Asianet Suvarna News Asianet Suvarna News

Puneeth Rajkumar ಕನಸಿನ 'ಒನ್‌ ಕಟ್ ಟು ಕಟ್' ಸಿನಿಮಾ ರಿಲೀಸ್ ಡೇಟ್ ಘೋಷಿಸಿದ ಅಮೆಜಾನ್‌ ಪ್ರೈಮ್

ಮುಂಬರುವ ಕನ್ನಡ ಕಾಮಿಡಿ ಡ್ರಾಮಾ ಸಿನಿಮಾ 'ಒನ್ ಕಟ್ ಟು ಕಟ್‌' ಪ್ರೀಮಿಯರ್ ದಿನಾಂಕವನ್ನು ಅಮೆಜಾನ್‌ ಪ್ರೈಮ್ ವೀಡಿಯೋ ಘೋಷಿಸಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಡ್ಯಾನಿಶ್ ಸೇಠ್‌ ಕಾಣಿಸಿಕೊಂಡಿದ್ದಾರೆ.

Amazon Prime Announces One Cut Two Cut Movie Release Date gvd
Author
Bangalore, First Published Jan 24, 2022, 4:05 PM IST

ಸ್ಯಾಂಡಲ್‌ವುಡ್‌ನ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರು ಬದುಕಿದಾಗ ತಮ್ಮ ಪಿಆರ್​ಕೆ ಬ್ಯಾನರ್ (PRK Banner) ಅಡಿ ಮೂರು ಸಿನಿಮಾಗಳ ನಿರ್ಮಾಣದ ಕನಸು ಕಂಡಿದ್ದರು. ಆದರೆ ಆ ಸಿನಿಮಾಗಳ ಪೈಕಿ 'ಒನ್ ಕಟ್ ಟು ಕಟ್' (One Cut Two Cut) ಎಂಬ ವಿಶೇಷ ಟೈಟಲ್ ಹೊಂದಿರುವ ಚಿತ್ರವನ್ನು ಪ್ರತಿಷ್ಠಿತ ಒಟಿಟಿಯಾದ 'ಅಮೆಜಾನ್‌ ಪ್ರೈಮ್ ವಿಡಿಯೋ'ದಲ್ಲಿ (Amazon Prime) ಬಿಡುಗಡೆ ಮಾಡಲಾಗುತ್ತಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ಡ್ಯಾನಿಶ್ ಸೇಠ್ (Danish Sait) ಇದ್ದಾರೆ. ಆಕರ್ಷಕ ಪೋಸ್ಟರ್‌ನಲ್ಲಿ, ಕಾಮಿಡಿ ಪಾತ್ರದಲ್ಲಿ ಗೋಪಿಯಾಗಿ ಡ್ಯಾನಿಶ್ ಸೇಠ್‌ ಕಾಣಿಸಿಕೊಂಡಿದ್ದಾರೆ. 

ವಿಡಂಬನೆಯ ಜೊತೆಗೆ ಕಾಮಿಡಿ ಮಾತಿನ ಮೂಲಕ ಅವರು ಮನಸೆಳೆಯಲಿದ್ದು, ಇದು 2022ರ ಫೆಬ್ರವರಿ 3 ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗಲಿದೆ. ವಂಶಿಧರ ಭೋಗರಾಜು (Vamsidhar Bhogaraju) ನಿರ್ದೇಶಿಸಿದ, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini Puneeth Rajkumar) ಮತ್ತು ಗುರುದತ್ತ ತಲ್ವಾರ್‌ (Gurudutta Talwar) ನಿರ್ಮಾಣದ ಸಿನಿಮಾ ಪಿಆರ್‌ಕೆ ಬ್ಯಾನರ್‌ನಲ್ಲಿದ್ದು, ಸಿನಿಮಾದಲ್ಲಿ ಪ್ರಕಾಶ್‌ ಬೆಳವಾಡಿ, ಸಂಯುಕ್ತ ಹೊರನಾಡ್‌, ವಿನೀತ್‌ ಬೀಪ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಪ್ರಮುಖ ಪಾತ್ರದಲ್ಲಿದ್ದಾರೆ. 

ಪುನೀತ್‌ ರಾಜ್‌ಕುಮಾರ್‌ ಅವರ ಪರಂಪರೆಯನ್ನು ಗೌರವಿಸುತ್ತಾ, 240 ದೇಶಗಳು ಮತ್ತು ಪ್ರದೇಶಗಳಾದ್ಯಂತ ಪ್ರಸಾರವಾಗಲಿರುವ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮೂರು ಸಿನಿಮಾಗಳ ಪೈಕಿ ಒನ್ ಕಟ್ ಟು ಕಟ್‌ ಒಂದಾಗಿದೆ. ಡ್ಯಾನಿಶ್‌ ಸೇಠ್‌ ಕಲಾ ಶಿಕ್ಷಕ ಗೋಪಿ ಪಾತ್ರ ನಿರ್ವಹಿಸುತ್ತಿದ್ದು, ಸಾಮಾಜಿಕ  ಮಾಧ್ಯಮದ ಹೋರಾಟಗಾರರು ಒತ್ತಾಯಾಳಾಗಿರಿಸಿಕೊಂಡ ಶಾಲೆಯನ್ನು ಉಳಿಸುವುದೇ ಅವರ ಕೆಲಸಕ್ಕೆ ಸೇರಿದ ಮೊದಲ ದಿನದ ಕೆಲಸವಾಗಿರುತ್ತದೆ. ವಿಶೇಷವಾಗಿ ಮನರಂಜನೆ ಜೊತೆಗೆ ಉತ್ತಮ ಸಂದೇಶ ಹೊಂದಿರುವ ಈ ಚಿತ್ರವನ್ನ ಅಪ್ಪು ತುಂಬಾ ಇಷ್ಟ ಪಟ್ಟಿದ್ದರಂತೆ.

