ಕನ್ನಡ ಚಿತ್ರರಂಗ ಹೊಸ ಹೊಸ ಮೈಲುಗಲ್ಲುಗಳನ್ನ ಸೃಷ್ಟಿಸುತ್ತಿದೆ. ಒಂದ್ ಕಡೆ ಯಶ್ ​ಆಸ್ಕರ್​ಪ್ರಶಸ್ತಿಗೆ ಮುತ್ತಿಡಲೇಬೇಕು ಅಂತ 'ಟಾಕ್ಸಿಕ್' ಅನ್ನೋ ಪ್ಯಾನ್​ವರ್ಲ್ಡ್ ಸಿನಿಮಾ ಮಾಡುತ್ತಿದ್ರೆ, ಆದಾಗ್ಲೆ ರಿಷಬ್ ಶೆಟ್ಟಿಯ ಕಾಂತಾರ 1 ಸಿನಿಮಾ ಆಸ್ಕರ್​​​​​ ಅಂಗಳಕ್ಕೆ ಬಂದು ನಿಂತಿದೆ. ಮುಂದೇನು? 

ಕನ್ನಡ ಚಿತ್ರರಂಗ ಹೊಸ ಹೊಸ ಮೈಲುಗಲ್ಲುಗಳನ್ನ ಸೃಷ್ಟಿಸುತ್ತಿದೆ. ಒಂದ್ ಕಡೆ ಯಶ್​ಆಸ್ಕರ್​ಪ್ರಶಸ್ತಿಗೆ ಮುತ್ತಿಡಲೇಬೇಕು ಅಂತ 'ಟಾಕ್ಸಿಕ್' ಅನ್ನೋ ಪ್ಯಾನ್​ವರ್ಲ್ಡ್ ಸಿನಿಮಾ ಮಾಡುತ್ತಿದ್ರೆ, ಆದಾಗ್ಲೆ ರಿಷಬ್ ಶೆಟ್ಟಿ ಡಿವೈನ್​ಸ್ಟೋರಿಯ ಕಾಂತಾರ ಚಾಪ್ಟರ್​ ಒನ್ ಸಿನಿಮಾವನ್ನ ತಂದು ಆಸ್ಕರ್​​​​​ ಅಂಗಳಕ್ಕೆ ಅರ್ಜಿ ಹಾಕಿದ್ದಾರೆ. ಹಾಗಾದ್ರೆ ಕಾಂತಾರಕ್ಕೆ ಕಪ್ಪು ಸುಂದರಿ ಆಸ್ಕರ್​ ಪ್ರಶಸ್ತಿ ಸಿಗುತ್ತಾ.? ಆಸ್ಕರ್ ಪ್ರಶಸ್ತಿ ರೇಸ್​ನಲ್ಲಿ ಕಾಂತಾರದ ಪೈಪೋಟಿ ಹೇಗಿದೆ ನೋಡೋಣ ಬನ್ನಿ..

ಡಿವೈನ್ ಸ್ಟಾರ್​ ರಿಷಬ್ ಶೆಟ್ಟಿಗೆ ದೈವ ಬಲ ಹೆಚ್ಚಿದೆ. ದೈವಕ್ಕೆ ಕೊಟ್ಟ ಮಾತಿನಂತೆ ಕಾಂತಾರ ಚಾಪ್ಟರ್​ ಒನ್ ಸಿನಿಮಾವನ್ನ ತೆರೆಗೆ ತಂದು ಗೆದ್ದಾಗಿದೆ ಶೆಟ್ರು. ಬಾಕ್ಸಾಫೀಸ್​​ನಲ್ಲಿ 900 ಕೋಟಿ ಕಲೆಕ್ಷನ್ ಮಾಡಿರೋ ಕಾಂತಾರ ಅಧ್ಯಾಯ ಒಂದರ ಬೇಟೆ ಈಗ ಪ್ರಶಸ್ತಿಗಳ ಕಡೆಗೆ. ಅದರ ಮೊದಲ ಹೆಜ್ಜೆ ಇಟ್ಟಿರೋದು ವಿಶ್ವದ ಸಿನಿ ಜಗತ್ತು ಮುಗಿ ಬೀಳೋ ಆಸ್ಕರ್ ಕಡೆಗೆ..

ನಟ ರಿಷಬ್ ಶೆಟ್ಟಿ ಗ್ಲೋಬಲ್ ಸಿನಿಮಾ ಜಗತ್ತೇ ತಿರುಗಿ ನೋಡುವಂತೆ ಕಾಂತಾರ ಮಾಡಿ ಕೊಟ್ಟಾಗಿದೆ. ಈಗ ಆ ಸಿನಿಮಾವನ್ನ ವಿಶ್ವ ಪ್ರಶಸ್ತಿಗಳನ್ನ ಬಾಚಿಕೊಳ್ಳಲು ರೇಸ್​ಗೆ ಬಿಡೋ ಜವಾಬ್ಧಾರಿ ನಿರ್ಮಾಣ ಮಾಡಿರೋ ಹೊಂಬಾಳೆ ಪ್ರೊಡಕ್ಷನ್​​ನದ್ದು, ಇದೇ ಹಾದಿಯಲ್ಲಿರೋ ಹೊಂಬಾಳೆ ಆಸ್ಕರ್​ ಪ್ರಶಸ್ತಿ ಪಡೆಯಲು ರೇಸ್​​ಗೆ ತಮ್ಮ ಕಾಂತಾರದ ಅರ್ಜಿಯನ್ನ ಹಾಕಿದ್ದಾರೆ..

