Asianet Suvarna News Asianet Suvarna News

ಕೆ.ಎಂ. ಚೈತನ್ಯ ನಿರ್ದೇಶನದ ಕಾಮಿಡಿ ಚಿತ್ರದಲ್ಲಿ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್

'ಪರಾರಿ' ಚಿತ್ರದ ನಂತರ ಕೆ.ಎಂ. ಚೈತನ್ಯ ಮತ್ತೆ ಕಾಮಿಡಿ ಸಿನಿಮಾ ಮಾಡುತ್ತಿದ್ದು,  ಹೆಸರಿಡದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಲಿಖಿತ್‌ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್‌ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

Likith Shetty and Amrutha Iyengar to frontline KM Chaitanya new Movie
Author
Bangalore, First Published Nov 5, 2021, 5:03 PM IST
  • Facebook
  • Twitter
  • Whatsapp

'ಪರಾರಿ' (Parari) ಚಿತ್ರದ ನಂತರ ಕೆ.ಎಂ. ಚೈತನ್ಯ (K.M.Chaitanya) ಮತ್ತೆ ಕಾಮಿಡಿ ಸಿನಿಮಾ ಮಾಡುತ್ತಿದ್ದು,  ಹೆಸರಿಡದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. 'ಫ್ಯಾಮಿಲಿ ಪ್ಯಾಕ್' (Family Pack) ಚಿತ್ರದಲ್ಲಿ ನಾಯಕ-ನಟಿಯಾಗಿ ಕಾಣಿಸಿಕೊಳ್ಳುತ್ತಿರುವ  ಲಿಖಿತ್‌ ಶೆಟ್ಟಿ (Likith Shetty) ಮತ್ತು ಅಮೃತಾ ಅಯ್ಯಂಗಾರ್‌ (Amrutha Iyengar) ಈ ಚಿತ್ರದಲ್ಲೂ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಲಯಾಳಂ ನಟಿ ಆನ ಅಗಸ್ಟಿನ್‌ ( Ann Augustine) ಈ ಚಿತ್ರದ ಕಥೆಯನ್ನು ಸಿನಿಮಾ ಮಾಡುವಂತೆ ಚೈತನ್ಯರಿಗೆ ಕೊಟ್ಟಿದ್ದಾರೆ.

'ಯುವಕರನ್ನು ಒಳಗೊಂಡಿರುವ ಕಾಮಿಡಿ ಸಿನಿಮಾ ಇದು. ಕಾಮಿಡಿ ಸಿನಿಮಾಗಳಲ್ಲಿ ನಟರು ಮತ್ತು ಸ್ಕ್ರಿಪ್ಟ್‌ ವರ್ಕ್‌ಗೆ ಬಹಳ ಪ್ರಾಮುಖ್ಯತೆ ಇರುತ್ತೆ. ಕೇವಲ ಟೆಕ್ನಿಕಲ್‌ ವರ್ಕ್‌ನಿಂದ ಜನರನ್ನು ನಗಿಸಲು ಸಾಧ್ಯವಿಲ್ಲ. ನಟ ಹೇಗೆ ನಟಿಸುತ್ತಾರೆ ಎನ್ನುವುದರ ಮೇಲೆ ಪ್ರೇಕ್ಷಕರು ನಗುತ್ತಾರೆ. ನಟರ ಜತೆ ಇಂಥ ಸಿನಿಮಾದಲ್ಲಿ ಕೆಲಸ ಮಾಡುವುದು ಚಾಲೆಂಜಿಂಗ್‌ ಕೆಲಸ. ನನಗೆ ಒಳ್ಳೆಯ ಟೀಮ್‌ ಸಿಕ್ಕಿದೆ. ಅಜಯ್‌ ರಾಜ್‌, ತನು ಆಚಾರ್‌, ಧನರಾಜ್‌ ಆಚಾರ್‌, ತಾಂಡವ್‌ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಶರತ್‌ ಲೋಹಿತಾಶ್ವ, ಅವಿನಾಶ್‌, ವಿಜಯ್ ಚೆಂಡೂರ್ ಸೇರಿದಂತೆ ಮತ್ತಿತರರು ನಟಿಸಿದ್ದಾರೆ.

