ಕಿರಿಕ್ ಪಾರ್ಟಿ ಮಾಡಿ ಕೋಟಿ ಹೃದಯ ಗೆದ್ದ ರಶ್ಮಿಕಾ ಆ ಮೇಲೆ ದರ್ಶನ್, ಗಣೇಶ್, ಪುನೀತ್, ಧ್ರುವ ಜೊತೆಗೆ ಸಿನಿಮಾ ಮಾಡಿ ಡೈರೆಕ್ಟರ್ ಆಗಿ ಹೈದರಾಬಾದ್ಹಾದಿ ಹಿಡಿದ್ರು. ಬಳಿಕ ಕನ್ನಡದ ಈ ಸಾನ್ವಿ ಲಿಲ್ಲಿಯಾಗಿ ಬದಲಾಗಿ ಕನ್ನಡಿಗರ ಯಾರ ಕೈಗೂ ಸಿಗಲೇ ಇಲ್ಲ.. ಈಗ ಮತ್ತೆ ಬರಲಿದ್ದಾರಾ?
ರಶ್ಮಿಕಾ ಕನ್ನಡಕ್ಕೆ ಬರೋದು ನಿಜಾನಾ..? ಅದು ಇದೇ ಸಿನಿಮಾನಾ..?
ಶ್ರೀವಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಆಗಿ ಖುಷಿ ಖುಷಿಯಲ್ಲಿ ಸಂಸಾರ ಸಾಗಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಬಿದ್ದ ಮೇಲೆ ರಶ್ಮಿಕಾ ಬದುಕಲ್ಲಿ ಸಂಭ್ರಮಗಳೇ ಹೆಚ್ಚಾಗಿವೆ. ಆ ಖುಷಿಯಲ್ಲಿ ಲಿಲ್ಲಿ ಕಾಕ್ಲೈಟ್ ಪಾರ್ಟಿ ಮಾಡೋಕೆ ಸಿದ್ಧವಾಗಿದ್ರೆ, ಈ ಕಡೆ ಸ್ಯಾಂಡಲ್ವುಡ್ನಲ್ಲಿ ನ್ಯಾಷನಲ್ಕ್ರಶ್ ಬಗ್ಗೆ ಮತ್ತೊಂದು ವಿಚಾರ ರಿವಿಲ್ ಆಗಿದೆ. ಅದೇನು ಅಂತ ನೋಡೋಣ ಬನ್ನಿ..
ಕಾಕ್ಟೈಲ್ಪಾರ್ಟಿ ಮೂಡ್ ನಲ್ಲಿರೋ ಲಿಲ್ಲಿ ಬಗ್ಗೆ ಬಂತು ಸರ್ಪ್ರೈಸ್; ಮತ್ತೆ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಾಳಂತೆ ಶ್ರೀವಲ್ಲಿ..!
ರಶ್ಮಿಕಾ ಮಂದಣ್ಣ.. ಕನ್ನಡ ನಾಡಿದ ಮನೆ ಮಗಳು.. ಈಗ ತೆಲುಗು ನಾಡಿನ ಸೊಸೆ.. ರಶ್ಮಿಕಾ ಅನ್ನೋ ಹೆಸರು ಪ್ರಚಲಿತಕ್ಕೆ ಬಂದಿದ್ದೇ ಸ್ಯಾಂಡಲ್ವುಡ್ನಿಂದ. ಕಿರಿಕ್ ಪಾರ್ಟಿ ಮಾಡಿ ಕೋಟಿ ಹೃದಯ ಗೆದ್ದ ರಶ್ಮಿಕಾ ಆ ಮೇಲೆ ದರ್ಶನ್, ಗಣೇಶ್, ಪುನೀತ್, ಧ್ರುವ ಜೊತೆಗೆ ಸಿನಿಮಾ ಮಾಡಿ ಡೈರೆಕ್ಟರ್ ಆಗಿ ಹೈದರಾಬಾದ್ಹಾದಿ ಹಿಡಿದ್ರು. ಬಳಿಕ ಕನ್ನಡದ ಈ ಸಾನ್ವಿ ಲಿಲ್ಲಿಯಾಗಿ ಬದಲಾಗಿ ಕನ್ನಡಿಗರ ಯಾರ ಕೈಗೂ ಸಿಗಲೇ ಇಲ್ಲ.. ಇದೀಗ ರಶ್ಮಿಕಾ ಮಂದಣ್ಣ ಮತ್ತೆ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರಂತೆ.
ರಶ್ಮಿಕಾ ಕನ್ನಡಕ್ಕೆ ಬರೋದು ನಿಜಾನಾ..? ಅದು ಇದೇ ಸಿನಿಮಾನಾ..?
