ಹಲವರು ಸ್ವ-ತನಿಖೆ ದೃಷ್ಟಿಯಿಂದ ಖುಷಿ ಕಪೂರ್ ಮತ್ತು ವೇದಾಂಗ್ ರೈನಾ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬ್ರೇಕಪ್‌ಗೆ ಕಾರಣವೇನು ಎಂದು ಚರ್ಚೆ ಮಾಡುವ ಮೂಲಕ ಕಾರಣ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಖುಷಿ ಕಪೂರ್ ಆಗಲಿ ಅಥವಾ ವೇದಾಂಗ್ ರೈನಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಾಲಿವುಡ್‌ನ ಈ ಬ್ರೇಕಪ್ ನಿಜವೇ?
ಇಲ್ಲೊಂದು ಬಾಲಿವುಡ್ ಬ್ರೇಕಪ್ ಸಂಗತಿ ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದೂ ಕೂಡ ಅದು ಅಂತಿಂಥವರದಲ್ಲ, ಅತಿಲೋಕ ಸುಂದರಿ ಶ್ರೀದೇವಿ ಮಗಳು, ಎರಡನೇ ಮಗಳು ಖುಷಿ ಕಪೂರ್ (Khushi Kapoor) ಮ್ಯಾಟರ್. ಸಮಾಜದಲ್ಲಿ, ಅದರಲ್ಲೂ ಹದಿಹರೆಯದಲ್ಲಿ ಹಲವರು ಪ್ರೀತಿಯಲ್ಲಿ ಬೀಳುವುದು ಮತ್ತು ಅದರಿಂದ ದೂರವಾಗುವುದು ಎಲ್ಲ ಸಾಮಾನ್ಯ ಎಂಬಂತಾಗಿಬಿಟ್ಟದೆ ಈಗ. ಆದರೆ ಅನುಭವಗಳ ಮೂಲಕ ಪಾಠ ಕಲಿಯುವ ಬದಲು ಹಲವರು ಈ ಪ್ರೀತಿ ಹಾಗೂ ಬ್ರೇಕಪ್ ವಿಷಯದಲ್ಲಿ ಕೆಲವರು ತುಂಬಾ ಸೆನ್ಸಿಬಲ್, ಇಮೋಶನಲ್ ಹಾಗು 'ಹರ್ಟ್' ಆಗಿ ಬಿಡುತ್ತಾರೆ. ಸದ್ಯ ಈ ಸಾಲಿಗೆ ಅತಿಲೋಕ ಸುಂದರಿ ಶ್ರೀದೇವಿಯವರ ಎರಡನೇ ಮಗಳು ಖುಷಿ ಕಪೂರ್ ಈ ಸಾಲಿಗೆ ಸೇರಿದ್ದಾರಾ?
ಹೌದು ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯ ಜಾನ್ಹವಿ ಕಪೂರ್ ತಂಗಿ ಖುಷಿ ಕಪೂರ್ ಅವರ ಲವ್ ಮತ್ತು ಬ್ರೇಕಪ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಬಾಲಿವುಡ್ ಅಂಗಳ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ.
ಹೌದು, ಸಾಮಾನ್ಯವಾಗಿ ಎಲ್ಲ ಸ್ಟಾರ್ ಮಕ್ಕಳಂತೆ ಖುಷಿ ಕಪೂರ್ ಕೂಡ ತಮ್ಮ ತಾಯಿ ಶ್ರೀದೇವಿ ಮತ್ತು ತಂದೆ ಬೋನಿ ಕಪೂರ್ ಅವರ ಜಾಡು ಹಿಡಿದು ಚಿತ್ರರಂಗಕ್ಕೆ ಬಂದಿದ್ದಾರೆ. ಈಗಾಗಲೇ "ದಿ ಆರ್ಚಿಸ್" ಎಂಬ ಚಿತ್ರದಲ್ಲಿ ನಟನೆಯನ್ನು ಕೂಡ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಬಂದಿದ್ದ ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಖುಷಿ ಕಪೂರ್ ಅವರಿಗೆ ಪರಿಚಯವಾದವರು ವೇದಾಂಗ್ ರೈನಾ. ಉದ್ಯಮಿ ರಾಜೇಶ್ ರೈನಾ ಅವರ ಮಗನಾಗಿರುವ ಈ ವೇದಾಂಗ್ ರೈನಾ (Vedang Raina) ಮತ್ತು ಖುಷಿ ಕಪೂರ್ ಅವರ ನಡುವೆ "ದಿ ಆರ್ಚಿಸ್" ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರೇಮಾಂಕುರವಾಗಿತ್ತು.
