- Home
- Entertainment
- Sandalwood
- ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ Rukmini Vasanth… ಕರ್ನಾಟಕ ಚಿನ್ನದ ಗಣಿ ಎಂದ ಫ್ಯಾನ್ಸ್
ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ Rukmini Vasanth… ಕರ್ನಾಟಕ ಚಿನ್ನದ ಗಣಿ ಎಂದ ಫ್ಯಾನ್ಸ್
Rukmini Vasanth: ಸಪ್ತಸಾಗರದಾಚೆ ಎಲ್ಲೋ ಮತ್ತು ಕಾಂತಾರಾ ಸಿನಿಮಾ ಬಳಿಕ ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದೆಲ್ಲೆಡೆ ಭಾರಿ ಪ್ರಮಾಣದಲಿ ಫ್ಯಾನ್ಸ್ ಗಳನ್ನು ಹೊಂದಿರುವ ನಟಿ ರುಕ್ಮಿಣಿ ವಸಂತ್ ಅವರ ಹೊಸ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರುಕ್ಮಿಣಿ ವಸಂತ್
ಕನ್ನಡ ಸಿನಿ ರಸಿಕರ ಹೊಸ ಕ್ರಶ್ ಖಂಡಿತಾ ರುಕ್ಮಿಣಿ ವಸಂತ್. ತಮ್ಮ ಅಭಿನಯದ ಜೊತೆಗೆ ಅದ್ಭುತ ಸೌಂದರ್ಯದ ಮೂಲಕ ಜನಮನ ಗೆದ್ದಿರುವ ರುಕ್ಮಿಣಿ, ಕನ್ನಡಿಗರ ಪ್ರೀತಿಯ ರುಕ್ಕು ಇದೀಗ ಹೊಸ ಫೋಟೊಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಅವರ ಬ್ಯಾಕ್ ಲೆಸ್ ಬ್ಲೌಸ್ ಟ್ರಾನ್ಸಪರೆಂಟ್ ಸೀರೆ ಲುಕ್ ವೈರಲ್ ಆಗುತ್ತಿದೆ.

ಚಿತ್ತಾರ ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ರುಕ್ಮಿಣಿ
ನಟಿ ರುಕ್ಮಿಣಿ ವಸಂತ್ ಚಿತ್ತಾರ ಪ್ರಶಸ್ತಿ ಸಮಾರಂಭದಲ್ಲಿ ಅಪ್ಸರೆಯಂತೆ ಮಿಂಚಿದ್ದಾರೆ. ಪೀಚ್ ಬಣ್ಣದ ಟ್ರಾನ್ಸ್ಪರೆಂಟ್, ಹೆವಿ ವರ್ಕ್ ಸೀರೆ ಜೊತೆಗೆ, ನಟಿ ಶೋಲ್ಡರ್ ಲೆಸ್ ಬ್ಲೌಸ್ ಧರಿಸಿದ್ದು, ಅವರ 100 ವೋಲ್ಟೇಜ್ ಸ್ಮೈಲ್, ಆ ಸೌಂದರ್ಯವನ್ನು ಮತ್ತಷ್ಟು ಡಬಲ್ ಮಾಡಿದೆ. ಅಭಿಮಾನಿಗಳು ಫಿದಾ ಆಗುವಂತೆ ಮಾಡಿದ್ದಾರೆ ರುಕ್ಮಿಣಿ.