ಯೆಸ್, ಈ ಆಸ್ಕರ್​ ಅನ್ನೋ ಕಪ್ಪು ಸುಂದರಿ ಯಾವಾಗಲೂ ಭಾರತೀಯ ಸಿನಿ ರಂಗಕ್ಕೆ ಮರೀಚಿಕೆಯೇ.. ಆದ್ರೆ ನಮ್ಮಲ್ಲೂ ಗ್ಲೋಬಲ್​​​​ ಸಿನಿಮಾ ಮಾರ್ಕೆಟ್​​ನಲ್ಲಿ ಮಿಂಚಿ ಮೆರೆದಾಡಿ ಆಸ್ಕರ್​ ಅಂತಹ ದೊಡ್ಡ ಪ್ರಶಸ್ತಿಯನ್ನ ಬಾಚಿಕೊಳ್ಳಬಹುದು ಅಂತ ತೋರಿಸಿಕೊಟ್ಟಿದ್ದು ಎಸ್​, ಎಸ್​ ರಾಜಮೌಳಿ.. ಆರ್​ಆರ್​ಆರ್ ಸಿನಿಮಾದ ನಾಟು ಹಾಡಿಗೆ ಆಸ್ಕರ್​ ಗರಿ ಬಂದಿತ್ತು..

(RRR ನ ನಾಟು ಹಾಡು ಫ್ಲೋ..) ಹಾಗೆ ರಾಜಮೌಳಿ ಆಸ್ಕರ್ ಪಡೆಯೋ ದೃಶ್ಯ)

ಆದ್ರೆ ಭಾರತದಲ್ಲಿ ನಿರ್ಮಾಣವಾದ ಫೀಚರ್ ಚಿತ್ರಕ್ಕೆ ಪ್ರಶಸ್ತಿಗಳು ಬಂದಿಲ್ಲ. 3 ವರ್ಷದ ಹಿಂದೆ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಕ್ಕಿದ್ದೇ ಈವರೆಗಿನ ಅತ್ಯುತ್ತಮ ಸಾಧನೆ. ಆದ್ರೆ ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ದೇಶನ ಹೀಗೆ ಪ್ರಮುಖ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿಲ್ಲ. ಕೊನೆ ಪಕ್ಷ ನಾಮಿನೇಷನ್ ಹಂತದವರೆಗೂ ಹೋಗಿಲ್ಲ. ಈ ಸಾಧನೆಯನ್ನ ಕಾಂತಾರ ಚಾಪ್ಟರ್ ಒನ್ ಮಾಡುತ್ತೆ ಅನ್ನೋ ನಂಬಿಕೆ ದಟ್ಟವಾಗಿದೆ.

ಆಸ್ಕರ್ ಬಗ್ಗೆ ರಿಷಬ್ ಹಾಕಿಲ್ಲ ಒಂದೇ ಒಂದು ಪೋಸ್ಟ್..!

ಈ ಆಸ್ಕರ್​​​ ಪ್ರಶಸ್ತಿ ಬಾಚಿಕೊಳ್ಳೋ ಬರದಲ್ಲಿ ಮತ್ತೊಂದು ಡೌಟ್​ ಈಗ ಸ್ಯಾಂಡಲ್​ವುಡ್​​ನಲ್ಲಿ ದಟ್ಟವಾಗಿದೆ. ಅದು ಹೊಂಬಾಳೆ ಪ್ರೊಡಕ್ಷನ್ ಜೊತೆ ರಿಷಬ್ ಶೆಟ್ಟಿಯ ಸ್ನೇಹ ಕೊತ್ತೋಗಿದೆಯಾ..? ಅನ್ನೋದು. ಯಾಕಂದ್ರೆ ಇಷ್ಟು ದೊಡ್ಡ ಪ್ರಶಸ್ತಿ ಆಸ್ಕರ್​​ಗೆ ಅರ್ಜಿ ಸಲ್ಲಿಸಿರೋ ವಿಷಯವನ್ನ ಹೊಂಬಾಳೆ ಅಧಿಕೃತವಾಗಿ ಹೇಳಿಕೊಂಡಿದೆ. ಆದ್ರೆ ಈ ಬಗ್ಗೆ ಸಿನಿಮಾ ನಿರ್ದೇಶಕ ರಿಷಬ್ ಎಲ್ಲಿಯೋ ಹೇಳಿಕೊಂಡಿಲ್ಲ. ಹೀಗಾಗಿ ಕಾಂತಾರ ತಂಡದ ಮಧ್ಯೆ ಏನಾಗಿದೆ ಅನ್ನೋ ಡೌಟ್​ಹುಟ್ಟಿದೆ.

ಇನ್ನು 2026ರ ಆಸ್ಕರ್​​ಗೆ ಬರೀ ಕಾಂತಾರ ಚಾಪ್ಟರ್ ಒನ್ ಸಿನಿಮಾ ಮಾತ್ರ ಅಲ್ಲ. ಭಾರತದ ಐದು ಸಿನಿಮಾಗಳು ಲೀಸ್ಟ್​ನಲ್ಲಿವೆ. ಕಾಂತಾರದ ಜೊತೆ ಹೊಂಬಾಳೆ ನಿರ್ಮಾಣ ಮಾಡಿರೋ ಆನಿಮೇಟೆಡ್ ಸಿನಿಮಾ 'ಮಹಾವತಾರ್‌ ನರಸಿಂಹ' ಚಿತ್ರ ಕೂಡ ಎಂಟ್ರಿ ಕೊಟ್ಟಿದೆ. ಒಟ್ಟಿನಲ್ಲಿ ಆಸ್ಕರ್ ಅನ್ನೋ ಕಪ್ಪು ಸುಂದರಿಯನ್ನ ಕನ್ನಡ ಮಣ್ಣಿಗೆ ತರಲೇ ಬೇಕು ಅನ್ನೋದು ಹೊಂಬಾಳೆ ಆಸೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..