ಈ ಇಬ್ಬರು ಕೂಡ ತಮ್ಮ ಈ ಸಂಬಂಧವನ್ನು ಅಧಿಕೃತವಾಗಿ ಎಲ್ಲಿಯೂ ಒಪ್ಪಿಕೊಂಡಿಲ್ಲ. ಬದಲಿಗೆ ಚಿತ್ರರಂಗದಲ್ಲಿ ಎಲ್ಲರೂ ಹೇಳುವಂತೆ ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳುತ್ತಾ ಬಂದಿದ್ದರು. ಆದರೂ ಕೂಡ ಇವರ ಮೇಲೆ ಹಲವರಿಗೆ ಅನುಮಾನ ಇತ್ತು. ಒಂದು ವರ್ಗ ಇವರ ಮೇಲೆ ನಿಗಾ ವಹಿಸಿತ್ತು. ಇದಕ್ಕೆ ಪೂರಕವಾಗಿ ಇಬ್ಬರ ನಡುವಳಿಕೆ ಕೂಡ ಹಾಗೇ ಇತ್ತು. ಹಲವಾರು ಬಾರಿ ಇಬ್ಬರು ಕ್ಯಾಮರಾ ಕಣ್ಣಿನಲ್ಲಿ ಜೊತೆಯಾಗಿ ಸೆರೆಯಾಗಿದ್ದರು. ಆದರೆ ಈಗ ಇವರ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಸದ್ಯ ಮಾಡುತ್ತಿದೆ!
ಕಾರಣವೇನು?
ಇದಕ್ಕೆ ಪೂರಕವಾಗಿ ಪತ್ರಕರ್ತ ವಿಕ್ಕಿ ಲಾಲ್ವಾನಿ" ಅವರು ಖುಷಿ ಕಪೂರ್ ಹಾಗೂ ವೇದಾಂಗ್ ರೈನಾ ಸಂಬಂಧ ಮುರಿದು ಬಿದ್ದಿದೆ. ಈ ಇಬ್ಬರೂ ಈಗ ದೂರ ಆಗಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಾರಣವೇನು ಎನ್ನೋದು ಗೊತ್ತಿಲ್ಲ, ಆದರೆ ಅವರಬ್ಬರ ಆಪ್ತರೂ ಕೂಡ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಜೊತೆಗೆ, ಇತ್ತೀಚೆಗಷ್ಟೇ ಬ್ರೇಕಪ್ ಆಗಿದೆ ಎಂದು ತಮ್ಮತಮ್ಮ ಪೋಸ್ಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.
ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಈ ಹಿನ್ನೆಲೆಯಲ್ಲಿ ಹಲವರು ಸ್ವ-ತನಿಖೆ ದೃಷ್ಟಿಯಿಂದ ಖುಷಿ ಕಪೂರ್ ಮತ್ತು ವೇದಾಂಗ್ ರೈನಾ ಅವರ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಬ್ರೇಕಪ್‌ಗೆ ಕಾರಣವೇನು ಎಂದು ಚರ್ಚೆ ಮಾಡುವ ಮೂಲಕ ಕಾರಣ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ತಮ್ಮ ಪ್ರೇಮಾಯಣದ ಬಗ್ಗೆ ಹರಿದಾಡುತ್ತಿರುವ ಈ ಸುದ್ದಿಗೆ ಖುಷಿ ಕಪೂರ್ ಆಗಲಿ ಅಥವಾ ವೇದಾಂಗ್ ರೈನಾ ಆಗಲಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೇ ಕೆಲವರು 'ಮೌನಂ ಸಮ್ಮತಿ ಲಕ್ಷಣಂ' ಎಂದುಕೊಂಡು, 'ಹೌದು, ಅವರಿಬ್ಬರದೂ ಬ್ರೇಕಪ್ ಆಗಿದೆ' ಎಂದೇ ಸುದ್ದಿಯನ್ನು ಅಧಿಕೃತ ಎಂಬಂತೆ ಹಬ್ಬಿಸುತ್ತಿದ್ದಾರೆ. ಮುಂದಾದರೂ ಖುಷಿ ಅಥವಾ ವೇದಾಂಗ್, ಅಥವಾ ಇಬ್ಬರೂ ಈ ಸುದ್ದಿಯ ಬಗ್ಗೆ ಏನಾದರೂ ಪ್ರತಿಕ್ರಿಯೆ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.