ಯೆಸ್, ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಂತೆ. ಹೀಗೋಂದು ಟಾಕ್ ಟಿಕ್ ಟಿಕ್ ಎನ್ನುತ್ತಿದೆ. ಆದ್ರೆ ಅದು ಯಾವ ಸಿನಿಮಾ..? ಯಾರ ಸಿನಿಮಾ ಅಂತ ನೋಡಿದ್ರೆ ಲಿಲ್ಲಿ ಅಲ್ಲೂ ಬುದ್ಧಿವಂತೆ ಅನ್ನೋದು ಗೊತ್ತಾಗುತ್ತೆ. ಯಾಕಂದ್ರೆ ಶ್ರೀವಲ್ಲಿ ಕನ್ನಡದ ಸಿನಿಮಾದಲ್ಲಿ ನಟಿಸುತ್ತಾರೆ ಅಂತ ಹೇಳುತ್ತಿರೋ ಹೀರೋ ನ್ಯಾಷನಲ್ ಸ್ಟಾರ್ ಕಿಚ್ಚ ಸುದೀಪ್ ಅವರ ಸಿನಿಮಾದಲ್ಲಂತೆ..
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.. ನ್ಯಾಷನಲ್ ಸ್ಟಾರ್.. ಕಿಚ್ಚನಿಗೆ ಭಾರತದ ಬಣ್ಣದ ಜಗತ್ತಿನ ಟಾಪ್ ಟು ಬಾಟಮ್ ಕನೆಕ್ಷನ್ ಇದೆ. ಹಿಂದಿ ತೆಲುಗು, ತಮಿಳು ಹೀಗೆ ಎಲ್ಲಾ ಚಿತ್ರರಂಗದಲ್ಲೂ ಸುದೀಪ್ ಫೇಮಸ್. ಇಂತಹ ಪ್ಯಾನ್ ಇಂಡಿಯಾ ಹೀರೋ ಕಿಚ್ಚ ಈ ವರ್ಷ ನಾಲ್ಕು ಮೆಗಾ ಸಿನಿಮಾಗಳನ್ನು ಅನೌನ್ಸ್ ಮಾಡಲಿದ್ದಾರೆ. ನಟನೆ ಬಿಟ್ಟು ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. ಆದ್ರೆ ತಮ್ಮ ಹೊಸ ಸಿನಿಮಾಗೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಎಂಟ್ರಿ ಕೊಡಲಿದ್ದಾರಂತೆ.
ಕನ್ನಡಕ್ಕೆ ಮತ್ತೆ ರಶ್ಮಿಕಾ.. ಕಿಚ್ಚನ ಚಿತ್ರಕ್ಕೆ ನ್ಯಾಷನಲ್ ಕ್ರಶ್.?
ಕಿಚ್ಚ ಸುದೀಪ್ ಈ ವರ್ಷ ನಾಲ್ಕು ಹೊಸ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಲಿದ್ದಾರೆ. ಅದರಲ್ಲಿ ಒಂದು ಚಿತ್ರವನ್ನು ಅವರೇ ನಿರ್ದೇಶನ ಕೂಡ ಮಾಡಲಿದ್ದಾರೆ. ಇದೀಗ ಅದೇ ಡೈರೆಕ್ಷನಲ್ ಸಿನಿಮಾದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಟಿಸ್ತಾರೆ ಅಂತ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಸುದೀಪ್ಬಳಗ ಆಗ್ಲಿ ರಶ್ಮಿಕಾ ಕಡೆಯವರಾಗ್ಲಿ ಎಲ್ಲಿಯೂ ತುಟಿ ಬಿಚ್ಚಿಲ್ಲ. ಬಟ್ ರಶ್ಮಿಕಾಗೆ ಕನ್ನಡದ ಟಾಪ್ ಸ್ಟಾರ್ ಸಿನಿಮಾದಲ್ಲಿ ನಟಿಸೋ ಆಸೆ ಇದೆ ಅನ್ನೋದು ನಿಜ. ಆ ಟಾಪ್ ಸ್ಟಾರ್ ಕಿಚ್ಚನೇ ಆಗಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಎದ್ದಿರೋ ಗುಲ್ಲು.
ಇನ್ನು ಸುದೀಪ್ ನಿರ್ದೇಶನ ಮಾಡುತ್ತಿರುವ ಈ ಹೈ-ವೋಲ್ವೇಜ್ ಸಿನಿಮಾಗೆ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆಯಂತೆ. ಹೀಗಾಗಿ ರಶ್ಮಿಕಾ ಇಲ್ಲಿ ನಾಯಕಿ ಮಾಡೋ ಲೆಕ್ಕಾಚಾರ ಆದಂತಿದೆ. ಕಿಚ್ಚನಂತಹ ದಿಗ್ಗಜ ನಟನ ಜೊತೆ ರಶ್ಮಿಕಾ ಸ್ಟ್ರೀನ್ ಶೇರ್ ಮಾಡೋದು ನಿಜವೇ ಆದಲ್ಲಿ ಸಾನ್ವಿಯ ಕನ್ನಡ ಫ್ಯಾನ್ಸ್ಗೆ ಹಬ್ಬವೇ ಸರಿ…!


