ವಿಜಯಲಕ್ಷ್ಮಿ ದರ್ಶನ್ ಅವರ ಈ ಹೊಸ ಪೋಸ್ಟ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಷ್ಟದ ಸಮಯದಲ್ಲಿ ದೇವರ ಮೇಲಿನ ನಂಬಿಕೆಯೇ ದೊಡ್ಡ ಶಕ್ತಿ ಎಂಬ ಸಂದೇಶವನ್ನು ಅವರು ಹಂಚಿಕೊಂಡಿರುವಂತಿದೆ. 'ಎಲ್ಲದಕ್ಕೂ ಒಂದು ಸಮಯವಿದೆ, ದೇವರ ಮೇಲೆ ಭರವಸೆ ಇರಲಿ' ಎಂಬ ಮಾತು ಹೇಳ್ತಿದೆ ನೋಡಿ!
ವೈರಲ್ ಆಯ್ತು ವಿಜಯಲಕ್ಷ್ಮೀ ದರ್ಶನ್ ಪೋಸ್ಟ್..
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಇದೀಗ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ವೈಯಕ್ತಿಕ ಜೀವನದಲ್ಲಿ ಎದುರಾಗಿರುವ ಹಲವು ಸವಾಲುಗಳ ನಡುವೆಯೂ ವಿಜಯಲಕ್ಷ್ಮಿ ದೇವರ ಮೊರೆ ಹೋಗುತ್ತಿದ್ದಾರಾ? ಆಧ್ಯಾತ್ಮದ ಮೂಲಕ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರಾ? ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಕಾರಣ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ಮತ್ತು ವಿಡಿಯೋ.
ಬೆಳಗ್ಗೆಯೇ ವಿಜಯಲಕ್ಷ್ಮಿ ದರ್ಶನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವಿಶೇಷ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಪಿನಲ್ಲಿ ಸುಂದರವಾಗಿ ಕಾಣಿಸಿಕೊಂಡಿರುವ ಅವರು, ಹಿನ್ನಲೆಯಲ್ಲಿ ಕಾಣುವ ಬೃಹತ್ ಶಿವನ ಪ್ರತಿಮೆಯ ಮುಂದೆ ಫೋಟೋಗೆ ಪೋಸ್ ನೀಡಿದ್ದಾರೆ. ಇದರ ಜೊತೆಗೆ ಶಿವನ ಧ್ಯಾನಕ್ಕೆ ಸಂಬಂಧಿಸಿದ ಹಾಡು ಮತ್ತು ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್ನಲ್ಲಿ ಎಲ್ಲರ ಗಮನ ಸೆಳೆದಿರುವುದು ಅವರು ಬರೆದಿರುವ ಒಂದೇ ಒಂದು ಸಾಲು.
'ನಿಮ್ಮ ಚಿಂತೆಗಳನ್ನ ಆತನಿಗೆ ಒಪ್ಪಿಸಿ, ಆತನ ಸಮಯವನ್ನು ನಂಬಿ!'
ಹೌದು, ವಿಜಯಲಕ್ಷ್ಮಿ ಅವರು ಇಂಗ್ಲಿಷ್ನಲ್ಲಿ 'Surrender your worries and trust his timing' ಎಂಬ ಸಂದೇಶವನ್ನು ಬರೆದುಕೊಂಡಿದ್ದಾರೆ. ಅಂದರೆ ನಿಮ್ಮೆಲ್ಲಾ ಚಿಂತೆಗಳನ್ನು ದೇವರಿಗೆ ಒಪ್ಪಿಸಿ, ಆತ ಎಲ್ಲವನ್ನೂ ಸರಿಯಾದ ಸಮಯದಲ್ಲಿ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಇಟ್ಟುಕೊಳ್ಳಿ ಎನ್ನುವುದು ಈ ಮಾತಿನ ಅರ್ಥ. ಈ ಸಾಲು ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ವಿಜಯಲಕ್ಷ್ಮಿ ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದ್ದಾರೆ? ಅವರ ಮನಸ್ಸಿನಲ್ಲಿ ನಡೆಯುತ್ತಿರುವ ವಿಚಾರಗಳೇನು? ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.
ಆತನ ಸಮಯ ನಂಬಿ ಎಂದಿದ್ದು ಮಹಾದೇವನ ಕುರಿತೇ?
