ಡಿಲೀಟ್ ಆದ ದೃಶ್ಯ ಬಿಡುಗಡೆ ಮಾಡಿದ Pushpa ತಂಡ, ವಿಡಿಯೋ ನೋಡಲು ಮುಗಿಬಿದ್ದ ಜನ!

ಡಿಲೀಟ್‌ ಸೀನ್ ವೈರಲ್. ಸಾಲ ತೀರಿಸುವವರ ಜೊತೆ ಹೀಗೂ ವರ್ತಿಸಬಹುದಾ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....

Tollywood Allu Arjun Rashmika Mandanna Pushpa deleted scene goes viral vcs

ಟಾಲಿವುಡ್ (Tollywood) ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯಿಸಿರುವ ಪುಷ್ಪ (Pushpa) ಸಿನಿಮಾ ಅದ್ಧೂರಿ ಪ್ರದರ್ಶನ ಕಂಡು, ಹಾಕಿದ ಬಂಡವಾಳವನ್ನು ಮನೆಗೆತ್ತುಕೊಂಡು ಹೋಗಿದೆ. ನಿರ್ದೇಶಕ ಸುಕುಮಾರ್‌ (Sukumar) ನನ್ನ ಜೀವ ಮತ್ತು ಜೀವನ ಉಳಿಸಿದ ಗೆಳೆಯ ಎಂದು ವೇದಿಕೆ ಮೇಲೆ ಅಲ್ಲು ಕಣ್ಣೀರಿಟ್ಟಿದ್ದರು, ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ. 

ಕೆಲವು ದಿನಗಳ ಹಿಂದೆ ಚಿತ್ರತಂಡ ಸಿನಿಮಾದಲ್ಲಿ ಡಿಲೀಟ್ (Pushpa Delet scene) ಮಾಡಿರುವ ದೃಶ್ಯವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡು ನಿಮಿಷ ಇರುವ ಈ ವಿಡಿಯೋದಲ್ಲಿ ಸಾಲ (Loan) ತೀರಿಸಿಲ್ಲ ಎಂದು ಸಾಲ ನೀಡಿದವನು ಪುಷ್ಪ ಮನೆ ಎದುರು ತನ್ನ ತಾಯಿ ಜೊತೆ ಜಗಳವಾಡುತ್ತಾನೆ. ಇದರಿಂದ ಬೇಸರಗೊಂಡ ಪುಷ್ಪ ಕೆಲವೇ ದಿನಗಳಲ್ಲಿ ತನ್ನ ತಾಯಿ ಮಾಡಿದ್ದ ಸಾಲವನ್ನು ತೀರಿಸುತ್ತಾನೆ. ಬಳಿಕ ಸಾಲ ನೀಡಿದವನಿಗೆ ಒಂದು ಶರತ್ತು ಹಾಕುತ್ತಾನೆ. ಸಾಲ ತೀರಿಸಿದ್ದಾರೆ, ಎಂದು ಊರಿನಲ್ಲಿರುವ ಎಲ್ಲರಿಗೂ ಹೇಳಿಕೊಂಡು ಬರುವಂತೆ ಧಮಕಿ ಹಾಡುತ್ತಾನೆ. ಸಾಲಗಾರರಿಂದ ತಮ್ಮ ತಾಯಿಗೆ (Mother) ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಪುಷ್ಪ ಹೀಗೆ ಮಾಡುತ್ತಾನೆ.  

Tollywood Allu Arjun Rashmika Mandanna Pushpa deleted scene goes viral vcs

ಈ ಒಂದು ದೃಶ್ಯ ಮಾತ್ರವಲ್ಲ, ನ್ಯಾಷನಲ್ ಕ್ರಶ್ (National Crush) ರಶ್ಮಿಕಾ ಮಂದಣ್ಣ ಮಾಡಿರುವ ಪುಷ್ಪವಲ್ಲಿ ಪಾತ್ರದ ಎದೆಯನ್ನು ನಾಯಕ ಅಲ್ಲು ಅರ್ಜುನ್ ಸ್ಪರ್ಶಿಸುವ ದೃಶ್ಯವನ್ನೂ ಡಿಲೀಟ್ ಮಾಡಲಾಗಿತ್ತು. ಆರಂಭದಲ್ಲಿ ಈ ದೃಶ್ಯವನ್ನು ಪ್ರಸಾರ ಮಾಡಲಾಗಿತ್ತು. ಆದರೆ ಫ್ಯಾಮಿಲಿ ಆಡಿಯನ್ಸ್‌ (Family Audience) ಹೆಚ್ಚಾದ ಕಾರಣ ಮುಜುಗರ ಆಗಬಹುದು ಎಂದು ಡಿಲೀಟ್ ಮಾಡಿದ್ದಾರೆ. ಈ ವಿಡಿಯೋವನ್ನೂ ಎಲ್ಲಿಯೂ ಅಪ್ಲೋಡ್ ಮಾಡಿಲ್ಲ. ಸಾಲದ ವಿಡಿಯೋವನ್ನು ಸಿನಿಮಾ ಟೈಮಿಂಗ್ ಉಳಿಸುವ ಸಲುವಾಗಿ ಡಿಲೀಟ್ ಮಾಡಲಾಗಿತ್ತು ಎನ್ನಲಾಗಿದೆ. 

