ಕರ್ನಾಟಕ ಪೊಲಿಟಿಕ್ಸನಲ್ಲಿ ಡಿಕೆಶಿ ಅನ್ನೊ ಹೊಸ ಸುನಾಮಿ ಎದ್ದಿದೆ. ಇಷ್ಟು ದಿನ ಉಪ ಮುಖ್ಯಮಂತ್ರಿ ಆಗಿದ್ದ ಡಿಕೆ ಶಿವಕುಮಾರ್, ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ರಾಜಕಾರಣ ಅನ್ನೋ ಕಾರ್ಕೋಟಕವನ್ನ ಗಟ ಗಟ ಅಂತ ಕುಡಿದು ಅರಗಿಸಿಕೊಂಡಿರೋ ಕನಕಪುರದ ಬಂಡೆ ರಾಜಕಾರಣಕ್ಕೆ ಬರೋ ಮೊದಲು ಏನಾಗಿದ್ರು ಅಂತ ನೋಡಿದ್ರೆ ಅಲ್ಲಿ ಸಿಗೋದು ಸಿನಿಮಾ ನಂಟು!
ಫಿಲ್ಮ್ ಛೇಂಬರ್ಸದಸ್ಯ ರಾಜ್ಯದ ಚುಕ್ಕಾಣಿ ಹಿಡಿದಿದ್ದೇ ರೋಚಕ..!
ಡಾ ರಾಜ್ಕುಮಾರ್ ಭಕ್ತ.. ರಾಜ್ಫ್ಯಾಮಿಲಿ ಆಪ್ತ..!
ತಮಿಳುನಾಡು, ಆಂಧ್ರದಂತೆ ಆಯ್ತು ಕರ್ನಾಟಕ ರಾಜಕಾರಣ..!
ಸೌತ್ರಾಜಕಾರಣ ಈಗ ಸಿನಿಮಾ ರಂಗು ಪಡೆದಿದೆ. ಆಂಧ್ರ ರಾಜಕಾರಣಕ್ಕೆ ಹೋದ್ರೆ ಅಲ್ಲೂ ಸಿನಿಮಾ ಮಯ.. ತಮಿಳು ನಾಡು ಪೊಲಿಟಿಕ್ಸ್ ನೋಡಿದ್ರೆ ಅದಲ್ಲೂ ಬಣ್ಣದ ಹೊಳೆ. ಇದೀಗ ಕರ್ನಾಟಕ ರಾಜಕಾರಣಕ್ಕೂ ಸಿನಿಮಾ ನಂಟು ಗಟ್ಟಿಯಾಗಿದೆ. ಅದು ಡಿಕೆ ಶಿವಕುಮಾರ್ರಿಂದ.. ಹಾಗಾದ್ರೆ ಅದು ಹೇಗೆ ಅಂತ ನೋಡೋಣ ಬನ್ನಿ..
ಕರ್ನಾಟಕ ರಾಜಕಾರಣಲ್ಲಿ ಹೊಸ ಬೆಳಕು.. ಸಿನಿಮಾ ಟೆಂಟ್ TO ಸಿಎಂ ಪಟ್ಟ..!
ಗಾಂಧಿನಗರದ ಜೊತೆಗೂ ಇದೆ ನೂತನ ಮುಖ್ಯಮಂತ್ರಿ ಡಿ ಕೆ ನಂಟು.!
ತಮಿಳುನಾಡು, ಆಂಧ್ರದಂತೆ ಕರ್ನಾಟಕದಲ್ಲೂ ಆಯ್ತು ಮ್ಯಾಜಿಕ್..!
