MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • ರೀಲ್ ಪ್ರೇಯಸಿಯ ಪಕ್ಕ ರಿಯಲ್‌ ಪ್ರೇಯಸಿ; ರಿಷಬ್‌ ಶೆಟ್ಟಿ ಈ ವಿಡಿಯೋ ವೈರಲ್‌ ಆಗ್ತಿರೋದು ಯಾಕೆ?

ರೀಲ್ ಪ್ರೇಯಸಿಯ ಪಕ್ಕ ರಿಯಲ್‌ ಪ್ರೇಯಸಿ; ರಿಷಬ್‌ ಶೆಟ್ಟಿ ಈ ವಿಡಿಯೋ ವೈರಲ್‌ ಆಗ್ತಿರೋದು ಯಾಕೆ?

Rishab Shetty Kantara Movie: 'ಕಾಂತಾರ-1' ಟ್ರೇಲರ್ ಬಿಡುಗಡೆಯಾಗಿ ದೊಡ್ದ ಮಟ್ಟದಲ್ಲಿ ಸೌಂಡ್‌ ಮಾಡಿತು. ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆದಿದೆ. ಈ ಸಂದರ್ಭದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ದಂಪತಿ, ರುಕ್ಮಿಣಿ ವಸಂತ, ಹೊಂಬಾಳೆ ಫಿಲ್ಮ್ಸ್‌ ಕೂಡ ಭಾಗಿಯಾಗಿತ್ತು. 

2 Min read
Author : Padmashree Bhat
Published : Sep 23 2025, 03:04 PM IST
Share this Photo Gallery
  • FB
  • TW
  • Linkdin
  • Whatsapp
16
ರಿಷಬ್‌ ಶೆಟ್ಟಿ ಫೋಟೋ
Image Credit : Asianet News

ರಿಷಬ್‌ ಶೆಟ್ಟಿ ಫೋಟೋ

ಸಿನಿಮಾ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಕೊನೆಯದಾಗಿ ಫೋಟೋ ಸೆಶನ್‌ ನಡೆಯಿತು. ಆ ವೇಳೆ ರಿಷಬ್‌ ಶೆಟ್ಟಿ ಅವರು ಹೆಂಡ್ತಿ ಪಕ್ಕದಲ್ಲಿ ನಿಂತರು. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಸಾಮಾನ್ಯವಾಗಿ ಹೀರೋ, ಹೀರೋಯಿನ್‌ ಜೊತೆಯಾಗಿ ಫೋಟೋ ತೆಗೆಸಿಕೊಳ್ಳೋದುಂಟು. ಈ ಫೋಟೋಗಳನ್ನು ಸಿನಿಮಾ ಪ್ರಚಾರಕ್ಕೆ ಬಳಸಲಾಗುವುದು.

 
 
 
 
View this post on Instagram
 
 
 
 
 
 
 
 
 
 
 

A post shared by CINI TREND (@cinitrend_kannada)

26
ಪ್ರಗತಿ ಶೆಟ್ಟಿ ಕಾಸ್ಟ್ಯೂಮ್‌ ಡಿಸೈನ್‌
Image Credit : our own

ಪ್ರಗತಿ ಶೆಟ್ಟಿ ಕಾಸ್ಟ್ಯೂಮ್‌ ಡಿಸೈನ್‌

ರಿಷಬ್‌ ಶೆಟ್ಟಿ ಅವರು ರುಕ್ಮಿಣಿ ಜೊತೆಗೂ ಒಂದು ಫೋಟೋ ತೆಗೆಸಿಕೊಂಡರು. ‘ಕಾಂತಾರ’ ಸಿನಿಮಾಕ್ಕೆ ಪ್ರಗತಿ ಶೆಟ್ಟಿ ಅವರೇ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಶುರುವಾಗಿ ಐದು ವರ್ಷಗಳಾಗಿವೆ. ಇದರ ಪ್ರತಿ ಹಂತದಲ್ಲಿಯೂ ಪ್ರಗತಿ ಇದ್ದಾರೆ. ರಿಷಬ್‌ ಅವರು ಎಲ್ಲಿ ಹೋದರೂ ಕೂಡ ಪ್ರಗತಿ ಅಲ್ಲಿ ಹಾಜರಿ ಹಾಕೋದುಂಟು. ಆ ಮಟ್ಟಿಗೆ ಅವರು ಪತಿಯ ಸಿನಿಮಾ ಕೆಲಸಕ್ಕೆ ಸಾಥ್‌ ಕೊಡುತ್ತಾರೆ.