Rashmika Mandanna : ಪುಷ್ಪಾ ಯಶಸ್ಸಿನ ಅಲೆಯಲ್ಲೊಂದು ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ!

ವಾದ ವಿವಾದ ಮತ್ತು ವೈರಲ್ ನ್ಯೂಸ್‌ಗಳ ನಡುವೆ ಪುಷ್ಪ ಸಿನಿಮಾ 300 ಕೋಟಿ ರೂ. ಗಳಿಸಿದೆ. ಮೊದಲ ವಾರ ಪುಷ್ಪ ಚಿತ್ರಕ್ಕಿದ್ದ ಸ್ಕ್ರೀನ್‌ಗಳು (Pushpa Screening) ಬಹಳ ಕಡಿಮೆ ಸಿಕ್ಕಿದ್ದವು. ಹೀಗೆ ನೋಡಿದರೆ ಮೂರನೇ ವಾರಕ್ಕೆ ಹೆಚ್ಚಾಗಿದೆ. ಮೊದಲ ವಾರ 1400 ಸ್ಕ್ರೀನ್, ಎರಡನೇ ವಾರ 1500 ಸ್ಕ್ರೀನ್ ಮತ್ತು ಮೂರನೇ ವಾರ 1600 ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶಿತವಾಗುತ್ತಿದೆ. 

ಸಿನಿಮಾ ನಿರೀಕ್ಷೆಗೂ ಮೀರಿಸಿದ ಫಲ ನೀಡುತ್ತಿರುವ ಸಕ್ಸಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಕುಮಾರ್ ಚಿತ್ರತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಭರ್ಜರಿ ಉಡುಗೊರೆ (Gift) ನೀಡಿದ್ದಾರೆ. ಸೆಟ್ ಬಾಯ್, ಆರ್ಟ್‌ ಡಿಪಾರ್ಟ್‌ಮೆಂಟ್‌, ಲೈಟ್ ಮ್ಯಾನ್‌ ಹೀಗೆ ಹಗಲು ರಾತ್ರಿ ಕೆಲಸ ಮಾಡಿದವರಿಗೆ ತಲಾ ಒಂದು ಲಕ್ಷ ರೂಪಾಯಿ ರೂ. ನೀಡಿದ್ದಾರೆ. ಈ ಫೋಷಣೆ ಮಾಡುವಾಗ ಪಕ್ಕದಲ್ಲಿ ನಟ ಅಲ್ಲು ಅರ್ಜುನ್ ಸಾಕ್ಷಿಯಾಗಿ ನಿಂತಿದ್ದರು. 

Pushpa : ಪ್ರಚಾರವಿಲ್ಲ.. ಪೋಸ್ಟರ್ ಇಲ್ಲ ಹಿಂದಿ ಸಿನಿಮಾ ಮೀರಿಸಿದ  ಪುಷ್ಪಾಗೆ ಕರಣ್ ಭೇಷ್!

ಸಿನಿಮಾದವರಿಗೆ ಮತ್ತು ಅಭಿಮಾನಿಗಳಿಗೆ ಮಾತ್ರ ಪುಷ್ಪ ಕ್ರೇಜ್ ಹಿಡಿದದ್ದಲ್ಲ, ರಾಜಕಾರಣಿಗಳಿಗೂ ಹಿಡಿದಿದೆ ನ್ನುವುದಕ್ಕೆ ಕೆಲವು ದಿನಗಳ ಹಿಂದೆ ಬಿಜೆಪಿ (BJP) ಕಾರ್ಯದರ್ಶಿ ಹೊಡೆದ ಡೈಲಾಗ್ ವಿಡಿಯೋನೇ ಸಾಕ್ಷಿ. ಆಂಧ್ರಪ್ರದೇಶದಲ್ಲಿ (Andra Pradesh) ನಡೆದ ಪ್ರಜಾ ಆಗ್ರಹ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯದರ್ಶಿ ಹಾಗೂ ಆಂಧ್ರ ಸಹ ಉಸ್ತುವಾರಿ ಸುನೀಲ್ ದಿಯೋದರ್‌ (Sunil Deodhar) ನಾನು ಸಹ ಪುಷ್ಪ ಸಿನಿಮಾ ನೋಡಿದೆ. ನಾನು ಜಗನ್ ಮೋಹನ್ ರೆಡ್ಡಿಯವರಿಗೆ (Jagan Mohan reddy) ಹೇಳುತ್ತಿದ್ದೇನೆ, ಬಿಜಿಪಿ ಅಂದ್ರೆ ಫ್ಲವರ್ ಅಂದುಕೊಂಡೆಯಾ ಅಲ್ಲ ಬಿಜೆಪಿ ಅಂದ್ರೆ ಫೈಯರ್‌ ಎಂದಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ.

 

Latest Videos
Follow Us:
Download App:
  • android
  • ios