ಉಡುಪಿ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವವನ್ನು ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುತ್ತಾರೆ. ನಟ ರಕ್ಷಿತ್ ಶೆಟ್ಟಿಯವರು ಅಲೆವೂರು ದೊಡ್ಡಮನೆ ಕುಟುಂಬದ ಕುಡಿ. ತಮ್ಮ ಕುಟುಂಬದ ನೇಮೋತ್ಸವದಲ್ಲಿ  ಭಾಗಿಯಾದ ನಟ ರಕ್ಷಿತ್ ಶೆಟ್ಟಿಯವರು, ಬಹಳ ಹೊತ್ತು ಕುಳಿತು ಬಳಿಕ ವಾಪಸ್ ಹೋಗಿದ್ದಾರೆ.

ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ

ಉಡುಪಿ: ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿಯವರು (Rakshit Shetty) ಉಡುಪಿಯಲ್ಲಿ (Udupi) ನಡೆದ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ ಅವರು ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಅನುಭವಿಸಿದ್ದಾರೆ. ನೇಮೋತ್ಸವವು ಉಡುಪಿ ಅಲೆವೂರಿನ ಕಲ್ಯಾಣ ನಗರದಲ್ಲಿ ನಡೆದಿದೆ.

ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವ

ಈ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವವನ್ನು ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುತ್ತಾರೆ. ನಟ ರಕ್ಷಿತ್ ಶೆಟ್ಟಿಯವರು ಅಲೆವೂರು ದೊಡ್ಡಮನೆ ಕುಟುಂಬದ ಕುಡಿ. ತಮ್ಮ ಕುಟುಂಬದ ನೇಮೋತ್ಸವದಲ್ಲಿ ಭಕ್ತಿಭಾವದಿಂದ ಭಾಗಿಯಾದ ನಟ ರಕ್ಷಿತ್ ಶೆಟ್ಟಿಯವರು, ಬಹಳ ಹೊತ್ತು ನೇಮೋತ್ಸವದಲ್ಲಿ ಕುಳಿತು ಬಳಿಕ ವಾಪಸ್ ಹೋಗಿದ್ದಾರೆ.

ನಟ ರಕ್ಷಿತ್ ಶೆಟ್ಟಿಯವರ ಉಪಸ್ಥಿತಿ

ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿಯವರು ಪ್ರತಿವರ್ಷ ಪಾಲ್ಗೊಳ್ಳುತ್ತಾರೆ. ಈ ಬಾರಿಯೂ ನೇಮೋತ್ಸವದಲ್ಲಿ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿಯವರು, ತಂದೆ ತಾಯಿ ಕುಟುಂಬದವರ ಜೊತೆ ರಾತ್ರಿ ನಡೆದ ನೇಮೋತ್ಸವದಲ್ಲಿ ಕಾಯಾ ವಾಚಾ ಮನಸಾ ಭಾಗಿಯಾಗಿದ್ದಾರೆ. ನಟ ರಕ್ಷಿತ್ ಶೆಟ್ಟಿಯವರ ಉಪಸ್ಥಿತಿ ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.

ನಟ ರಕ್ಷಿತ್ ಶೆಟ್ಟಿಯವರ ‘ರಿಚರ್ಡ್ ಆಂಟನಿ’ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ರಕ್ಷಿತ್ ಶೆಟ್ಟಿಯ ಚಲನಚಿತ್ರವು ಅವರ ಹಿಂದಿನ ಚಿತ್ರ 'ಉಳಿದವರು ಕಂಡಂತೆ' ಚಿತ್ರದ ಪಾತ್ರದ ಮುಂದುವರೆದ ಭಾಗವಾಗಿದೆ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಬಳಿಕ ನಟ ರಕ್ಷಿತ್ ಶೆಟ್ಟಿಯವರ ಇನ್ನೂ ಅನೇಕ ಸಿನಿಮಾಗಳು ಬರಲಿವೆ ಎನ್ನಲಾಗಿದೆ. ಸದ್ಯಕ್ಕೆ ನಟ ರಕ್ಷಿತ್ ಶೆಟ್ಟಿಯವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅವರ ಅಭಿಮಾನಿಗಳು ಅವರನ್ನು ತೆರೆಯ ಮೇಲೆ ನೋಡಲು ಕಾಯತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಸಾಕಷ್ಟು ಮೆಸೇಜ್‌ಗಳು ಹರಿದಾಡುತ್ತಲೇ ಇರುತ್ತವೆ.