ಲ. ಆಕೆಗೆ ಬೇಡಿಕೆ ಹೆಚ್ಚುತ್ತಲೇ ಹೋಯ್ತು. ಆಮೇಲೆ ರಾಜಕೀಯಕ್ಕೆ ಹೋಗಿ ಸಂಸದೆಯಾಗಿ ಬಿಳಿ ಸೀರೆ ಉಟ್ಟು ಪಾಲಿರ್ಮೆಂಟ್‌ನಲ್ಲಿ ಓಡಾಡಿದಳು. ಈಕೆ ರಾಹುಲ್ ಗಾಂಧಿಯನ್ನೇ ಮದ್ವೆ ಆಗ್ತಾಳೆ ಅನ್ನೋ ಮಾತೂ ಕೇಳಿಬಂತು. ಆದ್ರೆ ರಮ್ಯಾ ಡೋಂಟ್ ಯು ನೋ, ಐ ಆಮ್ ವೆರಿ ಸೆಕ್ಸಿ ಅನ್ನುತ್ತಾ ಮತ್ತೆ ಸ್ಯಾಂಡಲ್ ವುಡ್ ಬಾಗಿಲ ಬಳಿ ಇದ್ದಾಳೆ. ಅವಳಿಗೆ ಕಾಂಪಿಟೀಟರ್ ಆಗಿದ್ದ ರಕ್ಷಿತಾ ಮದ್ವೆ, ಮಗು ಎಲ್ಲ ಆಗಿ ನಿರ್ಮಾಪಕಿ ಅನಿಸಿಕೊಂಡಿದ್ದಾರೆ. ಈಕೆಯ ನಂತರ ಬಂದ ರಾಧಿಕಾ ಪಂಡಿತ್‌ಗೂ ಎರಡೆರಡು ಮಕ್ಕಳಾಗಿವೆ. ರಮ್ಯಾ ಮತ್ತೆ ದರ್ಶನ್ ಜೊತೆ ಡ್ಯುಯೆಟ್ ಹಾಡಲು ರೆಡಿ ಆಗ್ತಿದ್ದಾಳೆ.

ಸನ್ನಿ ಲಿಯೋನ್ ಖರೀದಿಸಿದ ಮಸರಾಟಿ ಘಿಬ್ಲಿ ಕಾರಿನ ವಿಶೇಷತೆ ಏನು? 

ನಯನತಾರ
ಪ್ರಭುದೇವ ಈಕೆಯ ಸೌಂದರ್ಯಕ್ಕೆ ಹುಚ್ಚನಾಗಿ ಹೆಂಡ್ತಿ ಮಕ್ಕಳನ್ನು ಬಿಟ್ಟು ಈಕೆ ಹಿಂದೆ ಬಿದ್ದ. ನಂತರವೂ ಒಂದಿಷ್ಟು ಜನ ಈಕೆಯ ಜೊತೆಗೆ ಓಡಾಡಿದ್ದಾಯ್ತು. ಆದರೆ ತೆಳ್ಳನೆಯ ಬಳುಕುವ 36ರ ಈ ಹೆಣ್ಮಗಳಿಗೆ ಅವರ್ಯಾರನ್ನೂ ಲೈಫ್‌ ಪಾರ್ಟನರ್ ಮಾಡ್ಕೊಳ್ಬೇಕು ಅಂತ ಅನಿಸಲೇ ಇಲ್ಲ. ಡಯಾನಾ ಮರಿಯಂ ಕುರಿಯನ್ ಅಂದ್ರೆ ಯಾರಿಗೂ ಗೊತ್ತಾಗ್ಲಿಕ್ಕಿಲ್ಲ. ಇದು ಇವಳ ಮೊದಲ ಹೆಸರು. ಕೋಟಿಗಟ್ಟಲೆ ಹಣ, ಆಸ್ತಿ ಇರೋ ಈಕೆ ಸದ್ಯಕ್ಕೆ ಈಗ ವಿಘ್ನೇಶ್ ಶಿವನ್ ಎಂಬ ಡೈರೆಕ್ಟರ್ ಜೊತೆಗೆ ರಿಲೇಶನ್ ಶಿಪ್‌ನಲ್ಲಿದ್ದಾಳೆ. ಆತನ ಜೊತೆಗೇ ಓಣಂ ಸೆಲೆಬ್ರೇಟ್ ಮಾಡಿದ್ದಾಳೆ. ಮುಂದೆ ಈತನನ್ನೇ ಮದುವೆ ಆಗ್ತಾಳಾ ಅಥವಾ ಈತನನ್ನೂ ಉಳಿದವರಂತೆ ಕುರಿ ಮಾಡ್ತಾಳಾ ಅನ್ನೋದು ದೇವ್ರಿಗೇ ಗೊತ್ತು.

ಕೃತಿ ಸನೂನ್ ತಂಗಿ ನೂಪುರ್‌ ಫಿಟ್‌ನೆಸ್‌ ಡೈರಿ!