'ವಿಂಡೋಸೀಟ್‌'ನಲ್ಲಿ ಸೌಂದರ್ಯದ ಮತ್ತೇರಿಸಿದ ಸಂಜನಾ-ಅಮೃತಾ

'ಪರಾರಿ' ಚಿತ್ರದ ನಂತರ ಮತ್ತೊಮ್ಮೆ ನಾನು ಮತ್ತು ಛಾಯಾಗ್ರಾಹಕ ಮನೋಹರ್ ಜೋಶಿ ( Manohar Joshi) ಈ ಕಾಮಿಡಿ ಚಿತ್ರವನ್ನು ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ, ಚಿತ್ರದಲ್ಲಿ ಯೂತ್‌ಫೂಲ್ ತಂಡ ಮತ್ತು ಈಗಾಗಲೇ ತುಮಕೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಹೆಚ್ಚು ಕಡಿಮೆ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನಿರ್ದೇಶಕ  ಚೈತನ್ಯ ಹೇಳಿದರು.

ಇನ್ನು, ಲಿಖಿತ್‌ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್‌ ಮುಖ್ಯಪಾತ್ರದಲ್ಲಿ ನಟಿಸಿರುವ 'ಫ್ಯಾಮಿಲಿ ಪ್ಯಾಕ್' ಚಿತ್ರವನ್ನು ಪುನೀತ್‌ ರಾಜ್‌ಕುಮಾರ್‌ (Puneeth Rajkumar) ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್‌ (PRK Productions) ಮೂಲಕ ನಿರ್ಮಿಸುತ್ತಿದ್ದಾರೆ. ಈ ಹಿಂದೆ 'ಸಂಕಷ್ಟಕರ ಗಣಪತಿ' (Sankashta Kara Ganapathi) ಸಿನಿಮಾ ನಿರ್ದೇಶಿಸಿದ್ದ ಅರ್ಜುನ್ ಕುಮಾರ್ (Arjun Kumar) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕಾಮಿಡಿ ಮನರಂಜನಾ ಚಿತ್ರವಾಗಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನ ಅನೇಕ ಕಡೆ ಮೂವತ್ತಕ್ಕೂ ಅಧಿಕ ದಿನಗಳು ನಡೆದಿದೆ. ಚಿತ್ರೀಕರಣ ನಂತರದ ಚಟುವಟಿಕೆಗಳು ಭರದಿಂದ ಸಾಗಿದೆ. 

ಪುನೀತ್ ರಾಜ್‌ಕುಮಾರ್ 'ಫ್ಯಾಮಿಲಿ ಫ್ಯಾಕ್' ಹೇಗಿರಲಿದೆ?

ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್, ಶರ್ಮಿತಾ ಗೌಡ, ಸಿಹಿಕಹಿ ಚಂದ್ರು,  ದತ್ತಣ್ಣ, ತಿಲಕ್, ನಾಗಭೂಷಣ್ ಸೇರಿದಂತೆ ಮುಂತಾದವರ ತಾರಾಬಳಗ ಚಿತ್ರಕ್ಕಿದೆ. ಗುರುಕಿರಣ್ ಸಂಗೀತ ನಿರ್ದೇಶನವಿರುವ  ಈ ಚಿತ್ರಕ್ಕೆ ಉದಯಲೀಲ ಹಾಗೂ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಹಾಗೂ  ದೀಪು ಎಸ್ ಕುಮಾರ್ ಅವರ ಸಂಕಲನವಿದೆ. ಮಾಸ್ತಿ ಸಂಭಾಷಣೆ ಈ ಚಿತ್ರಕ್ಕಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಹಾಗೂ ಲಿಖಿತ್ ಶೆಟ್ಟಿ 'ಫ್ಯಾಮಿಲಿ ಪ್ಯಾಕ್'ಗೆ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

Follow Us:
Download App:
  • android
  • ios