ಸಿನಿಮಾ ಮತ್ತು ರಾಜಕಾರಣಕ್ಕೆ ಬಿಡಿಸಲಾಗದ ನಂಟು.. ರಾಜಕಾರಣಿಗಳ ಮಕ್ಕಳು ಸಿನಿಮಾ ಸ್ಟಾರ್ಸ್ ಆಗಿದ್ದಾರೆ. ಸಿನಿಮಾ ಸ್ಟಾರ್ಸ್ ರಾಜಕಾರಣಿಗಳೂ ಆಗಿದ್ದಾರೆ. ಸಿನಿಮಾ ಮತ್ತು ರಾಜಕಾರಣ ಒಂದ್ ರೀತಿ ರಕ್ತ ಸಂಬಂಧಂತಾಗಿದೆ. ಆಂಧ್ರ, ತಮಿಳು ನಾಡು ರಾಜಕಾರಣ ನೋಡಿದ್ರೆ ನಿಮ್ಗೊಂದು ಕ್ಲೀಯರ್ ಪಿಕ್ಚರ್ ಸಿಗುತ್ತೆ. ಈಗ ಕರ್ನಾಟಕದಲ್ಲೂ ಅದೇ ಆಗಿದೆ.
ಹೌದು, ಕರ್ನಾಟಕ ಪೊಲಿಟಿಕ್ಸ್ನ ಡಿಕೆಶಿ ಅನ್ನೊ ಹೊಸ ಸುನಾಮಿ ಎದ್ದಿದೆ. ಇಷ್ಟು ದಿನ ಉಪ ಮುಖ್ಯಮಂತ್ರಿ ಆಗಿದ್ದ ಡಿಕೆ ಶಿವಕುಮಾರ್, ಈಗ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ರಾಜಕಾರಣ ಅನ್ನೋ ಕಾರ್ಕೋಟಕವನ್ನ ಗಟ ಗಟ ಅಂತ ಕುಡಿದು ಅರಗಿಸಿಕೊಂಡಿರೋ ಕನಕಪುರದ ಬಂಡೆ ರಾಜಕಾರಣಕ್ಕೆ ಬರೋ ಮೊದಲು ಏನಾಗಿದ್ರು ಅಂತ ನೋಡಿದ್ರೆ ಅಲ್ಲಿ ಸಿಗೋದು ಸಿನಿಮಾ ನಂಟು!
ಡಿಕೆಶಿ ಮೈಗಂಟಿಗೆ ಗಾಂಧಿನಗರದ ಸುಗಂಧ ದ್ರವ್ಯ; ಕನ್ನಡ ಸಿನಿ ರಂಗದಲ್ಲೂ ಕೆಲಸ ಮಾಡಿದ್ದಾರೆ ಸಿಎಂ!
ಕನಕಪುರದ ಸರದಾರ ಡಿಕೆ ಶಿವಕುಮಾರ್ಇವತ್ತು ಕರ್ನಾಟಕದ ಮುಖ್ಯಮಂತ್ರಿ. ಆದ್ರೆ ಅದಕ್ಕೂ ಮೊದಲು ಡಿಕೆಶಿ ಏನಾಗಿದ್ರು ಅಂತ ಒಮ್ಮೆ ರೀ ಕ್ಯಾಪ್ ಮಾಡಿದ್ರೆ, ಗೊತ್ತಾಗೋದು ಡಿಕೆಶಿ ಮೈಗೆ ಗಾಂಧಿನಗರದ ಸುಂಗಂಧ ಧ್ರವ್ಯ ಅಂಟಿದೆ ಅನ್ನೋ ವಿಷ್ಯ. ಯಾಕಂದ್ರೆ ಡಿಕೆಶಿ ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿದ್ದಾರೆ.
ವಿತರಕ, ಪ್ರದರ್ಶಕ.. ಡಿಕೆಶಿಗೆ ಇತ್ತು ಸಿನಿಮಾ ಪ್ರೀತಿ; ಸಿನಿಮಾ ಟೆಂಟ್ ನಡೆಸಿಕೊಂಡು ಬರುತ್ತಿದ್ದ ಡಿಕೆಶಿ..!
ಯೆಸ್, ಡಿಕೆ ಶಿವಕುಮಾರ್ ಹರೆಯದಲ್ಲಿ ಸಿನಿಮಾ ಹಿಂದೆ ಓಡುತ್ತಿದ್ರು. ತನ್ನೂರಿನಲ್ಲಿ ಸಿನಿಮಾ ಟೆಂಟ್ಹಾಕುತ್ತಿದ್ದ ಡಿಕೆ ಶಿವಕುಮಾರ್ಗಾಂಧಿನಗರದಕ್ಕೆ ಬಂದು ಸಿನಿಮಾಗಳನ್ನ ನೋಡಿ ಬಾಕ್ಸ್ ಎತ್ತಿಕೊಂಡು ಹೋಗಿ ತನ್ನ ಸಿನಿಮಾ ಟೆಂಟ್ನಲ್ಲಿ ಪ್ರದರ್ಶನ ಮಾಡುತ್ತಿದ್ರು.
