Asianet Suvarna News Asianet Suvarna News

Puneeth Rajkumar ಇಷ್ಟಪಟ್ಟಿದ್ದ 'ಫ್ಯಾಮಿಲಿ ಪ್ಯಾಕ್' ಚಿತ್ರದ ಟ್ರೇಲರ್​ ರಿಲೀಸ್!

ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಫ್ಯಾಮಿಲಿ ಪ್ಯಾಕ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್‌ನಲ್ಲಿ ಕಾಮಿಡಿ ಸಖತ್ ಹೈಲೈಟ್​ ಆಗಿದೆ.

Likith Shetty Amrutha Iyengar Starrer Family Pack Trailer Out gvd
Author
Bangalore, First Published Feb 10, 2022, 8:19 PM IST | Last Updated Feb 10, 2022, 8:19 PM IST

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar) ಪಿಆರ್​ಕೆ ಸಂಸ್ಥೆಯನ್ನು (PRK Production) ಸ್ಥಾಪಿಸಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಇದೀಗ ಅವರ ನಿರ್ಮಾಣದ ಮೂರು ಚಿತ್ರಗಳು ಒಂದರ ಹಿಂದೆ ಒಂದರಂತೆ ಅಮೆಜಾನ್​ ಪ್ರೈಮ್‌ನಲ್ಲಿ (Amazon Prime)  ರಿಲೀಸ್​ ಆಗುತ್ತಿದೆ. ಇತ್ತೀಚೆಗಷ್ಟೇ ಅವರ ನಿರ್ಮಾಣದ 'ಒನ್​ ಕಟ್​ ಟೂ ಕಟ್​' ಚಿತ್ರ ಬಿಡುಗಡೆಯಾಗಿತ್ತು. ಇದೀಗ ಲಿಖಿತ್ ಶೆಟ್ಟಿ (Likith Shetty), ಅಮೃತಾ ಅಯ್ಯಂಗಾರ್ (Amrutha Iyengar) ಮತ್ತು ರಂಗಾಯಣ ರಘು (Rangayana Raghu) ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಫ್ಯಾಮಿಲಿ ಪ್ಯಾಕ್’ (Family Pack) ಚಿತ್ರದ ಟ್ರೇಲರ್ (Trailer) ಬಿಡುಗಡೆಯಾಗಿದೆ.

'ಫ್ಯಾಮಿಲಿ ಪ್ಯಾಕ್' ಟ್ರೈಲರ್​ನಲ್ಲಿ ನಮಗೆ ಅಭಿ ಎನ್ನುವ ವ್ಯಕ್ತಿಯನ್ನು ಪರಿಚಯಿಸುತ್ತದೆ, ಎಲ್ಲಾ ಭರವಸೆ ಮತ್ತು ಬದುಕುವ ಇಚ್ಛೆಯನ್ನು ಕಳೆದುಕೊಂಡಿರುವ ಹುಡುಗನಿಗೆ ಹೊಸ ಜೀವನವನ್ನು ನೀಡುವ ಅಮಾನುಷ ಶಕ್ತಿ ಎದುರಾಗುವ ಅವಕಾಶವಿದೆ. ಆದರೆ ಶಕ್ತಿ ತಮ್ಮ ಜೀವನ ಮತ್ತು ಹಣೆಬರಹಗಳು ಆಳವಾದ ಮಟ್ಟದಲ್ಲಿ ಹೆಣೆದುಕೊಂಡಿವೆ ಎಂದು ತಿಳಿದುಕೊಂಡಾಗ ವಿಷಯ ಜಟಿಲವಾಗುತ್ತವೆ. ಒಬ್ಬ ಹುಡುಗ ಜೀವನದ ಬಗ್ಗೆ ಎಲ್ಲಾ ಆಶಯಗಳನ್ನು ಕಳೆದುಕೊಂಡಿರುತ್ತಾನೆ. ಆದರೆ ಈ ಅಮಾನುಷ ಶಕ್ತಿಯೊಂದು ಅವನಿಗೆ ಹೊಸ ಬದುಕನ್ನು ಕಲ್ಪಿಸಿಕೊಡುತ್ತದೆ. ವಿಚಿತ್ರ ತಿರುವು ಸಿಗುವುದು ಇಲ್ಲಿಯೇ.

