ನಟಿ ರುಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ಅಶ್ಲೀಲ ವಿಡಿಯೋ ವಿವಾದಕ್ಕೆ ಸಂಬಂಧಿಸಿದಂತೆ, ಅವರು ನೀಡಿದ ದೂರಿನ ಅನ್ವಯ ಸಿಸಿಬಿ ಸೈಬರ್ ಕ್ರೈಂ ಪೊಲೀಸರು 29 ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೃತಕ ಬುದ್ಧಿಮತ್ತೆ ಬಳಸಿ ತಮ್ಮ ಗೌರವಕ್ಕೆ ಧಕ್ಕೆ ತಂದಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಂಗಳೂರು: ಬಹುಭಾಷಾ ಚಲನಚಿತ್ರ ನಟಿ ರುಕ್ಮಿಣಿ ವಸಂತ್ ಅವರ ಡೀಪ್‌ ಫೇಕ್ ಅಶ್ಲೀಲ ವಿಡಿಯೋ ವಿವಾದ ಸಂಬಂಧ ಸಾಮಾಜಿಕ ಜಾಲತಾಣಗಳ 29ಕ್ಕೂ ಖಾತೆಗಳ ವಿರುದ್ಧ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಷ್ಕರ್ಮಿಗಳ ಪತ್ತೆಗೆ ಕಾರ್ಯಾಚರಣೆ

ನಕಲಿ ವಿಡಿಯೋ ಹರಿಬಿಟ್ಟು ನನ್ನ ಗೌರವಕ್ಕೆ ಧಕ್ಕೆ ತಂದಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಟಿ ಮನವಿ ಮಾಡಿದ್ದಾರೆ. ಈ ದೂರು ಆಧರಿಸಿ 9 ಇನ್‌ಸ್ಟಾಗ್ರಾಂ, 14 ಎಕ್ಸ್‌ ಖಾತೆ ಹಾಗೂ 6 ಫೇಸ್‌ಬುಕ್ ಸೇರಿ ಒಟ್ಟು 29 ಸಾಮಾಜಿಕ ಜಾಲತಾಣಗಳ ಖಾತೆದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈಗ ನಕಲಿ ವಿಡಿಯೋ ಹರಿಬಿಟ್ಟಿದ್ದ ದುಷ್ಕರ್ಮಿಗಳ ಪತ್ತೆಗೆ ಸೈಬರ್ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ರೀಲ್ ಪ್ರೇಯಸಿಯ ಪಕ್ಕ ರಿಯಲ್‌ ಪ್ರೇಯಸಿ; ರಿಷಬ್‌ ಶೆಟ್ಟಿ ಈ ವಿಡಿಯೋ ವೈರಲ್‌ ಆಗ್ತಿರೋದು ಯಾಕೆ?

ಈಜುಡುಗೆ ಡೀಪ್‌ಫೇಕ್ ಫೋಟೋ, ವಿಡಿಯೋ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರುಕ್ಮಿಣಿ ಅವರು ಈಜುಡುಗೆಯಲ್ಲಿ (ಬಿಕಿನಿ) ಪೋಟೋ ಶೂಟ್ ಮಾಡಿಸಿಕೊಂಡಂತೆ ವಿಡಿಯೋವೊಂದು ವೈರಲ್ ಆಗಿತ್ತು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ತಮ್ಮ ಭಾವಚಿತ್ರಕ್ಕೆ ಡೀಪ್ ಫೇಕ್ ಮಾಡಿ ನಕಲಿ ವಿಡಿಯೋ ಸೃಷ್ಟಿಸಿದ್ದಾರೆ ಎಂದು ರುಕ್ಮಿಣಿ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ನಾನು ಸೀರೆ ಉಟ್ಟು ಸ್ವಿಮ್ಮಿಂಗ್ ಪೂಲ್‌ಗೆ ಜಿಗಿಬೇಕಿತ್ತಾ? ಚಿಕ್ಕಪ್ಪನಿಗೇ ಸವಾಲೆಸೆದ ಕರಿಷ್ಮಾಕಪೂರ್!