ವಿಜಯಲಕ್ಷ್ಮಿ ಅವರ ಪೋಸ್ಟ್ನಲ್ಲಿರುವ ಫೋಟೋ ಗಮನಿಸಿದರೆ, ಅವರು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿರುವ ಬೃಹತ್ ಆದಿಯೋಗಿ ಶಿವನ ಪ್ರತಿಮೆಗೆ ಭೇಟಿ ನೀಡಿರುವುದು ತಿಳಿದುಬರುತ್ತದೆ. 112 ಅಡಿ ಎತ್ತರದ ಈ ಭವ್ಯ ಶಿವನ ಪ್ರತಿಮೆಯ ಮುಂದೆ ನಿಂತು ಫೋಟೋ ತೆಗೆಸಿಕೊಂಡಿರುವ ಅವರು, ಅಲ್ಲಿನ ಆಧ್ಯಾತ್ಮಿಕ ವಾತಾವರಣದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಶಿವನ ಧ್ಯಾನಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಪೋಸ್ಟ್ನಲ್ಲಿ ಕಾಣಿಸಿಕೊಂಡಿದ್ದು, ವಿಜಯಲಕ್ಷ್ಮಿ ಅವರ ಈ ಭೇಟಿ ಕೇವಲ ಪ್ರವಾಸದ ಭೇಟಿಯೇ ಅಥವಾ ಮನಸ್ಸಿನ ನೆಮ್ಮದಿಗಾಗಿ ಕೈಗೊಂಡ ಆಧ್ಯಾತ್ಮಿಕ ಪಯಣವೇ ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ 'ಆತನ ಸಮಯವನ್ನು ನಂಬಿ' ಎಂಬ ಸಂದೇಶದ ಮೂಲಕ ಮಹಾದೇವನ ಮೇಲಿನ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
ದರ್ಶನ್ಗಾಗಿ ದೇವರ ಮೊರೆ ಹೋಗುತ್ತಿದ್ದಾರಾ ವಿಜಯಲಕ್ಷ್ಮಿ?
ಇನ್ನು ವಿಜಯಲಕ್ಷ್ಮಿ ದರ್ಶನ್ ಅವರ ವೈಯಕ್ತಿಕ ಬದುಕಿನ ವಿಚಾರಗಳು ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಪತಿ ದರ್ಶನ್ ಅವರ ವಿಚಾರವಾಗಿ ಅವರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಜಯಲಕ್ಷ್ಮಿ ದೇವಸ್ಥಾನಗಳಿಗೆ ಭೇಟಿ ನೀಡುವುದು, ವಿಶೇಷ ಪೂಜೆ ಸಲ್ಲಿಸುವುದು ಮತ್ತು ದೇವರ ಮೊರೆ ಹೋಗುತ್ತಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಈ ಹಿಂದೆಯೂ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವ ವಿಚಾರಗಳು ಸುದ್ದಿಯಾಗಿದ್ದವು. ಇದೀಗ ಆದಿಯೋಗಿ ಶಿವನ ಸನ್ನಿಧಿಗೆ ಭೇಟಿ ನೀಡಿರುವುದು ಅವರ ಆಧ್ಯಾತ್ಮಿಕ ಒಲವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಆದರೆ ಈ ಪೋಸ್ಟ್ ಅನ್ನು ದರ್ಶನ್ ಅವರಿಗಾಗಿಯೇ ಹಂಚಿಕೊಂಡಿದ್ದಾರೆ ಅಥವಾ ನಿರ್ದಿಷ್ಟ ಸಮಸ್ಯೆಯನ್ನು ಉದ್ದೇಶಿಸಿ ಬರೆದಿದ್ದಾರೆ ಎಂದು ವಿಜಯಲಕ್ಷ್ಮಿ ಎಲ್ಲಿಯೂ ಸ್ಪಷ್ಟಪಡಿಸಿಲ್ಲ.
ಒಟ್ಟಿನಲ್ಲಿ, ವಿಜಯಲಕ್ಷ್ಮಿ ದರ್ಶನ್ ಅವರ ಈ ಹೊಸ ಪೋಸ್ಟ್ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಷ್ಟದ ಸಮಯದಲ್ಲಿ ದೇವರ ಮೇಲಿನ ನಂಬಿಕೆಯೇ ದೊಡ್ಡ ಶಕ್ತಿ ಎಂಬ ಸಂದೇಶವನ್ನು ಅವರು ಹಂಚಿಕೊಂಡಿರುವಂತಿದೆ. 'ಎಲ್ಲದಕ್ಕೂ ಒಂದು ಸಮಯವಿದೆ, ದೇವರ ಮೇಲೆ ಭರವಸೆ ಇರಲಿ' ಎಂಬ ಅವರ ಮಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ವಿಜಯಲಕ್ಷ್ಮಿ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ರಿಷಬ್ ಶೆಟ್ಟಿ ಬಳಿ ಡಾ. ರಾಜ್ಕುಮಾರ್ 'ಕೌನ್ ಹೈ' ರಹಸ್ಯ ಹೇಳಿದ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್!
















