Asianet Suvarna News Asianet Suvarna News

ಏನ್ರೀ ಇದು ನಟ ವಿಷ್ಣುವರ್ಧನ್ ಕಥೆ, ಮತ್ತೊಂದು ದಾಖಲೆ ವಿಷ್ಣುವರ್ಧನ್ ಹೆಸರಲ್ಲಿದೆ..!

ಈಗಿನ ಜನರೇಶನ್ನಿನವರು ನಿಮ್ಮನಿಮ್ಮ ಅಮ್ಮ, ಅಕ್ಕ, ಅತ್ತಿಗೆ, ಆಂಟಿ, ದೊಡ್ಡಮ್ಮ, ಚಿಕ್ಕಮ್ಮ ಸಿಕ್ಕಾಗ ಕೇಳಿ, ಅವರೇ ಹೇಳುತ್ತಾರೆ. ಅಥವಾ, ನಿಮ್ಮ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ, ಮಾವ, ಬಾವ ಹಾಗೂ ನಿಮ್ಮ ಸ್ಕೂಲ್-ಕಾಲೇಜು ಟೀಚರ್ಸ್ ಕೇಳಿ ನೋಡಿ..

Kannada actor vishnuvardhan have record of more dual role played actor in sandalwood srb
Author
First Published Jul 8, 2024, 5:07 PM IST

ಕನ್ನಡ ಚಿತ್ರರಂಗದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರ ಹೆಸರಿನಲ್ಲಿ ಮತ್ತೊಂದು ದಾಖಲೆ ಇದೆ. ಅದೂ ಕೂಡ ಈಗ ಸೋಷಿಯಲ್ ಮೀಡಿಯಾ ಮೂಲಕ ರಿವೀಲ್ ಆಗುತ್ತಿದೆ. ಹೌದು, ನಟ ವಿಷ್ಣುವರ್ಧನ್ ಭಾರತದ ಅತ್ಯಂತ ಫೋಟೋಜೆನಿಕ್, ಹ್ಯಾಂಡ್‌ಸಮ್ ಫೇಸ್ ಎಂಬ ದಾಖಲೆ ಹೊಂದಿದ್ದಾರೆ ಎಂಬುದು ಇತ್ತೀಚೆಗಷ್ಟೇ ರಿವೀಲ್ ಆಗಿತ್ತು. ಇದೀಗ ಮತ್ತೊಂದು ಸುದ್ದಿ ವೈರಲ್ ಆಗತೊಡಗಿದೆ. ಅದೇನು ಗೊತ್ತಾ? ನೋಡಿದರೆ ನೀವು ನಂಬಲಿಕ್ಕಿಲ್ಲ, ಆದರೂ ಇದು ನಿಜ!

ಕನ್ನಡದಲ್ಲಿ ಅತಿ ಹೆಚ್ಚು ದ್ವಿಪಾತ್ರದಲ್ಲಿ ನಟಿಸಿರುವ ಕನ್ನಡದ ನಾಯಕ ನಟ ವಿಷ್ಣುವರ್ಧನ್. ದಾದಾ ಖ್ಯಾತಿಯ ನಟ ವಿಷ್ಣು ಅವರು ಬರೋಬ್ಬರಿ 25 ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದ್ವಿಪಾತ್ರದ ಮೊಟ್ಟಮೊದಲ ಸಿನಿಮಾ 'ಒಂದೇ ರೂಪ ಎರಡು ಗುಣ' 1975ರಲ್ಲಿ ಬಿಡುಗಡೆ ಆಗಿತ್ತು, ಒಟ್ಟೂ 23 ಚಿತ್ರಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಇದು ಬೇರೆ ಯಾವುದೇ ಕನ್ನಡದ ನಟ ಇಲ್ಲಿಯವರೆಗೆ ಮಾಡಿರದ ಸಾಧನೆ. ಹೌದು, ನಟ ವಿಷ್ಣುವರ್ಧನ್ ಮಾಡಿರುವ ಇಂಥದ್ದೊಂದು ಸಾಧನೆ ಈಗ ಸೋಷಿಯಲ್ ಮೀಡಿಯಾ ಮೂಲಕ ಬೆಳಕಿಗೆ ಬರುತ್ತದೆ. 

ಇಷ್ಟೊಂದು ಲೇಟ್ ಆಗಿ ಸೀಕ್ರೆಟ್ ಗೊತ್ತಾಯ್ತು, ಏನ್ರೀ ಇದೂ, ಯಾರೂ ಮಾಡದೇ ಇರೋದ್ನ ಮಾಡಿದ್ರು ವಿಷ್ಣುವರ್ಧನ್!

