Asianet Suvarna News Asianet Suvarna News

Pushpa ಸಿನಿಮಾ ನಂತರ ಸಂಭಾವನೆ ಹೆಚ್ಚಿಸಿಕೊಂಡ Rashmika Mandanna?

ನಟಿ ರಶ್ಮಿಕಾ ಮಂದಣ್ಣ ಸಂಭಾವನೆಯಲ್ಲಿ  ಮತ್ತೆ ಏರಿಕೆ. ಕೋಟಿ ಹಣದಲ್ಲಿ ಏನ್ ಮಾಡ್ತೀರಾ ಮೇಡಂ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು...
 

Kannada Rashmika Mandanna Hikes remuneration after Pushpa 1 release vcs
Author
Bangalore, First Published Jan 10, 2022, 1:09 PM IST

ಕಿರಿಕ್ ಪಾರ್ಟಿ (KiriK Party) ಚಿತ್ರದ ಮೂಲಕ ಸ್ಟೇಟ್ ಕ್ರಶ್ (State Crush) ಆಗಿ, ಗೀತಾ ಗೋವಿಂದಂ (Geetha Govindam) ಚಿತ್ರದ ಮೂಲಕ ನ್ಯಾಷನಲ್ ಕ್ರಶ್ (National Crush) ಆದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ, ಮುಂದಿನ ಸಿನಿಮಾಗಳ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ರಶ್ಮಿಕಾ ಡಿಮ್ಯಾಂಡ್ ದೊಡ್ಡದಾಗುತ್ತಿದ್ದಂತೆ ನಿರ್ಮಾಪಕರಿಗೆ ಬೇಸರವಾಗುತ್ತಿದೆ. ಅದರೂ ಈ ನಟಿಯ ಕಾಲ್ ಶೀಟ್ ಪಡೆದು, ಸಿನಿಮಾ ಮಾಡಿದರೆ ಹಾಕಿದ ಬಂಡವಾಳ ಬರುತ್ತದೆ ಎನ್ನುವ ಸಂತೋಷದಲ್ಲಿದ್ದಾರೆ. 

ಕನ್ನಡ ಚಿತ್ರರಂಗ (Sandalwood) ಮಾತ್ರವಲ್ಲದೇ ಬಾಲಿವುಡ್ (Bollywood), ಟಾಲಿವುಡ್ (Tollywood) ಮತ್ತು ಕಾಲಿವುಡ್‌ನಲ್ಲಿಯೂ (Kollywood) ಹವಾ ಹೆಚ್ಚಿಸಿ ಕೊಂಡಿರುವ ರಶ್ಮಿಕಾ, ಅಲ್ಲು ಅರ್ಜುನ್‌ಗೆ (Allu Arjun) ಜೋಡಿಯಾಗಿ ಕಾಣಿಸಿಕೊಂಡ ನಂತರ ಮಾಲಿವುಡ್‌ನಲ್ಲೂ (Mollywood) ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ನಟಿ ಕಾಣಿಸಿಕೊಂಡ ಹಾಟ್‌ ಲುಕ್‌ಗೆ ಕೇರಳ ಮಂದಿ ಫಿದಾ ಆಗಿದ್ದಾರೆ. ಕೆಲವು ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ ರಶ್ಮಿಕಾ ಮಲಯಾಳಂ ಸಿನಿಮಾ ಒಪ್ಪಿಕೊಂಡರೂ ಒಪ್ಪಿಕೊಳ್ಳಬಹುದಂತೆ. 

Kannada Rashmika Mandanna Hikes remuneration after Pushpa 1 release vcs

ಪುಷ್ಪ (Pushpa) ಸಿನಿಮಾದಲ್ಲಿ ಡೀ-ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ 2 ಕೋಟಿ ಸಂಭಾವನೆ (Remuneration) ಪಡೆದು ಕೊಂಡಿದ್ದರು. ಪುಷ್ಪ ಸಿನಿಮಾವನ್ನು ಎರಡು ಭಾಗದಲ್ಲಿ ಮಾಡಬೇಕು ಎಂದುಕೊಂಡಿರುವ ನಿರ್ದೇಶಕ ಸುಕುಮಾರ್ (Director Sukumar) ಆಗಲೇ ಪ್ಲ್ಯಾನಿಂಗ್ ಶುರು ಮಾಡಿದ್ದಾರೆ. ಸಿನಿಮಾ ಎರಡನೇ ಭಾಗದ ಮಾತು ಕಥೆ ಶುರುವಾಗಿದ್ದು, ಅದರಲ್ಲೂ ರಶ್ಮಿಕಾ ಮಂದಣ್ಣನೇ ನಾಯಕಿ ಆಗಲಿದ್ದಾರೆ, ಎನ್ನಲಾಗುತ್ತಿದೆ. ಎರಡನೇ ಭಾಗಕ್ಕೆ ರಶ್ಮಿಕಾ 3 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರಂತೆ. ಏನಪ್ಪಾ ಇಷ್ಟೊಂದು ಕೇಳುತ್ತಿದ್ದಾರೆ ಅಂತ ಜನರಿಗೆ ಶಾಕ್ ಆಗಿರಬಹುದು .ಆದರೆ ನಿರ್ಮಾಪಕರು ಇಷ್ಟು ಸಂಭಾವನೆ ಕೊಡಲು ಸಿದ್ಧರಿದ್ದಾರೆ ಎನ್ನುವ ಮಾತುಗಳಿವೆ. 