Related Articles

Related image1
Kantara Chapter 1 Trailer Out: ವಿಶ್ವದಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ 'ಕಾಂತಾರ ಅಧ್ಯಾಯ 1' ಟ್ರೇಲರ್ ಬಿಡುಗಡೆ!
36
ರಿಷಬ್‌ ಶೆಟ್ಟಿ ಏನಂದ್ರು?
Image Credit : Asianet News

ರಿಷಬ್‌ ಶೆಟ್ಟಿ ಏನಂದ್ರು?

ರಿಷಬ್‌ ಶೆಟ್ಟಿ ಮಾತನಾಡಿ, 'ಕಾಂತಾರ', ಪಂಚವಾರ್ಷಿಕ ಯೋಜನೆಯ ತರಹ ಐದು ವರ್ಷದ ದೊಡ್ಡ ಜರ್ನಿ. ತುಂಬ ಕಷ್ಟಗಳನ್ನು ದಾಟಿ ಈಗ ರಿಲೀಸ್ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ನನ್ನ ಪತ್ನಿ ಪ್ರಗತಿ ಎಷ್ಟು ದೇವರಿಗೆ ಹರಕೆ ಹೊತ್ತಿದ್ದಾಳೋ ಗೊತ್ತಿಲ್ಲ. ಇದು ಎಮೋಷನಲ್ ಜರ್ನಿಯೂ ಹೌದು. ನನ್ನ ಈ ಪ್ರಯತ್ನಕ್ಕೆ ತುಂಬ ದೊಡ್ಡ ತಂಡ ಶಕ್ತಿಯಾಗಿ ನಿಂತಿದೆ. ಅರಣ್ಯಾಧಿಕಾರಿಗಳಿಂದ ಹಿಡಿದು ಊರಿನ ಜನರು ಸೇರಿದಂತೆ ಎಲ್ಲರೂ ನಮಗೆ ಸಪೋರ್ಟ್ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಮ್ಮ ತಂಡ ನಿದ್ದೆ ಸರಿಯಾಗಿ ಮಾಡಿಲ್ಲ. ಅಷ್ಟು ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಸಾರಿ ನಾನು ಸಾವಿನ ಬಾಗಿಲಿಗೆ ಹೋಗಿ ಬಂದಿದ್ದೇನೆ. ಆ ದೈವದ ಶಕ್ತಿ ನಮ್ಮ ಜೊತೆ ನಿಂತಿದೆ ಅನಿಸಿತು. ಈ ಚಿತ್ರಕ್ಕಾಗಿ ನಿರ್ಮಾಪಕರು ಸುಮಾರು ನಾಲ್ಕುವರೇ ಲಕ್ಷ ಜನರಿಗೆ ಊಟ ಹಾಕಿದ್ದಾರೆ” ಎಂದು ಹೇಳಿದ್ದಾರೆ.

46
ರುಕ್ಮಿಣಿ ವಸಂತ ಏನಂದ್ರು?
Image Credit : Asianet News

ರುಕ್ಮಿಣಿ ವಸಂತ ಏನಂದ್ರು?

ರುಕ್ಮಿಣಿ ವಸಂತ ಮಾತನಾಡಿ, 'ಇದು ಮನಸಿಗೆ ತುಂಬಾ ಹತ್ತಿರವಾದ ಸಿನಿಮಾ. ಕೆರಿಯರ್ ಪ್ರಾರಂಭದ ಹೆಜ್ಜೆಯಲ್ಲಿ ಇಂತಹ ಮಹತ್ವದ ಪಾತ್ರ ಸಿಕ್ಕಿದ್ದು ಖುಷಿ ಆಯ್ತು. ಈ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ತಂಡದ ಸಪೋರ್ಟ್ ತುಂಬಾ ಸಿಗತಾ ಇತ್ತು.‌ ಹಾಗಾಗಿ ಅಷ್ಟಾಗಿ ಕಷ್ಟವಾಗಲಿಲ್ಲ' ಎಂದರು.

