Asianet Suvarna News Asianet Suvarna News

ಶಿವಣ್ಣನಿಗಾಗಿ 'ಪ್ರೇಮಂ ಪೂಜ್ಯಂ' ತ್ಯಾಗ: ನವೆಂಬರ್ 12ರಂದು ತೆರೆಗೆ

ಅಕ್ಟೋಬರ್ 29 ರಂದು 'ಭಜರಂಗಿ 2' ಚಿತ್ರವು ತೆರೆ ಕಾಣುತ್ತಿದ್ದು, ಶಿವಣ್ಣನ ಮೇಲಿನ ಅಭಿಮಾನಕ್ಕೆ ಚಿತ್ರತಂಡದವರು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು, ನವೆಂಬರ್ 12 ರಂದು 'ಪ್ರೇಮಂ ಪೂಜ್ಯಂ'  ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪ್ರೇಮ್ ತಿಳಿಸಿದ್ದಾರೆ.

Kannada Movie Premam Poojyam released on November 12th
Author
Bangalore, First Published Oct 27, 2021, 7:01 PM IST

ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅಭಿನಯದ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರಕ್ಕೆ ಇತ್ತಿಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ 'ಯು/ಎ ಪ್ರಮಾಣ ಪತ್ರ' (U/A Certificate) ಸಿಕ್ಕಿತ್ತು. ಇದೇ ಅಕ್ಟೋಬರ್ ೨೯ ರಂದು ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರವು ಅಂದು ಬಿಡುಗಡೆಯಾಗುತ್ತಿಲ್ಲ. ಹೌದು! ನೆನಪಿರಲಿ ಪ್ರೇಮ್ ನಟನೆಯ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ'. ಈ ಚಿತ್ರದಲ್ಲಿ ಪ್ರೇಮ್ ಶ್ರೀಹರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಅಕ್ಟೋಬರ್ 29 ರಂದು ಎ.ಹರ್ಷ (A.Harsha) ನಿರ್ದೇಶನದ ಶಿವಣ್ಣ (Shivanna) ಅಭಿನಯದ 'ಭಜರಂಗಿ 2' (Bhajarangi 2) ಚಿತ್ರವು ತೆರೆ ಕಾಣುತ್ತಿದ್ದು, ಶಿವಣ್ಣನ ಮೇಲಿನ ಅಭಿಮಾನಕ್ಕೆ ಚಿತ್ರತಂಡದವರು ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಇದೀಗ ಚಿತ್ರತಂಡ ಇದೇ ನವೆಂಬರ್ 12 ರಂದು 'ಪ್ರೇಮಂ ಪೂಜ್ಯಂ'  ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಚಿತ್ರದ ನಾಯಕ ಪ್ರೇಮ್, 'ಪ್ರೇಮಂ ಪೂಜ್ಯಂ ನವೆಂಬರ್ 12ರಿಂದ ನಿಮ್ಮ ಮಡಿಲಿಗೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಹಂಚಿಕೊಂಡಿದ್ದಾರೆ. 
 


'ಪ್ರೇಮಂ ಪೂಜ್ಯಂ' ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ (Dr. Raghavendra BS) ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ.  'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರದ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ್ದಾರೆ. ಹಾಗೂ ಸೆನ್ಸಾರ್ ಮಂಡಳಿಯವರು ಚಿತ್ರವನ್ನು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ.

ಸ್ನೇಹ-ಪ್ರೀತಿಯ ಸುತ್ತ 'ಪ್ರೇಮಂ ಪೂಜ್ಯಂ': Trailer ರಿಲೀಸ್

ಚಿತ್ರದಲ್ಲಿ ಪ್ರೇಮ್ ಎದುರಿಗೆ ನಾಯಕಿಯಾಗಿ ಬೃಂದಾ ಆಚಾರ್ಯ (Brunda Acharya) ನಟಿಸಿದ್ದು,  ಐಂದ್ರಿತಾ ರೇ (Aindrita Ray), ಸುಮನ್ (Suman), ಮಾಸ್ಟರ್ ಆನಂದ್ (Master Anand), ಸಾಧು ಕೋಕಿಲಾ (Sadhu Kokila), ಅನು ಪ್ರಭಾಕರ್ (Anu Prabhakar), ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದಾರೆ. ಈ  ಚಿತ್ರದ ಮತ್ತೊಂದು ವಿಶೇಷ ಪ್ರೇಮ್ ಹಾಗೂ  ಐಂದ್ರಿತಾ ರೇ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಐಂದ್ರಿತಾ ರೈ ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ. ಅಲ್ಲದೇ ಮುಖ್ಯವಾಗಿ ತಾಯಿಯಾದ ಬಳಿಕ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದ, ನಟಿ ಅನುಪ್ರಭಾಕರ್ ಕೂಡಾ ಈ ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಕೊನೆಯಲ್ಲಿ ಇವರು ಎಂಟ್ರಿ ಕೊಡಲಿದ್ದಾರೆ. 

'ಪ್ರೇಮಂ ಪೂಜ್ಯಂ' ಚಿತ್ರಕ್ಕೆ ಯು/ಎ ಸರ್ಟಿಫೀಕೆಟ್‌

'ಪ್ರೇಮಂ ಪೂಜ್ಯಂ'  ಚಿತ್ರಕ್ಕೆ ಹರಿಹರನ್ , ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್ ಸೇರಿದಂತೆ ಹಲವು  ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ  ಒಂದು ಹಾಡಿಗೆ ದನಿಯಾಗಿದ್ದಾರೆ. 

"

Follow Us:
Download App:
  • android
  • ios