PRK ಮೂರು ಹೊಸ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ; ಅಪ್ಪು 5 ಸಿನಿಮಾಗಳು ಉಚಿತ ಪ್ರಸಾರ!

ಇನ್ನು ಅಪ್ಪು ಪಿಆರ್‌ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮ್ಯಾನ್ ಆಫ್‌ ದಿ ಮ್ಯಾಚ್ (Man of the match), ಮತ್ತು ಫ್ಯಾಮಿಲಿ ಪ್ಯಾಕ್ (Family Pack) ಸಿನಿಮಾಗಳು ಎಕ್ಸಕ್ಲೂಸಿವ್ ಆಗಿ ಅಮೇಜಾನ್‌ ಪ್ರೈಮ್‌ನಲ್ಲಿ (Amazon Prime) ಬಿಡುಗಡೆ ಮಾಡಲಾಗುತ್ತಿದೆ. ಶೀಘ್ರವೇ ದಿನಾಂಕ ಅನೌನ್ಸ್ ಮಾಡಲಾಗುತ್ತದೆ. ಕನ್ನಡ ಸಿನಿಮಾ ರಂಗದ ಮೇರು ವ್ಯಕ್ತಿ ಪುನೀತ್‌ಗೆ ವಿನಮ್ರ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ, ಅವರ ಸ್ಮರಣೀಯ ಚಲನಚಿತ್ರಗಳನ್ನು ಪ್ರೈಮ್‌ ವೀಡಿಯೋ ಉಚಿತವಾಗಿ ಒದಗಿಸುತ್ತದೆ. 

ಕಾನೂನು (Law), ಫ್ರೆಂಚ್ ಬಿರಿಯಾನಿ (French Biryani), ಕವಲುದಾರಿ (Kavaludhari), ಮಾಯಾಬಜಾರ್ (Majabajar) ಮತ್ತು ಯುವರತ್ನ (Yuvarathna), ಫೆಬ್ರವರಿ 1 ರಿಂದ ಒಂದು ತಿಂಗಳವರೆಗೆ ಪ್ರೈಮ್ ಸದಸ್ಯರಲ್ಲದವರಿಗೂ ಉಚಿತವಾಗಿ ವೀಕ್ಷಿಸಲು ಲಭ್ಯವಿರುತ್ತದೆ. ಕೇವಲ ಪ್ರೈಮ್ ಸದಸ್ಯರಿಗೆ ಸೀಮಿತವಾಗಿಸದೆ, ಈ ಐದು ಚಲನಚಿತ್ರಗಳನ್ನು ಅಮೆಜಾನ್ ಖಾತೆಯನ್ನು ಹೊಂದಿರುವ ಯಾರಿಗಾದರೂ ವಿಶ್ವಾದ್ಯಂತ ಉಚಿತವಾಗಿ ಸ್ಟ್ರೀಮ್ ಮಾಡಲು ಅವಕಾಶ ನೀಡುವುದು ವಿಶಾಲವಾದ ಪ್ರೇಕ್ಷಕರು ಮತ್ತು ಅಭಿಮಾನಿಗಳು ಸಿನಿಮಾ ದಂತಕಥೆಗೆ ತಮ್ಮ ಪ್ರೀತಿ ಮತ್ತು ಗೌರವವನ್ನು ತೋರಿಸಲು ಒಂದು ಸಾಧಾರಣ ಪ್ರಯತ್ನವಾಗಿದೆ, ಎಂದು ಹೇಳಿದೆ ಅಮೇಜಾನ್ ಕಂಪನಿ. 

Puneeth Rajkumar: ಪಿಆರ್​ಕೆ ಬ್ಯಾನರ್‌ನಲ್ಲಿ ಶೈನ್​ ಶೆಟ್ಟಿ ಅಭಿನಯದ ಥ್ಯಾಂಕ್ಯೂ ಕಿರುಚಿತ್ರ ರಿಲೀಸ್

ಅಶ್ವಿನಿ ಮಾತು: 'ಪುನೀತ್ ರಾಜ್‌ಕುಮಾರ್ ಅವರ ವಿಭಿನ್ನ ದೃಷ್ಟಿಕೋನವು ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿತು, ಅವರಿಗೆ ಅರ್ಹವಾದ ಅಭಿಮಾನಿಗಳನ್ನು ಮತ್ತು ಗೌರವವನ್ನು ಇದು ಗಳಿಸಿತು. ಆ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಇದು ನಮ್ಮ ಪ್ರಯತ್ನ. ಪ್ರೈಮ್ ವೀಡಿಯೋ ಜೊತೆಗೆ ನಮ್ಮ ಯಶಸ್ವಿ ಒಡನಾಟ ಮತ್ತು ನಮ್ಮ ಚಲನಚಿತ್ರಗಳನ್ನು ಪ್ರಪಂಚದಾದ್ಯಂತದ ವೀಕ್ಷಕರಿಗೆ ಕೊಂಡೊಯ್ಯುವುದಕ್ಕೆ ನಮಗೆ ಹೆಮ್ಮೆ,' ಎಂದು ಅಶ್ವಿನಿ ಪುನೀತ್‌ ಇತ್ತೀಚೆಗೆ ತಿಳಿಸಿದ್ದಾರೆ.

Follow Us:
Download App:
  • android
  • ios