Asianet Suvarna News Asianet Suvarna News

'ಪ್ರೇಮಂ ಪೂಜ್ಯಂ' ಚಿತ್ರಕ್ಕೆ ಯು/ಎ ಸರ್ಟಿಫೀಕೆಟ್‌

ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ 'ಪ್ರೇಮಂ ಪೂಜ್ಯಂ' ಚಿತ್ರವನ್ನು ಸೆನ್ಸಾರ್ ಮಂಡಳಿಯವರು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ.

U A Certificate for Kannada Movie Premam Poojyam
Author
Bangalore, First Published Oct 24, 2021, 11:01 AM IST
  • Facebook
  • Twitter
  • Whatsapp

'ನೆನಪಿರಲಿ' ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' (Premam Poojyam) ಚಿತ್ರದ ಟ್ರೈಲರ್ (Trailer) ಇತ್ತಿಚೆಗಷ್ಟೇ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಚಿತ್ರತಂಡ ಚಿತ್ರವನ್ನು ಇದೇ ಅಕ್ಟೋಬರ್ 29ರಂದು ಬಿಡುಗಡೆ ಮಾಡುತ್ತೇವೆ ಎಂದು ಅನೌನ್ಸ್ ಕೂಡಾ ಮಾಡಿದ್ದರು. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು/ಎ ಪ್ರಮಾಣ ಪತ್ರ' (U/A Certificate) ಸಿಕ್ಕಿದೆ. ಹೌದು! ಸೆನ್ಸಾರ್ ಮಂಡಳಿಯವರು ಚಿತ್ರವನ್ನು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು ನೀಡಿದ್ದಾರೆ.

ನೆನಪಿರಲಿ ಪ್ರೇಮ್‌ ಹೇಳಿದ ಕೆಲವು ಸಂಗತಿಗಳಿವು

ಶ್ರೀಹರಿ ಪಾತ್ರದಲ್ಲಿ ಪ್ರೇಮ್ ಕಾಣಿಸಿಕೊಳ್ಳುತ್ತಿರುವ ಈ ಚಿತ್ರವನ್ನು ವೈದ್ಯ ಮತ್ತು ಪ್ರಾಧ್ಯಾಪಕ ರಾಘವೇಂದ್ರ ಬಿ.ಎಸ್ (Dr. Raghavendra BS) ನಿರ್ದೇಶಿಸುವುದರ ಜೊತೆಗೆ, ಕಥೆ ಮತ್ತು ಚಿತ್ರಕಥೆಯನ್ನು ಬರೆದಿರುವ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನೂ ಸಹ ಮಾಡಿದ್ದಾರೆ. ತಮ್ಮ ಚೊಚ್ಚಲ ಚಿತ್ರಕ್ಕಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತಿದ್ದಾರೆ.  ಇನ್ನು 'ಲೈಫ್ ಜತೆ ಒಂದ್ ಸೆಲ್ಫಿ' (Life Jothe Ond Selfie) ಸಿನಿಮಾದ ನಂತರ ಪ್ರೇಮ್ ಅವರು ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿರಲಿಲ್ಲ. ಮುಖ್ಯವಾಗಿ ಪ್ರೇಮ್ ಅವರು ತಮ್ಮ 25ನೇ ಚಿತ್ರವು ವಿಶೇಷವಾಗಿರಬೇಕು ಎಂದು ಅಳೆದುತೂಗಿ ಈ ಚಿತ್ರದ ಪಾತ್ರವನ್ನು ಒಪ್ಪಿಕೊಂಡು ಅಭಿನಯಿಸಿದ್ದಾರೆ.
 


'ಪ್ರೇಮಂ ಪೂಜ್ಯಂ'  ಚಿತ್ರಕ್ಕೆ ಹರಿಹರನ್ , ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್ ಸೇರಿದಂತೆ ಹಲವು  ಗಾಯಕರು ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೂಡ  ಒಂದು ಹಾಡಿಗೆ ದನಿಯಾಗಿದ್ದಾರೆ. ಚಿತ್ರದಲ್ಲಿ ಪ್ರೇಮ್ ಎದುರಿಗೆ ನಾಯಕಿಯಾಗಿ ಶೃಂಗೇರಿ ಹುಡುಗಿ ಬೃಂದಾ ಆಚಾರ್ಯ (Brunda Acharya) ನಟಿಸಿದ್ದು,  ಐಂದ್ರಿತಾ ರೇ (Aindrita Ray), ಸುಮನ್ (Suman), ಮಾಸ್ಟರ್ ಆನಂದ್ (Master Anand), ಸಾಧು ಕೋಕಿಲಾ (Sadhu Kokila), ಅನು ಪ್ರಭಾಕರ್ (Anu Prabhakar, ತಪಸ್ವಿನಿ (Tapaswini) ಸೇರಿದಂತೆ ಹಿರಿಯ ನಿರ್ದೇಶಕ ಟಿ ಎಸ್ ನಾಗಾಭರಣ (T.S.Nagabharana) ಸಹ ತೆರೆ ಹಂಚಿಕೊಂಡಿದ್ದಾರೆ. 

ಸ್ನೇಹ-ಪ್ರೀತಿಯ ಸುತ್ತ 'ಪ್ರೇಮಂ ಪೂಜ್ಯಂ': Trailer ರಿಲೀಸ್

ಈ  ಚಿತ್ರದ ಮತ್ತೊಂದು ವಿಶೇಷ ಪ್ರೇಮ್ ಹಾಗೂ  ಐಂದ್ರಿತಾ ರೇ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಮೊದಲು "ಅತಿರೂಪ' (Atiroopa) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಚೌಕ' (Chowka) ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ "ಪ್ರೇಮಂ ಪೂಜ್ಯಂ'ನಲ್ಲಿ ಮತ್ತೆ ಒಂದಾಗಿದ್ದಾರೆ. ಐಂದ್ರಿತಾ ರೈ ಮದುವೆ ಬಳಿಕ ಮಾಡುತ್ತಿರುವ ಮೊದಲ ಸಿನಿಮಾ. ಅಲ್ಲದೇ ಮುಖ್ಯವಾಗಿ ತಾಯಿಯಾದ ಬಳಿಕ ಮಗಳ ಪಾಲನೆ, ಪೋಷಣೆಯಲ್ಲಿ ಬ್ಯುಸಿಯಾಗಿದ್ದ, ನಟಿ ಅನುಪ್ರಭಾಕರ್ ಕೂಡಾ ಈ ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಕೊನೆಯಲ್ಲಿ ಇವರು ಎಂಟ್ರಿ ಕೊಡಲಿದ್ದಾರೆ.

Follow Us:
Download App:
  • android
  • ios