ರಾಜಕೀಯಕ್ಕೂ ಬರುವ ಮುನ್ನ ಪ್ರದರ್ಶಕನಾಗಿದ್ದ ಡಿಕೆ ಶಿವಕುಮಾರ್, 1980 ರಲ್ಲಿ ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಟೂರಿಂಗ್ ಟೆಂಟ್ ನಡೆಸುತ್ತಿದ್ರು. ಆ ಟೂರಿಂಗ್ ಟೆಂಟ್ ಗೆ ಇಂದಿರಾಜೀ ಹೆಸರಿಟ್ಟಿದ್ದ ಡಿಕೆಶಿ ರಾಜ್ಕುಮಾರ್ಸೇರಿದಂತೆ ಹಲವು ನಟರ ಸಿನಿಮಾಗಳನ್ನ ಪ್ರದರ್ಶನ ಮಾಡುತ್ತಿದ್ರು.
ಹೆಚ್ಚು ಕಮ್ಮಿ 26ನೇ ವಯಸ್ಸಿನವರೆಗೂ ಸಿನಿಮಾ ರಂಗದ ಜೊತೆ ಗುರುತಿಸಿಕೊಂಡಿದ್ದ ಡಿಕೆಶಿ ಕೊನೆಗೆ ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆ ಆದ್ರು. ಆ ಬಳಿಕ ಸಿನಿಮಾದಿಂದ ಸ್ವಲ್ಪ ದೂರ ಉಳಿಯೋಕೆ ಶುರು ಮಾಡಿದ್ರು. ಆದ್ರೆ ಆ ನಂಟನ್ನ ಸಂಪುರ್ಣವಾಗಿ ಬಿಡಲಿಲ್ಲ ಡಿಕೆ..
ಅಂದು 4 ಚಿತ್ರಮಂದಿರಗಳ ಮಾಲೀಕ; ಇಂದು 23 ಮಲ್ಟಿಫ್ಲೆಕ್ಸ್ಒಡೆಯ..!
ಸಿನಿಮಾ ರಂಗದ ಜೊತೆ ಡಿಕೆಶಿಯ ನಂಟು ಗಟ್ಟಿಯಾಗಿದೆ. ಇದೊಂದು ರೀತಿ ಕುಲಕಸುಬು ಅನ್ನೋ ಹಾಗೆ ಆಗಿದೆ. ಯಾಕಂದ್ರೆ ರಾಜಕಾರಣದಲ್ಲಿ ಆಗಸಕ್ಕೇರಿದ್ರು ಡಿಕೆ ಮಾತ್ರ ತನ್ನ ಬಣ್ಣದ ಜಗತ್ತಿನ ಗೀಳನ್ನ ಇನ್ನೂ ಬಿಟ್ಟಿಲ್ಲ. ಬದ್ಲಾಗಿ ಗಟ್ಟಿ ಮಾಡಿಕೊಂಡಿದ್ದಾರೆ. ಅಂದು 4 ಚಿತ್ರಮಂದಿರಗಳ ಮಾಲೀಕ ಆಗಿದ್ದ ಡಿಕೆ ಇಂದು ಬರೋಬ್ಬರಿ 23 ಸಿನಿಮಾ ಮಲ್ಟಿಪ್ಲೆಕ್ಸ್ ಥಿಯೇಟರ್ ಹೊಂದಿರೋ ಸಾಹುಕಾರ ಆಗಿದ್ದಾರೆ.
ಫಿಲ್ಮ್ ಛೇಂಬರ್ ಸದಸ್ಯ ಇಂದು ರಾಜ್ಯದ ಚುಕ್ಕಾಣಿ ಹಿಡಿದಿದ್ದೇ ರೋಚಕ..!