Puneeth Rajkumar ಕನಸಿನ 'ಒನ್‌ ಕಟ್ ಟು ಕಟ್' ಸಿನಿಮಾ ರಿಲೀಸ್ ಡೇಟ್ ಘೋಷಿಸಿದ ಅಮೆಜಾನ್‌ ಪ್ರೈಮ್

'ಫ್ಯಾಮಿಲಿ ಪ್ಯಾಕ್' ಚಿತ್ರದ ಬಿಡುಗಡೆಯ ಕುರಿತು ನಿರ್ದೇಶಕ ಅರ್ಜುನ್ ಕುಮಾರ್.ಎಸ್ (Arjun Kumar S), 'ಫ್ಯಾಮಿಲಿ ಪ್ಯಾಕ್‌ನಂತಹ ಹಗುರವಾದ ಕಥೆಯನ್ನು ಪ್ರೈಮ್ ವಿಡಿಯೋಗೆ ತರಲು ನನಗೆ ಸಂತೋಷವಾಗಿದೆ. ಚಲನಚಿತ್ರವು ಹಾಸ್ಯ ಮತ್ತು ನಾಟಕದ ಪರಿಪೂರ್ಣ ಮಿಶ್ರಣವಾಗಿದೆ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕಿಸಬಹುದಾದ ಸುಂದರವಾದ ಕ್ಷಣಗಳಿಂದ ತುಂಬಿದೆ. ನಟರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಚಿತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಈ ಪ್ರಯತ್ನವು ಪರದೆಯ ಮೇಲೆ ಪ್ರತಿಫಲಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಭಾರತದಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ನಮ್ಮ ಚಿತ್ರದ ಬಿಡುಗಡೆಗಾಗಿ ನಾವು ಎದುರು ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

Likith Shetty Amrutha Iyengar Starrer Family Pack Trailer Out gvd

ನಟ ರಂಗಾಯಣ ರಘು ಮಾತನಾಡಿ 'ಫ್ಯಾಮಿಲಿ ಪ್ಯಾಕ್ ನನಗೆ ಒಂದು ಹೊಸ ಆಯಮಾವನ್ನು ತಂದುಕೊಟ್ಟಿದೆ. ಕೇವಲ ಸಿನಿಮಾಗೆ ಸಿಕ್ಕ ಅವಕಾಶ ಮಾತ್ರವಲ್ಲದೇ , ನನ್ನನ್ನು ಬಹಳ ವ್ಯತ್ಯಾಸವಾಗಿ ಹೊಸ ಮುಖದ ನಟನಾಗಿ ಪರಿಚಯವನ್ನು ಇದು ಮಾಡಿದೆ. ಅತಿಮಾನುಷ ಶಕ್ತಿಯಾಗಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಮುಟ್ಟುವುದು ಒಂದು ರೀತಿಯಲ್ಲಿ ಛಲದ ಕೆಲಸ. ಫ್ಯಾಮಿಲಿ ಪ್ಯಾಕ್ ಒಂದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಮತ್ತು ಉತ್ತಮ ಮನೋರಂಜನೆಯನ್ನು ನೀಡುತ್ತದೆ ಎಂಬ ಆಶಯ ನಂಗಿದೆ' ಎಂದು ಹೇಳಿದ್ದಾರೆ. ವಿಶೇಷವಾಗಿ ಈ ಚಿತ್ರದ ಕಥೆಯನ್ನು ಕೇಳಿದ್ದ ಪುನೀತ್ ರಾಜ್​ಕುಮಾರ್ ಬಹಳ ಇಷ್ಟಪಟ್ಟಿದ್ದರಂತೆ. 

ಕೆ.ಎಂ. ಚೈತನ್ಯ ನಿರ್ದೇಶನದ ಕಾಮಿಡಿ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್

ಇನ್ನು 'ಫ್ಯಾಮಿಲಿ ಪ್ಯಾಕ್' PRK ಪ್ರೊಡಕ್ಷನ್‌ನೊಂದಿಗೆ ಪ್ರೈಮ್ ವೀಡಿಯೊದ ಇತ್ತೀಚಿನ ಮೂರು ಚಲನಚಿತ್ರಗಳ ಪ್ರಕಟಣೆಯ ಭಾಗವಾಗಿದೆ, ಇದು ಪ್ರಪಂಚದಾದ್ಯಂತದ ಪ್ರೈಮ್​ ಸದಸ್ಯರಿಗೆ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಮೂರು ಚಲನಚಿತ್ರಗಳ ಘೋಷಣೆಯು ದಿವಂಗತ ನಟ ಮತ್ತು ಚಲನಚಿತ್ರ ನಿರ್ಮಾಪಕ ಪುನೀತ್ ರಾಜ್‌ಕುಮಾರ್ ಅವರ ಕಲೆ ಮತ್ತು ಪರಂಪರೆಯ ಮೇಲಿರುವ  ದ್ಯೋತಕವಾಗಿದ್ದು, ಸಿನಿಮಾ ಕ್ಷೇತ್ರಕ್ಕೆ ಅವರ ಕೊಡುಗೆಗೆ ಯಾವುದೇ ಸಾಟಿಯಿಲ್ಲ ಎಂಬುದು ಸಹ ಮುಖ್ಯವಾಗಿದೆ. 'ಫ್ಯಾಮಿಲಿ ಪ್ಯಾಕ್' ಚಿತ್ರವು ಫೆಬ್ರವರಿ 17 ರಂದು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ 240 ದೇಶಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಲಿದೆ. 
 

Latest Videos
Follow Us:
Download App:
  • android
  • ios