ಕನ್ನಡ ಚಿತ್ರರಂಗದ ಮೇರು ನಟ ಡಾ ವಿಷ್ಣುವರ್ಧನ್ ಬಗೆಗಿನ ಆಸಕ್ತಿಕರ ಸಂಗತಿಯೊಂದು ಬಯಲಾಗಿದೆ. ಸ್ಯಾಂಡಲ್‌ವುಡ್‌ನ ನಟರಲ್ಲಿ ನಟ ವಿಷ್ಣುವರ್ಧನ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಅವುಗಳಲ್ಲಿ ಒಂದು, ಅವರದೇ ಹೆಸರಿನಲ್ಲಿ ಒಂದು ದಾಖಲೆಯಿದೆ. ಅದು ಅತ್ಯಂತ ಮುಖ್ಯವಾಗಿದೆ ಕೂಡ. ಏಕೆಂದರೆ, ಯಾರಾದರೂ ಡಿಬೇಟ್ ಮಾಡಿದರೂ ಕೂಡ ಅದಕ್ಕಿದೆ ಸಾಕ್ಷಿ. ಹೀಗಾಗಿ ಈ ಸಂಗತಿಯನ್ನು ನಿಜವಾಗಿಯೂ ತಿಳಿದುಕೊಳ್ಳಲೇಬೇಕು ಅಲ್ವಾ..? 

ಎತ್ತಿ ಆಡಿಸಿದ ಇದೇ ಕೈಗಳಿಂದ ನಟಿ ಅಮೂಲ್ಯ ಬಾಡಿ ಟಚ್ ಮಾಡಲಾರೆ; ನಟ ದರ್ಶನ್!

ಹಾಗಿದ್ದರೆ ಏನದು? ಹೌದು, ಕನ್ನಡದ ನಟ ವಿಷ್ಣುವರ್ಧನ್ ಅವರನ್ನು ಭಾರತದ ಅತ್ಯಂತ ಹ್ಯಾಂಡ್‌ಸಮ್ ಹೀರೋ ಎಂದು ಘೋಷಿಸಲಾಗಿದೆ. ಅದನ್ನು ಹೇಳಿದ್ದು ಯಾರು ಗೊತ್ತಾ? ಕೊಡಕ್ (Kodak) ಹಾಗೂ ಫ್ಯೂಜಿ (Fuji) ಸಂಸ್ಥೆ. ಅಂದು ರೀಲ್ಸ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾಲ. ಈಗಿನಂತೆ ಡಿಜಿಟಲ್ ಯುಗ ಬಂದಿರಲಿಲ್ಲ. ಅಂದು ಸಿನಿಮಾಗಳಿಗೆ ರೀಲ್ಸ್  ಸರಬರಾಜು ಮಾಡಿತ್ತಿದ್ದುದು ಕೊಡಕ್ ಮತ್ತು ಫ್ಯೂಜಿ ಕಂಪನಿಗಳು ಮಾತ್ರ. ಅವುಗಳು ಒಮ್ಮೆ 'ಇಂಡಿಯಾದ ಬೆಸ್ಟ್ ಆಕ್ಟರ್ ಫೇಸ್ ಯಾರು' ಎಂದು ಸರ್ವೇ ಮಾಡಿಲಾಗಿ, ತಿಳಿದುಬಂದಿದ್ದ ರಿಸಲ್ಟ್‌ ಇದಾಗಿತ್ತು. 

ಆ್ಯಂಕರ್​ ಅನುಶ್ರೀ ವೀಡಿಯೋ ಮತ್ತೆ ವೈರಲ್, ಎಕ್ಸ್‌ಕ್ಯೂಸ್‌ ಮೀ ನಟನ ಮನೇಲಿ ಮಾತಿನ ಮಲ್ಲಿ ಓಡಾಡಿದ್ದೇಕೆ..?