ಮಲಯಾಳಂ ಬ್ಯೂಟಿಯ ಕಾಮೆಂಟ್
ರುಕ್ಮಿಣಿ ಹಂಚಿಕೊಂಡಿರುವ ಹೊಸ ಫೋಟೋಗೆ ಮಲಯಾಳಂ ನಟಿ ನಜ್ರಿಯಾ ನಾಜಿಮ್ ಕಾಮೆಂಟ್ ಮಾಡಿ ಡೈಮಂಡ್, ಹಾರ್ಟ್ ಇಮೋಜಿ ಹಾಕಿದ್ದು, ಅದಕ್ಕೆ ಉತ್ತರವಾಗಿ ರುಕ್ಮಿಣಿ ಥ್ಯಾಂಕ್ಯೂ ಎಂದಿದ್ದಾರೆ. ಇನ್ನೂ ಫ್ಯಾನ್ಸ್ ಅಂತೂ ಕರ್ನಾಟಕದ ಚಿನ್ನದ ಗಣಿ, ಒಂದು ದೃಷ್ಟಿ ಬೊಟ್ಟು ಇಟ್ಕೊಳಿ, ದೇವತೆ, ಪ್ರಿನ್ಸಸ್, ಅಪ್ಸರೆ, ಎಂದು ಕಾಮೆಂಟ್ ಹಾಗೂ ಪ್ರೀತಿಯ ಮಳೆ ಸುರಿಸಿದ್ದಾರೆ.
ಚಿತ್ತಾರ ಫೇವರಿಟ್ ನಟಿ ಪ್ರಶಸ್ತಿ ಪಡೆದ ರುಕ್ಕು
ನಿನ್ನೆ ಅದ್ಧೂರಿಯಾಗಿ ನಡೆದ ಚಿತ್ತಾರ ಸ್ಟಾರ್ ಪ್ರಶಸ್ತಿ ಸಮಾರಂಭದಲ್ಲಿ ರುಕ್ಮಿಣಿ ವಸಂತ್, ಪೀಪಲ್ಸ್ ಚಾಯ್ಸ್ ಜನಮೆಚ್ಚಿದ ನಟಿ ಅವಾರ್ಡ್ ಪದೆದುಕೊಂಡಿದ್ದಾರೆ. ಕಾಂತಾರಾ ಚಾಪ್ಟರ್ 1ರಲ್ಲಿ ನಟಿ ಅದ್ಭುತವಾಗಿ ನಟಿಸಿದ್ದರು. ಪಾಸಿಟೀವ್ ಪಾತ್ರದಿಂದ ಶುರುವಾಗಿ ನೆಗೆಟಿವ್ ಶೇಡ್ ಗೆ ಬದಲಾಗುವ ಅವರ ಪಾತ್ರ ಅತ್ಯುತ್ತಮವಾಗಿ ಮೂಡಿ ಬಂದಿತ್ತು.
ಸಾಲು ಸಾಲು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್
ರುಕ್ಮಿಣಿ ಸದ್ಯದ ಅತ್ಯಂತ ಬ್ಯುಸಿ ನಟಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ರುಕ್ಮಿಣಿ ಮೆಲಿಸಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಎನ್ ಟಿ ಆರ್ ಜೊತೆ ಡ್ರಾಗನ್ ಸಿನಿಮಾದಲ್ಲಿ ರುಕ್ಮಿಣಿ ನಟಿಸಿದ್ದಾರೆ. ಬಾಲಿವುಡ್ ನಲ್ಲೂ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಡೀಪ್ ಫೇಕ್ ಫೋಟೊ ವೈರಲ್
ಇನ್ನು ಇತ್ತೀಚಿನ ದಿನಗಳಲ್ಲಿ ರುಕ್ಮಿಣಿ ವಸಂತ್ ಅವರ ಡೀಪ್ ಫೇಕ್ ವಿಡಿಯೋ, ಫೋಟೊ ವೈರಲ್ ಆಗಿತ್ತು. ಇದರಲ್ಲಿ ಬಿಕಿನಿ ಧರಿಸಿ ರುಕ್ಮಿಣಿ ಸ್ವಿಮ್ಮಿಂಗ್ ಪೂಲ್ ಗೆ ಇಳಿಯುವ ದೃಶ್ಯ ಸೆರೆಯಾಗಿತ್ತು. ಆದರೆ ಈ ಬಗ್ಗೆ ಸಿಟ್ಟಿಗೆದ್ದ ರುಕ್ಮಿಣಿ, ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಈ ರೀತಿ ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