ಡಿಕೆ ಶಿವಕುಮಾರ್ ಸಿನಿಮಾ ನಂಟು ಹೇಗಿದೆ ಅನ್ನೋದಕ್ಕೆ ಮತ್ತೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸದಸ್ಯತ್ವ ಹೊಂದಿದ್ದಾರೆ. 2021ರಲ್ಲಿ ಕುದ್ದು ಫಿಲ್ಮ್ ಛೇಂಬರ್ಗೆ ಬಂದಿದ್ದ ಡಿಕೆ ಸದಸ್ಯತ್ವವನ್ನ ರಿನಿವಲ್ ಮಾಡಿಸಿಕೊಂಡಿದ್ದಾರೆ. ರಾಜ್ಕುಮಾರ್ ರ ಅಪ್ಪಟ ಅಭಿಮಾನಿ ಆಗಿರೋ ಡಿಕೆ ಸತ್ಯಹರಿಶ್ಚಂದ್ರ ಸಿನಿಮಾವನ್ನ ಬರೋಬ್ಬರಿ 14 ಭಾರಿ ನೋಡಿದ್ದಾರಂತೆ. ಅಷ್ಟೆ ಅಲ್ಲ ರಾಜ್ ಕುಟುಂಬದ ಜೊತೆ ಇಂದಿಗೂ ಅವಿನಾಭಾವ ಸಂಬಂಧ ಹೊಂದಿದ್ದಾರೆ ಡಿಕೆ ಶಿವಕುಮಾರ್..
ವೀರಪ್ಪನ್ನಿಂದ ರಾಜ್ರನ್ನ ಬಿಡಿಸಲು ಡಿಕೆ ಮಾಡಿದ್ದು ಅದೆಂಥಾ ಸಹಾಯ..?
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಡಾಕ್ಟರ್ ರಾಜ್ ಕುಮಾರ್ ಕುಟುಂಬದ ಅತ್ಯಾಪ್ತ. ಶಿವರಾಜ್ ಕುಮಾರ್, ಹಾಗು ಪುನೀತ್ ರಾಜ್ ಕುಮಾರ್ ಜೊತೆ ಆತ್ಮೀಯ ಸ್ನೇಹ ಸಂಬಂಧ ಹೊಂದಿರೋ ಡಿಕೆ ಡಾಕ್ಟರ್ ರಾಜ್ರನ್ನ ಆರಾಧಿಸುತ್ತಾರೆ. ಅಣ್ಣಾವ್ರ ಕಾಡುಗಳ್ಳ ವೀರಪ್ಪನ್ರಿಂದ ಅಪಹರಣ ಆದಾಗ ಡಿಕೆ ಶಿವಕುಮಾರ್ ರಾಜ್ರನ್ನ ವೀರಪ್ಪನ್ರಿಂದ ಬಿಡಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ರಂತೆ.
ತಮಿಳುನಾಡು, ಆಂಧ್ರದಂತೆ ಆಯ್ತು ಕರ್ನಾಟಕ ರಾಜಕಾರಣ..!
ಕರ್ನಾಟಕ ರಾಜಕಾರಣದಲ್ಲಿ ಸಿನಿಮಾ ಗಾಳಿ ಈಗ ಜೋರಾಗಿ ಬೀಸುತ್ತಿದೆ. ತಮಿಳುನಾಡುನಲ್ಲಿ ಈಗ ನಟ ದಳಪತಿ ವಿಜಯ್ ಗದ್ದುಗೆ ಏರಿದ್ದಾರೆ. ಆಂಧ್ರದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಿದ್ದಾರೆ. ಈಗ ಕರ್ನಾಟಕದಲ್ಲಿ ಸಿನಿಮಾ ವಿತರಕ ಡಿಕೆ ಶಿವಕುಮಾರ್ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಹೀಗಾಗಿ ದಕ್ಷಿಣ ಭಾರತ ರಾಜಕಾರಣ ಈಗ ಸಿನಿಮಾ ಮಯ ಆಗಿದೆ ಅನ್ನಬಹುದೇನೋ..
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ...