New Year Celebration: ಗೋವಾದಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ ರಶ್ಮಿಕಾ-ವಿಜಯ್

ಪುಷ್ಪ ಚಿತ್ರಕ್ಕೆ ಅಲ್ಲು ಅರ್ಜುನ್ 3 0ರಿಂದ 32 ಕೋಟಿ ರೂ. ಸಂಭಾವನೆ ಪಡೆದಿದ್ದರು. ಭಾಗ ಎರಡು ಮಾಡುವುದಕ್ಕೆ ಇನ್ನೂ 2 ಕೋಟಿ ಸೇರಿಸಿ ಕೊಡಿ ಎಂದಿದ್ದಾರಂತೆ. ಭಾಗ 1 ರಿಂದ ಪಡೆದುಕೊಂಡಿರುವ ಲಾಭದಿಂದ ನಿರ್ಮಾಪಕರು ಭಾಗ ಎರಡನ್ನೂ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನಿತರೆ ಸ್ಟಾರ್ ನಟರಿಗೆ ಹೆಚ್ಚಿನ ಸಂಭಾವನೆ ನೀಡಿ, ಅವರನ್ನೂ ಸಿನಿಮಾ ತಂಡಕ್ಕೆ ಸೇರಿಸಿಕೊಳ್ಳುವ ಪ್ಲ್ಯಾನ್ ಮಾಡುತ್ತಿದ್ದಾರೆ.

ಸದ್ಯ ಬಾಲಿವುಡ್ ಮಂದಿ ರೇಂಜ್‌ಗೆ ಸಂಭಾವನೆ ಪಡೆಯುತ್ತಿರುವುದು ದಕ್ಷಿಣ ಭಾರತೀಯ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಮಾತ್ರ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ಇಡೀ ವರ್ಷ ಬ್ಯುಸಿಯಾಗಿರುವ ರಶ್ಮಿಕಾ ವರ್ಷದಲ್ಲಿ ಇನ್ನೂ 30 ರಿಂದ 60 ದಿನ ಹೆಚ್ಚಿಗೆ ಇರಬೇಕಿತ್ತು. ಆಗ ನಮ್ಮ ಭಾಷೆ ಸಿನಿಮಾವನ್ನೂ ಒಪ್ಪಿಕೊಳ್ಳುತ್ತಿದ್ದೆ ಎಂದಿದ್ದಾರೆ.  ರಶ್ಮಿಕಾ ಸಂಭಾವನೆ ಬಗ್ಗೆ ನೆಟ್ಟಿಗರಲ್ಲಿ ವಿಧ ವಿಧದ ಮಾತು ಶುರುವಾಗಿದೆ. ಇಷ್ಟೊಂದು ಹಣ ಪಡೆದುಕೊಂಡು, ಏನು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಡಿಲೀಟ್ ಆದ ದೃಶ್ಯ ಬಿಡುಗಡೆ ಮಾಡಿದ Pushpa ತಂಡ, ವಿಡಿಯೋ ನೋಡಲು ಮುಗಿಬಿದ್ದ ಜನ!

ಕೊಡಗಿನಲ್ಲಿ (Coorg) ತುಂಬಾನೇ ಆಸ್ತಿ ಹೊಂದಿರುವ ರಶ್ಮಿಕಾ ಮಂದಣ್ಣ ಹೈದರಾಬಾದ್‌ (Hyderabad) ಮನೆ ಮತ್ತು ಮುಂಬೈನಲ್ಲಿ (Mumbai) ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಅದಲ್ಲದೆ ಕೋಟಿ ಬೆಲೆ ಬಾಳುವ ಕಾರುಗಳನ್ನು ಕೂಡ ಖರೀದಿಸಿದ್ದಾರೆ. ಇನ್ನು ಏನು ಸಂಪಾದನೆ ಮಾಡುಬೇಕು ಮೇಡಂ ಎಂದು ಕೇಳಿದ್ದಾರೆ, ಸದಾ ಕಾಲೆಳೆಯುವ ನೆಟ್ಟಿಗರು. 'ನೀವು ಸದಾ ಡಯಟ್ (Diet) ಮತ್ತು ಜಿಮ್‌ (Gym) ಎನ್ನುತ್ತಾ, ಅದು ಇದು ತಿನ್ನುವುದಿಲ್ಲ. ಒಂದು ದಿನ ಒಡವೆ (Gold) ಹಾಕಿರುವುದು ನೋಡಿಲ್ಲ. ಸದಾ ನಾಯಿ ಮರಿಗಳ ಜೊತೆ ಇರುತ್ತೀರಿ. ಎಲ್ಲೂ ಹೊರಗಡೆ ಹೋಗಲ್ಲ. ಸುತ್ತಾಟ ಬರೀ ವಿಜಯ್ ದೇವರಕೊಂಡ (Vijay Deverakonda) ಜೊತೆಗೆ. ಮತ್ತೆ ಯಾಕೆ ಬೇಕು ಇಷ್ಟೊಂದು ಹಣ?' ಎಂದು ಪ್ರಶ್ನೆ ಮಾಡಿದ್ದಾರೆ. 

ರಶ್ಮಿಕಾ ಯಾವುದೇ ಚಿತ್ರರಂಗದಲ್ಲಿರಲ್ಲಿ ಕನ್ನಡ ಸಿನಿಮಾ ಮಾಡಬೇಕು ಎಂದು ಈಗಲೂ ಕನ್ನಡಿಗರು ಆಸೆ ಪಡುತ್ತಾರೆ.

Follow Us:
Download App:
  • android
  • ios