Asianet Suvarna News Asianet Suvarna News

ಲಾಕ್‌ಡೌನ್‌ನಿಂದ ನಿಜ ಜೀನವದಲ್ಲಿ ಡೆಲಿವರಿ ಬಾಯ್‌ ಆಗಿ ಬದಲಾದ ಖ್ಯಾತ ನಟ!

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿರುವ 'ಕವಲುದಾರಿ' ನಟ ಖಾಸಗಿ ವೆಬ್‌ಸೈಟ್‌ವೊಂದಕ್ಕೇ ಸಂದರ್ಶನ ನೀಡಿದ್ದು, ಆಶ್ಚರ್ಯಕರ ವಿಷಯವೊಂದನ್ನು ಬಹಿರಂಗೊಳಿಸಿದ್ದಾರೆ.

kavaludhari fame Siddarth Madyamika works as delivery boy during lockdown
Author
Bangalore, First Published May 16, 2020, 3:38 PM IST
  • Facebook
  • Twitter
  • Whatsapp

ಮಹಾಮಾರಿ ಕೊರೋನಾ ವೈರಸ್‌ ಜನರ ಬದುಕನ್ನೇ ಉಲ್ಟಾಪಲ್ಟಾ ಮಾಡಿದೆ. ಸಂಬಂಧಗಳ ಮೌಲ್ಯವನ್ನು ಹೆಚ್ಚಿಸಿ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಮಾಡಿದೆ.  ವೃತ್ತಿಯಲ್ಲಿ ಅನೇಕ ಬದಲಾವಣೆಗಳನ್ನು ತಂದು ಕೊಳ್ಳುವುದು ಅನಿವಾರ್ಯ ಎಂಬುದನ್ನು ತೋರಿಸಿದೆ. ಲಾಕ್‌ಡೌನ್‌ನಿಂದ ಆಗುತ್ತಿರುವ ನಷ್ಟವನ್ನು ಸುಧಾರಿಸಿಕೊಳ್ಳಲು ಅನೇಕ ಕಾರ್ಖಾನೆಗಳು ತಮ್ಮ ಕಾರ್ಮಿಕರನ್ನು ಕೆಲಸದಿಂದ ತೆಗೆಯುತ್ತಿವೆ. ಇದರ ಪರಿಣಾಮ ಅನೇಕರು ಬೇರೆ ಬೇರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇವರ ಪೈಕಿ ಈ ನಟನೂ ಸೇರಿಕೊಂಡಿದ್ದಾರೆ....

ನಟಿಯರ ಟಾಪ್‌ಲೆಸ್‌ ಲುಕ್; ಚಿತ್ರಕ್ಕಾಗಿ ಮಾಡಿದ್ದೆಲ್ಲವೂ ಲೀಕ್?

ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಸಿದ್ದಾರ್ಥ್‌ ಮಾಧ್ಯಮಿಕ, ಈಗ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದಾರಂತೆ! ಲ್ಯಾಬ್‌ ಟೆಕ್ನಿಷಿಯನ್‌ ವಿಷಯದಲ್ಲಿ ಡಿಪ್ಲೋಮಾ ಮಾಡಿರುವ ಸಿದ್ದಾರ್ಥ್‌ ನಟನಾ ಆಸಕ್ತಿಯಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ಕವಲುದಾರಿ, ಶುದ್ಧಿ, ಭಿನ್ನ ಹಾಗೂ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಲಾಕ್‌ಡೌನ್‌ನಿಂದ ಚಿತ್ರೀಕರಣ, ರಂಗಭೂಮಿ ಕಾರ್ಯಕ್ರಮಗಳು ರದ್ದಾಗಿದ್ದು, ಸಿದ್ಧಾರ್ಥ್‌ ತಮ್ಮಲ್ಲಿ ದುಡಿಯುವ ಸಾಮರ್ಥ್ಯ ಇರುವವರೆಗೂ ಯಾರ ಸಹಾಯ ಅಗತ್ಯವಿಲ್ಲ, ಎಂದು ಗೌರವದಿಂದ ಡೆಲಿವರಿ ಬಾಯ್‌ ಆಗಿ ಸಂಪಾದಿಸುತ್ತಿದ್ದಾರಂತೆ. ಲಾಕ್‌ಡೌನ್‌ ಪ್ರಾರಂಭ ಆಗುವ ಮೊದಲೆರಡು ದಿನಗಳ ಹಿಂದೆ ಕೆಲಸ ಆರಂಭಿಸಿದರು, ಲಾಕ್‌ಡೌನ್‌ ಮುಂದುವರಿದ ಕಾರಣ ಅದೇ ಕಾಯಕವನ್ನು ಮುಂದುವರೆಸಿದ್ದಾರೆ. 

ವಯಸ್ಸು 45 ದಾಟಿದ್ರೂ ಸಿತಾರಾ ಇನ್ನೂ ಸಿಂಗಲ್; ಏನಿವರ ಕಥೆ?

ನೀನಾಸಂ ಎಂಬ ಖ್ಯಾತ ರಂಗಭೂಮಿ ಶಾಲೆಯಲ್ಲಿ ಬೆಳೆದ ಸಿದ್ಧಾರ್ಥ್‌ಗೆ ಈ ಕೆಲಸ ಕಷ್ಟವಾಗುತ್ತಿಲ್ಲವಂತೆ. ಮಲೆನಾಡಿನ ಸಾಗರದ ಹೆಗ್ಗೋಡು ಎಂಬ ಹಳ್ಳಿಯಲ್ಲಿರುವ ನೀನಾಂಸ ಉದ್ದೇಶವೇ ಅದು. ರಂಗಭೂಮಿ ತರಬೇತಿಯೊಂದಿಗೆ, ಮನುಷ್ಯ ಸ್ವಾಭಿಮಾನದಿಂದ ಬದುಕು ರೂಪಿಸಲು ಈ ಶಾಲೆ ಹೇಳಿ ಕೊಡುತ್ತದೆ. ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಸುಬ್ಬಣ್ಣ ಅವರ ಕನಸಿನ ಈ ಶಾಲೆಯಲ್ಲಿ, ಸ್ಯಾಂಡಲ್‌ವುಡ್‌ನ ಅನೇಕ ನಟರು ರಂಗ ತರಬೇತು ಪಡೆದಿದ್ದಾರೆ. 

ಚಿತ್ರಕಥೆಯೂ ಸಿಕ್ಕಿದೆ:

ಸಿದ್ಧಾರ್ಥ ಅವರ ರೀತಿ ಅನೇಕ ಹುಡುಗಿಯರೂ ಫುಡ್‌ ಡೆಲಿವರಿ ಮಾಡುತ್ತಿದ್ದಾರಂತೆ. ಈ ಕೆಲಸ ಮಾಡುತ್ತಾ ಸಿದ್ಧಾರ್ಥ್‌ ಎಷ್ಟೋ ಸಿನಿಮಾಗಳಿಗೆ ಆಗುವಂಥ ಕಥೆ ಸಿಕ್ಕಿದೆ ಎನ್ನುತ್ತಾರೆ. ಅನೇಕ ಸಂಘಟನೆಗಳು ಕಲಾವಿದರಿಗೆ ಸಹಾಯ ಮಾಡಲು ಮುಂದಾಗಿವೆ. ಆದರೆ ಅದ್ಯಾವುದರ ಸಹಾಯ ಪಡೆದುಕೊಳ್ಳದೆ ಸಿದ್ಧಾರ್ಥ್‌, ತಮ್ಮ ಶ್ರಮದಲ್ಲಿಯೇ ಸ್ವಾಭಿಮಾನದಿಂದ ಬೆಳೆಯುತ್ತಿರುವುದು, ಕೈಯಲ್ಲಿ ಕಸುವಿದ್ದರೂ, ಸರಕಾರ  ಅಥವಾ ಸಂಘ ಸಂಸ್ಥಗಳು ಸಹಾಯಕ್ಕೆ ಮುಂದಾಗಲಿ ಎಂದು ಬಯಸುವ, ಇನ್ನೊಬ್ಬರ ಮುಂದೆ ಕೈವೊಡ್ಡುವ ಅನೇಕ ಕಲಾವಿದರಿಗೆ ಸ್ಪೂರ್ತಿ.

ನಲ್ಲೆ ಫೋಟೋ ಹಾಕಿದ್ದ ರಾಣಾಗೆ ಬೆತ್ತಲೆ ಪ್ರತಿಭಟನಾಕಾರ್ತಿ ಶ್ರೀರೆಡ್ಡಿ ಕಾಟ!

ಸ್ವಾಭಿಮಾನದಿಂದ, ಸ್ವತಂತ್ರವಾಗಿ ಜೀವನ ನಿರ್ವಹಿಸಲು  ಸ್ಯಾಂಡಲ್‌ವುಡ್ ಹಿರಿಯ ನಟ ಕೆ.ಎಸ್.ಅಶ್ವತ್ಥ್ ಅವರ ಪುತ್ರ ಶಂಕರ್ ಅಶ್ವತ್ಥ್ ಸಹ ಊಬರ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಕೆಲವೇ ವರ್ಷಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಶಂಕರ್, ಸ್ವಾಭಿಮಾನದಿಂದ ಬದುಕಲು ಈ ಮಾರ್ಗ ಕಂಡು ಕೊಂಡಿದ್ದೇನೆ, ಎಂದು ಹೇಳಿಕೊಂಡಿದ್ದರು. ಗಾಂಧೀಜಿ ಹೇಳಿದ್ದು ಅದೇ ತಾನೇ,  ಯಾವ ಕೆಲಸವಾದರೇನು, ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು. ಬಸವಣ್ಣನವರೂ ಅದೇ ಮಾತನ್ನು ಕಾಯಕವೇ ಕೈಲಾಸ ಎನ್ನುವ ಮೂಲಕ ದುಡಿಮೆಯ ಮಹತ್ವವನ್ನು ಸಾರಿ ಹೇಳಿದರು. ಒಟ್ಟಿನಲ್ಲಿ ಇನ್ನೊಬ್ಬರಿಗೆ ಭಾರವಾಗದೇ, ಕೈಯಲ್ಲಿ ಶಕ್ತಿ ಇರೋ ದಿನ ಮೈಯಲ್ಲಿ ಬೆವರು ಇಳಿಸಿ ದುಡಿಯಬೇಕೆಂಬುವುದು ಎಲ್ಲರ ದೃಢ ನಿಶ್ಚಯವಾಗಬೇಕು. ಆಗ ಮಾತ್ರ ಪ್ರಧಾನಿ ಮೋದಿ ಕರೆ ನೀಡಿದಂತೆ ಆತ್ಮ ನಿರ್ಬರ ಭಾರತ ಕಟ್ಟುವಲ್ಲಿ ನೆರವಾಗುವುದು ಗ್ಯಾರಂಟಿ.

ಅಂಥ ಕಾಯಕಕ್ಕೆ ಕೈ  ಹಾಕಿದ್ದಾರೆ ಸಿದ್ಧಾರ್ಥ. ಅವರಿಗೆ ಜೀವನದಲ್ಲಿ ಯಶಸ್ಸು ಸಿಗಲಿ. ಬಯಸಿದ್ದು ಸಿಗಲಿ. ದೇವರು ಆರೋಗ್ಯ ನೀಡಲೆಂದು ನಮ್ಮದೂ ಶುಭ ಹಾರೈಕೆ.

Follow Us:
Download App:
  • android
  • ios