Asianet Suvarna News Asianet Suvarna News

ಹಿಂದಿ ಚಿತ್ರರಂಗಕ್ಕೆ ಯಶ್ ಅಗತ್ಯವಿದ್ಯಾ?; Violance ಬಗ್ಗೆ ಕ್ಲಾರಿಟಿ ಕೊಟ್ಟ ರಾಕಿ

ಒಬ್ಬ ನಾಯಕ ಡೈಲಾಗ್ ಹೇಳುವ ರೀತಿ ಸಿನಿ ರಸಿಕರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ? ಅಲ್ಲದೆ ಆಕ್ಷನ್ ಸಿನಿಮಾಗಳಲ್ಲಿ Violance ಹೆಚ್ಚಾಗಿದ್ಯಾ?

Kannada actor Yash talks about Violence in action film vcs
Author
First Published Nov 6, 2022, 4:50 PM IST

ಕನ್ನಡ ಚಿತ್ರರಂಗವನ್ನು ಮತ್ತೊಂದು ದೊಡ್ಡ ಹಂತಕ್ಕೆ ಕರೆದುಕೊಂಡು ಹೋದ ನಟ ರಾಕಿಂಗ್ ಸ್ಟಾರ್ ಯಶ್. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ ಧೂಳ್ ಎಬ್ಬಿಸಿ ಕೆಜಿಎಫ್‌ ಚಾಪ್ಟರ್ 1 ಮತ್ತು 2 ಸಿನಿಮಾದಲ್ಲಿ ಯಶ್‌ Violanceನ ಹೆಚ್ಚಿಗೆ ತೋರಿಸಿದ್ದಾರಾ? ಇದರಿಂದ ವೀಕ್ಷಕರ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ?  India Today Conclave Mumbai 2022 ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಮಾತನಾಡಿದ್ದಾರೆ.

ರಾಜ್‌ದೀಪ್: ಯಶ್ ಸಿನಿಮಾ ಹೇಗೆ ಮಾಡಿದ್ದಾರೆ ಅಂದ್ರೆ ಬರೀ ಆಕ್ಷನ್ ಹೀರೋಗಳು ಹುಟ್ಟಿರುವುದೇ Violance ಕ್ರಿಯೇಟ್ ಮಾಡಲು? ನಾಯಕಿ ಪಾತ್ರ ಇಡೀ ಕಥೆಗೆ ಒಂದು ಇನ್‌ಸಿಡೆಂಟಲ್ ಆಗುತ್ತದೆ. ಇಷ್ಟೊಂದು  Violance ಇರುವಾಗ ಯಾರಾದ್ದರೂ ಒಂದು ಪ್ರಶ್ನೆ ಮಾಡಿದ್ದರೆ ಯಶ್ ಯಾಕೆ ಆಕ್ಷನ್ ಸಿನಿಮಾದಲ್ಲಿ ಇಷ್ಟೊಂದು  Violance ಬೇಕು ಎಂದು ಏನು ಹೇಳುತ್ತೀರಿ?

Kannada actor Yash talks about Violence in action film vcs

ಯಶ್ : 'ಸತ್ಯ ಹೇಳಬೇಕಂದ್ರೆ ಜೀವನದಲ್ಲಿ ಫ್ಯಾಕ್ಟ್‌ಗಳನ್ನು ಒಪ್ಪಿಕೊಳ್ಳಬೇಕು. ಜನರು ಬೆಳಗ್ಗೆ ಬೆಳಕು ಇಷ್ಟ ಪಡುವುದೇ ರಾತ್ರಿ ಕತ್ತಲು ಇರುವುದುಕ್ಕೆ.ರಾತ್ರಿಗಳು ಮಿಸ್ಟೀರಿಯಸ್ ಆಂಡ್ ಕ್ಯೂರಿಯಸ್ ಆಗಿರುವುದೇ ಬೆಳಗ್ಗೆ ಇರುವುದಕ್ಕೆ. ಡಾರ್ಕ್‌ ಸೈಡ್‌ ಕೂಡ ನಮ್ಮ ಜೀವನದಲ್ಲಿ ಒಂದು ಭಾಗ ಅದನ್ನು ನಾವು ಸ್ವೀಕರಿಸಬೇಕು, ಪ್ರಪಂಚದಲ್ಲಿ ಆಗುತ್ತಿರುವುದನ್ನು ನೋಡಿ ನಾವು ಓಡಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಕ್ರಿಯೇಟಿವ್ ಜನರಾಗಿ ನಾನು ಪ್ರೆಸೆಂಟ್ ಮಾಡಬೇಕು ಯಾವುದು ಸರಿ ಯಾವುದು ತಪ್ಪು ಎಂದು ಜನರು ನಿರ್ಧರಿಸುತ್ತಾರೆ. ನೀವು ಈ ಪ್ರಶ್ನೆಗಳನ್ನು ಆಕ್ಷನ್ ಪಿಕ್ಚರ್ ಮಾಡುವವರನ್ನು ಕೇಳಬೇಕು ಅಮಿತಾಭ್ ಬಚ್ಚನ್ ಸರ್‌ ಕೂಡ ಸಿನಿಮ್ಯಾಟಿಕ್ ಲಿಬರ್ಟಿಯನ್ನು ಎಲ್ಲರು ಅರ್ಥ ಮಾಡಿಕೊಳ್ಳುತ್ತಾರೆ. ನೀವು ಒಬ್ಬರನ್ನು ಹೊಡೆಯುತ್ತಿದ್ದರೆ ನೋವವರಿಗೆ ಗೊತ್ತು ನಿಜ ಜೀವನದಲ್ಲಿ ನೀವು ಅಷ್ಟೊಂದು ಜನರಿಗೆ ಹೊಡೆಯಲು ಆಗುವುದಿಲ್ಲ ಎಂದು. ಒಬ್ಬ ನಟ 100 ಜನರಿಗೆ ಹೊಡೆಯುತ್ತಿದ್ದಾನೆ ಅಂತ ಯಾರೂ ಸಿನಿಮಾ ನೋಡಲು ಹೋಗುವುದಿಲ್ಲ ಅದೇ ಕ್ರಿಮಿನಲ್ ಆಕ್ಟಿವಿಟಿ ತೋರಿಸಿ ಅಗ ತಪ್ಪು ಎಂದು ಹೇಳಬಹುದು. ನಾವು ಕ್ರಿಯೇಟಿವ್ ಜನರು ಸಿನಿಮಾದಲ್ಲಿ ಬರೀ ಒಳ್ಳೆಯ ವಿಚಾರಗಳನ್ನು ತೋರಿಸಲು ಆಗುವುದಿಲ್ಲ ಹೀಗಾಗಿ ಏನೇ ತೋರಿಸಿದ್ದರು ನಮಗೊಂದು ಲಿಮಿಟ್ ಇರುತ್ತದೆ ಒಂದು ಕ್ಲಾರಿಟಿ ಇರುತ್ತದೆ ಕೊನೆ ಒಳ್ಳೆ ವಿಚಾರಗಳನ್ನು ಒಂದು ಪ್ಯಾಕೇಟ್ ಮಾಡಿ ಜನರ ಮುಂದೆ ಇಡುತ್ತೀವಿ. ನಿಮಗೆ ನಾನು ಮೊದಲೇ ಹೇಳಿದ ಹಾಗೆ ಕೆಲವೊಂದು ವಿಚಾರಗಳನ್ನು ಅದರದ್ದೇ ರೀತಿಯಲ್ಲಿ ಹೇಳಬೇಕು ಈಗ ನೀವು ರಾಕಿ ನೋಡಿದ್ದರೆ ಅತನನ್ನು ಅದೆಷ್ಟೋ ವಿಚಾರಗಳಿಗೆ ಸ್ಫೂರ್ತಿಯಾಗಿ ಸ್ವೀಕರಿಸಬಹುದು. ಈಗ ನೀವು ರಾವಣ ಕ್ಯಾರೆಕ್ಟರ್ ನೋಡಿದ್ದರೆ ಆತನಲ್ಲಿ ಒಳ್ಳೆಯ ಗುಣ ಮತ್ತು ಕೆಟ್ಟಗುಣ ಎರಡೂ ಇದೆ...ಎರಡರ ಮಿಶ್ರಣವೇ ಬ್ಯೂಟಿ. Violance ವಿಚಾರದಲ್ಲಿ ನಾವು ತಮಾಷೆ ಮಾಡುತ್ತೀವಿ ಈಗ ನಾನು  Violance ಅಂತ ಹೇಳುವ ಮೂಲಕ ಇದನ್ನು ಡೈಲಾಗ್‌ನ ಸ್ಟೈಲಿಷ್ ಮಾಡುತ್ತೀವಿ ಹೊರತು  Violance ಮಾಡುವುದಿಲ್ಲ' ಯಶ್.

ಯಶ್‌ಗೆ ಬಾಲಿವುಡ್‌ನ ನಿರ್ಮಾಪಕರಿಂದ 2 ಮೆಗಾ ಬಜೆಟ್ ಚಿತ್ರಗಳ ಆಫರ್

ರಾಜ್‌ದೀಪ್‌: ಇಷ್ಟೊಂದು ಸ್ಟೈಲಿಷ್ ಡೈಲಾಗ್‌ ಇರುವುದರಿಂದ ನಟರು ಐಕಾನ್ ಅಗುತ್ತಿದ್ದಾರೆ. ರಜನಿಕಾಂತ್‌ ಜೀ ಮಾಡುತ್ತಿದ್ದ ರೀತಿ ಒಂದಾದರೆ ಬಚ್ಚನ್ ಸರ್ ಒಂದು ರೀತಿ ಮಾಡುತ್ತಿದ್ದರು. ನಾಯಕನಿಗೆ ಈ ಗುಣ ಇರಬೇಕು ಅನಿಸುತ್ತಾ? ಏಕೆಂದರೆ ನಟರು ಡೈಲಾಗ್ ಹೇಳುವ ರೀತಿ ನಿಜ ಜೀನವದಲ್ಲಿ ಹೇಳಿದಂತೆ ಕನೆಕ್ಟ್‌ ಆಗುತ್ತಾರೆ.

ಯಶ್: 'ಖಂಡಿತ ಆಗ ವೆಸ್ಟ್ರನ್‌ ಸಿನಿಮಾಗಳನ್ನು  Violance ಹೆಚ್ಚಿಗೆ ಎನ್ನುತ್ತಿದ್ದರು ಆಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಆದರೆ ಈಗ ಅದು ಕ್ಲಾಸಿಕ್ ಆಗಿದೆ. ಪ್ರಮುಖ ಪಾತ್ರಧಾರಿಗೆ ಒಂದು ಚಾರ್ಮ್‌ ಒಂದು ಪರ್ಸೋನ ಇರಬೇಕು ಅದನ್ನು ತೆರೆ ಮೇಲೆ ಇರುತ್ತಾರೆ ಅದನ್ನು ವೀಕ್ಷಕರು ಫಾಲೋ ಮಾಡುತ್ತಾರೆ. ಜನರಿಗೆ ನಾವು ಸ್ಟೈಲ್ ಐಕಾನ್ ಆಗುತ್ತೀವಿ ಅಂಬಾಸಿಡರ್ ಮಾಡುತ್ತಾರೆ..ಏಕೆ? ನಮ್ಮಲ್ಲಿರುವ ಒಂದು ಗುಣವನ್ನು ಅವರು ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟ ಪಡುತ್ತಾರೆ.  ಡೈರೆಕ್ಟರ್ ಕತೆ ಹಿಡಿದು ಬಂದಾಗ ಅದು ಒಳ್ಳೆ ಕತೆ ಅಂತಲ್ಲ ಅದನ್ನು ತೆರೆ ಮೇಲೆ ನಿಮ್ಮ ಶ್ರಮ ಹಾಕಿ ಹೇಗೆ ಜನರ ಮುಂದೆ ಇಡುತ್ತೀರಾ ಅನ್ನೋದು ಮುಖ್ಯವಾಗುತ್ತದೆ.

Follow Us:
Download App:
  • android
  • ios