ನಟ ವಿಷ್ಣುವರ್ಧನ್‌ ಅವರಿಗೆ ಎಲ್ಲ ಕ್ಯಾಮೆರಾಗೂ ಪರ್ಫೆಕ್ಟ್ ಫೋಟೋಜೆನಿಕ್ ಫೇಸ್ ಇತ್ತು  ಎನ್ನುವುದು ಅಂದಿನ ಎಲ್ಲ ನಿರ್ದೇಶಕರ ಮಾತಾಗಿತ್ತು. ಯಾವುದೇ ಆಂಗಲ್‌ನಲ್ಲಿ ತೋರಿಸಿದರೂ ನಟ ವಿಷ್ಣುವರ್ಧನ್ ಮುಖ ಚೆನ್ನಾಗಿಯೇ ಕಾಣುತ್ತಿತ್ತು ಎನ್ನಲಾಗುತ್ತಿತ್ತು. ಸರ್ವೇಯಲ್ಲೂ ಬಹಳಷ್ಟು ಜನರು ನಟ ವಿಷ್ಣುವರ್ಧನ್ ಅವರ ಹೆಸರನ್ನೇ ಹೇಳಿದ್ದರು. ಬೇರೆಯವರಿಗಿಂತ ವೋಟಿಂಗ್‌ನಲ್ಲಿ ನಟ ವಿಷ್ಣುವರ್ಧನ್ ಭಾರೀ ಮುಂದಿದ್ದರಂತೆ!

ಮೆಜೆಸ್ಟಿಕ್‌ನಲ್ಲಿ ನಟ ದರ್ಶನ್ ಏನ್ ಮಾಡಿದ್ರು ಅನ್ನೋ ಗುಟ್ಟು ಬಿಚ್ಚಿಟ್ಟ ಸಾಧು ಕೋಕಿಲ..!

ಅಂದಿನ ಸಿನಿಮಾ ಪ್ರೇಕ್ಷಕರು ಕೂಡ ನಟ ವಿಷ್ಣುವರ್ಧನ್ ಅವರೇ ತುಂಬಾ ಹ್ಯಾಂಡ್‌ಸಮ್ ನಟ ಎಂದೇ ಹೇಳುತ್ತಿದ್ದರು ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ. ಈಗಿನ ಜನರೇಶನ್ನಿನವರು ನಿಮ್ಮನಿಮ್ಮ ಅಮ್ಮ, ಅಕ್ಕ, ಅತ್ತಿಗೆ, ಆಂಟಿ, ದೊಡ್ಡಮ್ಮ, ಚಿಕ್ಕಮ್ಮ ಸಿಕ್ಕಾಗ ಕೇಳಿ, ಅವರೇ ಹೇಳುತ್ತಾರೆ. ಅಥವಾ, ನಿಮ್ಮ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪ, ಮಾವ, ಬಾವ ಹಾಗೂ ನಿಮ್ಮ ಸ್ಕೂಲ್-ಕಾಲೇಜು ಟೀಚರ್ಸ್ ಕೇಳಿ ನೋಡಿ, ಅವರೆಲ್ಲಾ 'ಹೌದು ಹೌದು' ಅಂತ ಹೇಳಿ ಹೊಟ್ಟೆಕಿಚ್ಚು ಹೊರಹಾಕಬಹುದು.

ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ 

ಒಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿ ಯಾರಿಗೂ ಸಿಗದ ಬಹುಮಾನವೊಂದು ನಟ ವಿಷ್ಣುವರ್ಧನ್ ಅವರಿಗೆ ಸಿಕ್ಕಿದೆ, ಈ ಬಗ್ಗೆ ತಿಳಿದುಕೊಂಡು ಹೇಳಿದ್ದು ನಟ ಲವ್ಲೀ ಸ್ಟಾರ್ ಪ್ರೇಮ್, ಅದನ್ನು ಹೇಳಿದ್ದು ನಟ ರಾಜೇಶ್ ನಟರಂಗ. ಕಿರುತೆರೆ ವೇದಿಕೆ ಮೇಲೆ ಮಾತನಾಡುತ್ತ 'ಮನೆತನ' ಖ್ಯಾತಿಯ ನಟ ರಾಜೇಶ್ ನಟರಂಗ ಅವರು ಈ ಸಂಗತಿಯನ್ನು ಹೊರಜಗತ್ತಿಗೆ ಹೇಳಿದ್ದಾರೆ, ಅದೀಗ ಇಡೀ ಜಗತ್ತನ್ನು ಸುತ್ತು ಹಾಕಿ ಗಿರಕಿ ಹೊಡೆಯುತ್ತಿದೆ. 

ನಾನಿನ್ನೂ ಬಾಡಿಗೆ ಮನೆಲ್ಲಿ ಇರೋದಕ್ಕೆ ಜೆನ್ಯೂನ್ ಕಾರಣವಿದೆ, ಗುಟ್ಟು ಬಿಚ್ಚಿಟ್ಟ ದಿನಕರ್ ತೂಗುದೀಪ!

Latest Videos
Follow Us:
Download App:
  • android
  • ios