56
ಮಕ್ಕಳ ಜೊತೆ ಮನೆ ಬಿಟ್ಟಿದ್ರು
Image Credit : Asianet News

ಮಕ್ಕಳ ಜೊತೆ ಮನೆ ಬಿಟ್ಟಿದ್ರು

'ಮೂರು ವರ್ಷ ನಾವು ಮನೆ ಬಿಟ್ಟು ಮಕ್ಕಳನ್ನು ಕಟ್ಟಿಕೊಂಡು ಕುಂದಾಪುರನಲ್ಲಿ ವಾಸವಿದ್ದು ಈ ಚಿತ್ರದಲ್ಲಿ ಪಾಲ್ಗೊಂಡಿದ್ದೇವೆ. ಹೊಂಬಾಳೆ ಫಿಲಂಸ್ ನಮಗೊಂದು ಫ್ಯಾಮಿಲಿ ಆಗಿ ನಿಂತಿದೆ. ಐದು ವರ್ಷಗಳ ಹಿಂದೆ ಪೋನ್ ನಲ್ಲಿ ಒಂದು ಲೈನ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದವರು ವಿಜಯ್ ಕಿರಗಂದೂರ್ ಅವರು. ಈ ಚಿತ್ರದಲ್ಲಿ ಕಾಸ್ಟೋಮ್ ಡಿಸೈನ್ ಮಾಡಿದ್ದು ಖುಷಿ ಇದೆ. ಈ ಚಿತ್ರದ ಹಿಂದೆ ಒಂದು ಶಕ್ತಿಯಿರುವುದು ಖಂಡಿತ' ಎಂದು ಕಾಸ್ಟ್ಯೂಮ್‌ ಡಿಸೈನರ್ ಪ್ರಗತಿ ಶೆಟ್ಟಿ ಮಾಹಿತಿ ನೀಡಿದರು.

66
ವಿಶ್ಯಾದ್ಯಂತ ರಿಲೀಸ್‌
Image Credit : Instagram

ವಿಶ್ಯಾದ್ಯಂತ ರಿಲೀಸ್‌

ಅಕ್ಟೋಬರ್ 2ರಂದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ 30 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಇದೆ ಮೊದಲಬಾರಿಗೆ ಕನ್ನಡ ಸಿನಿಮಾವೊಂದು ಸ್ಪ್ಯಾನಿಷ್ ಭಾಷೆಯಲ್ಲಿ ಡಬ್ಬಿಂಗ್ ಕೂಡ ಆಗುತ್ತಿದೆ. ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯನ್ ಪೋಸ್ಟ್‌ ಕವರ್, ಪಿಕ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ರಿಷಬ್ ಶೆಟ್ಟಿ
ಕಾಂತಾರ ಚಲನಚಿತ್ರ
ಸ್ಯಾಂಡಲ್‌ವುಡ್
ರುಕ್ಮಿಣಿ ವಸಂತ್

Latest Videos
Recommended Stories
Recommended image1
ಜೈ ಹನುಮಾನ್ ಮುಹೂರ್ತ ಬೆನ್ನಲ್ಲೇ ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಭೇಟಿ, ರಾಯರ ಕುರಿತು ಸಿನಿಮಾ ಮಾಡ್ತಾರಾ ಡಿವೈನ್ ಸ್ಟಾರ್, ಹೇಳಿದ್ದೇನು?
Recommended image2
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image3
Toxic: ವರ್ಷಗಳ ಗಡ್ಡಕ್ಕೆ ಯಶ್​ ಗುಡ್​ಬೈ ಹೇಳೋ ಮುನ್ನ ಪತ್ನಿ ರಾಧಿಕಾ ಪಂಡಿತ್​ ಏನ್​ ಹೇಳಿದ್ರು ನೋಡಿ!
Related Stories
Recommended image1
Kantara Chapter 1 Trailer Out: ವಿಶ್ವದಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ 'ಕಾಂತಾರ ಅಧ್ಯಾಯ 1' ಟ್ರೇಲರ್ ಬಿಡುಗಡೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved